Popular Posts

Thursday, 16 July 2020

ಏಕಾದಶಿ ಮಹತ್ವ ಮತ್ತು ಆಚರಣೆ

ಕಾಮಿಕ ಏಕಾದಶಿ
ಚೈತ್ರ ಮಾಸ   ಶುಕ್ಲಪಕ್ಷ

ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ.
ಕಾಮಿಕಾ ಏಕಾದಶಿಯೂ* ಸಹ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ. ಎಲ್ಲ ಏಕಾದಶಿಗಳಂತೆ ಇಂದು ಉಪವಾಸ, ವಿಷ್ಣುವಿನ ಅರ್ಚನೆ, ಉಪಾಸನೆ, ಧ್ಯಾನ, ರಾತ್ರಿ ಜಾಗರಣೆಗಳನ್ನು ಮಾಡುವುದರಿಂದ ಪಾಪರಾಶಿಗಳೆಲ್ಲವು ನಾಶವಾಗಿ ಮೋಕ್ಷ ಲಭಿಸುವಂತಾಗುತ್ತದೆ.

ವರ್ಷದಲ್ಲಿ ಬರುವ ಪ್ರತಿಯೊಂದು ಏಕಾದಶಿಗೂ ಕೂಡ ತನ್ನದೇ ಆದ ವೈಶಿಷ್ಟ್ಯ ಮಹತ್ವ ಇದೆ .ಇಂದಿನ  ಏಕಾದಶಿಯೂ ಕೂಡ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಕಾಮಿಕ ಏಕಾದಶಿಯ ದಿನ ಈ ದೀಪವನ್ನು ಬೆಳಗಿಸಿ ಉಪವಾಸವನ್ನು ಆಚರಿಸಿದರೆ ಸಮಸ್ತ ಅಭೀಷ್ಟಗಳು ಕೂಡ ನೆರವೇರುತ್ತವೆ.
ಆಷಾಡ ಮಾಸದಲ್ಲಿ ಬರುವ ಈ *ಕಾಮಿಕ ಏಕಾದಶಿ* ಆಚರಣೆಯಿಂದ ಫಲಗಳು  ಏಕಾದಶಿಯ ವ್ರತವನ್ನು ಆಚರಿಸುವ ಜೀವಿಯ ಸಕಲ ಪಾಪಗಳು ತೊಲಗಿಸುವ ಸಕಲ ಶಕ್ತಿ ಸಾಮರ್ಥ್ಯಗಳು ಇವೆ .

ಅಂತೆಯೇ ನಾರದ ಮುನಿಯು ಸಾಕ್ಷಾತ್ ಬ್ರಹ್ಮನಿಗೆ ಕಾಮಿಕ ಏಕಾದಶಿಯ ದಿನ ಯಾವ ರೀತಿ ಆಚರಿಸಬೇಕು ? ಏನೆಲ್ಲಾ ಮಾಡಬೇಕು ? ಎಂದು ಸವಿಸ್ತಾರವಾಗಿ ಹೇಳಿರಿ ತಿಳಿಸಬೇಕು ಎಂದು ಪ್ರಾರ್ಥಿಸುತ್ತಾನೇ. ಪುತ್ರ ನಾರದ ಈ *ಕಾಮಿಕ ಏಕಾದಶಿಯು* ಎಲ್ಲ ಏಕಾದಶಿಗಳಿಗಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ .
 ಪುರುಷೋತ್ತಮನಾದ ಆ ಪರಮಾತ್ಮನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ಈ ದಿನ  ಏಕಾದಶಿ ವ್ರತವನ್ನು ಮಾಡಿ, ಉಪವಾಸ ಜಾಗರಣೆ ಮಾಡಿ ಪುರುಷೋತ್ತಮನಾದ ಪರಮಾತ್ಮನನ್ನು  ಪೂಜಿಸುವುದು
ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುವುದು ಉತ್ತಮ .ಮುಕ್ಕೋಟಿ ದೇವತೆಗಳಿಗೂ ನಾವು ನಮ್ಮ ನಮನಗಳನ್ನು ಸಲ್ಲಿಸಿದಂತಾಗುತ್ತದೆ ಜೊತೆಗೆ ಸಹಸ್ರ ನಾಮಾರ್ಚನೆಯನ್ನು ಕೂಡ ಮಾಡುವುದು ಅತಿ ಅವಶ್ಯಕ ಹೀಗೆ ಅಲಂಕಾರ ಪ್ರಿಯನಾದ ಮಹಾವಿಷ್ಣುವನ್ನು ಅಲಂಕರಿಸಿ ಪೂಜಿಸಿ ಪ್ರಾರ್ಥಿಸಬೇಕು ಮುಖ್ಯವಾಗಿ ಏಕಾದಶಿ ಸಕಲ ಪಾಪಗಳನ್ನು ತೊಳೆಯುವ ಶಕ್ತಿಯುಳ್ಳ ದಿನವಾಗಿದೆ.

 ಈ *ಕಾಮಿಕ ಏಕಾದಶಿಯ* ವ್ರತವನ್ನು ಆಚರಣೆ ಮಾಡುವವರಿಗೆ ಮುಂದಿನ ಜನ್ಮಗಳ ಪಾಪಗಳಷ್ಟೇ ಅಲ್ಲದೆ ,ಜನ್ಮ ಜನ್ಮಾಂತರಗಳ ನಂಟು ಇರುವುದಿಲ್ಲ.  ಶ್ರೀಮನ್ನಾರಾಯಣನಿಗೆ ಪ್ರೀತಿ ಪಾತ್ರವಾದ ತುಳಸಿ ದಳಗಳಿಂದ ಪೂಜಿಸಬೇಕು.ಈ ಕಾಮಿಕ ಏಕಾದಶಿಯ ದಿನ ತುಳಸಿ ಮಾಲೆಯನ್ನು ಶ್ರೀಮನ್ನಾರಾಯಣನಿಗೆ ಹಾಕಿ ಭಕ್ತಿ ಶ್ರದ್ಧೆಗಳಿಂದ ಪೂಜಿಸಬೇಕು . 
 ಕೇವಲ ಒಂದೇ ಒಂದು ತುಳಸಿದಳದಿಂದ ಪೂಜಿಸಿದರೂ ಕೂಡಾ ಶ್ರೀಮನ್ನಾರಾಯಣನು ಸಂಪೂರ್ಣವಾಗಿ ಅನುಗ್ರಹಿಸುತ್ತಾನೆ. ಕೇವಲ ತುಳಸಿದಳ ಮಾತ್ರದಿಂದಲೇ ಸಂಪೂರ್ಣ ಶ್ರೀಮನ್ನಾರಾಯಣನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಕ್ತಿ ಶ್ರದ್ಧೆಯಿಂದ ತುಳಸಿಯನ್ನು ಸಮರ್ಪಿಸಿ ಆಚರಿಸಬೇಕು.

ಸರಿಯಾದ ಅನುಷ್ಠಾನವನ್ನು , ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಬೇಕು. ಹೀಗೆ *ಕಾಮಿಕ ಏಕಾದಶಿಯ* ದಿನ ತುಳಸಿಯ ಪೂಜೆ ಅತ್ಯಂತ ಉತ್ತಮ. ಏಕಾದಶಿಯ ದಿನ ತುಪ್ಪದ ದೀಪವನ್ನು ನಾರಾಯಣನಿಗೆ ಅರ್ಪಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಕಲ ಪಾಪಗಳು ಜನ್ಮಜನ್ಮಾಂತರದ ಪಾಪಗಳು ತೊಲಗಿ ಹೋಗಿ ಪುಣ್ಯವು ಲಭಿಸುತ್ತದೆ .

ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.

*ವ್ರತವನ್ನು ಮಾಡುವ ಪದ್ಧತಿ*

ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು.
ಪೂರ್ಣದಿವಸ ಉಪವಾಸ ಮಾಡಬೇಕು.
ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು.
ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.  ಹೀಗೆ ಅಂದು ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.🚩


ಪಾಶಾಂಕುಶ ಏಕಾದಶಿ ಮಹತ್ವ ಮತ್ತು ಆಚರಣೆ
ಅಶ್ವಯಜ ಮಾಸ 
ಶುಕ್ಲ   ಪಕ್ಷ ಏಕಾದಶಿ

 ಪಾಶಾಂಕುಶ ಏಕಾದಶಿ ಇದರ ಮಹತ್ವ ಬಹಳವಿದೆ . ಈ ಏಕಾದಶಿ ವ್ರತ ಮಾಡುವುದರಿಂದ ಯಮನ ಪಾಶದ ನರಕಭಾಧೆ ತಪ್ಪುತ್ತದೆ. ಅಲ್ಲದೆ ಪಿತೃಗಳಿಗೂ ಸದ್ಗತಿ ದೊರೆಯುತ್ತದೆ... ಸಂಕಲ್ಪ ಪೂರ್ವಕ ಮಾಡಿದಾಗ ಫಲ ದೊರೆಯುತ್ತದೆ. ಯಾರಿಗೆ ಆಗುತ್ತೋ ಉಪವಾಸ ಮಾಡಲು ಅವರು ಪೂರ್ಣ ಉಪವಾಸ ಮಾಡಬೇಕು.. ಆಗದಿದ್ದವರು ಹಾಲು ಹಣ್ಣು ತೆಗೆದುಕೊಂಡು ಉಪವಾಸ ಮಾಡಬಹುದು... ಕೆಲವರಿಗೆ ಅನಾರೋಗ್ಯ ತೊಂದರೆ ಇರುತ್ತದೆ ಅಂತವರು ಹಚ್ಚಿದ ಅವಲಕ್ಕಿಯನ್ನು ತಿಂದು ಏಕಾದಶಿ ಆಚರಿಸಬಹುದು.... ಏಕಾದಶಿಯ ಮಹತ್ವ ಏನೆಂದರೆ

ಒಮ್ಮೆ ನಾರಾಯಣನು ಯಮನನ್ನು ನೋಡಲು ಹೋದಾಗ ದಕ್ಷಿಣ ದಿಕ್ಕಿನಲ್ಲಿ ಜೋರಾಗಿ ಅಳುವ ಶಬ್ಧ ಕೇಳಿ ಇದು ಎಲ್ಲಿಂದ ಬರುತ್ತಿದ್ದೆ ಎಂದು ಕೇಳಿದನು. ಆಗ ಯಮರಾಜನು ಪಾಪ ಮಾಡಿದವರು ಶಿಕ್ಷೆಯನ್ನು ಅನುಭವಿಸುತಿದ್ದಾರೆ ಎಂದು ಹೇಳಿದನು.. ಆಗ ವಿಷ್ಣುವು ಅವರನ್ನು ನೋಡಿ ಇವರೆಲ್ಲರೂ ನನ್ನಿಂದ ಸೃಷ್ಟಿ ಮಾಡಲ್ಪಟ್ಟವರು. ಇಲ್ಲಿ ಕಷ್ಟ ಪಡುತಿದ್ದಾರೆ ಎಂದು ಮರುಗಿ ಏಕಾದಶಿ ದೇವತೆಯನ್ನು ಸೃಷ್ಟಿಸಿದನು. ನರಕದಲ್ಲಿದ್ದವರು ಏಕಾದಶಿ ಆಚರಣೆ ಮಾಡಿ ಮುಕ್ತಿಯನ್ನು ಪಡೆದರು.
ಆಗ ಪಾಪ ಪುರುಷನು ಎಲ್ಲರು ಮುಕ್ತಿ ಪಡೆದರೆ ನನ್ನ ಗತಿ ಏನು. ನನ್ನನ್ನು ಏಕಾದಶಿಯೀಂದ ರಕ್ಷಿಸು ಎಂದು ಪಾಪ ಪುರುಷನು ನಾರಾಯಣನಲ್ಲಿ ಕೇಳಿಕೊಂಡನು.ಆಗ ವಿಷ್ಣು ಪಾಪಪುರುಷನಿಗೆ ನೀನು ಏಕಾದಶಿ ದಿವಸ ಕಾಳುಗಳಲ್ಲಿ ಆಡಗಕಿಕೊ. ಏಕಾದಶಿ ಆಚರಣೆ ಮಾಡದಿದ್ದರೆ ಪಾಪ ಮಾಡಿದಂತಾಗುತ್ತದೆ. ಒಂದು ತುತ್ತು ಆಹಾರ ಬಹು ಬ್ರಾಹ್ಮಣರನ್ನು ಕೊಂದ ಪಾಪ ಬರುತ್ತದೆ. ಆದ್ದರಿಂದ ಏಕಾದಶಿ ದಿವಸ ಕಾಳುಗಳನ್ನು ತಿನ್ನಬೇಡಿ ಎಂದು  ಹೇಳುತ್ತಾರೆ...

ಏಕಾದಶಿ ಆಚರಣೆ ವಿಧಿ
ವ್ರತಾಚರಣೆ ಮಾಡುವ ಮೊದಲು ದಶಮಿ,ಏಕಾದಶಿ ಮತ್ತು ದ್ವಾದಶಿ ಆಚರಣೆ ಮಾಡುತ್ತೇನೆಂದು ಸಂಕಲ್ಪ ಮಾಡಬೇಕು.
ದಶಮಿ ದಿವಸದ ಸಾಯಂಕಾಲದ ಊಟ, ಏಕಾದಶಿ ದಿವಸದ ಎರಡು ಊಟಗಳು ಮತ್ತು ದ್ವಾದಶಿ ದಿವಸದ ಸಾಯಂಕಾಲದ ಊಟ ನಿಷಿದ್ದ.
ಏಕಾದಶಿ ವ್ರತಮಾಡಲು ಸಂಕಲ್ಪಿಸಿದ್ದೇನೆ. ದಶಮಿ ದಿವಸೆ ಸಾಯಂಕಾಲ  ಯಾವ
ವಿಗ್ನಗಳು ಬರದಂತೆ ಕರುಣಿಸು.ಎಂದು ಭಗವಂತನಿಗೆ ಪ್ರಾರ್ಥಿಸಿ ಸಂಕಲ್ಪ ಮಾಡಿ..ದಶಮಿ ಊಟ ಮಾಡದೆ ಹಾಲು-ಹಣ್ಣು ತೆಗೆದುಕೊಳ್ಳಬೇಕು...ನಂತರ ಏಕಾದಶಿಯ ದಿನ 
 ಏಕಾದಶಿಯ  ದಿನ ಅಂಗಾರವನ್ನು ಮಾತ್ರ ಹಚ್ಚಿ ಕೊಳ್ಳಬೇಕು. ಅಕ್ಷಂತೆಯನ್ನು
ಹಚ್ಚಿಕೊಳ್ಳಬಾರದು.
ಏಕಾದಶಿ ದಿವಸ  ಪಾಶಾಂಕುಶಗಳನ್ನು ಹಿಡಿದ  ಶಂಖ ಶ್ರೀಚಕ್ರ ಧಾರಿಯಾದ ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ಪೂಜೆ ,ಧ್ಯಾನ ಮತ್ತು ಹರಿ
ಸ್ಮರಣೆಮಾಡಬೇಕು.

ಏಕಾದಶ್ಯಂನಿರಾಹಾರಸ್ತಿವಹಾನಿಪರ್ಯೆಹಂಭುಕ್ಶಾಮಿಪುಂಡರಿಕಾಕ್ಷಶರಣಂಮೇಭವೇ ಆಚ್ಚತ.

ಏಕಾದಶಿ ನಂತರ ದ್ವಾದಶಿ ಯಂದು ಆಹಾರವನ್ನು ತೆಗೆದುಕೊಳ್ಳುತೇನೆl ಆಚ್ಚುತ ಕಾಪಾಡು ಬೇಡಿಕೊಂಡು ಊಟಮಾಡಬೇಕು... ನಿಮಗೆ ಏನು ಅನುಕೂಲ ಆಗುತ್ತೆ ಅದನ್ನು ಅಡುಗೆ ಮಾಡಿ ನೈವೇದ್ಯ ಮಾಡಿ... ಹಾಲು-ಹಣ್ಣು ಕೂಡ ನೈವೇದ್ಯ ಮಾಡಬಹುದು