Popular Posts

Wednesday, 23 January 2019

ಅಗ್ನಿಹೋತ್ರ

ಅಗ್ನಿಹೋತ್ರ

ಮನುಕುಲದ ಆಶಾಕಿರಣಕ್ಕೆ 'ಅಗ್ನಿಹೋತ್ರ' ಎಂಬ ಮದ್ದು!!!
ಸೂರ್ಯೋದಯ, ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಹದಿನೈದು ನಿಮಿಷಗಳಲ್ಲಿ ಇದನ್ನು ಮಾಡಬಹುದು. ಮನೆಯಲ್ಲಿ ಯಾರೇ ಆಗಲಿ ಇದನ್ನು ಮಾಡಬಹುದು. ಇದರಿಂದ ಮನಸ್ಸು ಶಾಂತವಾಗುತ್ತದೆ. ನರಮಂಡಲವು ಸಚೇತನಗೊಂಡು ದೇಹ ಮತ್ತು ಮನಸ್ಸು ಲವಲವಿಕೆಯನ್ನು ಪಡೆಯುತ್ತದೆ. ಪರಿಸರದಲ್ಲೂ ಸುಧಾರಣೆಯಾಗಲು ಸಹಕಾರಿ. ಬಹಳಷ್ಟು ಜನರು ಇದನ್ನು ಮಾಡಲು ಆರಂಭಿಸಿದರೆ ಪರಿಸರದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಕಾಣಲು ಸಾಧ್ಯ.
ಈಗಾಗಲೇ ಅಮೇರಿಕಾ, ಮಲೇಷಿಯಾ, ಪೆರು, ಜರ್ಮನಿ ಮೊದಲಾದ ರಾಷ್ಟ್ರಗಳಲ್ಲಿ ಬಹಳಷ್ಟು ಜನರು ಇದನ್ನು ಆಚರಿಸುತ್ತಿದ್ದಾರೆ. ಹೊಲದಲ್ಲಿ ಆಗ್ನಿಹೋತ್ರವನ್ನು ಆಚರಿಸಿ ಅದರ ಬೂದಿಯನ್ನು ಬೀಜಗಳೊಂದಿಗೆ ಸಾವಯವ ಗೊಬ್ಬರದೊಂದಿದೆ ಬೆರೆಸುವುದರಿಂದ ಇಳುವರಿ ಹೆಚ್ಚಾಗುವುದು. ಕೀಟನಾಶಕ ಹಾಗೂ ರಸಗೊಬ್ಬರದ ಬಳಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದು.
ಅಗ್ನಿಹೋತ್ರದ ಬೂದಿಯಿಂದ ಅನೇಕ ಅಸಾಧ್ಯ ಕಾಯಿಲೆಗಳು ಗುಣವಾಗಿವೆ. ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ದುವ್ರ್ಯಸನಗಳು ದೂರವಾಗುತ್ತವೆ. ಸಕಾರಾತ್ಮಕ ಭಾವನೆಗಳು ಜಾಗೃತಗೊಳ್ಳುತ್ತವೆ. ಆನಂದಮಯ ಹಾಗೂ ಆರೋಗ್ಯಕರ ಜೀವನಕ್ಕೆ ಅಗ್ನಿಹೋತ್ರ ಅತ್ಯುತ್ತಮ ಆಚರಣೆ.
ಅಗ್ನಿಹೋತ್ರ ಆಚರಿಸಲು ಬೇಕಾಗುವ ಸಾಮಾಗ್ರಿಗಳು
1. ನಿಶ್ಚಿತವಾದ ಆವೃತ್ತಿಯ ತಾಮ್ರದ ಹೋಮಕುಂಡ. 2. ಬೆರಣಿ (ಹಸು ಅಥವಾ ಎತ್ತಿನದು), 3. ಅಕ್ಕಿ (ತುಂಡಾಗಿರಬಾರದು), 4. ತುಪ್ಪ (ಆಕಳಿನದು)
ಅಗ್ನಿಹೋತ್ರ ಆಚರಣೆಯ ವಿಧಾನ:
ತಾಮ್ರದ ಹೋಮಕುಂಡದ ತಳದಲ್ಲಿ ಒಂದು ಬೆರಣಿಯ ತುಂಡನ್ನು ಚಪ್ಪಟೆಯಾಗಿ ಇಡಿರಿ. ಅದರ ಮೇಲೆ ಮಧ್ಯೆ ಮಧ್ಯೆ ಪೊಳ್ಳು ಇರುವಂತೆ ಒಂದರ ಮೇಲೊಂದು ಬೆರಣಿ ತುಂಡನ್ನು ಇಡಿ. ಬೆರಣಿಯ ಒಂದು ತುಂಡಿಗೆ ತುಪ್ಪವನ್ನು ಹಾಕಿ ಬೆಂಕಿಯನ್ನು ತಾಗಿಸಿ ಹೋಮಕುಂಡದಲ್ಲಿ ಇಡಿ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಹೋಮಕುಂಡದಲ್ಲಿ ಎಲ್ಲಾ ಬೆರಣಿಗಳು ಪ್ರಜ್ವಲಿಸುತ್ತಿರಬೇಕು. ಆಗ ಕೆಳಗೆ ಕೊಟ್ಟಿರುವ ಮಂತ್ರವನ್ನು ಜಪಿಸುತ್ತಾ ಬೆರಳ ತುದಿಯಲ್ಲಿ ಬರುವಷ್ಟು ತುಪ್ಪ ಸವರಿದ ತುಂಡಾಗದ ಅಕ್ಕಿಯನ್ನು ಅಗ್ನಿಗೆ ಸಮರ್ಪಿಸಿ. ಎರಡನೇ ಮಂತ್ರವನ್ನು ಹೇಳಿ ಮತ್ತೆ ಅಕ್ಕಿಯನ್ನು ಕುಂಡಕ್ಕೆ ಹಾಕಿ. ಆಗ ನಿರ್ಮಾಣವಾಗುವ ದಿವ್ಯ ವಾತಾವರಣದಲ್ಲಿ ಸಾಧ್ಯವಾದಷ್ಟು ಹೊತ್ತು ಕುಳಿತುಕೊಳ್ಳಿ.
ಸೂರ್ಯೋದಯದ ಮಂತ್ರಗಳು
1. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ
2. *ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ *ಇದಂ ನ ಮಮ

ಸೂರ್ಯಾಸ್ತದ ಮಂತ್ರಗಳು

1. ಅಗ್ನಿಯೇ ಸ್ವಾಹಾ ಅಗ್ನಿಯೇ ಇದಂ ನ ಮಮ
2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ ಮಂತ್ರದಿಂದ ಅಗ್ನಿಹೋತ್ರ ಸಂಪೂರ್ಣ ಮಾಡುವುದು

ಮಾಲಿನ್ಯ ನಿಯಂತ್ರಿಸಲು 'ಅಗ್ನಿ ಹೋತ್ರ' ಹೋಮ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 'ಅಗ್ನಿಹೋತ್ರ ಹೋಮ' ಮೂಲಕ ಮಾಲಿನ್ಯ ನಿಯಂತ್ರಣ ಮಾಡಬಹುದು ಎಂಬ ಶಿಫಾರಸು ಸರಕಾರಕ್ಕೆ ಸಲ್ಲಿಸಿದೆ. ಅಗ್ನಿಹೋತ್ರ ಹೋಮವನ್ನು ಸೂರ್ಯೋದಯ ಮತ್ತು ಸೂಯಾಸ್ತ ವೇಳೆ ಮಾಡಲಾಗುತ್ತದೆ. ವೇದಗಳ ಕಾಲದಿಂದಲೂ ಇದನ್ನು ಮಾಡಲಾಗುತ್ತಿದೆ. ಇಡೀ ವಾತಾವರಣವನ್ನು ಶುಚಿಗೊಳಿಸುವುದಕ್ಕಾಗಿ ಈ ಹೋಮ ನಡೆಸಲಾಗುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಜಲಮಾಲಿನ್ಯ ಹೆಚ್ಚುವುದನ್ನು ತಡೆಯಲು ಈ ಹೋಮ ಮಾಡಲಾಗುತ್ತಿದೆ. ಒಂದು ಅಧ್ಯಯನ ಪ್ರಕಾರ ಅಗ್ನಿಹೋತ್ರ ಮಾಡುವ ಕೊಠಡಿಯಲ್ಲಿ ಜಲ ಶುದ್ಧವಾಗುತ್ತದೆ ಎಂಬುದು ದೃಢಪಟ್ಟಿದೆ ಎಂದು ವಿವರಿಸಲಾಗಿದೆ.
ರೋಗಗಳಿಗೆ ಔಷಧ
ಅಲ್ಲದೆ ಕ್ಯಾನ್ಸರ್​​​ನಂತ ಮಾರಣಾಂತಿಕ ಕಾಯಿಲೆಯಿಂದ ಹಿಡಿದು,ಅನೇಕ ರೋಗಳಿಗೆ ಈ ಅಗ್ನಿಹೋತ್ರಿ ಮದ್ದಾಗಿದೆ. ನಮ್ಮ ಜೀವನದ ಗೊಂದಲಗಳನ್ನ ತೊಲಗಿಸಿ, ಮನಸ್ಸಿನ ಶಾಂತಿಗೂ ಈ ಆಗ್ನಿ ಹೋತ್ರ ಕಾರಣವಾಗುತ್ತದೆ ಎಂದು ವಿಜ್ಞಾನಿಗಳೇ ಹೇಳಿದ್ದಾರೆ.

ಆದರೆ.. ಭಾರತದ ಸನಾತನ ವ್ಯಸ್ಥೆಯಲ್ಲಿ ರೂಢಿಯಲ್ಲಿ ಬಂದ ಈ ಅಗ್ನಿ ಹೋತ್ರ ಸರ್ವ ರೋಗಕ್ಕೂ ಮದ್ದಾಗಿ, ಮನುಕುಲದ ಒಳಿತಿಗೆ ಬೆಳಕಾಗಿ, ಪರಿಸರದ ವಿಕೋಪಕ್ಕೆ ಪರಿಹಾರವಾಗಲಿದೆ ಎಂದು ಹಲಾವರು ವಿದೇಶಿ ವಿಜ್ಞಾನಿಗಳು,ಸಂಶೋಧಕರು ಅರಿತು ಅವರ ದೇಶಗಳಲ್ಲಿ ಈ ಅಗ್ನಿಹೋತ್ರವನ್ನ ಮಾಡಲು ಆರಂಭಿಸಿ ಯಶಸ್ಸುಕಂಡ ಉದಾಹರಣೆಗಳು ಸಾಕಷ್ಟಿವೆ. ಆದರೆ ಮೂಲತಹ ಭಾರತದ ಪದ್ಧತಿಯಾಗಿದ್ದ ಈ ಅಗ್ನಿ ಹೋತ್ರ ನಮ್ಮ ದೇಶದಲ್ಲಿ ಮರೆಯಾಗಿರುವುದು ಮಾತ್ರ ದುರಂತವೆ ಸರಿ. ಬೆರಳೆಣಿಕೆಯಷ್ಟು ಮನೆಗಳಲ್ಲಿ ಮಾತ್ರ ಈಗಲೂ ಈ ಅಗ್ನಿಹೋತ್ರವನ್ನ ಮಾಡುತ್ತಿದ್ದಾರೆ ಅಷ್ಟೆ. ಅದೆಷ್ಟೋ ಸಮಸ್ಯೆಗಳ ಪರಿಹಾರಕ್ಕೆ ಅಗ್ನಿ ಹೋತ್ರದಂತ ಮಾರ್ಗ ನಮ್ಮಲ್ಲಿಯೇ ಇದ್ದರು,ಸೆರಗಿನಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ಹುಡುಕಿದಂತೆ ಆಗಿದೆ ನಮ್ಮವರ ಪರಿಸ್ಥಿತಿ.
ದೇಶ ಕಂಡ ಅತೀ ದೊಡ್ಡ ದುರಂತವಾದ 'ಭೋಪಾಲ್ ಅನಿಲ ದುರಂತ'ದ ಬಗ್ಗೆ ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ, ಅವರು ಮನೆಯಲ್ಲಿ ದಿನ ನಿತ್ಯ 2 ಹೊತ್ತು 'ಅಗ್ನಿ ಹೋತ್ರ' ಹೋಮ ಮಾಡುತ್ತಿದ್ದಾರೆಂದು ತಿಳಿಯಿತು.

ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು. ಅಲ್ಲಿದಂದ ಹಲವಾರು ದೇಶದ ವಿಜ್ಞಾನಿಗಳು, ಸಂಶೋಧಕರು ಅಪ್ಪಿ ಒಪ್ಪಿದ್ದಾರೆ.

ಇದೊಂದು ಎಲ್ಲರೂ ಆಚರಿಸಬಹುದಾದಂತ ಸರಳ ಹೋಮ ಪದ್ಧತಿ