Popular Posts

Saturday, 20 March 2021

ಕವಡೆ ಶಾಸ್ತ್ರ ಸ್ವತಃ ನೋಡಬಹುದೇ !?

 

ಕವಡೆ ಶಾಸ್ತ್ರ ಸ್ವತಃ ನೋಡಬಹುದೇ!?

 ಸಾಮಾನ್ಯವಾಗಿ ನಮ್ಮಲ್ಲಿ ಕೆಲವು ಮಂದಿ

  ಶಾಸ್ತ್ರ

ಜ್ಯೋತಿಷ

ಗಿಳಿಶಾಸ್ತ್ರ

ಅದರಲ್ಲೂ ಕವಡೇಶಾಸ್ತ್ರ ಒಂದು ರೀತಿ ಗೇಲಿ ಮಾಡುವಂತೆ ನೋಡುತ್ತಾರೆ....

ಹೋಗೋ ಕೆಲ್ಸ ಆಗುತ್ತೋ ಇಲ್ಲವೋ

ಇವತ್ತು ಅದೇನು ಹೇಳ್ತಾನೋ ಏನೋ

ಹಣ ಕೊಡ್ತಾ ಇಲ್ವಾ ಎಂದು ಹತ್ತಾರು ಬಾರಿ ಯೋಚಿಸಿಯೇ ಮನೆ ಬಿಡುತ್ತಾರೆ

ತೀರಾ ತಾವು ತಲುಪಬೇಕಾದ ಸ್ಥಳವನ್ನು ತಲುಪಿ ಅಲ್ಲಿ ಕೂತು

ಕಾದು ಕೊನೆಗೆ ಫಲಿತಾಂಶ ಹೊರಬೀಳುವವರೆಗೆ

ಇವರ ಮನಸ್ಸು ರಣರಂಗವಾಗಿರುತ್ತದೆ....

ಮಾನಸಿಕ ಒತ್ತಡ ತಡೆಯಲಾರದೆ ಕೆಲವೊಮ್ಮೆ ಅವರನ್ನು ಮನಸ್ಸಿನಲ್ಲೇ ಅವ್ಯಾಚವಾಗಿ ಬೈದು ಕೊಳ್ಳುತ್ತಾರಲ್ಲದೆ...

ತಮ್ಮನ್ನುಾ ನಿಂದಿಸಿಕೊಳ್ಳತ್ತಾರೆ...

 

ಇವೆಲ್ಲ ಏಕೆ ಬೇಕು

 ಒಂದ್ಹತ್ತು ನಿಮಿಷ ಮನೆಯಲ್ಲೇ ಪ್ರಶಾಂತವಾಗಿ ಕೂತು

ದಿನ ತಾವೆಂದುಕೊಂಡಿರುವ ಕೆಲಸ ಆಗುತ್ತದೋ ಇಲ್ಲವೋ ಎಂಬುದನ್ನು  ತಿಳಿದುಕೊಂಡುಬಿಟ್ಟರೆ... ಸಮಯ ಹಣವೂ ಸೇರಿದಂತೆ ಮಾನಸಿಕವಾಗಿಯುಾ ತಾವು ಪ್ರಶಾಂತವಾಗಿರಬಹುದಲ್ಲ...

ಕವಡೆ ಮುತ್ತಿನ ಶಾಸ್ತ್ರವನ್ನು ಸಂಪೂರ್ಣವಾಗಿ ನಂಬಿ.. ಇಂದಿನಿಂದಲೇ  ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಇದಕ್ಕಾಗಿ ನೀವು ಮಾಡಬೇಕಾದ್ದೇನೆಂದರೆ.....

 ನಿಮ್ಮ ಮನೆಯ ಪೂಜಾಗೃಹದಲ್ಲಿ ದೇವರ ಫೋಟೋಗಳ ಮುಂದೆ

 ದೀಪಗಳ ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ಹನ್ನೆರಡು ಕವಡೆಗಳನ್ನು ಹಾಕಿಡಬೇಕು

 ಇಂದು.... ಈಗ ....

ನಾವು  ಮಾಡಲು ಹೊರಟಿರುವ ಕಾರ್ಯ ಕೈಗೂಡುತ್ತದೆಯೋ

ಕೆಲಸದಲ್ಲಿ ಯಶಸ್ಸು ಸಿಗುತ್ತದೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳಬೇಕೆಂದರೆ....

ಬೆಳಗಿನ ವೇಳೆಯ

ಕಾಲಕೃತ್ಯಗಳನ್ನೆಲ್ಲ ಮುಗಿಸಿ

 ಸ್ನಾನ ಮಾಡಿ

 ವಿಭೂತಿ ಕುಂಕುಮವನ್ನು ಹಣೆಗೆ ಧರಿಸಿ

ದೇವರಿಗೆ ದೀಪ ಹಚ್ಚಿ

 ಊದುಬತ್ತಿ ಹಚ್ಚಿ

 ಕರ್ಪೂರದಿಂದ ಮಹಾಮಂಗಳಾರತಿ ಮಾಡಿದ ನಂತರ

ದೇವರ ಮುಂದೆ ಕುಳಿತುಕೊಂಡು

ತಮ್ಮ ಕುಲ ದೇವರು ಅಥವಾ ಇಷ್ಟ ದೇವರನ್ನು ಮನದಲ್ಲೇ ನೆನೆದು ಪ್ರಾರ್ಥಿಸಿ ಭಕ್ತಿಭಾವದಿಂದ ಕವಡೆಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ಕಣ್ಣುಗಳನ್ನು ಮುಚ್ಚಿಕೊಂಡು ಚೆನ್ನಾಗಿ ಕುಲುಕಿ ನೆಲದ ಮೇಲೆ ಹಾಕಬೇಕು ....

 

ಹಾಕಿದ ನಂತರ ಎಷ್ಟು ಕವಡೆಗಳು ಬೋರಲಾಗಿ ಬಿದ್ದಿರುತ್ತದೆಯೋ

 ಅಷ್ಟು ಸೇರಿಸಿ ಅವುಗಳ ಫಲಗಳನ್ನು ಕೆಳಗೆ ತೋರಿಸಿರುವ ಹಾಗೆ ತಿಳಿದುಕೊಳ್ಳಬೇಕು ...

ದೇವರ ಸಂಪೂರ್ಣ ಆಶೀರ್ವಾದದಿಂದ ಫಲಗಳ ಬಹಳ ನಿಖರವಾಗಿರುವುದನ್ನು

ನೀವು ಗ್ರಹಿಸಬಹುದು

ಒಂದು ಕೆಲಸಕ್ಕೆ ಒಂದೇ ಸಾರಿ ಮಾತ್ರ ಕವಡೆ ಹಾಕಬೇಕು

 ಎರಡನೇ ಬಾರಿ ಹಾಕುವಂತಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕು...

 

ಉದಾಹರಣೆಗೆ ...

ಇಂದು ನಾವು ಕೇಳಲು ಹೋಗುತ್ತಿರುವ ಹಣ ನಮಗೆ ಸಿಗುತ್ತದೆಯೋ ?

ಎಂಬುದು ನಿಮ್ಮ ಪ್ರಶ್ನೆ ಎಂದಿಟ್ಟುಕೊಳ್ಳಿ...

 ಕವಡೆಗಳನ್ನು ಕುಲುಕಿ ಹಾಕಿದ ತಕ್ಷಣ ಎರಡು ಕವಡೆಗಳು ಮುಗುಚಿಕೊಂಡಂತೆ ಬೋರಲಾಗಿ ಬಿದ್ದರೆ "ಹಣ ನಿಮ್ಮ ಕೈ ಸೇರುತ್ತದೆ ಎಂದು...

 

 ಇದರ ಹೊರತಾಗಿ  5   9 11 ಬಿದ್ದರೆ ಯಾವುದೇ ಆತಂಕವಿಲ್ಲದೆ ಹಣ ನಿಮ್ಮ ಕೈ ತಲುಪುತ್ತದೆ ಎಂಬುದು ಶಾಸ್ತ್ರದ ಫಲ ....

 

ಇದರ ಹೊರತಾಗಿ ಆರು ಬಿದ್ದರೆ ಹಣ ಕೇಳಲು ಹೋದ ಸ್ಥಳ

ವ್ಯಕ್ತಿಯ ಬಳಿ ಹಣ ಸಿಗುವುದಿಲ್ಲ ಸಾಲದ್ದಕ್ಕೆ ಮನಸ್ತಾಪಗಳು ಸಣ್ಣಪುಟ್ಟ ಜಗಳಗಳುಾ ನಡೆಯುವ ಸಾಧ್ಯತೆಗಳು ಇರುತ್ತದೆ ಎಂಬುದು ಇದರ ಫಲ...

 

 ಒಂದು ವೇಳೆ ಎಂಟು

ಬಿದ್ದರೆ

ಹಣ ಕೀಳಲು ಹೋದ ಸ್ಥಳದಲ್ಲಿ ಅನಗತ್ಯ ಜಗಳ

ವಾದ ವಿವಾದಗಳುಂಟಾಗಿ ದೊಡ್ಡ ಸಮಸ್ಯೆಯಾಗಲಿದೆ ಎಂಬುದು ಇದರ ಫಲ

 

ಹನ್ನೆರಡು

 ಬಿದ್ದರೆ ಹಣ ಕೇಳಲು ಹೋಗಿರುವ ಜಾಗದಲ್ಲಿ ಹಣ ಸಿಗುವುದಿಲ್ಲ

 ನಮ್ಮ ಕೈಯಿಂದಲೇ ಅನಗತ್ಯ ಖರ್ಚುಗಳನ್ನು ಮಾಡಿ

ಇರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದೇ ಇದರ ಫಲ

 

ರೀತಿಯಲ್ಲಿ ಇಂದು ನಾವು ಮಾಡಲು ಹೋರಟಿರುವ ಪ್ರತಿಯೊಂದು ಕಾರ್ಯಕ್ಕೂ ಹೋಗುವ ಮುಂಚೆಯೇ ಫಲಗಳನ್ನು ತಿಳಿದುಕೊಳ್ಳಬಹುದು ...

 

2  ,4 , 5,  9,  10,  11 ಎಂಬ ಆರು ಸಂಖ್ಯೆಗಳು ಬಿದ್ದರೆ ಉತ್ತಮವಾದ ಫಲಗಳೇ ನಡೆಯುತ್ತವೆ ....

 

ಇದರ ಹೊರತಾಗಿ     1,  3,  6,  7,  8,  12 ರಂತೆ ಆರು ಸಂಖ್ಯೆಗಳು ಬಿದ್ದರೆ ಕೆಟ್ಟ ಫಲಗಳು ಮಾತ್ರ ನಡೆಯುತ್ತವೆ...

 

 ಮನೆಯಲ್ಲಿರುವ ಐದು ವಷ೯ಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳ ಕೈಗೆ ಕವಡೆಗಳನ್ನು ಕೊಟ್ಟು ಹಾಕಿ ಫಲಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು