Popular Posts

Monday, 16 December 2019

ಅವಧೂತ ಪ್ರಭಾತ

ಅವಧೂತ ಪ್ರಭಾತ 
ದೇಹಬುದ್ಧಿಯುಳ್ಳ ಮನುಷ್ಯನಿಗೆ ಎರಡು ಚಿಂತೆ ಇರುತ್ತವೆ.ಒಂದು ಮರಣದ ಚಿಂತೆ ಹಾಗೂ ಇನ್ನೊಂದು
ಸಂಸಾರದ ಚಿಂತೆ.ಮರಣದ ಚಿಂತೆಯು ವ್ಯರ್ಥವಾಗಿರುತ್ತದೆ.ತನ್ನ ದೇಹವನ್ನು ಕಾಯ್ದುಕೊಳ್ಳಬೇಕೆಂದು ಮನುಷ್ಯನು ಎಷ್ಟೇ ಪ್ರಯತ್ನ
ಮಾಡಿದರೂ ಕೊನೆಗೆ ಮೃತ್ಯು ಅವನನ್ನು ತೆಗೆದುಕೊಂಡೇ ಹೋಗುತ್ತದೆ.ಯಾವ ಪೂರ್ವ ಕರ್ಮದಿಂದ ದೇಹವು ಹುಟ್ಟಿಬಂದಿರುತ್ತದೆಯೊ ಅದನ್ನು
ಅನುಭವಿಸಿ ಮುಗಿಸುವವರೆಗೆ ಮರಣ ಬರುವದಿಲ್ಲ.
ಪೂರ್ವಕರ್ಮಗಳು ಮುಗಿದ ನಂತರ ಆ ಕ್ಷಣವೇ ದೇಹವು ಕಾಲವಶ ಆಗುವದರಿಂದ ಮರಣ ಬೇಡ
ಎಂದರೂ ನಡೆಯುವದಿಲ್ಲ.ವಿವೇಕಿಯಾದವನು
ವ್ಯವಹಾರದ ದೃಷ್ಟಿಯಿಂದ ದೇಹವನ್ನು ಕಾಯ್ದುಕೊಳ್ಳಬೇಕು.ಆದರೆ ಆಧ್ಯಾತ್ಮದ ದೃಷ್ಟಿಯಿಂದ
ಮರಣವನ್ನು ಎದುರಿಸುವ ಮನಸ್ಸಿನ ಸಿದ್ಧತೆ
ಮಾಡಿಕೊಳ್ಳಬೇಕು.ಇನ್ನು ಸಂಸಾರದ ಚಿಂತೆಯ
ವೈಶಿಷ್ಟ್ಯವೇನೆಂದರೆ ನಾವು ಅದನ್ನು ಮಾಡಲಿ ಅಥವಾ
ಬಿಡಲಿ ಸಂಸಾರವು ತನ್ನ ಮಾರ್ಗಕ್ಕನುಸಾರವಾಗಿ
ಹೋಗುತ್ತಲೇ ಇರುತ್ತದೆ.ಭಗವಂತನ ಉಪಾಸಕನು
ವ್ಯವಹಾರದ ದೃಷ್ಟಿಯಿಂದ ವ್ಯಕ್ತಿಗಳ,ವಸ್ತುಗಳ ಹಾಗೂ
ಘಟನೆಗಳ ಬಗ್ಗೆ ಉತ್ತಮ ದಕ್ಷತೆ ವಹಿಸಬೇಕು.ಆದರೆ
ಆಧ್ಯಾತ್ಮ ದೃಷ್ಟಿಯಿಂದ ಪ್ರಪಂಚದ ಮೇಲೆ ಭಗವಂತನ 
ಒಡೆತನ ಇರುತ್ತದೆ ಎಂಬುದನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಯಾರ ಬಗ್ಗೆಯೂ ಹಾಗೂ ಯಾವದರ
ಬಗ್ಗೆಯೂ ಚಿಂತೆ ಮಾಡಬಾರದು.ಹುಟ್ಟಿ ಬಂದುದರ
ಸಾರ್ಥಕತೆ ಮಾಡಿಕೊಳ್ಳಬೇಕು.ಇದರ ಬಗೆಗೆ,
************************************
"ಯಾವ ಬಹಳ ದೊಡ್ಡ ಮಹತ್ವದ ಕಾರ್ಯಕ್ಕಾಗಿ ಭಗವಂತನು ನಮಗೆ ಈ ದೇಹವೆಂಬ ಅದ್ಭುತ ಯಂತ್ರವನ್ನು ಕೊಟ್ಟಿರುತ್ತಾನೊ ಅಂಥ ಯಂತ್ರದಿಂದ
ನಾವು ಆ ಕಾರ್ಯವನ್ನು ಪೂರ್ಣಮಾಡಿಕೊಳ್ಳದಿದ್ದರೆ,
ಭಗವಂತನು ಕೊಟ್ಟ ಈ ಯಂತ್ರದ ಮಹತ್ವವನ್ನು ನಾವು
ಸರಿಯಾಗಿ ತಿಳಿದುಕೊಂಡಿಲ್ಲವೆಂದುಕೊಳ್ಳಬೇಕು.ಈ
ಯಂತ್ರವು ಬಹಳ ಗೊಂದಲಮಯವಾಗಿದ್ದು ಒಂದಿಲ್ಲೊಂದು ಪ್ರಕಾರದಿಂದ ಮೇಲಿಂದ ಮೇಲೆ
ಕೆಡುತ್ತಲೆ ಇರುತ್ತದೆ.ಆದ್ದರಿಂದ ಒಬ್ಬರಿಗೊಬ್ಬರು 
ಭೆಟ್ಟಿಯಾದಾಗ ಇಬ್ಬರೂ ಅನ್ಯೋನ್ಯವಾಗಿ ನೀವು
ಚೆನ್ನಾಗಿರುವಿರಲ್ಲವೇ ?ಎಂದು ಕೇಳುತ್ತಾರೆ.ಆದ್ದರಿಂದ
ಇದನ್ನು ಅಷ್ಟರಮಟ್ಟಿಗೆ ಸುಧಾರಿಸಿಕೊಂಡು ಈ ಯಂತ್ರದ ಸರಿಯಾದ ಉಪಯೋಗ ಮಾಡಿಕೊಳ್ಳಬೇಕು. ಈ ಯಂತ್ರದ ಇನ್ನೊಂದು ಬಹಳ
ದೊಡ್ಡ ದೋಷವೆಂದರೆ ಈ ಯಂತ್ರವು ಹೊರಗಿನ ಪ್ರಪಂಚದ ವಿಷಯ ಸುಖದ ಸೆಳವಿಗೆ ಸಿಕ್ಕು ಕೊಚ್ಚಿಹೋಗುವ ಸಂಭವವಿರುತ್ತದೆ.ಆದ್ದರಿಂದ 
ಇದನ್ನು ಅತ್ಯಂತ ಸಾವಧಾನತೆಯಿಂದ ಕಾಯ್ದುಕೊಂಡು,ಇದನ್ನು ನಮಗೆ ಭಗವಂತನು ಕೊಟ್ಟ
ಮುಖ್ಯ ಉದ್ದೇಶಕ್ಕಾಗಿ ಅಂದರೆ ಆತ್ಮಸಾಕ್ಷಾತ್ಕಾರಕ್ಕಾಗಿ
ಉಪಯೋಗ ಮಾಡಿಕೊಂಡು ಇಂಥ ಈ ಶರೀರ ಕೊಟ್ಟದ್ದಕ್ಕೆ ಭಗವಂತನಿಗೆ ಕೃತಜ್ಞತೆ ಹೇಳಬೇಕು."
ಎಂದು ಪ.ಪೂ.ದತ್ತಾವಧೂತ ಗುರುಗಳು ಹೇಳಿದ್ದಾರೆ.
****************************************
ಮೇಲೆ ಹೇಳಿದ ಹಾಗೆ ದೇಹವೆಂಬ ಈ ಅತ್ಯದ್ಭುತ
ಯಂತ್ರವನ್ನು ಸಾರ್ಥಕ ಪಡಿಸಿಕೊಳ್ಳಲು ನಾಮಸ್ಮರಣೆ
ಅತಿ ಸರಳ ಹಾಗು ಉತ್ತಮ ಸಾಧನೆ ಆಗಿರುತ್ತದೆ.
ಇದಕ್ಕಾಗಿ "ಆಜೀವನ ನಾಮ ಸಾಧನಾ ಸಂಕಲ್ಪ"ವನ್ನು
ಪ.ಪೂ.ಗುರುಗಳಿಂದ ಮಾಡಿಸಿಕೊಳ್ಳುವದು ಅತ್ಯಂತ
ಪರಮೋಚ್ಚ ಸಾಧನೆ ಆಗಿರುತ್ತದೆ.ಶ್ರೀ ರಾಮ.
ಅವಧೂತ ತನಯ
ಜಾನಕೀ ಜೀವನ ಸ್ಮರಣ ಜಯ ಜಯ ರಾಮ.