ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs I
ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ ಮಂದವಾಗದು ಕೃಷ್ಣಾs I
ಕಾಲು ಕೈ ಜವಗುಂದಿದವು ಭೋಗಲೋಲತೆ ಜವಗುಂದವು ಕೃಷ್ಣಾs I
ಜರೆ ರೋಗದಿಂದ ನೆರೆಹೊರೆ ಹೇಸಿತು ಈ ಶರೀರದಲ್ಲಿ ಹೇಸಿಕೆ ಇನಿತಿಲ್ಲ I
ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು ತಾಪ ಮನದೊಳಗಿನಿತಿಲ್ಲ I
ಹೀಗೆ ಸಂದು ಹೋಯಿತು ಕಾಲವೆಲ್ಲವು ಮುಂದಣಗತಿ ದಾರಿ ತೋರದು ಕೃಷ್ಣಾss I
ಅನಾದಿಯಿಂದ ನಿನ್ನವನೆನಿಸಿದೆ ಎನ್ನ ಕುಂದು ನಿನ್ನದಲ್ಲವೆ ಇನ್ನಾದರು ದಯೆಯಿಂದೆನ್ನ ನೋಡಿ ಮನ್ನಿಸಬೇಕಯ್ಯ ಸಿರಿಕೃಷ್ಣಾss II
---- ಶ್ರೀ ವ್ಯಾಸರಾಜರ ರಚನೆಯ ಒಂದು ಅದ್ಭುತವಾದ ಕೃತಿ ( ಉಗಾಭೋಗ