Popular Posts

Wednesday, 5 December 2018

ಕುಂಭ ಮೇಳ ಏನಿದರ ಮಹತ್ವ

ಕುಂಭ ಮೇಳ ಏನಿದರ ಮಹತ್ವ

      ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ ಬೇಕಾಗುವುದು. ಆಗ ಮಹಾ ಕುಂಭ ಮೇಳ ನಡೆಯುವುದು. 6 ರಾಶಿಗಳನ್ನು ಪ್ರವೇಶಿಸಿದಾಗ ಅರ್ಧ ಕುಂಭ ಮೇಳ ನಡೆಯುವುದು. ಈ ಕುಂಭ ಮೇಳದಲ್ಲಿ ಸ್ನಾನವೇ ಅತಿ ಮುಖ್ಯ.

      ನದಿ, ಸರೋವರ ಮತ್ತು ಸಮುದ್ರಗಳಲ್ಲಿ ಸ್ನಾನ ಮಾಡಿ ಅಲ್ಲಿರುವ ದೈವೀ ಶಕ್ತಿಯನ್ನು ಪಡೆದು ಪಾಕ್ಷಮ ಮಾಡಿಕೊಳ್ಳುವ ಯಾತ್ರೆಯನ್ನು ತೀರ್ಥ ಯಾತ್ರೆ ಎನ್ನುವರು. ದಕ್ಷಿಣ ಭಾಗವಾದ ಅಲಹಾಬಾದಿನ ಗಂಗಾ, ಯಮುನಾ, ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ಪ್ರಯಾಗದಲ್ಲಿ ಕುಂಭ ಮೇಳ ನಡೆಯಲಿದೆ.

ಏನಿದು ಕುಂಭಮೇಳ
ಕುಂಭ ಎಂದರೆ ಮಡಕೆ ಎಂದು ಅರ್ಥ. ಸಮುದ್ರ ಮಥನದ ಸಮಯದಲ್ಲಿ ವಿಷ್ಣುವಿನ ವಾಹನವಾದ ಗರುಡನು ಅಮೃತ ತುಂಬಿರುವ ಕುಂಭವನ್ನು (ಮಡಕೆ) ತೆಗೆದುಕೊಂಡು ಹೋಗುವಾಗ ನಾಲ್ಕು ಹನಿ ಅಮೃತವು ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿತ್ತು. ಅವು ಯಾವುವು ಎಂದರೆ ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ, ಗಂಗಾ, ಯಮುನಾ ಮತ್ತು ಸರಸ್ವತಿ ಸೇರುವ ಪ್ರಯಾಗ, ಮಧ್ಯಪ್ರದೇಶದ ಉಜ್ಜೈನಿಯ ಕ್ಷಿಪ್ರ ನದಿ ಮತ್ತು ನಾಸಿಕದಲ್ಲಿರುವ ಗೋದಾವರಿ ನದಿಯಲ್ಲಿ ಒಂದೊಂದು ಹನಿ ಬಿತ್ತು ಎಂಬ ನಂಬಿಕೆ ಇದೆ. ಈ ನಾಲ್ಕು ತೀರ್ಥ ಕ್ಷೇತ್ರದಲ್ಲಿ ಮಹಾಕುಂಭ ಮೇಳ ಮತ್ತು ಅರ್ಧ ಕುಂಭಮೇಳ ನಡೆಯುವ ಸಂಪ್ರದಾಯ ಆರಂಭವಾಯಿತು.
ಕುಂಭ ಮೇಳ ಯಾವಾಗ ನಡೆಯುವುದು
ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿದಾಗ ಅಥವಾ ರವಿ ಗ್ರಹವು ಮೇಷ ರಾಶಿ ಪ್ರವೇಶಿಸಿದಾಗ ಕುಂಭ ಮೇಳ ಆರಂಭವಾಗುವುದು.
ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ ಬೇಕಾಗುವುದು. ಆಗ ಮಹಾ ಕುಂಭ ಮೇಳ ನಡೆಯುವುದು. 6 ರಾಶಿಗಳನ್ನು ಪ್ರವೇಶಿಸಿದಾಗ ಅರ್ಧ ಕುಂಭ ಮೇಳ ನಡೆಯುವುದು. ಈ ಕುಂಭ ಮೇಳದಲ್ಲಿ ಸ್ನಾನವೇ ಅತಿ ಮುಖ್ಯ.

ಸ್ನಾನ
ಧರ್ಮಶಾಸ್ತ್ರದಲ್ಲಿ ಸ್ನಾನಕ್ಕೆ ಮಹತ್ತರವಾದ ಫಲವನ್ನು ಹೇಳಿರುವರು. ‘ಸ್ನಾತ್ಯನೇನ ಸ್ನಾನಂ’ ಎಂದರೆ ಶುಚಿಯಾಗುವುದು ಎಂದು. ದೃಷ್ಟ ಮತ್ತು ಅದೃಷ್ಟ ಎಂಬ ಎರಡು ಸ್ನಾನದ ಫಲಗಳಿವೆ. ಮಂತ್ರ ಸಹಿತವಾಗಿ, ಭಕ್ತಿಯುತವಾಗಿ ಮಾಡಿದ ಸ್ನಾನವು ಅದೃಷ್ಟ ಸ್ನಾನ. ನಮ್ಮ ಶರೀರ ಶುದ್ಧಿಗಾಗಿ ಮತ್ತು ಸಂತೋಷಕ್ಕಾಗಿ ಮಾಡುವ ಸ್ನಾನ ದೃಷ್ಟ ಸ್ನಾನ.

ಕುಂಭ ಮೇಳದ ಸ್ನಾನ
ಪುಣ್ಯ ತೀರ್ಥ, ಪುಣ್ಯ ನದಿಯಲ್ಲಿ, ಪುಷ್ಕರಿಣಿಗಳಲ್ಲಿ ಮತ್ತು ಕುಂಭ ಮೇಳದಲ್ಲಿ ಮಾಡುವ ಸ್ನಾನಕ್ಕೆ ಕ್ರಿಯಾ ಸ್ನಾನ ಎನ್ನುವರು.
ಈ ಕುಂಭ ಮೇಳದ ಸ್ನಾನವನ್ನು ಶಹಿ ಸ್ನಾನ ಅಥವಾ ರಾಜ ದರ್ಬಾರಿನ ಸ್ನಾನ ಎನ್ನುತ್ತಾರೆ. ಕುಂಭ ಮೇಳವು ಸಾಮಾನ್ಯವಾಗಿ 1, 2 ಅಥವಾ 3 ತಿಂಗಳ ಕಾಲ ನಡೆಯುವುದು. ಈಗ ನಡೆಯುತ್ತಿರುವ ಪ್ರಯಾಗದ ಮಹಾ ಕುಂಭ ಮೇಳವು ಶಿವರಾತ್ರಿವರೆಗೆ (ಮಾ.10) ನಡೆಯುವುದು. ಈ ಸಮಯದಲ್ಲಿ ಹಿಮಾಲಯದಲ್ಲಿ ವಾಸಿಸುವ ಸಾಧು ಸಂತರು ತಪಸ್ವಿಗಳು, ನಾಗ ಸಾಧುಗಳು, ಯೋಗಿಗಳು, ದಿಗಂಬರರು ಮತ್ತು ಸನ್ಯಾಸಿಗಳು ಟೆಂಟ್ ಹಾಕಿ ಅಲ್ಲಿಯೇ ಇರುವವರು. ಕುಂಭ ಮೇಳದ ಸಮಯದಲ್ಲಿ ಬರುವ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಮಣ, ಪುಣ್ಯ ದಿನಗಳಲ್ಲಿ ಈ ಸಾಧು ಸಂತರು, ಮೊದಲು ಗುಂಪು ಗುಂಪಾಗಿ ನದಿಗೆ ಇಳಿದು ಸ್ನಾನ ಮಾಡುವರು. ಈ ಪ್ರಯಾಗ ಪ್ರದೇಶವನ್ನು ಪರ್ಶಿನ್ ಭಾಷೆಯಲ್ಲಿ ದೇವರ ನಗರ ಎನ್ನುವರು ಹಾಗೂ ಬ್ರಹ್ಮ ದೇವ ವಿಶ್ವನ್ನು ಸೃಷ್ಟಿ ಮಾಡಿದ ಮೊದಲ ನಗರ ಎಂಬ ಪ್ರತೀತಿ ಇದೆ.

No comments:

Post a Comment