Popular Posts

Saturday, 11 May 2019

ಸ್ವಾರಸ್ಯ - My collections

ಪೂಜಾ ಸಂಕಲ್ಪ ಮಂತ್ರ ಹೇಗೆ ಮಾಡೋದು ಎಂಬ ವಿಚಾರಧಾರೆ
🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻🌻

 ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

ಧರ್ಮ ಶಾಸ್ತ್ರದಲ್ಲಿ ಸಂಕಲ್ಪದ ಮಹತ್ವ

ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸುವುದು ಮತ್ತು ಯಾವುದೇ ಪೂಜೆ, ಹೋಮ,ಜಪ ಮಾಡಬೇಕಾದರೆ ಮೊದಲು ಮಾಡುವುದೇ ಸಂಕಲ್ಪ.

ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಹಾಸೆ ಮುಖ್ಯವಾದ ಯೋಜನೆ, ಮತ್ತು ಮಾಡಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ದೇವರ ಮುಂದೆ ಮನಸ್ಸಿನಲ್ಲಿ ಬೇಡಿ ಕೊಳ್ಳುವುದೇ ಸಂಕಲ್ಪ.

ಸಂಕಲ್ಪದ ಸಮಯದಲ್ಲಿ ನಮ್ಮ ತಂದೆ ತಾಯಿ ಗುರು ಹಿರಿಯರನ್ನು ನೆನೆಸಿಕೊಂಡು ನಮ್ಮ ಮುಂದಿನ ಕಾರ್ಯ ಅಥವಾ ಮುಂದಿನ ಗುರಿ ಸಾಧಿಸುವುದಕ್ಕೆ ನಮ್ಮ ಅಭೀಷ್ಠ ಸಿದ್ಧಿ ನಿಮಿತ್ತವಾಗಿ ದೇವರ ಮುಂದೆ ಪ್ರಾರ್ಥಿಸಬೇಕು ಮತ್ತು ನಮ್ಮ ಮನೋನಿಶ್ಚಯವನ್ನು ಕಾಯ ವಾಚಾ ಮನಸಾ ಆ ಭಗವಂತನಲ್ಲಿ ಅರ್ಪಣೆ ಮಾಡಿ ಕೊಳ್ಳಬೇಕು.

ನಮ್ಮ ಸಂಕಲ್ಪವು ಎಷ್ಟು ಶ್ರದ್ದೇ ಭಕ್ತಿ ಪ್ರೀತಿಯಿಂದ ಕೂಡಿರುವುದೋ ಅಷ್ಟೇ ಫಲಿತಾಂಶ ಕೂಡ ಉನ್ನತವಾಗಿಯೇ ಸಿಗುತ್ತದೆ. ಯಾರ ಸಂಕಲ್ಪವು ಸಂಶಯಾತ್ಮಕವಾಗಿರುತ್ತದೆಯೋ ಅವರ ಫಲಿತಾಂಶವು ಕೂಡ ಸಂಶಯವಾಗಿಯೇ ಉಳಿದು ಕೊಳ್ಳುತ್ತದೆ. 

ಸಂಕಲ್ಪ ಮಾಡಿಸುವುದರಿಂದ ಕೇವಲ ನಮ್ಮ ವಯಕ್ತಿಕವಲ್ಲದೇ ದೇಶ, ಸ್ವಗೃಹ, ವಾಸಸ್ಥಳ, ಸಂವತ್ಸರ, ಋತು, ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳು ಅಲ್ಲದೆ ವಿಶ್ವಪ್ರಕೃತಿ ಸ್ಥಿತಿ ಕಾಲ ಮುಂತಾದವುಗಳ ಬಗ್ಗೆ ಅರಿವು ಮುಡಿಸಿ ಎಲ್ಲವನ್ನು ಪ್ರೀತಿಸಿ ಗೌರವಿಸುವ ಶಕ್ತಿಯೇ ಸಂಕಲ್ಪ.

ಒಂದು ನಿರ್ದಿಷ್ಟವಾದ ಮನೋನಿಶ್ಚಯದಿಂದ ಇರುವುದು ಅತ್ಯಗತ್ಯವಾಗುತ್ತದೆ, ನಮ್ಮ ಮನಸ್ಸು ಹಿಡಿತದಲ್ಲಿ ಇಲ್ಲದಿದ್ದರೆ ಯಾವುದೇ ಸಂಕಲ್ಪ, ಪೂಜೆ ಜಪತಪಗಳು ಮಾಡಿದರೂ ಪ್ರಯೋಜನ ಸಿಗುವುದಿಲ್ಲ ನಮ್ಮ ಮನಸ್ಸು ಏಕಾಗ್ರತೆಯಿಂದ ದೃಢನಿಶ್ಚಯದಿಂದಿದ್ದರೆ ಎಲ್ಲಾ ಕಾರ್ಯವು ಒಳ್ಳೆಯದಾಗುತ್ತದೆ, ಯಾವುದೂ ಅಸಾಧ್ಯವಲ್ಲ.

ಕೃಷ್ಣಾರ್ಪಣಮಸ್ತು ಸರ್ವಜನ ಸುಖಿನೋಭವಂತು



ಶಕ್ತಿಪೀಠಗಳು

 ದೇವಿಯು ಹಲವು ರೀತಿಗಳಲ್ಲಿ ವ್ಯಕ್ತಗೊಳ್ಳುತ್ತಾಳೆ, ಭಕ್ತರು ಅದನ್ನು ತಿಳಿಯ ಬೇಕು, ದೇವಿಯ ಅಭಿವ್ಯಕ್ತವಾದ, ಪವಿತ್ರವಾದ ಸ್ಥಳಗಳನ್ನು ಪೀಠಗಳೆನ್ನುತ್ತೇವೆ. 
 ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಹೀಗೆ ಪವಿತ್ರವಾದ ಸ್ಥಳಗಳಲ್ಲಿ ದೇವಿಯನ್ನು ಪೂಜಿಸಿ ಕೋಟ್ಯಂತರ ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಪುರಾಣಗಳಲ್ಲಿ ಹಲವಾರು ರೀತಿಯಲ್ಲಿ ಈ ಶಕ್ತಿಪೀಠಗಳ ವರ್ಣನೆಯನ್ನು ಕಾಣುತ್ತೇವೆ. 
 ನಮ್ಮ ಬಯಕೆಗಳನ್ನು ನೆರವೇರಿಸಿಕೊಳ್ಳಲು ನಾವು ದೇವಿಯನ್ನು ಪೂಜಿಸುತ್ತೇವೆ. ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಪೂಜಿಸುವುದು ಎಲ್ಲದಕ್ಕಿಂತ ಶ್ರೇಷ್ಠವಾದುದು. ಒಂದು ಸಾರಿ ಈ ಸಂಸಾರ ಬಂಧನದಿಂದ ಬಿಡುಗಡೆ ದೊರೆಯಿತೆಂದರೆ ಸಾಕು ಉಳಿದ ಬಯಕೆಗಳೆಲ್ಲವೂ ಇಲ್ಲವಾಗುತ್ತವೆ. ಆದುದರಿಂದ ಮೋಕ್ಷಾರ್ಥಿಯಾಗಿ ದೇವಿಯನ್ನು ಬೇಡುವುದು ಎಲ್ಲದಕ್ಕಿಂತ ಮಿಗಿಲಾದುದು. 

 ಋಗ್ವೇದದಲ್ಲಿ ಉಕ್ತವಾಗಿರುವ ದಕ್ಷಯಜ್ಞದ ಕಥೆಯು ಮುಂದೆ ಹಲವಾರು ಪುರಾಣಗಳಲ್ಲಿ ವಿಸ್ತೃತಗೊಂಡು ಬೆಳೆದಿದೆ ದಕ್ಷ ಪ್ರಜಾಪತಿಯು ಯಜ್ಞವನ್ನು ಮಾಡಿದನು ಎಂಬ ಇತಿಹಾಸವು ಮಹಾಭಾರತದಲ್ಲಿಯೂ, ಮತ್ಯೃ, ಪದ್ಮ, ಕೂರ್ಮ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರವಾಗಿ ವಿಸ್ತೃತವಾಗಿದೆ. ಕಾಳಿದಾಸನು ಕುಮಾರ ಸಂಭವ ಎಂಬ ಕಾವ್ಯವನ್ನೇ ರಚಿಸಿರುತ್ತಾನೆ. 
 ಸತಿಯು ದಕ್ಷಪ್ರಜಾಪತಿಯ ಮಗಳು. ದಕ್ಷ ಪ್ರಜಾಪತಿಯು ಒಂದು ಯಜ್ಞವನ್ನು ಮಾಡಿದನು. ಆ ಯಜ್ಞಕ್ಕೆ ತನ್ನ ಮಗಳಾದ ಸತಿಯನ್ನು ಆಹ್ವಾನಿಸಲಿಲ್ಲ, ಆದರೂ ಸತಿಯು ತಂದೆಯ ಮನೆ ಎಂಬ ಭಾವನೆಯಿಂದ ಯಜ್ಞಕ್ಕಾಗಿ ಬಂದಳು, ಅವಳಿಗೆ ಅವಮಾನವಾದುದರಿಂದ ಯಜ್ಞಕುಂಡದಲ್ಲಿ ತನ್ನ ಪ್ರಾಣಾರ್ಪಣೆ ಮಾಡಿದಳು, ಪರಶಿವನು ಕೋಪಾವಿಷ್ಟನಾಗಿ ಯಜ್ಞ ಶಾಲೆಗೆ ಬಂದನು ತನ್ನ ಸತಿಯ ಸ್ಥಿತಿಯನ್ನು ನೋಡಿ ಬಹು ಉಗ್ರಕೋಪದಿಂದ ದೇವಿಯನ್ನು ತನ್ನ ಹೆಗಲಿನಲ್ಲಿ ಇರಿಸಿಕೊಂಡು ನೃತ್ಯಮಾಡ ತೊಡಗಿದನು ಪ್ರಪಂಚವೆಲ್ಲವೂ ನಡುಗತೊಡಗಿತು ದೇವತೆಗಳು ಹೆದರಿದರು, ಕೊನೆಗೆ ವಿಷ್ಣುವು ಉಪಾಯಾಂತರದಿಂದ ದೇವಿಯ ಶರೀರದ ಒಂದೊಂದು ಭಾಗವು ಬೀಳತೊಡಗಿತು, ದೇವೀಭಾಗವತ, ಕಾಳಿಕಾ ಪುರಾಣಗಳಲ್ಲಿ ಇದರ ವರ್ಣನೆಯನ್ನು ವಿವರವಾಗಿ ನೀಡಲಾಗಿದೆ, ಹಾಗೆ ಬಿದ್ದ ಒಂದೊಂದು ಸ್ಥಳವೂ ಒಂದು ಪವಿತ್ರ ಪೀಠವಾಯಿತು. 
 ತಂತ್ರಗ್ರಂಥಗಳಲ್ಲಿ ಈ ಪೀಠಗಳ ಸಂಖ್ಯೆಯನ್ನು ವಿವಿಧ ರೀತಿಯಲ್ಲಿ ಗುರುತಿಸಿದ್ದಾರೆ, ಕಾಳಿಕಾ ಪುರಾಣ, ರುದ್ರಯಾಮಾಲಾ, ಕುಬ್ಜಿಕಾ ತಂತ್ರ, ತಂತ್ರಸಾರ, ತಂತ್ರಚೂಡಾಮಣಿ ಮೊದಲಾದ ಕೆಲವು ಗ್ರಂಥಗಳಲ್ಲಿ ಐವತ್ತೊಂದು ಎಂದು ಗುರುತಿಸಿರುತ್ತಾರೆ ಮತ್ತೆ ಕೆಲವರು ಇಂತಹ ಪೀಠಗಳ ಸಂಖ್ಯೆ ನೂರ ಎಂಟು ಎಂದೂ ಗುರುತಿಸುತ್ತಾರೆ. ಮಹಾಭಾರತದಲ್ಲಿ 108 ಕ್ಷೇತ್ರಗಳನ್ನು ನಮೂದಿಸಲಾಗಿದೆ ಮತ್ಸ್ಯಪುರಾಣದಲ್ಲಿಯೂ ಇದನ್ನೇ ಕಾಣುತ್ತೇವೆ. 
 ಪೀಠಗಳ ಸಂಖ್ಯೆ ಹೇಗಾದರೂ ಇರಲಿ, ಇವು ಭರತಖಂಡದ ಭಾವೈಕ್ಯಕ್ಕೆ ಬಹಳ ಸಹಕಾರಿಯಾಗಿವೆ, ದೇಶದ ಯಾವ ಮೂಲೆಯಲ್ಲಿ ಹೋದರೂ ಒಂದಲ್ಲ ಒಂದು ಹೆಸರಿನಿಂದ ದೇವಿಯ ದರ್ಶನವಾಗುತ್ತದೆ. ಎಲ್ಲಾ ದೇವಿಯರ ಮಹಾತ್ಮ್ಯೆಯೂ ಒಂದೇ ಆಗಿದೆ, ಎತ್ತ ಎತ್ತಹರಿದರೂ ಎಲ್ಲಾ ನದಿಗಳೂ ಕೊನೆಯಲ್ಲಿ ಒಂದೇ ಸಾಗರದಲ್ಲಿ ತಮ್ಮ ಇರುವಿಕೆಯನ್ನೂ ಮರೆಯುವಂತೆ ಎತ್ತ ಎತ್ತ ಹೋದರೂ ಈ ದೇವಿಯ ಕ್ಷೇತ್ರಗಳಲ್ಲಿ ಭಕ್ತರು ಒಂದೇ ಒಂದು ತತ್ತ್ವವನ್ನು ಕಾಣುತ್ತಾರೆ. ಯಾವ ಹೆಸರಿನಿಂದ ಕರೆದರೂ ದೇವೀ ಒಬ್ಬಳೇ ನಾಮ ಹಲವು, ರೂಪ ಹಲವು ಆದರೆ ಶಕ್ತಿ ಒಂದೇ, ಅದೇ ಸರ್ವಶಕ್ತಿ, ಅದೇ ಮಹಾಶಕ್ತಿ, ಆ ಶಕ್ತಿಯ ರೂಪವೇ ಬೇರೆ ಬೇರೆ ರೀತಿಯಲ್ಲಿ ಗೋಚರಿಸುತ್ತವೆ ಎಂದು ಅನುಭವ ಪೂರ್ವಕವಾಗಿ ಅರಿಯುತ್ತಾರೆ. 
 ದೇವಿಯಿಂದ ಕೆಳಗೆ ಬಿದ್ದ ಲಿಂಗದ ಹೆಸರಿಗನುಗುಣವಾಗಿ ದೇವಿಯ ಕ್ಷೇತ್ರಗಳು ಮಹಿಮಾನ್ವಿತವಾದವು, ಸುಲಭವಾಗಿ ಅಧ್ಯಯನ ಮಾಡಲು 
1 ದೇವಿಯ ಶರೀರದಿಂದಿ ಬಿದ್ದ ಭಾಗ ಅಥವಾ ಲಿಂಗ
2 ದೇವಿಯ ಶಕ್ತಿಯ ರೂಪ
3 ಬೈರವನು ಅಲ್ಲಿ ಯಾವ ಹೆಸರಿನಿಂದ ನೆಲೆ ಗೊಂಡಿದ್ದಾನೆ
4 ಪೀಠದ ಸ್ಥಳ ಎಂಬುದನ್ನು ಗಮನಿಸಬೇಕು

51ಪೀಠಗಳ ವಿವರಣೆ :
1) ಹಿಂದುಲಾಜ್ : 
 (1) ದೇವಿಯ ಕಪಾಲದಿಂದ ಕೆಳಗೆ ಬಿದ್ದಿತು
 (2) ಶಕ್ತಿಯ ಹೆಸರು ಕೋತಾರಿ
 (3) ಬೈರವನ ಹೆಸರು ಭೀಮಲೋಚನ
 (4) ದೇವಿಯ ಭಾಗವು ಕೆಳಗೆ ಬಿದ್ದ ಭಾಗ ಅಥವಾ ಪ್ರದೇಶ ಬೆಲೂಚಿಸ್ಥಾನ ಈಗಿನ ಪಾಕಿಸ್ಥಾನ 

2) ಕಿರೀಟ :
 (1) ಕಿರೀಟವು ಇಲ್ಲಿ ಬಿದ್ದಿತು
 (2) ವಿಮಲ ಅಥವ ಭವನೇಶಿ
 (3) ಸಮಾವರ್ತ
 (4) ಬಟ್ನಾಗರ್ (ಪಶ್ಚಿಮ ಬಂಗಾಳದ ಗಂಗಾನದಿಯ ತೀರ)

3) ಬೃಂದಾವನ :
 (1) ಕೂದಲು
 (2) ಉಮಾ
 (3) ಬುತೇಷ
 (4) ಭೂತೇಶ್ವರ ಮಹಾದೇವ ದೇವಾಲಯ ಮಥುರ (ಬೃಂದಾವನ ಮಾರ್ಗದಲ್ಲಿದೆ)

4. ಕರವೀರ :
 (1) ಮೂರು ಕಣ್ಣುಗಳು
 (2) ಮಹಿಷ ಮರ್ದಿನಿ
 (3) ಕ್ರೋದಿಶ
 (4) ಮಹಾಲಕ್ಷ್ಮಿ ದೇವಾಲಯ ಕೊಲ್ಲಾಪುರ (ಮಹಾರಾಷ್ಟ್ರ)

5. ಸುಗಂಧಾ :
 (1) ಮೂಗು
 (2) ಸುಗಂಧಾ ಅಥವಾ ಉಗ್ರಾತ್ರಾ
 (3) ತ್ರಯಂಬಕ
 (4) ಶಿಕಾರಪುರ (ಬಂಗ್ಲಾದೇಶದಲ್ಲಿರುವ ಬರೀಸಾಲ್ ನಗರದ ಸಮೀಪದಲ್ಲಿದೆ. 

6. ಕಾರ-ಟೋಯ-ಟಾಟಾ :
 (1) ಎಡದ ಕಿವಿ
 (2) ಅಪರ್ಣಾ
 (3) ವಾಮನ
 (4) ಭವಾನಿಪುರ (ಬಂಗ್ಲಾದೇಶದ ಬೋಗಟಾನಗರದ ಸಮೀಪದಲ್ಲಿದೆ

7. ಶ್ರೀ ಪರ್ವತ 
 (1) ಬಲದ ಕಿವಿ
 (2) ಶ್ರೀಸುಂದರೀ
 (3) ಸುಂದರಾನಂದ
 (4) ಲಡಾಕ್ ಪ್ರದೇಶ (ಕಾಶ್ಮೀರ)

8. ವಾರಣಸೀ :
 (1) ಕಿವಿಯ ಆಭರಣಗಳು
 (2) ವಿಶಾಲಕ್ಷ್ಮೀ
 (3) ಕಾಲ-ಬೈರವ
 (4) ಮಣಿಕರ್ಣಕಾ ಘಟಕ (ಉತ್ತರ ಪ್ರದೇಶ)

9. ಗೋದಾವರೀ :
 (1) ಎಡದ ಕೆನ್ನೆ 
 (2) ವಿಶ್ಯೇಷಿ ಅಥವಾ ರಾಕಿಣೀ
 (3) ವಿಶ್ಯೇಷ ಅಥವಾ ದಂಡಪಾಣಿ
 (4) ಗೋದಾವರಿಯ ತಟದಲ್ಲಿರುವ ಕೋಟಿತೀರ್ಥ (ಆಂಧ್ರಪ್ರದೇಶದ ರಾಜಮಹೇಂದ್ರವರಂ ಹತ್ತಿರ)

10. ಗಂಡಕೀ :
 (1) ಬಲದ ಕೆನ್ನೆ 
 (2) ಗಂಡಕೀ
 (3) ಚಕ್ರಪಾಣಿ
 (4) ಗಂಡಕೀನದಿಯ ತಟ (ನೇಪಾಳದ ಗಂಡಕೀ ನದಿಯ ತೀರ ಮುಕ್ತನಾಥ )

11. ಶುಚಿ :
 (1) ಮೇಲಿನ ಹಲ್ಲುಗಳು ದವಡೆ 
 (2) ನಾರಾಯಣೀ
 (3) ಸಂಹಾರ
 (4) ಕನ್ಯಾಕುಮಾರೀ ಹತ್ತಿರವಿರುವ ಸ್ಥಾನ ಶಿವದೇವಸ್ಥಾನ ಶುಚೀಂದ್ರಂ (ತಮಿಳುನಾಡು)

12. ಪಂಚಸಾಗರ :
 (1) ಕೆಳಗಿನ ಹಲ್ಲುಗಳು 
 (2) ವಾರಾಹಿ
 (3) ಮಹಾರುದ್ರ
 (4) ಗುರುತಿಸಲಾಗಿಲ್ಲ

13. ಜ್ವಾಲಾಮುಖಿ :
 (1) ನಾಲಿಗೆ
 (2) ಅಂಬಿಕಾ ಅಥವಾ ಸಿದ್ಧಿದಾ
 (3) ಉನ್ಮತ್ತ
 (4) ಹಿಮಾಚಲ ಪ್ರದೇಶ

14. ಭೈರವ ಪರ್ವತ :
 (1) ಮೇಲಿನ ತುಟಿ
 (2) ಆವಂತಿ
 (3) ಲಂಬಾ ಕರಣ
 (4) ಉಜ್ಜಯಿನಿ ಸಿಪ್ರಾನದಿಯ ತಟದಲ್ಲಿರುವ ನಗರ

15. ಅಟ್ಟಹಾಸ :
 (1) ಕೆಳಗಿನ ದವಡೆ
 (2) ಪುಲ್ಲಾರ
 (3) ವಿಶ್ವೇಶ 
 (4) ಲುದ್ದಾಪುರದ ಹತ್ತಿರ (ಅಹಮದ್ ಪುರ ಮತ್ತು ಕಟವಾ ರೈಲು ಮಾರ್ಗದ ಮಧ್ಯದಲ್ಲಿದೆ)

16. ಜ್ಞಾನಸ್ಥಾನ :
 (1) ಕೆನ್ನೆ
 (2) ಭ್ರಾಮರಿ
 (3) ವಿಕ್ರಿರಿತಾಕ್ಷ
 (4) ಭದ್ರಕಾಳ ಕ್ಷೇತ್ರ ನಾಸಿಕ್ (ಪಂಚವಟಿಯ ಹತ್ತಿರ)

17. ಕಾಶ್ಮೀರ :
 (1) ಕತ್ತು
 (2) ಮಹಾಮಾಯಾ
 (3) ತ್ರಿ - ಸಂಧ್ಯೇಶ್ವರ
 (4) ಅಮರನಾಥ ಗುಹೆ

18. ನಂದೀಪುರ :
 (1) ಕೊರಳಿನ ಕಂಠಾಭರಣ
 (2) ನಂದಿನಿ
 (3) ನಂದಿಕೇಶ್ವರ
 (4) ವಟವೃಕ್ಷದ ಸಮೀಪದಲ್ಲಿದೆ ಸಯಿನ್ ದಿಯಾ (ಹೌರಾ ಮತ್ತು ಕ್ಲೂಲ್ ರೈಲು ಮಾರ್ಗದ ಮಧ್ಯದಲ್ಲಿರುವ ಸ್ಥಳ ಪಶ್ಚಿಮ ಬಂಗಾಳ

19. ಶ್ರೀಶೈಲ :
 (1) ಕೊರಳಿನ ಮೂಳೆ
 (2) ಮಹಾಲಕ್ಷ್ಮೀ
 (3) ಸಂವರಾನಂದಾ
 (4) ಭಮರಾಂಬಿಕಾ ದೇವಾಸ್ಥಾನ ಶ್ರೀಶೈಲ (ಆಂದ್ರಪ್ರದೇಶ)

20. ನಲಹತಿ :
 (1) ವಿವರ ತಿಳಿದು ಬಂದಿಲ್ಲ
 (2) ಕಾಳಿಕಾ
 (3) ಯೋಗೀಶ
 (4) ನಲಹತಿ (ಪಶ್ಚಿಮ ಬಂಗಾಳ)

21. ಮಿಥಿಲಾ :
 (1) ಎಡಭುಜ
 (2) ಮಹಾದೇವಿ ಅಥವ ಉಮಾ
 (3) ಮಹೋದರಾ 
 (4) ದುರ್ಗಾದೇವಾಲಯ (ಜನಕಪುರದ ಹತ್ತಿರ)

22. ರತ್ನಾವಳೀ :
 (1) ಬಲಭುಜ
 (2) ಕುಮಾರೀ
 (3) ಶಿವಾ
 (4) ತಿಳಿದು ಬಂದಿಲ್ಲ

23. ಪ್ರಭಾಸ :
 (1) ಉದರದ ತಳಭಾಗ
 (2) ಚಂದ್ರಭಾಗಾ
 (3) ವಕ್ರತುಂಡಾ
 (4) ಅಂಬಾಜೀ ದೇವಸ್ಥಾನ (ಗಿರಿನಾರ್ ಬೆಟ್ಟಗಳಲ್ಲಿದೆ)

24. ಜಲಂಧರ :
 (1) ಎಡಭಾಗದ ಸ್ತನ
 (2) ತ್ರಿಪುರಮಾಲಿನೀ
 (3) ಭೀಷಣಾ 
 (4) ಪಂಜಾಬ್ 

25. ರಾಮಗಿರಿ :
 (1) ಬಲಭಾಗದ ಸ್ತನ
 (2) ಶಿವಾಣಿ
 (3) ಚಂದ
 (4) ಶಾರದಾ ದೇವಾಲಯ ಚಿತ್ರಕೂಟ

26. ವೈದ್ಯನಾಥ :
 (1) ಹೃದಯ
 (2) ಜಯದುರ್ಗಾ
 (3) ವೈದ್ಯನಾಥ
 (4) ಶಕ್ತಿ ದೇವಾಲಯ - ವೈದ್ಯನಾಥ ದೇವಾಲಯದ ಎದುರು (ಬಿಹಾರ ರಾಜ್ಯ)

27. ವಕ್ರೇಶ್ವರ :
 (1) ಮೆದುಳು
 (2) ಮಹಿಷಮರ್ದಿನೀ
 (3) ವಕ್ರಾಂತಾ
 (4) ದುಬ್ರಾಜಪುರದ ಸ್ಮಶಾನ, ಓಂಡಾಲಾ-ಸ್ಕೆಂದ್ಯ ರೈಲ್ವೆಮಾರ್ಗದಲ್ಲಿ (ಪಶ್ಚಿಮ ಬಂಗಾಳ)

28. ಕನ್ಯಕಾಶ್ರಮ :
 (1) ಹಿಂಭಾಗದ ಬೆನ್ನು ಹುರಿ
 (2) ಶರ್ವಾಣೀ
 (3) ನಿಮಿಷಾ
 (4) ಭದ್ರಕಾಳೀ ದೇವಸ್ಥಾನ ಕನ್ಯಾಕುಮಾರಿ ದೇವಸ್ತಾನದ ಒಳ ಆವರಣದಲ್ಲಿ ಕನ್ಯಾಕುಮಾರಿ (ತಮಿಳುನಾಡು)

29. ಬಹುಳ :
 (1) ಎಡತೋಳು
 (2) ಬಹುಳಾ ಅಥವ ಚಂಡಿಕಾ
 (3) ಬೈರುಕ
 (4) ಕೇತು ಬ್ರಹ್ಮ ದೇವಾಲಯ, ಕಟ್ಟಾನಗರದ ಹತ್ತಿರ (ಪಶ್ಚಿಮ ಬಂಗಾಳ)

30. ಚಟ್ಟಾಲ :
 (1) ಬಲತೋಳು
 (2) ಭವಾನಿ 
 (3) ಭವಾನಿ ಚಂದ್ರಶೇಖರ
 (4) ಭವಾನಿ ದೇವಸ್ತಾನ ಚಂದ್ರಶೇಖರ ಬೆಟ್ಟ ಸೀತಾಕುಂಡದ ಹತ್ತಿರ (ಬಂಗ್ಲಾದೇಶದ ಛೋಟಾಗಾಂವ್ ಹತ್ತಿರ)

31. ಉಜ್ಜಯಿನಿ : 
 (1) ಕತ್ತಿನ ಪಟ್ಟಿಯ ಮೂಳೆ
 (2) ಮಂಗಳ ಚಂಡಿ
 (3) ಕಪಿಲಾಂಬರ
 (4) ಹರಸಿದ್ದಿ ದೇವಸ್ಥಾನ ಉಜ್ಜಯಿನಿಯ ಬಳಿಯಲ್ಲಿರುವ ರುದ್ರ ಸಾಗರದ ಬಳಿ

32. ಮಣಿವೇದಿಕಾ :
 (1) ತೋಳು
 (2) ಗಾಯತ್ರಿ
 (3) ಸರ್ವಾನಂದಾ 
 (4) ಗಾಯತ್ರೀ ಬೆಟ್ಟಗಳು ಪುಷ್ಕರದ ಬಳಿ

33. ಮಾನಸ :
 (1) ಬಲತೋಳು
 (2) ದಾಕ್ಷಾಯಿಣೀ
 (3) ಹರಾ ಅಥವಾ ಅಮರಾ
 (4) ಮಾನಸಸರೋವರ ಟಿಬೆಟ್ ಪೀಠ ಭೂಮಿ

34. ಯಶೋರ :
 (1) ಎಡತೋಳು
 (2) ಯಶೋರೇಶ್ವರೀ
 (3) ಚಂದಾದ
 (4) ಈಶ್ವರ ಪುರಿ (ಜೈಶೋರ್ - ಯಶೋಹರ ಮಾರ್ಗ, ಬಂಗ್ಲಾದೇಶ)

35. ಪ್ರಯಾಗ :
 (1) ಕೈ ಬೆರಳುಗಳು
 (2) ಲಲಿತಾ
 (3) ಭವ
 (4) ಲಲಿತಾ ದೇವಿ ದೇವಸ್ಥಾನ ಅಕ್ಷಯವಟವೃಕ್ಷದ ಬಳಿ ಅಲಹಾಬಾದ್

36. ವಿರಾಜ :
 (1) ಹೊಕ್ಕಳು 
 (2) ವಿಮಲಾ 
 (3) ಜಗನ್ನಾಥ
 (4) ವಿಮಲಾದೇವಿ ದೇವಾಲಯ - ಜಗನ್ನಾಥ ದೇವಾಲಯ ಪುರಿ 

37. ಕಾಂಚೀ :
 (1) ಮೂಳೆಗಳು
 (2) ಸೇವಗರ್ಭ
 (3) ರುರು
 (4) ಕಾಳಿಕಾದೇವಸ್ಥಾನ ಶಿವಕಂಚಿ ಕಾಂಚೀಪುರ (ತಮಿಳುನಾಡು)

38. ಕಾಲಮಹಾದೇವ :
 (1) ಎಡಪೃಷಾ
 (2) ಕಾಳೀ
 (3) ಅಸಿತಾಂಗ
 (4) ಸ್ಥಳ ನಿರ್ಧಾರವಾಗಿಲ್ಲ

39. ಸೋನಾ :
 (1) ಬಲಭಾಗದ ಪೃಷ್ಠ
 (2) ನರ್ಮದಾ ಅಥವಾ ಸೋನಾಕ್ಷಿ
 (3) ಭದ್ರಸೇನಾ
 (4) ಸೋನಾನದಿಯ ಉಗಮಸ್ಥಳ (ಅಮರ ಕಂಟಕ ಪ್ರದೇಶ)

40. ಕಾಮಗಿರಿ :
 (1) ಯೋನಿ
 (2) ಕಾಮಾಖ್ಯಾ
 (3) ಉಮಾನಂದಾ
 (4) ಕಾಮಾಖ್ಯದೇವಸ್ಥಾನ, ಗೌಹತಿ (ಅಸ್ಸಾಂ)

41. ನೇಪಾಳ :
 (1) ಎರಡೂ ಕಾಲಿನ ಕಿಣ್ಣುಗಳು
 (2) ಮಹಾಮಾಯಾ
 (3) ಕಪಾಲೀ 
 (4) ಗುಹೇಶ್ವರೀ ದೇವಸ್ಥಾನ ಭಾಗಮತಿ ನದಿಯ ತೀರ ಪಶುಪತಿನಾಥ (ನೇಪಾಳ)

42. ಜಯಂತಿ :
 (1) ಎಡತೊಡೆ
 (2) ಜಯಂತೀ
 (3) ಕ್ರಮಭದೀಶ್ವರ
 (4) ದರ್ಭಂಗ ಪಟ್ಟಣ ಜಯಂತಿ ಬೆಟ್ಟಗಳು, ಶಿಲ್ಲಾಂಗ್ ಬಳಿ (ಮೇಘಾಲಯ)

43. ಮಗಧ :
 (1) ಬಲತೊಡೆ
 (2) ಸರ್ವಾನಂದಕಾರಿ
 (3) ವ್ಯೋಮಕೇಶ
 (4) ಪಟ್ಟಣೀಶ್ವರೀ ದೇವಿ ದೇವಾಲಯ, ಪಾಟ್ನಾನಗರದ ಬಳಿ (ಬಿಹಾರ)

44. ತ್ರಿಸ್ತೋಟಾ :
 (1) ಎಡಪಾದ 
 (2) ಭ್ರಾಮರೀ
 (3) ಈಶ್ವರ 
 (4) ಜಲಪಾಯಿದೇವಸ್ಥಾನ (ಪಶ್ಚಿಮ ಬಂಗಾಳ)

45. ತ್ರಿಪುರ :
 (1) ಬಲಪಾದ
 (2) ತ್ರಿಪುರಸುಂದರೀ
 (3) ತ್ರಿಪುರೇಷ 
 (4) ರಾಧಕಿಶೋರದ ಬಳಿಯಿರುವ ಬೆಟ್ಟಗಳು ತ್ರಿಪುರ

46. ವಿಭಾಷಾ :
 (1) ಎಡ ಮಣಿಕಟ್ಟು
 (2) ಕಾಪಾಲಿನೀ ಅಥವ ಭೀಮರೂಪಾ
 (3) ಸರ್ವಾನಂದಾ
 (4) ಕಾಳೀದೇವಸ್ಥಾನದ ಮೂಲಕ ನಗರದ ಬಳಿ ಮಿಡ್ ನಾಪುರ ಜಿಲ್ಲೆ ( ಪಶ್ಚಿಮ ಬಂಗಾಳ)

47. ಕುರುಕ್ಷೇತ್ರ :
 (1) ಬಲಮಣಿಕಟ್ಟು
 (2) ಸಾವಿತ್ರೀ
 (3) ಸ್ಥಾಣು
 (4) ದ್ವೈಪಾಯನ ಸರೋವರ

48. ಲಂಕಾ :
 (1) ಮಣಿಕಟ್ಟು
 (2) ಇಂದ್ರಾಕ್ಷೀ
 (3) ರಾಕ್ಷಸೇಶ್ವರ
 (4) ಶ್ರೀಲಂಕಾ

49. ಯುಗಾದ್ಯ :
 (1) ಬಲಭಾಗದ ಹೆಬ್ಬೆರಳು
 (2) ಭೂತಧಾತ್ರೀ
 (3) ಕ್ಷೀರ ಕಂಟದ ಅಥವ ಯುಗಾಧ್ಯ
 (4) ಉತ್ತರ ಖೀರ ಪಟ್ಟಣ ಬರದ್ವಾನ್ ಬಳಿ (ಪಶ್ಚಿಮ ಬಂಗಾಳ)

50. ವಿರಾಟ : 
 (1) ಎಡಗಾಲಿನ ಹೆಬ್ಬೆಟ್ಟು
 (2) ಅಂಬಿಕಾ
 (3) ಅಮೃತಾ
 (4) ವೈರಾಟ ನಗರದ ಬಳಿ ಜಯಪುರ (ರಾಜಸ್ಥಾನ)
 
51. ಕಾಳಿಪೀಠ :
 (1) ಬೆರಳುಗಳು
 (2) ಕಾಶಿಕಾ
 (3) ನಕುಳಿಕಾ
 (4) ಕಾಳಿದೇವಸ್ಥಾನ ಕಾಳೀಘಟ್ಟ, ಕಲ್ಕತ್ತ 

#ಹಳೇದು

*ದುರ್ಗಾರಾಧನೆ ಅಥವಾ ನವರಾತ್ರಿ ದಸರಾ ಆಚರಣೆ*

ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದಾದ್ಯಂತ 9 ದಿನ ಆಚರಿಸುವ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯೇ ಪ್ರಧಾನ.

ಸೌಂದರ್ಯ ಲಹರೀ ಹಾಗೂ ದುರ್ಗಾ ಸಪ್ತಶತೀ ಪಾರಾಯಣ, ಹೋಮ-ಹವನ ಧಾರ್ಮಿಕ ಆಚರಣೆಯ ಜತೆಗೇ ಸಂಗೀತ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ವಿಶೇಷ.

ದಕ್ಷಿಣದಲ್ಲಿ ವಿಜಯನಗರ ಸಾಮ್ರೋಜ್ಯದ ಆಡಳಿತವಿರುವವರೆಗೂ ಹಂಪಿಯ ಮಹಾನವಮಿ ದಿಬ್ಬದಲ್ಲಿ ನವರಾತ್ರಿ ಉತ್ಸವಗಳು ವಿಜಂಭಣೆಯಿಂದ ನೆರವೇರುತ್ತಿದ್ದವು. ವಿಜಯನಗರ ಸಾಮ್ರೋಜ್ಯದ ಪತನಾನಂತರ ಮೈಸೂರು ಒಡೆಯರು ದಸರಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು.

ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ನಂತರ ಕರ್ನಾಟಕ ಸರ್ಕಾರವೇ ದಸರಾ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ.ನಗರದ ದೇವಸ್ಥಾನಗಳಲ್ಲಿ, ಮನೆ ಮನಗಳಲ್ಲಿ ಇನ್ನು 10 ದಿನ ಹಬ್ಬವೋ ಹಬ್ಬ.

ನಿತ್ಯವೂ ಒಂದೊಂದು ರೂಪದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಸಂಗೀತ ನೃತ್ಯ ಉತ್ಸವಗಳು ಕಣ್ಮನಗಳಿಗೆ ಹಬ್ಬ ನೀಡಲಿವೆ. ಅಲಂಕಾರಿಕವಾಗಿ ಗೊಂಬೆಗಳನ್ನು ಪ್ರತಿಷ್ಠಾಪಿಸುವ ಸಂಪ್ರದಾಯ ಅನೇಕ ಮನೆಗಳಲ್ಲಿದೆ. ಒಟ್ಟಾರೆ ಇದು ಶಕ್ತಿ ಶಾರದೆಯ ಮೇಳ.  

ಒಂಬತ್ತು ರೂಪ
ದುರ್ಗೆ ಅಥವಾ ಶಕ್ತಿ ಪೂಜೆಯೇ ಪ್ರಧಾನವಾಗಿರುವ ದಸರಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನವದುರ್ಗೆಯರಾದ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರನ್ನು ಒಂಭತ್ತು ದಿನ ಆರಾಧಿಸಲಾಗುತ್ತದೆ.

ಈ ಪರಂಪರೆಯನ್ನು ಶ್ರೀದೇವಿ ಕವಚದಲ್ಲಿ ನಿತ್ಯಮಂತ್ರವು
*ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ*
*ತತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್*
*ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ* 
*ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್*
*ನವಮಂ ಸಿದ್ಧಿದಾತ್ರೀ ಚ* *ನವದುರ್ಗಾಃ ಪ್ರಕೀರ್ತಿತಾಃ*
ಎಂದು ಉಲ್ಲೇಖಿಸಲಾಗಿದೆ.

ದುರ್ಗೆ ಆರಾಧನೆ ಮಂತ್ರಶಾಸ್ತ್ರವಷ್ಟೇ ಅಲ್ಲ; ತಂತ್ರಶಾಸ್ತ್ರ ಹಾಗೂ ಯಂತ್ರ ಶಾಸ್ತ್ರವೂ ಆಗಿರುವುದು ವಿಶೇಷ. ಕೆಲವರು ದುರ್ಗಾ ಮಾತೆಯ ಮೂರ್ತಿಯನ್ನೂ, ಕೆಲವರು ಶ್ರೀಚಕ್ರವನ್ನೂ ಆರಾಧಿಸುವ ಪರಂಪರೆ ಅನೂಚಾನವಾಗಿದೆ. ಇದನ್ನು `ಶ್ರೀವಿದ್ಯಾ~ ಆರಾಧನೆ ಎಂದು ಪಂಡಿತರು ವಿಶ್ಲೇಷಿಸುತ್ತಾರೆ.

ನವ ಆರಾಧನೆ
ದುರ್ಗಾದೇವಿಯ ಪ್ರಥಮ ಸ್ವರೂಪವನ್ನು `ಶೈಲಪುತ್ರಿ~ ಎಂದು ನವರಾತ್ರಿಯ ಮೊದಲನೇ ದಿನ ಆರಾಧಿಸುತ್ತಾರೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆ ಶೈಲಪುತ್ರಿ~.

ವೃಷಭವಾಹನೆ, ಬಲ ಹಸ್ತದಲ್ಲಿ ತ್ರಿಶೂಲ, ಎಡಹಸ್ತದಲ್ಲಿ ಕಮಲ ಪುಷ್ಪದಿಂದ ಸುಶೋಭಿತಳಾಗಿರುವ ಶೈಲಪುತ್ರಿ ದುರ್ಗೆಯನ್ನು ಮೂಲಾಧಾರ ಚಕ್ರದಲ್ಲಿ ಆರಾಧಕರು ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಯೋಗಸಾಧನೆಯ ಪ್ರಾರಂಭ.

ನವರಾತ್ರಿಯ ದ್ವಿತೀಯ ದಿನವನ್ನು ನವಶಕ್ತಿಯರಲ್ಲಿ ಎರಡನೇ ಸ್ವರೂಪವಾದ `ಬ್ರಹ್ಮಚಾರಿಣಿ~ ದುರ್ಗಾ ಮಾತೆಯ ಆರಾಧನೆಯೊಂದಿಗೆ ನೆರವೇರಿಸಲಾಗುವುದು. ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.

ಈಕೆಯ ಸ್ವರೂಪ ಜ್ಯೋತಿರ್ಮಯ ಮತ್ತು ಅತ್ಯಂತ ಭವ್ಯವಾಗಿದ್ದು ಬಲ ಹಸ್ತದಲ್ಲಿ ಜಪಮಾಲೆ ಹಾಗೂ ಎಡಹಸ್ತದಲ್ಲಿ ಕಮಂಡಲ ಇರುತ್ತದೆ.

ಮೂರನೇ ದಿನ `ಚಂದ್ರಘಂಟಾ~ ದೇವಿಯ ಆರಾಧನೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರ ಸಜ್ಜಿತಳಾಗಿ, ಯುದ್ಧ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.

ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಚಂದ್ರನಿದ್ದಾನೆ. ಆದ್ದರಿಂದಲೇ ಈಕೆ `ಚಂದ್ರಘಂಟಾ~.ದುರ್ಗಾ ಮಾತೆಯ ನಾಲ್ಕನೇ ಸ್ವರೂಪವೇ `ಕೂಷ್ಮಾಂಡಾ~. ಅಷ್ಟ ಭುಜಗಳುಳ್ಳವಳಾದ್ದರಿಂದ ಅಷ್ಟಭುಜಾದೇವಿ ಎಂದೂ ಆರಾಧಿಸುತ್ತಾರೆ.

ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ತನ್ನ ಎಂಟು ಹಸ್ತಗಳಲ್ಲಿ ಧರಿಸಿದ್ದಾಳೆ. ಕೂಷ್ಮಾಂಡಾದೇವಿಗೆ ಬೂದುಕುಂಬಳಕಾಯಿ ಬಲಿಯೇ ಅತ್ಯಂತ ಪ್ರಿಯ. ಕುಂಬಳಕಾಯಿಯನ್ನು ಸಂಸ್ಕೃತದಲ್ಲಿ ಕೂಷ್ಮಾಂಡ ಎಂದು ಕರೆಯುತ್ತಾರೆ.

ಐದನೇ ದಿನ ನವದುರ್ಗೆಯರ ಆರಾಧನೆಯನ್ನು `ಸ್ಕಂದ ಮಾತಾ~ ಸ್ವರೂಪದಲ್ಲಿ ಮಾಡಲಾಗುತ್ತದೆ. ಷಣ್ಮುಖ ಸ್ಕಂದನ ಮಾತೆಯಾದ್ದರಿಂದ ಸ್ಕಂದಮಾತಾ ಹೆಸರು ಬಂದಿದೆ. ನಾಲ್ಕು ಭುಜ-ನಾಲ್ಕು ಹಸ್ತಯುಕ್ತ ಮಾತೆಯು ಸಿಂಹವಾಹನೆ .

ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಸುಬ್ರಹ್ಮಣ್ಯ ಸ್ವಾಮಿಯ ಉಪಾಸನೆ ಕೂಡ ತಾನಾಗಿಯೇ ಆಗುತ್ತದೆ.ದುರ್ಗಾಮಾತೆಯ ಆರನೇ ಸ್ವರೂಪದ ಹೆಸರೇ ಕಾತ್ಯಾಯಿನಿ. ನಾಲ್ಕು ಭುಜಗಳುಳ್ಳ ಸಿಂಹವಾಹನೆಯು ಬಂಗಾರದ ವರ್ಣದಿಂದ ಹೊಳೆಯುತ್ತಿರುತ್ತಾಳೆ.

ಏಳನೇ ದಿನ ಆರಾಧಿಸುವ ದುರ್ಗೆಯ ಏಳನೇ ಶಕ್ತಿಯೇ `ಕಾಲರಾತ್ರಿ~.  ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದು ಪೂಜಿಸುತ್ತಾರೆ.

ದಟ್ಟವಾದ ಅಂಧಕಾರದಂತೆ ಇವಳ ಶರೀರದ ವರ್ಣವು ಕಪ್ಪು. ತಲೆಗೂದಲು ಬಿಚ್ಚಿ ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆಯನ್ನು ಧರಿಸಿದ್ದಾಳೆ.

ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದ್ದು, ವಿದ್ಯುತ್ತಿನಂತೆ ಕಿರಣಗಳನ್ನು ಹೊಮ್ಮಿಸುತ್ತಿವೆ. ಕಾಲರಾತ್ರೀ ಮಾತೆಯ ವಾಹನ ಕತ್ತೆ.

ಜಗದಂಬೆಯ ಎಂಟನೆ ಶಕ್ತಿಯೇ `ಮಹಾಗೌರಿ~. ವಷಭ ವಾಹನೆ, ಚತುರ್ಭುಜೆ, ಶ್ವೇತವರ್ಣೆ. ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲ ಮತ್ತು ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದಮುದ್ರೆ ಇದೆ.

ನವರಾತ್ರಿಯ ಎಂಟನೇ ದಿನ (ದುರ್ಗಾಷ್ಟಮೀ) ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆಯಿದೆ. ಇವಳ ಆರಾಧನೆ-ಕಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ.

9ನೇ ದಿನವೇ ಮಹಾನವಮಿ. ಅಂದು ದುರ್ಗೆಯನ್ನು `ಸಿದ್ಧಿದಾತ್ರಿ~ ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಆಕೆ `ಸಿದ್ಧಿದಾತ್ರಿ~. 

ಮಾರ್ಕಂಡೇಯ ಪುರಾಣದಲ್ಲಿ ಉಲ್ಲೆೀಖಿತವಾಗಿರುವ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ~ ಮುಂತಾದ ಎಲ್ಲ ಸಿದ್ಧಿಗಳನ್ನೂ ದಯಪಾಲಿಸುವ ಮಹಾಮಹಿಮೆಯಾಗಿದ್ದಾಳೆ.

ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ. ಕಮಲ ಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಧರಿಸಿದ್ದಾಳೆ.
ಹೀಗೆ, ನವರಾತ್ರಿಗೆ ನವದುರ್ಗೆಯರ ಆರಾಧನೆಯನ್ನು ಪರಂಪರಾನುಗತವಾಗಿ ಮಾಡಿಕೊಂಡು ಬರಲಾಗುತ್ತಿದೆ.
 
ನವದುರ್ಗೆಯರ ಏಕೀಕೃತ ಮೂರ್ತಿ ಅಷ್ಟಾದಶಭುಜ ಅಂದರೆ, ಹದಿನೆಂಟು ಭುಜ-ಹಸ್ತಗಳನ್ನುಳ್ಳ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪಿಣಿಯೇ ಮಹಾತ್ರಿಪುರ ಸುಂದರಿ

*ಓಂ ದುಂ ದುರ್ಗಾಯೈ ನಮಃ* 

†*********************†


ಪುಷ್ಪಗಳಲ್ಲಿ ಪೃಥ್ವೀ ತತ್ವವಿರುತ್ತದೆ. ಪಾರಿಜಾತವೊಂದನ್ನು ಬಿಟ್ಟರೆ ಭೂಮಿಯಲ್ಲಿ ಬಿದ್ದಿರುವ ಬೇರಾವ ಹೂಗಳೂ ದೇವರ ಪೂಜೆಗೆ ಬರುವುದಿಲ್ಲ. ಸುಂದರವಾದ, ಸುಗಂಧಯುಕ್ತವಾದ, ಒಮ್ಮೆಯೂ ಬಳಸಿರದ, ಹೊಸದಾಗಿ ಕಿತ್ತು ತಂದಿರುವ ಹೂವುಗಳು ಅರ್ಚನೆಗೆ ಯೋಗ್ಯವಾಗಿರುತ್ತವೆ.

ಮುದುಡಿರುವ, ಬಾಡಿರುವ, ದಳಗಳು ಉದುರಿರುವ, ಒದ್ದೆಯಾಗಿರುವ, ಕ್ರಿಮಿಕೀಟಗಳಿರುವ ಹೂವುಗಳನ್ನು ಅರ್ಪಿಸಲಾಗದು. ಪುಷ್ಪಗಳನ್ನು ಸೂರ್ಯಾಸ್ತದ ನಂತರ ಗಿಡದಿಂದ ಕೀಳಬಾರದು. ವಿಷ್ಣುವಿಗೆ ಮಲ್ಲಿಗೆ ಹೂವು, ಗಣೇಶ ಹಾಗು ಈಶ್ವರನಿಗೆ ತುಂಬೆ, ಲಕ್ಷ್ಮೀದೇವಿ, ಸರಸ್ವತಿಯರಿಗೆ ಕಮಲ ಹೀಗೆ ವಿವಿಧ ದೇವದೇವತೆಗಳಿಗೆ ಕೆಲವು ನಿರ್ದಿಷ್ಟ ಹೂವುಗಳು ಇಷ್ಟವಾಗಿರುತ್ತವೆ. ಸಂಪಿಗೆ ಮತ್ತು ಕಮಲ ಪುಷ್ಪಗಳು ಮಾತ್ರ ಪೂರ್ಣವಾಗಿ ಅರಳಿರದಿದ್ದರೂ, ಮೊಗ್ಗಾಗಿದ್ದರೂ ಅರ್ಪಿಸಲು ಯೋಗ್ಯ.

ಉಳಿದೆಲ್ಲ ಪುಷ್ಪಗಳೂ ವಿಕಸಿತವಾಗಿರುವುದು ಅತ್ಯಾವಶ್ಯಕ. ಒಂದು ದೇವರಿಗೆ ಅರ್ಪಿಸಲಾದ ಪುಷ್ಪವನ್ನು ಮತ್ತೊಂದು ದೇವರಿಗೆ ಅರ್ಪಿಸಬಾರದು. ಹೂವುಗಳನ್ನು ಗಿಡದಿಂದ ಕೀಳುವಾಗಲೂ ಸಹ ಪಠಿಸಬಹುದಾದ ಕೆಲವು ಮಂತ್ರಗಳಿವೆ. ಶುಭ್ರವಾದ ಮನಸ್ಸಿನಿಂದ ಹೂವುಗಳನ್ನು ಗಿಡಗಳಿಂದ ಕಿತ್ತು, ಪರಿಶುದ್ಧ ಮನಸ್ಸಿನಿಂದ ದೇವರಿಗೆ ಅರ್ಪಿಸಬೇಕು. ದಾರದಲ್ಲಿ ಕಟ್ಟಿರುವ ಮಾಲೆಯ ಮೇಲೆ ನೀರನ್ನು ಸಂಪ್ರೋಕ್ಷಿಸಿ ದೇವರಿಗೆ ಅರ್ಪಿಸಬೇಕು. ವಿಷ್ಣುವಿಗೆ ತುಳಸೀದಳವನ್ನು ಕಡ್ಡಾಯವಾಗಿ ಅರ್ಪಿಸಬೇಕು. ಅಂತೆಯೇ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು.

ಹೂವು, ಸುಗಂಧ ದ್ರವ್ಯ, ಧೂಪ, ಊದಿನಕಡ್ಡಿ ಮುಂತಾದುವು ಪೂಜಾಸ್ಥಳ ಮತ್ತು ಅದರ ಸುತ್ತಮುತ್ತಲಿನ ವಾತಾವರಣವನ್ನು ಪರಿಮಳದಿಂದ ಆವರಿಸಿ, ದೇವಾನುದೇವತೆಗಳ ಆಗಮನಕ್ಕೆ ಬೇಕಾದ ಪರಿಶುದ್ಧವಾದ, ನಿಶ್ಕಲ್ಮಶವಾದ ಪರಿಸರವನ್ನು ನಿರ್ಮಾಣಮಾಡುತ್ತವೆ. ಪರಿಮಳಯುಕ್ತ ವಾತಾವರಣದಲ್ಲಿ ದೇವತೆಗಳು ಹೆಚ್ಚು ಕಾಲ ಇರುತ್ತಾರೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಿರುವಂತೆ ಹೂವುಗಳು ಪರಮಾತ್ಮನ ಮನಸ್ಸಿಗೆ ಮುದ ನೀಡುತ್ತವೆ. ದೇವತೆಗಳು ಮುಕ್ತಮನಸ್ಸಿನಿಂದ ಪೂಜೆಯನ್ನು ಕೈಗೊಂಡವರು, ಅವರ ಕುಟುಂಬದವರನ್ನು ಹರಸುತ್ತಾರೆ. ಇಷ್ಟಾರ್ಥಗಳು ಸಿದ್ಧಿಸುತ್ತವೆ.
†*******************†

ಅವಲಕ್ಕಿ ಪವಲಕ್ಕಿ

ನಾವೂ ಚಿಕ್ಕವರಿದ್ದಾಗ,
 *ಅವಲಕ್ಕಿ ಪವಲಕ್ಕಿ*
 *ಕಾಂಚಣ ಮಿಣಮಿಣ* , 
 *ಡಾಮ್ ಡೂಮ್, ಟಸ್ ಪುಸ್,* 
 *ಕೊಯ್ ಕೊಟಾರ್* ಅಂತಿದ್ವಿ.
ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ,  ಅದಕ್ಕೆ ನನ್ನ ಅತ್ತೆ ಹೇಳಿದರು

“ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. 
ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ. 

 *ಅವಲಕ್ಕಿ* – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

 *ಪವಲಕ್ಕಿ* – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.
 
 *ಕಾಂಚನ* – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

 *ಮಿಣ ಮಿಣ* – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.

 *ಡಾಮ್ ಡೂಮ್* – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.
 
 *ಟಸ್ ಪುಸ್* – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

 *ಕೊಯ್ ಕೊಟಾರ್* – ಕೊನೆಗೆ ವ್ಯಕ್ತಿಯ ಮರಣ. ಹೇಗಿದೆ?

 “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು. ಅತ್ತೆ ಮಾತು ಮುಂದುವರಿಸಿದರು.”

"ಅವಲಕ್ಕಿ, ಅಪಮಾನ ಮಾಡಬಾರದು. ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” ಹೌದು, ಎಂದು ಹೇಳಿದೆ.

 *ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ* .
†**********************†

*ಮಜ್ಜಿಗೆ ಮಹಿಮೆ*

(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಶೌಚಾನಂತರ) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆಯಾಗುವುದು.

ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೇನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.

*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.

*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.

*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.

*ಜಠರ ವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

*ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.

*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.

*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.

*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.  ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.

*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ಕುಡಿಯಿರಿ ಗೊತ್ತಿಲ್ಲದವರಿಗೆ ತಿಳಿಸಿಕೊಡಿ. ಆರೋಗ್ಯವೇ ಭಾಗ್ಯ.

*ಬಿಸಿ ನೀರಲ್ಲಿ ಆರೋಗ್ಯ* 
                                      ‌                                                                                                          ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಇದನ್ನು ಹಂಚಿಕೊಳ್ಳಿ. ಇದು ತುಂಬಾ ಮುಖ್ಯವಾಗಿದೆ ಮತ್ತು ಕೆಲವೊಂದು ಜೀವನವನ್ನು ಉಳಿಸಬಹುದು.                                                                                                      
ಕೆಲವು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ *ಬೆಚ್ಚಗಿನ ನೀರು* 100% ಪರಿಣಾಮಕಾರಿಯಾಗಿದೆ ಎಂದು ಜಪಾನಿನ ವೈದ್ಯರ ಒಂದು ಗುಂಪು ಖಚಿತಪಡಿಸಿದೆ: -
1. ಮೈಗ್ರೇನ್
2. ಅಧಿಕ ರಕ್ತದೊತ್ತಡ
3. ಕಡಿಮೆ ರಕ್ತದೊತ್ತಡ
4. ಕೀಲುಗಳ ನೋವು
5. ಹೃದಯ ಬಡಿತ ಹಠಾತ್ ಹೆಚ್ಚಳ ಮತ್ತು ಕಡಿಮೆ
6. ಎಪಿಲೆಪ್ಸಿ
7. ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುವುದು
8. ಕೆಮ್ಮು
9. ದೈಹಿಕ ಅಸ್ವಸ್ಥತೆ
10. ಗೋಲು ನೋವು
11. ಅಸ್ತಮಾ
12. ಕೆಮ್ಮನ್ನು ತಿರುಗಿಸುವುದು
13. ಸಿರೆಗಳ ಅಡಚಣೆ
14. ಗರ್ಭಕೋಶ ಮತ್ತು ಮೂತ್ರಕ್ಕೆ ಸಂಬಂಧಿಸಿದ ರೋಗ
15. ಹೊಟ್ಟೆ ಸಮಸ್ಯೆಗಳು
16. ಕಡಿಮೆ ಹಸಿವು
17. ಕಣ್ಣುಗಳು, ಕಿವಿ ಮತ್ತು ಗಂಟಲುಗಳಿಗೆ ಸಂಬಂಧಿಸಿದ ಎಲ್ಲಾ ರೋಗಗಳು.
18. ತಲೆನೋವು
                                            *ಬಿಸಿ ನೀರನ್ನು ಬಳಸುವುದು ಹೇಗೆ ?*                                                          
ಬೆಳಗ್ಗೆ ಎದ್ದ ಕೂಡಲೇ ಮತ್ತು ಹೊಟ್ಟೆ ಖಾಲಿಯಾಗಿರುವಾಗ ಸುಮಾರು *2 ಗ್ಲಾಸ್ ಬೆಚ್ಚಗಿನ ನೀರನ್ನು* ಕುಡಿಯಿರಿ. ನೀವು ಆರಂಭದಲ್ಲಿ 2 ಗ್ಲಾಸ್ ಗಳನ್ನು ಕುಡಿಯಲು ಸಾಧ್ಯವಾಗದಿರಬಹುದು, ಆದರೆ ನಿಧಾನವಾಗಿ ನೀವು ಕುಡಿಯಿರಿ.
ಸೂಚನೆ:
*ನೀರನ್ನು ತೆಗೆದುಕೊಂಡ ನಂತರ 45 ನಿಮಿಷ ಏನೂ ಸೇವಿಸಬಾರದು.*
                                                                                                                                                                    ಬೆಚ್ಚಗಿನ ನೀರಿನ ಚಿಕಿತ್ಸೆಯು ಸೂಕ್ತವಾದ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ: -
30 ದಿನಗಳಲ್ಲಿ ✔ ಮಧುಮೇಹ
✔ ರಕ್ತದೊತ್ತಡ 30 ದಿನಗಳಲ್ಲಿ
10 ದಿನಗಳಲ್ಲಿ ✔ ಹೊಟ್ಟೆ ಸಮಸ್ಯೆಗಳು
✔ ಎಲ್ಲಾ ರೀತಿಯ ಕ್ಯಾನ್ಸರ್ 9 ತಿಂಗಳಲ್ಲಿ
✔ 6 ತಿಂಗಳಲ್ಲಿ ರಕ್ತನಾಳಗಳ ತಡೆಗಟ್ಟುವಿಕೆ
10 ದಿನಗಳಲ್ಲಿ ✔ ಬಡ ಹಸಿವು
✔ ಗರ್ಭಾಶಯ ಮತ್ತು ಸಂಬಂಧಿತ ರೋಗಗಳು 10 ದಿನಗಳಲ್ಲಿ
✔ ನೋಸ್, ಇಯರ್, ಮತ್ತು ಗಂಟಲು ಸಮಸ್ಯೆಗಳು 10 ದಿನಗಳಲ್ಲಿ
✔ 15 ದಿನಗಳಲ್ಲಿ ಮಹಿಳೆಯರ ಸಮಸ್ಯೆಗಳು
30 ದಿನಗಳಲ್ಲಿ ✔ ಹೃದಯ ರೋಗಗಳು
3 ದಿನಗಳಲ್ಲಿ ✔ ತಲೆನೋವು / ಮೈಗ್ರೇನ್
4 ತಿಂಗಳುಗಳಲ್ಲಿ ✔ ಕೊಲೆಸ್ಟರಾಲ್
✔ ಎಪಿಲೆಪ್ಸಿ ಮತ್ತು ಪಾರ್ಶ್ವವಾಯು ನಿರಂತರವಾಗಿ 9 ತಿಂಗಳುಗಳಲ್ಲಿ
4 ತಿಂಗಳುಗಳಲ್ಲಿ ✔ ಅಸ್ತಮಾ

*ಶೀತಲ (ತಣ್ಣನೆಯ) ನೀರು ನಿಮಗೆ ಕೆಟ್ಟದು !*
💧ತಣ್ಣೀರು ಯುವ ವಯಸ್ಸಿನಲ್ಲಿ ನಿಮಗೆ ಪರಿಣಾಮ ಬೀರದಿದ್ದರೆ, ಅದು ನಿಮಗೆ  ವಯಸ್ಸಾದ ಮೇಲೆ ಹಾನಿ ಮಾಡುತ್ತದೆ.
💧 ಶೀತಲ ನೀರು ಹೃದಯದ 4 ರಕ್ತ ನಾಳಗಳನ್ನು ಮುಚ್ಚುತ್ತದೆ ಮತ್ತು ಹೃದಯಾಘಾತವನ್ನು ಉಂಟುಮಾಡುತ್ತದೆ. ಹೃದಯಾಘಾತಕ್ಕೆ ತಣ್ಣನೆಯ ಪಾನೀಯಗಳು ಮುಖ್ಯ ಕಾರಣ.
💧 ಇದು ಯಕೃತ್ತಿನ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ. ಇದು ಕೊಬ್ಬು ಯಕೃತ್ತಿನೊಂದಿಗೆ ಅಂಟಿಕೊಂಡಿರುತ್ತದೆ. ಯಕೃತ್ತಿನ ಕಸಿಗೆ ಕಾಯುತ್ತಿರುವ ಹೆಚ್ಚಿನ ಜನರು ತಣ್ಣೀರಿನ ಕುಡಿಯುವಿಕೆಯಿಂದ ಬಲಿಯಾಗುತ್ತಾರೆ.
💧 ಶೀತಲ ನೀರು ಹೊಟ್ಟೆಯ ಆಂತರಿಕ ಕರಳುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ದೊಡ್ಡ ಕರುಳಿಗೆ ಪರಿಣಾಮ ಬೀರುತ್ತದೆ ಮತ್ತು ಕ್ಯಾನ್ಸರ್ ನಲ್ಲಿ ಫಲಿತಾಂಶ ನೀಡುತ್ತದೆ.
*ಈ ಮಾಹಿತಿಯನ್ನು  ದಯವಿಟ್ಟು ಎಲ್ಲರಿಗೂ ಕಳಿಸಿ, ತಿಳಿಸಿ  ಹೇಳಿ*
ಕೃಪೆ : ಡಾ. ಡಿ.ಮೆನ್ಸಾ-ಆಸರೆ




Why is everyone happy and I am not?

A newly married couple posted some beautiful  pictures from their honeymoon.

*Aman, their unmarried friend, felt envy and sad looking at his own fate.*

He was getting over age but couldn't find a partner  made him even more frustrated.

Next month Aman posted a picture standing next to his brand new Black colored SUV.

He was giving a curl to his moustaches, which added to the elegance of the picture.

*The newly married couple who posted their honeymoon picture a month back, were suffering from financial crisis, they couldn't even buy a basic car to start their married life.*

Looking at Aman's picture with an expensive SUV, their heart sank deep.

*After a week, one of their common couple friend posted a picture of their new flat.*

They were going through a rough patch in marriage.

They were breathing less and fighting more.

Parents had also been involved in their disputes several times.

Life was like a hell for both of them.

But still they got the delivery of their booked flat and also had to post a picture, to seek some satisfaction in the otherwise hollow life.

Seeing their pictures, Aman who purchased a car only to overcome his insecurities of not being able to buy a house, and not being married, broke down.

*The newly married couple, seeing this picture, lost all excitement of marriage life and felt as if they were the most miserable and poor people in the entire society.*

They started fighting over petty issues.

A few other friends who were single and financially humble went in depression looking all the three pics.

Answering this question-

*How do you exactly know that everyone is happy in their lives?*

Seeing pout pictures on social media?

By meeting someone for minutes?

Professional achievements?

*Laughing & smiling faces?*

New house or vehicles?

Relationship status?

*Airport check-ins?*

Self-bragging?

Good looks?

Wrong!

If you judge this way, this is how you will emotionally go down in life.

*Life is like a deep Ocean, and you can't judge others people's life by standing on the top of a cliff and simply looking down.*

Try and jump inside and touch the bottom of any individual's life to see how happy they are.

Or don't judge!

*Every individual has a few reasons to be happy and some to be sad.*

Instead of peeping in other people's lives, appreciate the reasons you have to be happy.

God knows when they may leave you.

And please get out of this fake digital social media world, use social media only to pass some time and not to pass your life.

*Smile and Spread the Smiles.*

😊😊😊😊



*ಮನೆ* 
ಮನೆಯಲ್ಲಿ ಕೇಳುತ್ತಿಲ್ಲ ಅಜ್ಜಿಯ ಜನಪದ.
ಅಮ್ಮನ‌ ಗೆಜ್ಜೆಯ ನಾದ.
ಮರೆಯಾಗಿದೆ ಬಾವಿಕಟ್ಟೆ.
ಕಾಣೆಯಾಗಿದೆ ತುಳಸಿಕಟ್ಟೆ.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ಈಗಿಲ್ಲ ತೊಟ್ಟಿಮನೆ.
ನೋಡಲು ಸಿಗಲ್ಲ ಅಟ್ಟದ ಮನೆ.
ಇಲ್ಲವಾಗಿವೆ ಪಡಶಾಲೆ.
ಬದಲಾಗಿವೆ ಕಟ್ಟಿಗೆಯ ಒಲೆ.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ದೊಡ್ಡದಾಗುತ್ತಿವೆ ಮನೆಗಳು.
ಸಂಕುಚಿತವಾಗುತ್ತಿವೆ ಮನಗಳು.
ಮನೆಯೊಳಗೆ ತಣ್ಣಗಿನ ಎಸಿ
ಮನದೊಳಗೆ ಕೆಂಡದಂತಹ ಬಿಸಿ.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ದುಬಾರಿ‌ ಊಟದ ಟೇಬಲ್‌ಗಳು.
ಎಂಜಲು ಕೈಯಲ್ಲಿ ಕಾಗೆಯನ್ನು ಓಡಿಸದ ಕೈಗಳು.
ಟೇಬಲ್‌ ತುಂಬಾ ಫಲಗಳು.
ಮನೆಗೆ ಬಾರದ ಜನಗಳು.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ಮನೆ ತುಂಬಾ ಬೆಳಕು ಚಿತ್ತಾರ.
ಮನದಲ್ಲಿ ಕತ್ತಲು ಅಂಧಕಾರ.
ಮನೆ ತುಂಬಾ ಗಡಿಯಾರ.
ಸದಾ ಗಡಿಬಿಡಿ ಆತುರ.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ಮನೆಯಲ್ಲಿ ಹೆಚ್ಚಾಗಿವೆ ದುಡಿಯುವ ಕೈಗಳು
ಕಡಿಮೆಯಾಗುತ್ತಿಲ್ಲ ಸಾಲಗಳು.
ಕಾಲ ಕಸವಾಗಿದ್ದಾರೆ ಮಕ್ಕಳು.
ಮಕ್ಕಳ ಜಾಗ ತುಂಬಿವೆ ಶ್ವಾನಗಳು.
*ಬದಲಾಯ್ತು ಮನೆ ಹಾಗೇ ಸುಮ್ಮನೇ*
ಮನೆಯಾಗಿತ್ತು ಮಂತ್ರಾಲಯ.
ಈಗ ಆಗಿದೆ ಯಂತ್ರಾಲಯ.
ಚದುರಿ ಜೇನುಗೂಡು.
ಮನೆಯಾಗಿದೆ ಹಳೇಬೀಡು.
*ಬದಲಾಯ್ತು ಮನೆ -ಮನಸ್ಸು  ಹಾಗೇ ಸುಮ್ಮನೇ ಆಧುನಿಕತೆಯ ಅಮಲಿನಲ್ಲಿ*
†************†
Vasu asked.
"Mom,
I am a genetic scientist.
I am working in the US on  the evolution of man.
Theory of evolution. Charles Darwin,
have you heard of him? "
His Mother sat next to him, 
smiled and said,
"I know about Darwin, Vasu.
But Have you heard of Dashavatar?
The ten avatars of Vishnu?"
Vasu replied yes.
"Ok!
Then let me tell you what you and
your Darwin don't know.
        Listen carefully-
The first avatar was the Matsya avatar,
it means the fish. That is because life began in the water. Is that not right?"
Vasu began to listen with a little more attention.
She continued,
"Then came the Kurma Avatar,
which means the tortoise, because life moved from the water to the land. The amphibian!
So the Tortoise denoted the evolution from sea to land.
Third avatar was Varaha, the wild boar,
which meant the wild animals with not much intellect, you call them the Dinosaurs, correct?"
Vasu nodded wide eyed.
"The fourth avatar was Narasimha,
half man and half animal, the evolution from wild animals to intelligent beings.
Fifth, the Vaman avatar, the midget or dwarf,
who could grow really tall. Do you know why that is?
Because, there were two kinds of humans, Homo Erectus and Homo Sapiens and Homo Sapiens won that battle."
Vasu could see that his Mother was in full flow and he was stupefied.
"The Sixth avatar was Parshuram,
the man who wielded the axe, the man who was a cave and forest dweller. Angry, and not social.
The seventh avatar was Ram,
the first rational thinking social being, who practised and laid out the laws of society and the basis of human relationships.
The Eighth avatar was Balarama,
a true farmer who showed  value of agriculture in the life.
The Ninth avatar was Krishna,
the statesman, the politician, the diplomat, the Ambassador, the sutile interpreter, the lover who played the game of society and taught how to live and thrive in the adhaarmic social structure.
And finally, my boy,
will come Kalki,
the man you are working on.
The man who will be genetically supreme."
Vasu looked at his Mother speechless.
"This is amazing Mom, how did you .... ?
This makes sense!"
She said, "Yes it does, son!
We Indians knew some amazing things,
but just didn't know how to pass it on scientifically.
So we made them into mythological stories.
Mythology creates faith and makes man sensible.
It is just the way you look at it -
Religious or Scientific. Your call."
( A Must Read n pass it on to other people to appreciate Indian knowledge which was way ahead than today's modern science)


ಬದುಕು 
*ಬದುಕು ಎಂದರೇನು?*
*ಈ ಜಗತ್ತಿನ ಜನರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ:*
ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".*   
ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".*   
ಏಕಲವ್ಯ ಹೇಳುತ್ತಾನೆ, *"ಗುರಿ".* 
ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*. 
ಶ್ರೀ ಕೃಷ್ಣ ಹೇಳುತ್ತಾನೆ, *"ಸಮದರ್ಶಿತ್ವ".*
ಭೀಷ್ಮ ಹೇಳುತ್ತಾನೆ, *"ಪ್ರತಿಜ್ಞೆ".*
ಒಬ್ಬ ಸಂತ ಹೇಳುತ್ತಾನೆ, *"ಭಕ್ತಿ".* 
ಒಬ್ಬ ಸನ್ಯಾಸಿ ಹೇಳುತ್ತಾನೆ, *"ವೈರಾಗ್ಯ".*                    
ಅಲೆಕ್ಸಾಂಡರ್ ಹೇಳುತ್ತಾನೆ, *"ಯುದ್ಧ".* 
ಶ್ರೀಮಂತ ಹೇಳುತ್ತಾನೆ, *"ಮೋಜು ಮತ್ತು ಮಸ್ತಿ".* 
ಮಧ್ಯಮ ವರ್ಗದವನು ಹೇಳುತ್ತಾನೆ, *"ಉದ್ಯೋಗ".*
ಹಸಿದವನು ಹೇಳುತ್ತಾನೆ,
*"ತನ್ನ ಪಾಲಿನ ಅರ್ಧ ರೊಟ್ಟಿ".* 
*ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.*
*ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.*
  *ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.*
  *ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.*
   *ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.*                                 
*ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ.
ಸೊಪ್ಪು
ಮುದ್ದೆ ಬಸ್ಸಾರಿಗೆ ಹರಿವೇ ಚಿಲಕರಿವೆ ಸೊಪ್ಪು...
ಬಾಯಿ ಹುಣ್ಣಿಗೆ ಬಸಳೇ ಸೊಪ್ಪು...
ಮಧುಮೇಹಿಗಳಿಗೊಳಿತು ಮೆಂತೆ ಸೊಪ್ಪು
ತಂಪಾಗಲು ಬಳಸಿ ದಂಟಿನ‌‌ ಸೊಪ್ಪು..
ಅಪರೂಪಕೆ ಬಳಸಿ ಗೋಣಿ‌ ಸೊಪ್ಪು
ಕೆಮ್ಮು ಶೀತ ನೆಗಡಿಗೆ ಗಾಣಿಕೆ ಸೊಪ್ಪು...
ಉಪ್ಪು ಸಾರಿಗೆ ಬಳಸಿ ಕೀರೆ ಸೊಪ್ಪು...
ಬೆರಕೆ ಮಾಡಿ ಬಳಸಲು ಸೀಗೆ ಸೊಪ್ಪು...
ಕಣ್ಣಿಗೆ ಒಳ್ಳೇದು ಒನಗೊನ್ನೇ ಸೊಪ್ಪ...
ಕರುಳಿಗೆ ಒಳ್ಳೇದು ಕೆಸವೇ ಸೊಪ್ಪು...
ಕಾಮಾಲೆಗೆ ಮದ್ದು ಹಸಿರು ಸೊಪ್ಪು...
ಎಲ್ಲಾ ಜ್ವರಕ್ಕೆ ಮದ್ದು ಪರಂಗಿ ಸೊಪ್ಪು...
ಚೆಂದ ಕಾಣಲು ತಿನ್ನಿ ಚಕೋತ ಸೊಪ್ಪು...
ಘಮ ಘಮ ಅಡುಗೆಗೆ ಪುದೀನ ಸೊಪ್ಪು...
ಮಸೊಪ್ಪಿಗೆ ಚೆನ್ನ ಕುಂಬಳ ಸೊಪ್ಪು...
ಸರ್ವ ರೋಗಗಳಿಗೂ
ಜಾಗಡಿ ಸೊಪ್ಪು..
ವಡೆ ಪಕೊಡಕೆ ಸಬ್ಬಕ್ಕಿ ಸೊಪ್ಪು...
ಒಗ್ಗರಣೆಗೆ ಬೇಕು ಕರಿಬೇವಿನ‌ ಸೊಪ್ಪು
ನೆನಪಿನ‌ ಶಕ್ತಿ ಹೆಚ್ಚಲು ಸರಸ್ವತಿ ಸೊಪ್ಪು
ಪಚನವಾಗಲು ಸಬ್ಬಸಿಗೆ ಸೊಪ್ಪು
ನಮ್ಮಜ್ಜಿ‌ ಇಷ್ಟದ ಕನ್ನೇ ಸೊಪ್ಪು..
ಬೆನ್ನೆಲುಬು ಕಾಯಲು ಅಣ್ಣೆ ಸೊಪ್ಪು...
ನನ್ಮಗಳ‌ ಇಷ್ಟದ ಪಾಲಕ್ ಸೊಪ್ಪು
ನನ್ನಾಕೆ ಇಷ್ಟದ ಒಂದೆಲಗದ ಸೊಪ್ಪು
ತುಸುವೇ ಹುಳಿಯಾಗಿರುವ ಪುಂಡಿ ಸೊಪ್ಪು
ಮಲಬದ್ಧತೆಗೆ ಒಳಿತಂತೆ ಆಕ್ರಿಕಿ ಸೊಪ್ಪು
ಬಹುಸೊಪ್ಪುಗಳನಾಕಿ ಮಾಡುವ ಹುಣ್ಷೆಪ್ಪು
ಪಿಜ್ಜಾ ಬರ್ಗರಿಗೆ ಲೆಟ್ಯೂಸ್ ಸೊಪ್ಪು
ಪರದೇಸಿಗಳಿಷ್ಟ ಪಾರ್ಸ್ಲಿ ಸೊಪ್ಪು
ಮತ್ತೆ ಕೆಲವರಿಗಿಷ್ಟ ಸೆಲೆರಿ ಸೊಪ್ಪು
ಲವಲವಿಕೆಗೆ ಒಳ್ಳೇದು ಲೀಕ್ಸ್ ಸೊಪ್ಪು...
ಪಲ್ಯಕೆ ಇರಲಿ ಈರುಳ್ಳಿ ಸೊಪ್ಪು,
ಕಬ್ಬಿಣದಂಶ ಹೆಚ್ವಿರುವ ನುಗ್ಗೇ ಸೊಪ್ಪು
"ಸಿ" ಜೀವಸತ್ವ ಹೆಚ್ಚಿರುವ ಹುಳಿ ಸೊಪ್ಪು
ನಾರಿನಂಶಕೆ ಬಳಸಿ ಬಗೆಬಗೆಯ ಸೊಪ್ಪು
ಗೊಜ್ಜಿಗೆ ಬೇಕೇ ಬೇಕು ಗೋಂಗುರು ಸೊಪ್ಪು..
ಹುಡುಕಿ ತಂದು ತಿನ್ನಿ ಅಡುಕು ಪುಡುಕನ ಸೊಪ್ಪು
ಸರ್ವ ರೋಗಗಳಿಗೂ ಅಮೃತಬಳ್ಳಿ ಸೊಪ್ಪು...
ಸಕ್ಕರೆ ಖಾಯಿಲೆಗೆ ಮಧುನಾಶಿನಿ ಸೊಪ್ಪು..
ಬಹೂಪಯೋಗಿ ಚಕ್ರಮುನಿ ಸೊಪ್ಪು,
ಆಗೊಮ್ಮೆ ಹೀಗೊಮ್ಮೆ ಬಳಸಿ ಮೂಲಂಗಿ ಸೊಪ್ಪು,
ಘಮಘಮ್ಮೆನ್ನುವ ಕಸ್ತೂರಿ ಸೊಪ್ಪು,
ದೇವಪೂಜೆಗೆ ತುಳಸಿ ಮರುಗದ ಸೊಪ್ಪು
ಕಸೂರಿ‌ ಮೇಥಿ ಘಮ್ಮೆನ್ನುವ ಸೊಪ್ಪು
ಮರೆತೇ ಬಿಟ್ಟಿದ್ದೆ ನೋಡಿ ಕೊತ್ತಂಬರಿ ಸೊಪ್ಪು
ಈಗಲೇ ಬೆಳೆಸಿ..ಬಳಸಿ..ಉಳಿಸಿ... ಈ‌ ಸೊಪ್ಪುಗಳನು......
ಎಷ್ಟೇ ಹೋಮ, ವ್ರತ ಮಾಡಿದರೂ ಸಮಸ್ಯೆ ಪರಿಹಾರ ಆಗೋದಿಲ್ಲ ಯಾಕೆ ಗೊತ್ತಾ.?
ಎಷ್ಟೇ ಹೋಮ, ವ್ರತ ಮಾಡಿದರೂ ಸಮಸ್ಯೆ ಪರಿಹಾರ ಆಗೋದಿಲ್ಲ ಯಾಕೆ ನಾವು ಮಾಡುವ ಅಪಚಾರಗಳೇ ಕಾರಣ ಒಂದು ಸಲ ಈ ಮಾಹಿತಿಯನ್ನು ತಪ್ಪದೆ ಸುಂಪೂರ್ಣವಾಗಿ ಓದಿ ಅರ್ಥತವಾಗುತ್ತದೆ.
1) ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು. 2) ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು. 3) ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು. 4) ಭಗವಂತನ ಮಂದಿರಕ್ಕೆ ಸಿಗರೇಟು, ಬೀಡಾ, ಸರಾಯಿ, ಮಾಂಸ ಸೇವಿಸಿ ಪ್ರವೇಶಿಸುವದು. 5) ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್, ಚಪ್ಪಲಿ, ಕೈ ಚೀಲ ಧರಿಸಿ ಕೊಂಡು ಹೋಗುವುದು. 6) ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು. 7) ಭಗವಂತನಿಗೆ ಕೆಟ್ಟ, ಕೊಳೆತ, ಒಣಗಿದ ಹಣ್ಣುಗಳನ್ನು ಅರ್ಪಿಸುವುದು. 8) ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು. 9) ದೇವಾಲಯದ ಹೊಸ್ತಿಲು, ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.10) ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು. 11) ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು. 12) ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು. 13) .ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು. 14) ಒಂದೇ ಹಸ್ತದಿಂದ ನಮಸ್ಕರಿಸುವುದು. 15) ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು. 16) ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು. 17) ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು. 18) ಭಗವಂತನ ಸಮ್ಮುಖ ಭೋಜನ ಮಾಡುವುದು.19) ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು. 20) ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು. 21) ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು. 22)ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು. 23) ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು. 24) ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು. 25) ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು. 26) ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು. 27) ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು. 28) ದೇವರ ಪ್ರಸಾದ ಸ್ವೀಕರಿಸದೇ ಬರುವುದು. 29) ಯಾವುದೇ ದೇವರನ್ನು ನಿಂದಿಸುವುದು 30) ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು.31). ಗುರುಗಳ ಸ್ಮರಣೆ ಮಾಡದೇ ಇರುವುದು. 32). ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು. 33)ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು. 34) ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು. 35) ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು, ಕಾಯಿ, ಹೂವು, ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ, ಬಿಕ್ಷುಕರಿಗೆ ನೀಡುವುದು. 36) ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು. 37) ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು. 38) ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.39)ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.40) ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು. 41) ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು. 42) ದೇವರಿಗೆ ಅರ್ಪಿಸುವ ಮೊದಲು ಹೂವು. ಹಣ್ಣು, ಊದು ಬತ್ತಿಗಳನ್ನು ಆಘ್ರಾಣಿಸುವುದು (ಮೂಸಿ ನೋಡುವುದು). 43) ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು. ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು. 44) ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು. 45) ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.
ಇಂದ್ರವೆಂಬ_ಬಲದ_ವಿಕಾಸ
(೨) #ನಮ್ಮ_ಆಂತರ್ಯದ_ಬಲಗಳು.
ಓದುಗರು ತಮ್ಮೊಳಗೆ ಅನೇಕ ಬಲಗಳಿವೆ ಎಂದು ತಿಳಿದಿರಬಹುದು.
*ಕಣ್ಣುಗಳಲ್ಲಿ #ಸೂರ್ಯಬಲ ಇದೆ,
*ಮುಖದಲ್ಲಿ #ಆಗ್ನೇಯೀಬಲ ಇದೆ,
*ಮೂಗಿನಲ್ಲಿ #ಅಶ್ವಿನೀಬಲ ಇದೆ,
*ಹೃದಯದಲ್ಲಿ #ಇಂದ್ರಬಲ ಇದೆ,
*ಶ್ವಾಸಕೋಶಗಳಲ್ಲಿ #ರೌದ್ರೀಬಲ ಇದೆ, ಇಲ್ಲೇ ಮಾರುತಬಲ ಇದೆ.
ಅದೇ ರೀತಿ ಪ್ರತಿಯೊಂದು ಅವಯವದಲ್ಲಿಯೂ ಒಂದೊಂದು ದೇವತೆಯ ಬಲವು ಬೀಜರೂಪದಲ್ಲಿ ಅಥವಾ ಅಂಶರೂಪದಲ್ಲಿರುತ್ತದೆ. ಯಾವ ರೀತಿ ಬೆಂಕಿಯ ಒಂದು ಕಿಡಿಯು ಉಂಟಾಗುತ್ತದೆಯೋ, ಅದೇ ರೀತಿ ಸೂರ್ಯಾದಿ ವಿಶಾಲ ದೇವತೆಗಳ ಒಂದೊಂದು ಕಿಡಿಯು ನಮ್ಮ ದೇಹದಲ್ಲಿ ತಮ್ಮಯ ಯೋಗ್ಯ ಸ್ಥಾನಗಳಲ್ಲಿರುತ್ತದೆ. ಈ ಕಿಡಿಯನ್ನು ಪ್ರದೀಪ್ತಗೊಳಿಸುವುದೇ ಆ ಬಲದ ವಿಕಾಸವು.
ಬೀಜರೂಪೀ ಬಲಗಳು ಅನೇಕವಿದೆ ಹಾಗೂ ಪ್ರತಿಯೊಂದು ಬಲದ ವಿಕಸನದ ಮಾರ್ಗವೂ ಭಿನ್ನವಾಗಿಯೇ ಇದೆ. ಒಂದೊಂದು ಬಲದ ವಿಕಾಸದ ವಿಷಯದಲ್ಲಿ ಯಾವ ಅನಂತ ಬೋಧೆಯು ವೇದದಲ್ಲಿ ಬಂದಿದೆಯೋ, ಅವುಗಳ ವಿಚಾರ ಮಾಡುವುದಕ್ಕೆ ದೊಡ್ಡ ದೊಡ್ಡ ಗ್ರಂಥ ಬರೆಯುವ ಆವಶ್ಯಕತೆ ಇದೆ. ವಾಸ್ತವದಲ್ಲಿ ನೋಡಿದರಂತೂ, “ಯೋಗಶಾಸ್ತ್ರವು ಬಲವಿಕಾಸದ್ದೇ ಒಂದು ವಿಶೇಷ ಶಾಸ್ತ್ರವಾಗಿದೆ”. ಹಾಗಾಗಿ ಮನುಷ್ಯಜೀವನದ ಉನ್ನತಿಯೊಂದಿಗೆ ಯೋಗದ ಘನಿಷ್ಠ ಸಂಬಂಧವಿದೆ.
#ಯೋಗ,
#ಸಂಯೋಗ,
#ನಿಯೋಗ,
#ವಿಯೋಗ,
#ಅಧಿಯೋಗ,
#ಸುಯೋಗ,
#ಪ್ರಯೋಗ,
#ಉದ್ಯೋಗ,
#ಅಭಿಯೋಗ,
#ಉಪಯೋಗ,
#ಅತಿಯೋಗ,
ಇತ್ಯಾದಿ ಯಾವ ಶಬ್ದಗಳು ಪ್ರಯುಕ್ತವಾಗುತ್ತವೆಯೋ, ಅವು ವಾಸ್ತವದಲ್ಲಿ ಯೋಗದ್ದೇ ರೂಪವು; ಆದರೆ ಅವುಗಳ ಅರ್ಥವು ವಿಭಿನ್ನವಾಗಿವೆ, ಆದ್ದರಿಂದ ಈಗ ಅವುಗಳ ಸಂಬಂಧವು ಯೋಗದೊಂದಿಗೆ ಸ್ಪಷ್ಟ ರೂಪದಿಂದ ಕಂಡುಬರುತ್ತಿಲ್ಲ!! ಹಾಗೆಯೇ ಅವುಗಳ ಮೂಲ ಭಾವವನ್ನು ನೋಡಿದಾಗ ಅವುಗಳ ಸಂಬಂಧವು ಯೋಗದೊಂದಿಗೆಯೇ ವಿದಿತವಾಗುತ್ತದೆ.
ತಾತ್ಪರ್ಯವೇನೆಂದರೆ “ಮನುಷ್ಯರ ಬಲ ವಿಕಸನದ ಹೆಸರೇ ಯೋಗವು”, ಹಾಗೂ ಪ್ರತಿಯೊಂದು ಬಲದ ವಿಕಾಸ ಪ್ರಯೋಗವು ಭಿನ್ನ ಭಿನ್ನವಾಗಿದೆ, ಇದನ್ನೇ ಇಲ್ಲಿ ನೋಡಬೇಕಿದೆ ಮತ್ತು ಧ್ಯಾನದಲ್ಲಿ ಧಾರಣೆ ಮಾಡಬೇಕಿದೆ.
✍ ಹೇಮಂತ್ ಕುಮಾರ್ ಜಿ. - Courtesy
ಹತ್ತಿ ಕಟಗಿ, ಬತ್ತಿ ಕಟಗಿ
ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ದಾತರ ದರ‍್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ
ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !
ಚೆಕ್ಕಿ ಏನ್ ಮಾಡ್ದಿ ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಟ್ತು ?
ಬೂದಿ ಕೊಟ್ತು !
ಬೂದಿ ಏನ್ ಮಾಡ್ದಿ ?
ತಿಪ್ಪಿಗಾಕಿದೆ !
ತಿಪ್ಪಿ ಏನ್ ಕೊಟ್ತು ?
ಗೊಬ್ಬರ ಕೊಟ್ತು !
ಗೊಬ್ಬರ ಏನ್ ಮಾಡ್ದಿ ?
ಹೊಲಕ ಹಾಕಿದೆ !
ಹೊಲ ಏನ್ ಕೊಟ್ತು ?
ಜೋಳ ಕೊಟ್ತು !
ಜೋಳ ಏನ್ ಮಾಡ್ದಿ ?
ಚೊಲೊ ಚೊಲೊ ನಾ ತಗಂಡೆ
ಸೆರಗ ಮುರಗ(ಕೆಟ್ಟಿದ್ದೆಲ್ಲಾ) ಕುಂಬಾರಗ ಕೊಟ್ಟೆ !
ಕುಂಬಾರ ಏನ್ ಕೊಟ್ಟ ?
ಗಡಿಗಿ ಕೊಟ್ಟ !
ಗಡಿಗಿ ಏನ್ ಮಾಡ್ದಿ ?
ಬಾವ್ಯಾಗ ಬಿಟ್ಟೆ !
ಬಾವಿ ಏನ್ ಕೊಟ್ತು ?
ನೀರು ಕೊಟ್ತು !
ನೀರು ಏನ್ ಮಾಡ್ದಿ ?
ಗಿಡಕ್ಕ ಹಾಕ್ದೆ !
ಗಿಡ ಏನ್ ಕೊಟ್ತು ?
ಹೂವು ಕೊಟ್ತು !
ಹೂವು ಏನ್ ಮಾಡ್ದೆ ?
ದೇವ್ರಿಗೆ ಏರಿಸಿದೆ… !
ಉತ್ತರ ಕರ್ನಾಟಕದ ಊರುಗಳಲ್ಲಿ ಚಿಕ್ಕ ಮಕ್ಕಳು ಒಂದೆಡೆ ಸೇರಿದಾಗ ಮೇಲಿನ ಸಾಲುಗಳನ್ನು ಹೇಳುತ್ತಾ ಆಟ ಆಡುವ ದೃಶ್ಯ ಸಾಮಾನ್ಯ. ನಾಕೆಂಟು ಮಕ್ಕಳು ಸುತ್ತಲೂ ಕುಳಿತು ಅಂಗೈ ಕೆಳಮುಕ ಮಾಡಿ, ನೆಲಕ್ಕೆ ಹಚ್ಚಿ, ಒಂದನೆಯ ಕೈಯಿಂದ ಆರಂಬಿಸಿ-ಹತ್ತಿಕಟಗಿ..ಬತ್ತಿಕಟಗಿ ಎನ್ನುತ್ತಾ ಆಟವಾಡುತ್ತಾರೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೇಳುವುದು ನನ್ನ ಉದ್ದೇಶವಲ್ಲ. ಕೂಡಿ ಆಡುವದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಅದ್ಬುತ ಲಯ ವಿನ್ಯಾಸದ ವಿವರಣೆಗೂ ನಾ ಕೈ ಹಾಕುವುದಿಲ್ಲ. ಆಟದ ನಿಯಮ ಕುರಿತು ಒಣ ವಿವರಣೆ ನೀಡುವ ಗೋಜಿಗೂ ನಾನು ಹೋಗುವುದಿಲ್ಲ.
ನಾವೆಲ್ಲ ಚಿಕ್ಕಂದಿನಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು!
ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಕೆಲ ಹೊತ್ತಿನಲ್ಲಿಯೆ ದೇಹ(ಹೆಣ) ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು(ಬಾವಣ್ಣವರ). ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು(ಬಸಪ್ಪನವರು). ಆದ್ದರಿಂದಲೇ ಅದು ಧೂಳಾಗುವ ಕಾಯ(ಕೈ ಅಲ್ಲ ಅದು ಕಾಯ – ಕಾಯ ಕಾಯ ದೂಳ ಕಾಯ) ಪಂಚಭೂತಗಳಲ್ಲಿ ಕರಗಿ ಹೋಗುವ ಕಾಯ(ಪಂಚಂ ಪಗಡಂ). ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ? ನೆಲ ಕಡಿಯಲು ಹನುಮನಿಗೆ ಹೇಳಬೇಕಾಗುತ್ತದೆ(ನೆಲ ಕಡಿ ಹನುಮ). ಧನವಂತರಾದವರು ದರ‍್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ(ದಾತರ ಧರ್ಮ).
ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ (ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ತಿಪ್ಪೆ ಕೆದರೂದ ಬಿಡೂದಿಲ್ಲ – ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ ಎನಿಸುತ್ತದೆ). ಇದರ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಮೇಲೆ ಕೋಳಿ ರಗತಬೋಳಿ.
ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿಯಿತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ? ಪ್ರಶ್ನೋತ್ತರ ರೂಪದಲ್ಲಿರುವ ಇದು ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅ‍ರ್ಥದಲ್ಲಿ ಸಾವಿಲ್ಲ. ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.
ಕಾಯ ಎಲ್ಲಿ ಹೋಯಿತು?(ಕೈ ಕೈ ಎಲ್ಲಿ ಹೋಯಿತು?) ಕದದ ಸಂಧಿಯಲ್ಲಿ. ಕದದ ಸಂದಿ ಎಂಬುದು ಮತ್ತೆ ಸಂಸಾರದ ಸಂಗತಿ ಕಡೆಗೆ ಬೊಟ್ಟು ಮಾಡುತ್ತದೆ. ಅಲ್ಲಿಂದ ಹೊಲ ಏನ್ ಕೊಟ್ಟಿತು? ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ ಹೇಳುತ್ತವೆ . ಜೊತೆಗೆ ಬೂದಿ ,ಗೊಬ್ಬರ, ಹೊಲ ಇವು ಬೇಸಾಯ ಸಂಬಂಧದ ಕ್ರಿಯೆಗಳನ್ನು ಸೂಚಿಸುತ್ತವೆ. ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳದಲ್ಲಿ, ಚಲೊ(ಒಳ್ಳೆದು) ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನ.
ಕುಂಬಾರ ಗಡಿಗೆ ಸೃಷ್ಟಿ ಮಾಡುವ ಸೃಷ್ಟಿಕರ್ತ( ದೇಹಕ್ಕೆ ಗಡಿಗೆ ಎನ್ನುವ ಪರಂಪರೆ ಅನುಬಾವ ಸಾಹಿತ್ಯದಲ್ಲಿದೆ). ಅವನಿಗೆ ಸೆರಗು ಜೋಳವನ್ನು ಮಾತ್ರ ಕೊಡುತ್ತಾನೆ!(ನಮ್ಮ ವರ್ತನೆಗೆ ಈ ಸಂಗತಿಯನ್ನು ಹೋಲಿಸಿ ನೋಡಬಹುದು. ದೇವರಿಗೆ ಮಾಡುವ ಕಡಬು ನೈವೇದ್ಯಗಳೆಲ್ಲಾ ಚಿಕ್ಕವಿರುತ್ತವೆ ಇಲ್ಲವೇ ನೆಪಮಾತ್ರಕ್ಕೆ ಇರುತ್ತವೆ). ಭೋಗ ಜೀವನಕ್ಕೆ ಮೊದಲ ಮಣೆ ಹಾಕಿದ ಮನುಷ್ಯ ಕೊನೆಗೂ ಎಚ್ಚರಗೊಳ್ಳುತ್ತಾನೆ (ಗಡಿಗೆ ಏನ್ ಮಾಡಿದಿ?). ಹಾಗೆ ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ(ಬಾವ್ಯಾಗ ಬಿಟ್ಟೆ). ಆ ಜಲವನ್ನೇ(ಬಾವಿ ಏನ್ ಕೊಟ್ಟಿತು? -ನೀರ ಕೊಟ್ಟಿತು) ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ (ಹೂವು ಏನ್ ಮಾಡಿದಿ ?- ದೇವರಿಗೆ ಏರಿಸಿದೆ).
ಇಲ್ಲಿಗೆ ಜೀವನ ಕತೆಗೆ ಒಂದು ‍ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ‍ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ! ರಚನೆಯ ಸ್ವರೂಪದಲ್ಲಿ ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ ಕೋ ಕೊಡುತ್ತ ಸಾಗುವ ಈ ಶಿಶುಪ್ರಾಸ ರಂಜನೆಯ ಜೊತೆಗೆ ನೆನಪಿನ ಶಕ್ತಿಯನ್ನು ಹರಿತಗೊಳಿಸಲು, ಸಹ ಸಂಬಂಧವನ್ನು ಕಲ್ಪಿಸಲು ನೆರವಾಗುತ್ತದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ.
_-----++++------
ಮಜ್ಜಿಗೆ ಮಹಿಮೆ
(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಶೌಚಾನಂತರ) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆಯಾಗುವುದು.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೇನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.
*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.
*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.
*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.
*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
*ಜಠರ ವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.
*ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.
*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.  ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.
*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಯಜ್ಞ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕುಡಿಯಿರಿ ಗೊತ್ತಿಲ್ಲದವರಿಗೆ ತಿಳಿಸಿಕೊಡಿ. ಆರೋಗ್ಯವೇ ಭಾಗ್ಯ.

*********
*🌷ಸದ್ವಿಚಾರ🌷*
""""""""""""''''🌹"""""""''''''''''"""
*ಸಹೃದಯರೇ 🙏 ,*

  ಒಂದು  *ಮರ* ಕ್ಕೆ ನಾವು ಎಷ್ಟೇ ಆಘಾತವನ್ನು ಮಾಡಿದರೂ ಕೂಡಾ ಅದು ರಸವನ್ನು ಸುರಿಸುವುದೇ ಹೊರತು ನಾಶವಾಗುವುದಿಲ್ಲ.  ಕೆಲವೊಮ್ಮೆ ನಾವು ಅದಕ್ಕೆ  ಯಾವ ಆಘಾತವನ್ನು ಮಾಡದೇ ಇದ್ದರೂ ಅದು ತನ್ನಷ್ಟಕ್ಕೆ ತಾನೇ ಒಣಗಿ ನಾಶವಾಗುವುದು ನಮ್ಮ ಅನುಭವ ಸಿದ್ಧವಾದ ವಿಷಯ. ಇದಕ್ಕೆ ಮೂಲಕಾರಣ ಅಲ್ಲಿ ಜಡ-ಚೇತನರಿಗೆ ಪೋಷಕನಾದ ಎಲ್ಲರ ಜೀವನಕ್ಕೆ ಆಧಾರನೇ ಆದ *ಭಗವಂತನರೂಪ* ಇರುವುದರಿಂದಲೇ ಆ ಮರವು ಜೀವಂತವಾಗಿದ್ದಲ್ಲದೇ  ರಸವನ್ನು ಹೀರುತ್ತಾ ಆನಂದಭರಿತವಾಗಿರುತ್ತದೆ. ಯಾವಾಗ *ಭಗವಂತ* ಆ ಮರದಿಂದ ಮರೆಯಾಗುವನೋ ಆಗ ಅದು ತನ್ನ ಚೈತನ್ಯವನ್ನು ಕಳೆದುಕೊಳ್ಳುತ್ತದೆ. ಇದರಂತೆಯೇ  ನಮ್ಮೆಲ್ಲರ ಶರೀರದಲ್ಲಿ ಆ ಭಗವಂತನ ಸನ್ನಿಧಾನವಿರುವುದರಿಂದಲೇ ನಮ್ಮದು *ಜೀವನ* ವೆನಿಸುವುದು. ಯಾವಾಗ ಆ *ಭಗವಂತನರೂಪ* ವು ಈ ನಮ್ಮ ಶರೀರವನ್ನು ತೊರೆಯುವನೋ ಆ ಕ್ಷಣವೇ ಈ ನಮ್ಮ ಜೀವನದ ಅವಸಾನವಾಗುವುದೇ ಹೊರತು ಬೇರೆಯಾವ ಕಾರಣದಿದ ಅಲ್ಲವೇ ಅಲ್ಲ.

  ಈ ದಿಶೆಯಲ್ಲಿ ಅಪರೋಕ್ಷಜ್ಞಾನಿಗಳಾದ ನಮ್ಮ ದಾಸರಾಯರ (ಶ್ರೀಗೋಪಾಲದಾಸರು) ಮಾತುಗಳಿವು----

  *ಚೇತನನೇ ನಾನು ನೀ ಚೇಷ್ಟೆಯ ಮಾಡದಿರೆ......*

 ಈ ಸತ್ಯವರಿತು ಬಾಳುವುದೇ *ಫಲವಿದು ಬಾಳ್ದುದಕೆ* ಎನ್ನುವುದು ಇಂದಿನ ಸದ್ವಿಚಾರದ ಸಂದೇಶವಾಗಿದೆ.
   
"""""""""""""""🙏""""""""""'"'''
☆          *ತೀರ್ಥ*     ☆