"ಮಾಘಮಾಸ ಮಾಘಸ್ನಾನ ನಿಯಮಗಳು"
ಭಾರತೀಯ ಸಂಸ್ಕೃತಿಯಲ್ಲಿ ಕೆಲವು ಮಾಸಗಳಿಗೆ ತುಂಬಾ ವಿಶೇಷ ಮಹತ್ವವಿದೆ, ಅದರಲ್ಲಿ "ಮಾಘ" ಮಾಸದ ಮಹಿಮೆಯೂ ಅಪಾರವಾದದ್ದು ..
ಮಾಘ ಸ್ನಾನವು ತುಂಬಾ ಪುಣ್ಯಕರವಾದದ್ದು, ಮಾಘಮಾಸದಲ್ಲಿ ನದೀಸ್ನಾನ ತುಂಬಾ ಮಹತ್ವ ಪಡೆದಿರುತ್ತದೆ..
ಈ ಮಾಸದಲ್ಲಿ ಎಷ್ಟು ದಾನ ಮಾಡುತ್ತೀರೋ, ಅಷ್ಟೂ ಶ್ರೇಯೋಭಿವೃದ್ಧಿಗಳು ದೊರೆಯುತ್ತವೆ..
"ಈ ಮಾಸದಲ್ಲಿ ಸೂರ್ಯನಾರಾಯಣ ದೇವರ ಪೂಜೆ, ಸ್ತೋತ್ರ ಪಠನೆಯಿಂದ , ಸರ್ವ ಸಮಸ್ಯೆಗಳೂ ನಿವಾರಣೆಯಾಗಿ ಆರೋಗ್ಯವಂತರಾಗಿ, ಸುಖ ಜೀವನ ಅನುಭವಿಸುವಿರಿ..
ನಿಯಮಗಳು.
ಮಾಘಸ್ನಾನವನ್ನು ಬೆಳಗಿನ ಜಾಗವೇ ಮಾಡಬೇಕು..
೨. ಸ್ನಾನ ಮಾಡುವವರು ಸ್ನಾನದ ನೀರಿಗೆ ಚಿಟಿಕೆ ಅರಿಸಿನ, ಹಸುವಿನ ಗಂಜು, ಒಂದು ದರ್ಭೆ ಹಾಕಿ ಪ್ರತಿದಿನ ಸ್ನಾನ ಮಾಡಬೇಕು..
೩. ಮಾಘಸ್ನಾನ ಮಾಡುವವರು ಮೊದಲ ದಿನ "ಪ್ರಾಯಶ್ಚಿತ್ತ ಸಂಕಲ್ಪ " ಮಾಡಿಕೊಂಡಿರಬೇಕು..
೪. ಪ್ರತಿದಿನವೂ ಕಥೆ ಓದಿದ ಮೇಲೆ..
"ಸಾವಿತ್ರೇ ಪ ಸಮಿತ್ತೇ ಚ ಪರಂಧಾಮ ಜಲೇ ಮಮ |
ತ್ವತ್ರೇಜ ಸಾಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ||"
ಎಂದು ನಿಂಬೆಹಣ್ಣು, ತುಳಸೀದಳ, ಗರಿಕೆ, ಬಿಳಿಸಾಸುವೆ, ದರ್ಭೆಗಳನ್ನು ಹಿಡಿದು ಹಾಲಿನಲ್ಲಿ ಮೂರುಸಲ ಅರ್ಘ್ಯ ಕೊಡಬೇಕು.
ಆ ಹಾಲನ್ನು ತೀರ್ಥವಾಗಿ ಸೇವಿಸಬೇಕು ..
೫. ಮಾಘಮಾಸದಲ್ಲಿ ಎಳ್ಳು, ನೆಲ್ಲಿಕಾಯಿ, ಸಕ್ಕರೆ , ಬಿಳಿ ಕಲ್ಲುಸಕ್ಕರೆ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಶ್ರೇಯಸ್ಸಾಗುತ್ತದೆ..
೬. ಮಾಘಸ್ನಾನ ಮಾಡುವವರು ರಾತ್ರಿ ಕಾಲದಲ್ಲಿ ಉಪವಾಸ ಇರಬೇಕು..
(ಅಶಕ್ತರು ಹಾಲು ಹಣ್ಣು ರವೆಯ ಪದಾರ್ಥ ಸೇವಿಸಬಹುದು)
೭. ಏನೇ ದಾನ ಮಾಡಿದರೂ ಬೆಳಗಿನ ಸಮಯದಲ್ಲೇ ದಾನ ಮಾಡಬೇಕು..
೮. ಪ್ರತಿದಿನವೂ ಕಥೆ ಓದುವ ಮೊದಲು "ಸೂರ್ಯಹೃದಯ ಮತ್ತು ಸೂರ್ಯಕವಚ ಓದಬೇಕು..
ಆಯಾದಿನದ ಕಥೆ ಓದಿದ ಮೇಲೆ ತಾಂಬೂಲ ದಾನ ಮಾಡುವುದು ತುಂಬಾ ಶ್ರೇಷ್ಠ..
೯. ಮಾಘಮಾಸದ ಕಥೆ ಪಾರಾಯಣದ ಮುಂಚೆ ಅಧ್ಯಾಯದ ಕೊನೆಯಲ್ಲಿ ಬರುವ ಮಂತ್ರಗಳನ್ನು ತಿಳಿದು ಜಪಿಸಬೇಕು..
೧೦. ಮಾಘಸ್ನಾನವನ್ನು ಬೆಳಗಿನ ಜಾವ ೪ ಘಂಟೆಯ ನಂತರ ೫.೪೫ ರ ಒಳಗೆ ಮಾಡುವುದು ಉತ್ತಮ..
*🌷ಮಾಘಸ್ನಾನದ ಫಲ🌷*
ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6ವರ್ಷಸ್ನಾನಮಾಡಿದ ಫಲ .
ಮನೆಯಿoದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ
ಕೆರೆ ಮೊದಲಾದ ಮಾನವನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ
ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು .
ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ
ಉದಾ:ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ )ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120ವರ್ಷ ಸ್ನಾನಫಲ)ವು ,
ಗಂಗಾ ,ಯಮುನ ,ಸರಸ್ವತೀ ಮುoತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿ ಗಳಲ್ಲಿ ಸ್ನಾನ ಮಾಡಿದರೆ 100ಪಟ್ಟು ಪುಣ್ಯಫಲ
(1200ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ (ಪ್ರಯಾಗದಿಗಳಲ್ಲಿ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು
ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರ ಪಟ್ಟು ಪುಣ್ಯಫಲವು ಲಭಿಸುತ್ತದೆ ಎಂದು ಮಾಘಮಾಸ ಮಹಾತ್ಮೆಯಲ್ಲಿ ಹೇಳಿದೆ
ಸರ್ವಜನ ಸುಖಿನೋಭವಂತು