ಇಪ್ಪತ್ತನಾಲ್ಕು_ಕೇಶವಾದಿ_ನಾಮಗಳ_ಅರ್ಥ:
ಪ್ರತಿದಿನ ಕೇಶವನಾಮ ಹೇಳುವ ನಾವು ಅದರ ಅರ್ಥ ಅರಿತಿದ್ದರೆ ಇನ್ನು ಹೇಳಲು ಸುಲಭ ಮತ್ತು ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಅಲ್ಲವೇ.. ಎಷ್ಟು ಸುಂದರವಾಗಿದೆ ಕೇಶವನಾಮಾದಿ ಹೇಳುತ್ತಾ ಇಪ್ಪತ್ತು ನಾಲ್ಕು ಶಂಖ, ಚಕ್ರ ಹಾಕಿದರೆ ಅಪಾರ ಪುಣ್ಯದ ಫಲ, ಪ್ರತಿದಿನ ಸಾಧ್ಯವಿಲ್ಲದಿದ್ದರೆ ಏಕಾದಶಿಗೊಮ್ಮೆ ಹಾಕಿ...ಓದಿ ಅರ್ಥ
1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ,
2. ನಾರಾಯಣ - ಗುಣಪೂರ್ಣ
3. ಮಾಧವ - ಲಕ್ಷೀ ರಮಣ,
4. ಗೋವಿಂದ - ವೇದ ವೇದ್ಯ
5. ಮಧುಸೂದನ - ಮಧು ದೈತ್ಯನನ್ನು ಕೊಂದವ
6. ವಿಷ್ಣು- ಸರ್ವ ವ್ಯಾಪಿ
7. ತಿವಿಕ್ರಮ-ಮೂರು ಹೆಜ್ಜೆ ಇಟ್ಟವನು
8. ವಾಮನ-ಮಂಗಳಕರ
9. ಶ್ರೀಧರ-ಲಕ್ಷೀಯನ್ನು ಎದೆಯಲ್ಲಿ ಧರಿಸಿದವನು
10. ಹೃಷಿಕೇಶ- ಇಂದ್ರಿಯಗಳ ದೇವತೆ.
11. ಪಧ್ಮನಾಭ- ನಾಭಿಯಲ್ಲಿ ಪದ್ಮವನ್ನು ಹೊಂದಿರುವವನು.
12. ದಾಮೋಧರ -ಹೋಟ್ಟೆಯ ಮೇಲೆ ಹಗ್ಗದಿಂದ ಕಟ್ಟಲ್ಪಟ್ಟವನು.
13. ಸಂಕರ್ಷಣ-ಪ್ರಳಯಕಾಲದಲ್ಲಿ ಎಲ್ಲರನ್ನು ಸೆಳೆಯುವವನು
14. ವಾಸುದೇವ- ಜಗದಾಧಾರ
15. ಪ್ರದ್ಯುಮ್ನ -ಉತ್ತಮ ಐಶ್ವರ್ಯ ನೀಡುವವನು
16. ಅನಿರುದ್ದ-ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು
17. ಪುರುಷೋತ್ತಮ-ಎಲ್ಲ ಜೀವರಿಗಿಂತಲೂ ಲಕ್ಷಿಗಿಂತಲೂ ಉತ್ತಮ
18. ಅಧೊಕ್ಷಜ- ಇಂದ್ರಿಯಗಳಿಗೆ ನಿಲಕದವನು
19. ನಾರಸಿಂಹ- ನರ ಮತ್ತು ಸಿಂಹ ಆಕೃತಿ ಉಳ್ಳವನು
20. ಅಚ್ಚುತ- ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು
21. ಜನಾರ್ಧನ-ಜನನವಿಲ್ಲದಂತೆ ಮಾಡುವವನು
22. ಉಪೇಂದ್ರ- ಎಲ್ಲಾ ಇಂದ್ರರಿಗಿಂತ ಉತ್ತಮ
23. ಹರ-ಪಾಪ ಪರಿಹಾರಕ
24. ಶ್ರೀ ಕೃಷ್ಣ-ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದು ಕೊಳ್ಳುವವನು...
Il ಶಿವಾರ್ಪಣಮಸ್ತು ll