🕉️ ಹೊಸ್ತಿಲ ನಮಸ್ಕಾರಕ್ಕೆ ಹೇಳುವ ಶ್ಲೋಕ 🕉️
ಹ್ರೀಂಕಾರರೂಪಿಣೀ ದೇವಿ ವೀಣಾ ಪುಸ್ತಕಧಾರಿಣೀ |
ವೇದಮಾತರ್ನಮಸ್ತುಭ್ಯಂ ಮಾಂಗಲ್ಯಂ ದೇಹಿ ಮೇ ಸದಾ ||
ಮಾಂಗಲ್ಯಾಭರಣೈರ್ಯುಕ್ತೇ ಮಂಗಳೇ ಸರ್ವಮಂಗಳೇ |
ಗೃಹಲಕ್ಷ್ಮಿರ್ಧಾನ್ಯಲಕ್ಷ್ಮಿರ್ದ್ವಾರಲಕ್ಷ್ಮಿರ್ನಮೋಽಸ್ತುತೇ ||
🕉️🌟ಸ್ತ್ರೀಯರಿಗೆ ಲಕ್ಷ್ಮಿದೇವಿಯ ಆರಾಧನೆಗೆ ಹಲವು ಪ್ರತೀಕಗಳಿವೆ. ಅವುಗಳಲ್ಲಿ, ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆ ಪ್ರಮುಖವಾದವು.
🕉️🌟ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀಭಾರತಿಯರನ್ನು ಪೂಜಿಸಬೇಕು.
🕉️🌟ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು. ಸ್ನಾನಕ್ಕೆ ಮೊದಲೇ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಸ್ನಾನಾನಂತರ ಪೂಜಿಸಬಹುದು.
🕉️🌟ಕೆಲವೆಡೆ ಸ್ನಾನಾನಂತರ ಹೊಸ್ತಿಲು ಬರೆಯುವ ಸಂಪ್ರದಾಯವಿದೆ. ಶಾಸ್ತ್ರರೀತ್ಯಾ ಸ್ನಾನಾನಂತರದ ಹೊಸ್ತಿಲಪೂಜೆ ಉತ್ತಮ.
🕉️🌟ಶುದ್ಧಜಲಪೂರ್ಣವಾದ ತಂಬಿಗೆಯನ್ನು ಹೊಸ್ತಿಲ ಮಧ್ಯದಲ್ಲಿಟ್ಟು ಮಂಗಳದ್ರವ್ಯಗಳಿಂದ ಪೂಜಿಸಿ, “ಹ್ರೀಂಕಾರರೂಪಿಣೀ...” ಎಂಬ ಶ್ಲೋಕಗಳಿಂದ ನಮಸ್ಕರಿಸಿ, ಹೊಸ್ತಿಲಿಗೆ ಅರ್ಪಿಸಿದ್ದ ಒಂದು ಹೂವನ್ನು ಮುಡಿದುಕೊಂಡು, ಕೈತೊಳೆದು, ತಂಬಿಗೆಯನ್ನು ಕೆಳಗಿಳಿಸಬೇಕು (ಹೊಸ್ತಿಲುಪೂಜೆ ಮುಗಿಯುವ ತನಕ ಯಾರೂ ಹೊಸ್ತಿಲು ದಾಟಬಾರದು,).
🕉️🌟ಗೃಹದ ಪ್ರಧಾನದ್ವಾರವನ್ನು ಹೊಸ್ತಿಲುಪೂಜೆಗಾಗಿ ಆರಿಸಿಕೊಳ್ಳಬೇಕು. ಅನುಕೂಲತೆ ಹಾಗೂ ಶುದ್ಧಿಯ ಕಾರಣಗಳಿಂದ ದೇವರ ಕೋಣೆಯ ದ್ವಾರವನ್ನು ಪೂಜಿಸಿದರೂ, ಪ್ರಧಾನದ್ವಾರದಲ್ಲೂ ರಂಗೊಲಿ ಇರಬೇಕು.
🕉️🌟 ”ಅಶೂನ್ಯಾ ದೇಹಲೀ ಕಾರ್ಯಾ...” ಎಂಬಂತೆ ಹೊಸ್ತಿಲು ಬೋಳಾಗಿರಕೂಡದು. ಕಸಕಡ್ಡಿಗಳಿಂದ ತುಂಬಿರಕೂಡದು. ಗೃಹವಸ್ತುಗಳನ್ನು ಹೊಸ್ತಿಲಲ್ಲಿಡಕೂಡದು. ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡಬೇಕು.
🕉️🌟ಹೊರಗಿನಿಂದ ಒಳಮುಖವಾಗಿ ಮಾಡಬಾರದು. ಆದರೂ ಲಕ್ಶ್ಮೀದೇವಿಯನ್ನು ಬರಮಾಡಿಕೊಳ್ಳುವಾಗ, ಹೊಸ್ತಿಲ ಹೊರಗೆ ನಿಂತು ಆಕೆಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ.
🕉️🌟ಯಾವುದೇ ಪೂಜೆಯಲ್ಲೂ ಶ್ರದ್ಧೆ, ಭಕ್ತಿ ಮತ್ತು ಅನುಸಂಧಾನಗಳು ಪ್ರಮುಖವಾಗುತ್ತವೆ. ಕ್ರಮಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯಗಳಿದ್ದರೂ ಯಾವುದೇ ಲೋಪವಿರುವುದಿಲ್ಲ.
🕉️🌟ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು.
Courtesy : Whatsapp
https://chat.whatsapp.com/Eaxg9T2n66JIZJAeHxs1fe
Facebook page
http://www.facebook.com/bramhanapriya
No comments:
Post a Comment