Popular Posts

Sunday, 11 October 2020

ನವ ದುರ್ಗಾ ಮಹತ್ವ

1.     ನವರಾತ್ರಿ ಮೊದಲ ದಿನ  ಶೈಲ ಪುತ್ರಿ ಪೂಜೆಯ ಮಹತ್ವ:

   f


 ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಅಧ್ಯಾತ್ಮ ಸಾಧನಾ ಕ್ರಮದಲ್ಲಿ ಅದುವೇ ಮೊದಲ ಹೆಜ್ಜೆಯೆಂದರೆ ತಪ್ಪಿಲ್ಲ. ಯಾರ ಮನಸು ಚಂಚಲ ಸ್ವಭಾವದ್ದಾಗಿರುತ್ತದೋ ಯಾರು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾರೋ ಅಂತಹವರು ಶೈಲಪುತ್ರಿಯ ಆರಾಧನೆಯನ್ನು ಮಾಡಬೇಕು. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.

ನವರಾತ್ರಿಯ ಮೊದಲ ದಿನ ಘಟಸ್ಥಾಪನೆಯನ್ನು ಮಾಡುವ ಪದ್ಧತಿ ಕೆಲವೆಡೆ ಇದೆ, ಒಂದು, ಮೂರು, ಐದು,ಏಳು ಅಥವಾ ಒಂಭತ್ತು ವಿಧಧ ಧಾನ್ಯಗಳನ್ನು ಮಣ್ಣಿನಲ್ಲಿ ದಿನ ಬಿತ್ತಲಾಗುತ್ತದೆ. ಒಂಭತ್ತು ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುವಂತೆ ಮಾಡಲು ಪ್ರತಿದಿನ ನಿಯಮಿತವಾಗಿ ನೀರುಣಿಸಬೇಕಾಗುತ್ತದೆ.

 ಶೈಲಪುತ್ರಿಯ ಪೂಜೆ:

 ಶೈಲಪುತ್ರಿಯ ಆರಾಧನೆಯಿಂದ ಸಂಪತ್ತು, ಆರೋಗ್ಯ, ಅದೃಷ್ಟ ಮತ್ತು ಸಮೃದ್ಧಿಯು ಪ್ರಾಪ್ತಿಯಾಗುತ್ತದೆ. ನವರಾತ್ರಿ ಆರಂಭವಾಗುವುದೇ ಕಲಶ ಸ್ಥಾಪನೆ ಅಥವಾ ಘಟಸ್ಥಾಪನೆಯಿಂದ. ಶೈಲಪುತ್ರಿಯ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸಿ, ಕಲಶದ ಮೇಲೆ ಮಾವಿನ ಎಲೆಯನ್ನು ಕೂರಿಸಿ ಅದರ ಮೇಲೆ ತೆಂಗಿನ ಕಾಯಿ ಇಡಿ. ದೇವಿಯನ್ನು ಪೂಜಿಸಲು ತುಪ್ಪದ ದೀಪವನ್ನು ಹಚ್ಚಿ.ಶೈಲಪುತ್ರಿಗೆ ಇಷ್ಟವಾದ ಹೂವೆಂದರೆ ಅದು ಮಲ್ಲಿಗೆ. ಆದ್ದರಿಂದ ಮೊದಲ ದಿನ ಮಲ್ಲಿಗೆಯಿಂದ ಅರ್ಚಿಸಿ. ಯಾವುದೇ ಪೂಜೆಯ ಆರಂಭದಲ್ಲಿ ಗಣೇಶನ ಪೂಜೆ ಪದ್ಧತಿ ಇದೆ. ಹಾಗಾಗಿ ಮೊದಲು ಗಣಪತಿಯನ್ನು ಪೂಜಿಸಿ ಷೋಡಷೋಪಚಾರ ಪೂಜೆಯನ್ನು ಆರಂಭಿಸಬೇಕು. ದೇವಿಯನ್ನು ಮೆಚ್ಚಿಸಲು ಖೀರು ಅಥವಾ ಯಾವುದೇ ಬಿಳಿಬಣ್ಣದ ಆಹಾರವನ್ನು ತಯಾರಿಸಿ. ಕೆಲವರು ನವರಾತ್ರಿ ಒಂಭತ್ತೂ ದಿನಗಳ ವ್ರತವನ್ನು ಕೈಗೊಳ್ಳುತ್ತಾರೆ. ಶಕ್ತ್ಯಾನುಸಾರವಾಗಿ ಮಾಡುವುದಾದಲ್ಲಿ ಒಂಭತ್ತು ದಿನಗಳ ಕಾಲ ಭಕ್ತಿಯಿಂದ ಮಾಡಬೇಕು.

 'ಓಂ ದೇವಿ ಶೈಲಪುತ್ರಿಯೇ ನಮಃ'

 ಶೈಲಪುತ್ರಿ ಸ್ತುತಿ

ಯಾ ದೇವಿ ಸರ್ವಭೂತೇಷು, ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ|

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

 ಶೈಲ ಪುತ್ರಿ ಕವಚ ಮಂತ್ರ: ರಕ್ಷಣೆಗಾಗಿ ಮತ್ತು ಶೈಲಪುತ್ರಿಯ ಆಶೀರ್ವಾದಕ್ಕಾಗಿ ಶ್ಲೋಕವನ್ನು ಪಠಿಸಿ

ಓಂಕಾರಹಃ ಮೇ ಶಿರಾಹ್ಪಟು ಮೂಲಾಧರ ನಿವಾಸಿನಿ|

ಹಿಮಾಕರಹಃ ಪಟು ಲಾಲೇಟ್ಬಿಜರೂಪ ಮಹೇಶ್ವರಿ ||

ಶ್ರೀಂಕಾರ ಪಟು ವಾದನೇ ಲಾವಣ್ಯ ಮಹೇಶ್ವರೀ|

ಹಂಕಾರ ಪಟು ಹೃದಯಯಂ ತಾರಣಿ ಶಕ್ತಿ ಸ್ವಾಘ್ರಿತಾ

ಫಟ್ಕರಾ ಪಟು ಸರ್ವಾಂಗೆ ಸರ್ವ ಸಿದ್ಧಿ ಫಲಪ್ರದಾ||

 

ಶೈಲಪುತ್ರಿ ಸ್ತೋತ್ರ

ಪ್ರಥಮ ದುರ್ಗಾ ತ್ವಂಹೀ ಭವಸಾಗರಃ ತಾರಿಣೀಂ

ಧನ ಐಶ್ವರ್ಯ ದಾಯಿನೀ ಶೈಲಪುತ್ರಿ ಪ್ರಣಮಾಮ್ಯಹಾಂ

ತ್ರಿಲೋಜನನಿ ತ್ವಂಹೀ ಪರಮಾನಂದ ಪ್ರದೀಯಮಾನ್

ಸೌಭಾಗ್ಯಾರೋಗ್ಯ ದಾಯಿನೀಂ ಶೈಲಪುತ್ರಿ ಪ್ರಣಮಾಮ್ಯಾಹಾಂ

 

ಓಂ ದುಂ ದುರ್ಗಾಯೈ ನಮಃ

 

ಮೇಲಿನ ಕ್ರಮದಲ್ಲಿ ನವರಾತ್ರಿಯ ಮೊದಲ ದಿನ ಶ್ರೀಶೈಲ ಪುತ್ರಿಯ ಆರಾಧನೆ ಮಾಡಿ ದುರ್ಗೆಯ ಕೃಪೆಗೆ ಪಾತ್ರರಾಗಬಹುದು.

****************************

ನವರಾತ್ರಿಯ ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಪೂಜಿಸಲಾಗುವುದು.

 


ದೇವಿ ಬ್ರಹ್ಮಚಾರಣಿ ಯನ್ನು ಯೋಗ ಸಾಧಕನು ತನ್ನ ಸ್ವಾಧಿಷ್ಠಾನ ಚಕ್ರದ ಮೇಲೆ ಗಮನ ಹರಿಸುತ್ತ ಆರಾಧಿಸುವುದರ ಮೂಲಕ ಮತ್ತು ಸುದೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿಣಿ ಅವತಾರವನ್ನು  ಭಕ್ತಿಯಿಂದ ಭಜಿಸುವರು.

ಬ್ರಹ್ಮಚಾರಿಣಿ ದೇವಿಯೆಂದರೆ ಜ್ಞಾನವನ್ನು ಹೊಂದಿರುವಾಕೆ. ಒಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಕಮಂಡಲವಿದೆ. ಬ್ರಹ್ಮಚಾರಿಣಿ ದೇವಿಯು ಭಕ್ತರಿಗೆ ಜ್ಞಾನವನ್ನು ನೀಡುವಳು. ಬ್ರಹ್ಮಚಾರಿಣಿ ಎಂದರೆ ಮದುವೆಯಾಗದೆ ಇರುವ ಮತ್ತು ಯುವ ಎಂದರ್ಥ. ಬ್ರಹ್ಮಚಾರಣಿ ದೇವಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸವು ಸಿಗುವುದು.

 

ಬ್ರಹ್ಮಚಾರಣಿ ಕಥೆ

ದೇವಿಯು ಕುಶ್ಮಾಂದ ಅವತಾರವನ್ನು ಪಡೆದ ಬಳಿಕ ಬ್ರಹ್ಮಚಾರಣಿಯಾದರು. ಈಶ್ವರ ದೇವನ್ನು ವಿರೋಧಿಸುತ್ತಿದ್ದ ದಕ್ಷ ಪ್ರಜಾಪತಿಯ ಮನೆಯಲ್ಲಿ ಪಾರ್ವತಿಯು ಜನಿಸುವರು. ಅವತಾರವನ್ನು ಬ್ರಹ್ಮಚಾರಣಿ ಎಂದು ಪೂಜಿಸಲಾಗುವುದು. ಮುಂದಿನ ಜನ್ಮದಲ್ಲಿ ತನಗೆ ಒಳ್ಳೆಯ ತಂದೆ ಮತ್ತು ಶಿವನನ್ನು ಆರಾಧಿಸುವವರು ಸಿಗಲಿ ಎಂದು ದೇವಿಯು ಘೋರ ತಪಸ್ಸು ಮಾಡುವರು. ಆಕೆ ಪಾದಯಾತ್ರೆ ಮಾಡಿದ ಬಳಿಕ ಸಾವಿರಾರು ವರ್ಷಗಳ ಕಾಲ ಶಿವನನ್ನು ಮದುವೆಯಾಗಬೇಕೆಂದು ತಪಸ್ಸು ಮಾಡುವರು. ಆಕೆ ಹೂಗಳು ಹಾಗೂ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಿದ್ದಳು. ಅಂತಿಮವಾಗಿ ಇದನ್ನು ತ್ಯಜಿಸಿ, ಕೇವಲ ಗಾಳಿಯನ್ನು ಉಸಿರಾಡಿ ಬದುಕುತ್ತಿದ್ದಳು. ಇದರಿಂದಾಗಿ ಬ್ರಹ್ಮಚಾರಿಣಿಯನ್ನು ಅಪರ್ಣಾ ಎಂದು ಕರೆಯಲಾಗುತ್ತದೆ

 ಬ್ರಹ್ಮಚಾರಣಿ ದೇವಿಯ ಮಹತ್ವ

ಬ್ರಹ್ಮಚಾರಣಿ ದೇವಿಯು ಮಂಗಳ ಗ್ರಹದ ಅಧಿಪತಿ ಎಂದು ಹೇಳಲಾಗುತ್ತದೆ. ಆಕೆಯು ಎಲ್ಲಾ ಅದೃಷ್ಟವನ್ನು ನೀಡುವಳು ಮತ್ತು ಭಕ್ತರ ಮಾನಸಿಕ ಕ್ಷೋಭೆ ನಿವಾರಣೆ ಮಾಡಿ ಅವರ ದುಃಖ ನಿವಾರಿಸುವಳು. ಮಂಗಳ ದೋಷ ಮತ್ತು ಜಾತಕದಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು.

ನವರಾತ್ರಿ ಎರಡನೇ ದಿನ

  ಬ್ರಹ್ಮಚಾರಿಣಿ ದೇವಿ ಪೂಜೆ

ಬ್ರಹ್ಮಚಾರಿಣಿ ದೇವಿಗೆ ತುಂಬಾ ಇಷ್ಟವಾಗಿರುವಂತಹ ಹೂವೆಂದರೆ ಅದು ಮಲ್ಲಿಗೆ. ಇದರಿಂದ ನವರಾತ್ರಿಯ ಎರಡನೇ ದಿನವು ನೀವು ಮಲ್ಲಿಗೆ ಹೂವಿನೊಂದಿಗೆ ಪೂಜೆ ಮಾಡಿ, ಬ್ರಹ್ಮಚಾರಿಣಿ ತಾಯಿಯ ಆಶೀರ್ವಾದ ಪಡೆಯಿರಿ. ಬ್ರಹ್ಮಚಾರಿಣಿ ದೇವಿಯ ದೈವಿಸ್ವರೂಪದ ಬಗ್ಗೆ ಆಲೋಚಿಸಿ ಮತ್ತು ಆರತಿಯೊಂದಿಗೆ ಸುಮಾರು 16 ವಿವಿಧ ಅಪರ್ಣೆಗಳನ್ನು ಮಾಡಿ.

 ನವರಾತ್ರಿ ಎರಡನೇ ದಿನದ ಬ್ರಹ್ಮಚಾರಿಣಿ ಮಂತ್ರಗಳು

 ಓಂ ದೇವಿ ಬ್ರಹ್ಮಚಾರಿಣಿಯೇ ನಮಃ

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ದಾಧನಾ ಕರ್

ಪದ್ಮಭಯಮಕ್ಷ್ಮಾಳ ಕಮಂಡಲೂ

ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ತಾಯಿಯ ಪ್ರಾರ್ಥನೆ

ದಧಾನಾ ಕರ್ ಪದ್ಮಭಯಮಕ್ಷ್ಮಾಳ ಕಮಂಡಲೂ

ದೇವಿ ಪ್ರಸಾದಿ ಮಾಯಿ ಬ್ರಹ್ಮರಿಕನ್ನತಮಾ

 

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಸ್ತುತಿ

ಯಾ ದೇವಿ ಸರ್ವಭುತೇಶ್ ಮಾ ಬ್ರಹ್ಮಚಾರಿಣಿ ರುಪನೆ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸಾಯಿ ನಮಸ್ಟಾಸ್ಯೈ ನಮೋ ನಮಃ

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಧ್ಯಾನ

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಜಾಪಮಾಲಾ ಕಾಮಂಡಲು ದಾರ ಬ್ರಹ್ಮಚಾರಿಣಿ ಶುಭಾಮ್

 ಗೌರವರ್ಣ ಸ್ವಧೀತಾನಸ್ಥಿತ ದ್ವಿತೀಯ ದುರ್ಗಾ ತ್ರಿನೇತ್ರಂ

 ಧವಾಲಾ ಪರಿಧನಾ ಬ್ರಹ್ಮರೂಪಾ ಪುಷ್ಪಲಂಕರ ಭೂಶಿಂತಂ

 ಪರಮಾ ವಂದನಾ ಪಲ್ಲವರಧರಂ ಕಾಂತ ಕಪೋಲಾ ಪಿನಾ

 ಪಯೋಧರಂ ಕಾಮನಿಯಾ ಲವಣಯಂ ಶೆರ್ಮಮುಖಿ ನಿಮ್ನಾನಾಭಿ ನಿತಂಬನಿಮ್

 ಬ್ರಹ್ಮಚಾರಿಣಿ ದೇವಿ ಸ್ತೋತ್ರ

 ತಪಶ್ಚಾರಿಣಿ ತುಮಮಿ ತಪತ್ರಾಯ ನಿವಾರಾನಿಮ್

ಬ್ರಹ್ಮರುಪಧಾರ ಬ್ರಹ್ಮಚಾರಿಣಿ ಪ್ರಾಣಮಾಮಯಂ

ಶಂಕರಾಪ್ರಿಯ ತುಮಹಿ ಭಕ್ತಿ-ಮುಕ್ತಿ ದಯಾನಿ

ಶಾಂತಿಡಾ ಜ್ಞಾನದ್ರ ಬ್ರಹ್ಮಚಾರಿಣಿ ಪ್ರಾಣಮಾಮಯಂ

 

ಬ್ರಹ್ಮಚಾರಿಣಿ ದೇವಿ ಕವಚ

 ತ್ರಿಪುರಾ ಮೇನ್ ಹೃದಯಂ ಪಟು ಲಾಲೇತ ಪಟು ಶಂಕರಭಮಿಣಿ

ಅರ್ಪಾನಾ ಸದಾಪತು ನೆತ್ರೋ, ಅರ್ಧಾರಿ ಚಾ ಕಾಪೋಲೊ

ಪಂಚದಾಶಿ ಕಾಂತೆ ಪತು ಮಧ್ಯಾಧೇಶ್ ಪತು ಮಹೇಶ್ವರಿ

ಶೋದಾಶಿ ಸದಪತು ನಾಬೋ ಗ್ರಿಹೋ ಚಾ ಪಡಾಯೊ

ಅಂಗಾ ಪ್ರತ್ಯಾಂಗ ಸತಾತಾ ಪತು ಬ್ರಹ್ಮಚಾರಿಣಿ.

 ಮಹತ್ವ

 ಬ್ರಹ್ಮಚಾರಣಿ ದೇವಿಯನ್ನು ಎರಡನೇ ದಿನ ಪೂಜಿಸುವುದು ದೊಡ್ಡ ತಪಸ್ಸಿಗೆ ಸಮಾನವಾಗಿದೆ. ಇದು ಭಕ್ತರಿಗೆ ತ್ಯಾಗ, ಸದ್ಗುಣ ಮತ್ತು ಸಂಪತ್ತನ್ನು ನೀಡುವುದು. ಯಶಸ್ಸಿಗೆ ಇರುವಂತಹ ಯಾವುದೇ ರೀತಿಯ ಅಡೆತಡೆಗಳನ್ನು ಇದು ನಿವಾರಣೆ ಮಾಡುವುದು ಮತ್ತು ಕುಟುಂಬದಲ್ಲಿ ಒಳ್ಳೆಯ ಮಾನಸಿಕ ಶಾಂತಿಯು ಬರುವುದು. ನಿಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಸಂತೃಪ್ತಿಯು ಸಿಗುವುದು. ಎರಡನೇ ದಿನ ನೀವು ಬಹ್ಮಚಾರಿಣಿ ದೇವಿಯನ್ನು ಪೂಜಿಸುವ ಮೂಲ ಯಶಸ್ಸಿಗೆ ಇರುವ ಅಡ್ಡಿಗಳನ್ನು ನಿವಾರಣೆ ಮಾಡಬಹುದು.

 **********************************

3 ಚಂದ್ರಘಂಟಾದೇವಿಯ  ಮೂರನೇ ದಿನ ಆಚರಣೆ

 


ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ಈ ದೇವಿಯ ಘಂಟೆಯ ಧ್ವನಿಯಿಂದ ದುಷ್ಟಶಕ್ತಿಗಳೆಲ್ಲ ಹೆದರಿ ನಾಶವಾಗುತ್ತವೆ. ಸಿಂಹದ ಮೇಲೇರಿ ಬರುವ ದೇವಿಯ ಶರೀರವು ಸ್ವರ್ಣದಂತೆ ಕಂಗೊಳಿಸುತ್ತದೆ. ನವರಾತ್ರಿಯ ಮೂರನೇ ದಿನ ದೇವಿಯ ಆರಾಧಕರ ಮನಸ್ಸು ಮಣಿಪುರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ, ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟೆ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟೆಯ ಮಹತ್ವ

ಚಂದ್ರಘಂಟೆಯು ಶುಕ್ರ ಗ್ರದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

ಚಂದ್ರಘಂಟೆಯ ಪುರಾಣ ಕಥೆ

ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.

 

ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

 

ಚಂದ್ರಘಂಟೆಯ ಪೂಜಾ ವಿಧಿ

ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ. ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ

 ಚಂದ್ರಘಂಟೆಯ ಮಂತ್ರ

 ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

 ಚಂದ್ರಘಂಟೆಯ ಪ್ರಾರ್ಥನೆ

ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ

ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

 ಚಂದ್ರಘಂಟೆಯ ಧ್ಯಾನ

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಸಿಂಹರೂಢ ಚಂದ್ರಘಂಟ ಯಶಸ್ವಿನೀಂ

ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ

ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ

ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ

ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ

ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ


 ಚಂದ್ರಘಂಟಾ ದೇವಿಯ ಸ್ತೋತ್ರ

ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ

ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ

ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ

ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ

 ಚಂದ್ರಘಂಟಾ ದೇವಿಯ ಕವಚ

ರಹಸ್ಯಂ ಶ್ರಿನನಿ ವಕ್ಷ್ಯಾಮಿ ಶೈವೇಶಿ ಕಮಲಾನನೇ

ಶ್ರೀ ಚಂದ್ರಘಂಟಸ್ಯ ಕವಚಂ ಸರ್ವಸಿದ್ಧಿದಾಯಕಂ

ಬಿನಾ ನ್ಯಾಸಂ ಬಿನಾ ವಿನಿಯೋಗಂ ಬಿನಾ ಶಪೋಧ ಬಿನಾ ಹೋಮಂ

ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನ ಸಿದ್ಧಿದಾಂ

ಕೌಶಿಶ್ಯಾಂ ಕೌಟಿಲ್ಯ ವಂಚಕಾಯ ನಿಂದಕಾಯ ಚ

ನ ದಾತಾವ್ಯಂ ನ ದಾತಾವ್ಯಂ ನ ದಾತಾವ್ಯಂ ಕದಾಚಿತಂ.....

 ಪೂಜೆಯ ಮಹತ್ವ

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

 ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟೆಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟೆ. ಹೀಗಾಗಿ ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಪೂಜೆ ಮಾಡಿ, ಮಾತೆಯ ಆಶೀರ್ವಾದ ಪಡೆದುಕೊಳ್ಳಿ.

4. ಕೂಷ್ಮಾಂಡಾ ದೇವಿ



ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಕಾರವಿದ್ದ ಸಮಯದಲ್ಲಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ರಚಿಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ದೇವಿಯ ಈ ಸ್ವರೂಪವನ್ನು ಕೂಷ್ಮಾಂಡಾ ಎಂದು ಕರೆಯುತ್ತಾರೆ. ನವರಾತ್ರಿಯ ನಾಲ್ಕನೇ ದಿನ ದೇವಿಯ ಆರಾಧಕರ ಮನಸ್ಸು ಅನಾಹತ ಚಕ್ರದಲ್ಲಿ ಸ್ಥಿತವಾಗಿರುತ್ತದೆ.

ಕೂಷ್ಮಾಂಡಾ ದೇವಿಯ ಕಥೆ

ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುವುದು. ಯಾಕೆಂದರೆ ಭೂಮಿಯ ಸೃಷ್ಟಿಕರ್ತೆಯೇ ಆಕೆ ಎನ್ನಲಾಗುತ್ತದೆ. ಆಕೆ ಸೂರ್ಯದೇವರ ವಾಸಸ್ಥಾನದಲ್ಲಿ ವಾಸಿಸುವ ಕಾರಣದಿಂದಾಗಿ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ಕೂಷ್ಮಾಂಡಾ ದೇವಿಯು ಮೊದಲ ಮೊಟ್ಟೆಯನ್ನು ಸೃಷ್ಟಿಸಿ, ಅದರಿಂದ ಸಂಪೂರ್ಣ ಜೀವಸಂಕುಲಗಳಿಗೆ ಜೀವ ನೀಡಿದರು ಎನ್ನುವ ಪ್ರತೀತಿ ಇದೆ. ಈ ದೇವಿಯು ಸೂರ್ಯನಿಗೆ ಬೆಳಕು ನೀಡುವರು. ಆಕೆಯ ನಗು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡುವುದು, ಶಕ್ತಿ ನೀಡಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನು ಮಾಡುವುದು.

ಕೂಷ್ಮಾಂಡಾ ದೇವಿಯ ಮಹತ್ವ

ಕೂಷ್ಮಾಂಡಾ ದೇವಿಯು ಸೂರ್ಯ ದೇವನಿಗೆ ಬೆಳಕನ್ನು ನೀಡುವರು. ಆಕೆ ಸೂರ್ಯನಿಗೂ ಅಧಿಪತಿಯಾಗಿರುವ ಕಾರಣದಿಂದಾಗಿ ಕೂಷ್ಮಾಂಡಾ ದೇವಿಯನ್ನು ಪೂಜಿಸುವುದರಿಂದಾಗಿ ನಿಮ್ಮ ಜಾತಕದಲ್ಲಿ ಸೂರ್ಯನಿಂದಾಗಿರುವ ಕೆಡುಕನ್ನು ನಿವಾರಣೆ ಮಾಡಬಹುದು. ಇದರೊಂದಿಗೆ ಕೂಷ್ಮಾಂಡಾ ದೇವಿಯ ಪೂಜಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಮತ್ತು ಸಮಾಜದಲ್ಲಿ ಪ್ರಸಿದ್ಧಿ ಪಡೆಯುವರು

ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ

ಕೂಷ್ಮಾಂಡಾ ದೇವಿಯ ಪೂಜೆಗೆ ಕೆಂಪು ಬಣ್ಣದ ಹೂಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡಬೇಕು. ಕೂಷ್ಮಾಂಡಾ ದೇವಿಯ ಕಾಂತಿಯುತ ರೂಪದ ಬಗ್ಗೆ ಚಿಂತಿಸಿ ಮತ್ತು ಶೋಡಷಚೋಪಚಾರ ಪೂಜೆ ಮಾಡಿ. ಕುಟುಂಬದ ಸಮೃದ್ಧಿ ಮತ್ತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ಪ್ರಾರ್ಥಿಸಿ ಮತ್ತು ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ.

ನಾಲ್ಕನೇ ದಿನಕ್ಕೆ ಕೂಷ್ಮಾಂಡಾ ದೇವಿಯ ಮಂತ್ರ

ಓಂ ದೇವಿ ಕುಶ್ಮಾಂದೈ ನಮಃ

ಓಂ ದೇವಿ ಕುಶ್ಮಾಂದಾಯ್ಯೆ ನಮಃ ಸುರಸಂಪುರ್ನ ಕಲಾಶಂ ರುದ್ರರಾಪ್ಲುಮಾಮೇವ್ ಚಾ

ದಾಧಾನಾ ಹಸ್ತಪದ್ಮಾಭಯಂ ಕುಶ್ಮಾಂದ ಶುಭದಾತ ಮಿ

ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಪ್ರಾರ್ಥನೆ

ಸುರಸಂಪುರ್ನ ಕಲಾಶಂ ರುದ್ರರಾಪ್ಲುಮಾಮೇವ್ ಚಾ

ದಾಧಾನಾ ಹಸ್ತಪದ್ಮಾಭಯಂ ಕುಶ್ಮಾಂದ ಶುಭದಾತ ಮಿ


ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತುತಿ

ಯಾ ದೇವಿ ಸರ್ವಭೂತೇಶ ಮಾ ಕೂಷ್ಮಾಂಡಾ ರುಪೇನ ಸಂಹಿತಾ

ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ

ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಧ್ಯಾನ

ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಂಹರೂಢ ಅಷ್ಟಭುಜಾ ಕೂಷ್ಮಾಂಡಾ ಯಶಾಸ್ವಿನಿಂ

ಭಾಸ್ವರಾ ಭಾನು ನಿಭಾಮ್ ಅನಹತಾ ಸ್ಥಿತಿಂ ಚತುರ್ಥ ದುರ್ಗಾ ತ್ರಿನೇತ್ರಂ

ಕಾಮಂಡಲು, ಚಾಪಾ, ಬನ, ಪದ್ಮ, ಸುಧಲಶಾಶ, ಚಕ್ರ, ಗಧಾ, ಜಪವತಿಧರಂ

ಪತಂಬರಾ ಪರಿಧಿಂ ಕಾಮನಿಯಮ್ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ, ಮಂದಿತಮ್

ಪ್ರಫುಲ್ಲಾ ವದನಂಚಾರು ಚಿಬುಕಾಮ್ ಕಾಂತಾ ಕಪೋಲಮ್ ತುಗಮ್ ಕುಚಾಮ್

ಕೋಮಲಂಗಿ ಶೆರ್ಮಮುಖಿ ಶ್ರೀಕಾಂತಿ ನಿಮ್ನಾಭಿ ನಿತಂಬನಿಮ್


ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಸ್ತೋತ್ರ

ದುರ್ಗತಿನಾಶಿನಿ ತುಮಹಿ ದರಿದ್ರಾದಿ ವಿನಾಶನಿಮ್

ಜಯಮಯ ದಾನದಾ ಕೂಷ್ಮಾಂಡಾ ಪ್ರಾಣಮಾಮಯಂ

ಜಗತಮಾತಾ ಜಗತಕರರಿ ಜಗದಾಧರ ರೂಪಾನಿಮ್

ಚಾರಚರೇಶ್ವರಿ ಕೂಷ್ಮಾಂಡಾೇ ಪ್ರಣಮಾಮ್ಯಾಹಂ

ತ್ರಿಲೋಕಿಯಾಸುಂದರಿ ತುವಾಹಿ ದುಖಾ ಶೋಕಾ ನಿವಾರಿನಿಮ್

ಪರಮಾನಂದಮಯಿ, ಕೂಷ್ಮಾಂಡಾ್ ಪ್ರಣಮಾಮ್ಯಾಹಂ


ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಕವಚ


ಹಂಸರೈ ಮೇನ್ ಶಿರಾ ಪಟು ಕೂಷ್ಮಾಂಡಾೇ ಭವನಶಿನಿಮ್

ಹಸಲಾಕರಿಮ್ ನೇತ್ರಾ, ಹಸಾರೌಷ್ಚಾ ಲಲಾಟಕಮ್

ಕೌಮಾರಿ ಪಟು ಸರ್ವಗತರ್, ವರಾಹಿ ಉಟ್ಟೆ ತಥಾ,

ಪುರ್ವೆ ಪಟು ವೈಷ್ಣವಿ ಇಂದ್ರಾನಿ ದಕ್ಷಿಣ ಮಾಮಾ

ದಿಗ್ವಿದಿಕ್ಶು ಸರ್ವತ್ರೇವಾ ಕುಮ್ ಬಿಜಮ್ ಸರ್ವದಾವತು


ನಾಲ್ಕನೇ ದಿನದ ಪೂಜೆಯ ಮಹತ್ವ


ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಕಾಯಿಲೆಗಳು ದೂರವಾಗುವುದು ಮತ್ತು ಒಳ್ಳೆಯ ಆರೋಗ್ಯ ಸಿಗುವುದು. ವೈಯಕ್ತಿಕ ಪ್ರಗತಿಯಲ್ಲಿ ಇದು ತಂದೆ, ಸೋದರ, ಸೋದರಿ ಹಾಗೂ ಉದ್ಯೋಗದ ಕಡೆ ಹಿರಿಯರೊಂದಿಗೆ ಸಂಬಂಧವನ್ನು ಉತ್ತಮಪಡಿಸುವುದು.

ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದರೊಂದಿಗೆ ಒಳ್ಳೆಯ ಗುರಿ ಹಾಗೂ ಸ್ವತಂತ್ರವು ಸಿಗುವುದು.

ನಾಲ್ಕನೇ ದಿನದ ಪೂಜೆ ಲಕ್ಷ್ಮೀ ಪೂಜೆಯ ಆರಂಭವಾಗಿದ್ದು, ಇದು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ

***************************************

5 ಸ್ಕಂದಮಾತಾ



ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ನಾಲ್ಕು ಭುಜವುಳ್ಳ ತಾಯಿಯ ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು ಹಿಡಿದಿರುತ್ತಾಳೆ. ಕೆಳಗಿನ ಭುಜದಲ್ಲಿ ಕಮಲವನ್ನು, ಎಡಬದಿಯ ಮೇಲಿನ ಭುಜದಲ್ಲಿ ಆಶೀರ್ವಾದ ಮುದ್ರೆಯನ್ನು, ಕೆಳಗಿನ ಭುಜದಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಈ ಸ್ವರೂಪದ ಆರಾಧನೆಯಿಂದ ಸಕಲ ಸುಖವನ್ನು ಪಡೆಯಬಹುದಾಗಿದೆ. ನವರಾತ್ರಿಯ ಐದನೇ ದಿನ ದೇವಿಯ ಆರಾಧಕರ ಮನಸ್ಸು ವಿಶುದ್ಧ ಚಕ್ರದಲ್ಲಿ ಸ್ಥಿತವಾಗಿರುತ್ತದೆ. 

ಸ್ಕಂದ ಮಾತೆಯ ಅವತಾರವು ದೇವಿಯ 5ನೇ ಅವತಾರ. ಇದನ್ನು ನವರಾತ್ರಿಯ 5ನೇ ದಿನದಂದು ಆರಾಧಿಸಲಾಗುವುದು. ಪಂಚಮಿ ತಿಥಿಯಲ್ಲಿ ಬರುವುದು. ಕಾರ್ತಿಕೇಯ ಅಥವಾ ಸ್ಕಂದ ಮಾತೆ ಎಂದು ಸಹ ಪರಿಗಣಿಸಲಾಗುವುದು. ಈ ಅವತಾರದಲ್ಲಿ ದೇವಿಯು ಸಿಂಹದ ಮೇಲೆ ಕುಳಿತು ತನ್ನ ಆರು ಮುಖದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವುದಾಗಿದೆ. ತಾಯಿಯ ಈ ಅವತಾರವು ಹೆಚ್ಚು ಶಕ್ತಿಯುತವಾದದ್ದು ಎನ್ನಲಾಗುವುದು.

ಸ್ಕಂದ ಮಾತೆಯ ಆರಾಧನೆ

ತನ್ನ ಮಗ ಕಾರ್ತಿಕೇಯ ಅಥವಾ ಸ್ಕಂದನನ್ನು ಹೊತ್ತಿರುವ ದುರ್ಗಾ ದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುವುದು. ಈ ಅವತಾರದಲ್ಲಿ ದೇವಿಯು ತುಂಬಾ ಸಂತೋಷದಿಂದ ಮತ್ತು ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಂಡಿದ್ದಾಳೆ. ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ಎರಡು ಆಶೀರ್ವಾದವನ್ನು ಪಡೆದುಕೊಳ್ಳಬಹುದು ಒಂದು ದೇವಿಯ ಆಶೀರ್ವಾದ ಹಾಗೂ ಸ್ಕಂದ ಪುತ್ರನ ಆಶೀರ್ವಾದ. ಈ ಅವತಾರಕ್ಕೆ ಪೂಜೆ ಸಲ್ಲಿಸುವುದರಿಂದ ಭಕ್ತರು ಜೀವನದ ಸಮಸ್ಯೆಯಿಂದ ಮುಕ್ತರಾಗಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವರು.


ಸ್ಕಂದ ಮಾತೆಯ ಪ್ರಾಮುಖ್ಯತೆ

ತಾಯಿ ಸ್ಕಂದ ಮಾತೆಯು ಬುಧ ಗ್ರಹದ ಆಡಳಿತವನ್ನು ಒಳಗೊಂಡಿರುತ್ತದೆ. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಗೈಯುತ್ತಾರೋ ಅಂತಹವರಿಗೆ ದೇವಿ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ತನ್ನ ಭಕ್ತರಿಗಾಗಿ ದೇವಿ ಸಹಾನುಭೂತಿ ತೋರುವಳು. ಕುಂಡಲಿಯಲ್ಲಿ ಬುಧನು ಪ್ರತಿಕೂಲದ ಸ್ಥಾನದಲ್ಲಿದ್ದರೆ ಉಂಟಾಗುವ ಎಲ್ಲಾ ತೊಂದರೆಗಳನ್ನು ನಿವಾರಿಸುವಳು.


ನವರಾತ್ರಿಯ 5ನೇ ದಿನದ ಸ್ಕಂದ ಮಾತೆಯ ಪೂಜೆ

ಸ್ಕಂದ ಮಾತೆಯು ಕೆಂಪು ಬಣ್ಣದ ಹೂವು, ವಿಶೇಷವಾಗಿ ಗುಲಾಬಿ ಹೂವನ್ನು ಪ್ರೀತಿಸುತ್ತಾಳೆ. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದನ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ನವರಾತ್ರಿಯ ಐದನೇ ದಿನ ದೇವಿಗೆ ಷೋಡೋಸೋಪಚಾರವನ್ನು ಅರ್ಪಿಸಿ, ಆರತಿ ಬೆಳಗುವುದರ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸುತ್ತಾರೆ. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.


ನವರಾತ್ರಿಯ 5ನೇ ದಿನಕ್ಕೆ ಸ್ಕಂದ ಮಾತೆಗೆ ಹೇಳುವ ಮಂತ್ರಗಳು

"ಓಂ ದೇವಿ ಸ್ಕಂದಮಾತಾಯ ನಮಃ

ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ

ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ."


ಸ್ಕಂದ ಮಾತೆಗೆ ಹೇಳುವ ಪ್ರಾರ್ಥನೆ

"ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ

ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ."


ಸ್ಕಂದ ಮಾತೆಯ ಸ್ತುತಿ

"ಯಾ ದೇವಿ ಸರ್ವಭಯತೇಶು ಮಾ ಸ್ಕಂದಮಾತಾ ರೂಪೇಣ ಸಮಷಿತಃ

ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ."

ಸ್ಕಂದ ಮಾತೆಯ ಧ್ಯಾನ

"ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ

ಧವಲವರ್ಣ ವಿಶುದ್ಧ ಚಕ್ರಸ್ಥಿತೋಮ್ ಪಂಚಮ ದುರ್ಗಾ ತ್ರಿನೇತ್ರಮ್

ಅಭಯ ಪದ್ಮ ಯುಗ್ಮ ಕರಮ್ ದಕ್ಷಿಣ ಉರು ಪುತ್ರಧರಂ ಭಜೆಮ್

ಪತಂಬರಾ ಪರಿಧನಮ್ ಮೃದುಹಾಸ್ಯ ನಾನಾಲಂಕಾರ ಭೂಷಿತಂ

ಮಂಜಿರಾ, ಹರಾ, ಕೀರುರಾ, ಕಿಂಕಿನಿ, ರತ್ನಕುಂಡಲ ಧಾರಿಣಿಂ

ಪ್ರಫುಲ್ಲ ವಂದನಾ ಪಲ್ಲವಧಾರಣಂ ಕಾಂತಾ ಕಪೋಲಮ್ ಪಿನಾ ಪಯೋಧರಂ

ಕಾಮನಿಯಮ್ ಲಾವಣ್ಯಂ ಚಾರು ತ್ರೈವಲಿ ನಿತಾಂಬನಿಮ್."

ಸ್ಕಂದ ಮಾತೆಯ ಸ್ತೋತ್ರ

"ನಮಾಮಿ ಸ್ಕಂದ ಮಾತಾ ಸ್ಕಂದಾಧಾರಿಣಿಂ

ಸಮಗ್ರತಾಸ್ವಾಸಗರಂ ಪರಪರಗಹರಾಮ್

ಶಿವಪ್ರಭ ಸಮುಜ್ವಲಾಂ ಸ್ಪೂಚ್ಚಾಶಾಶಶೇಖರಂ

ಲಲತಾರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ

ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ

ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾದ್ಭುತಂ

ಅಟಾರ್ಕಿರೋಚಿರುವಿಜಂ ವಿಕಾರ ದೋಷವಾರ್ಜಿತಂ

ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ

ನಾನಾಲಂಕಾರ ಭೂಷಿತಂ ಮೃಗೇಂದ್ರವಾಹನಗೃಜಂ

ಸುಶುದ್ಧಾತತ್ವೊಶನಮ್ ತ್ರಿವೇಂದಮರ ಭೂಷಣಂ

ಸುಧಾರ್ಮಿಕಾಪುಕಾರಿನಿ ಸುರೇಂದ್ರ ವೈರಿಗ್ರತಿನಿಮ್

ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಮ್

ಸಹಸ್ರಸೂರ್ಯರಂಜಿಕಮ್ ಧನಜ್ಜೋಗಕಾರಿಕಮ್

ಸಿಶುದ್ಧಾ ಕಾಲ ಕುಂಡಲಾ ಸುಭ್ರಿದವೃಂದಮಾಜ್ಜುಲಮ್

ಪ್ರಜಾಯಿಣಿ ಪ್ರಜಾವತಿ ನಮಾಮಿ ಮಾತರಂ ಸತೀಂ

ಸ್ವಕರ್ಮಕಾರಣೇ ಗತಿಂ ಹರಿಪ್ರಯಾಚ ಪಾರ್ವತಿಂ

ಅನಂತಶಕ್ತಿ ಕಾಂತಿದಾಮ್ ಯಶೋರ್ಥಭಕ್ತಿಮುಕ್ತಿದಾಮ್

ಪುನಃ ಪುನಾರ್ಜಗದ್ದಿತಮ್ ನಮಾಮ್ಯಮ್ ಸುರಾರ್ಚಿತಮ್

ಜಯೇಶ್ವರಿ ತ್ರಿಲೋಚನೆ ಪ್ರಸಿದ್ ದೇವಿ ಪಾಹಿಮಾಮ್."

ಸ್ಕಂದ ಮಾತೆಯ ಕವಾಚ

"ಏಮ್ ಬಿಜಾಲಿಂಕಾ ದೇವಿ ಪದ್ಯುಗ್ಮಧರಾಪರ

ಹರಿದಯಾಮ್ ಪಾತು ಸ ದೇವಿ ಕಾರ್ತಿಕೇಯಾಯುತ

ಶ್ರೀ ಹ್ರಿಮ್ ಹುಮ್ ಏಮ್ ದೇವಿ ಪರ್ವಸ್ಯಾ ಪತು ಸರ್ವದಾ

ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ

ವನವನಾಮೃತೇಂ ಹಮ್ ಫತ್ ಬಿಜಾ ಸಮಾನ್ವಿತ

ಉತ್ತರಸ್ಯಾ ತಥಗ್ನೇ ಚಾ ವಾರುಣೆ ನೈರಿತೈವತು

ಇಂದ್ರಾಣಿ ಭೈರವಿ ಚೈವಾಸಿತಂಗಿ ಚಾ ಸಂಹಾರಿಣಿ

ಸರ್ವದಾ ಪತು ಮಮ್ ದೇವಿ ಚನ್ಯಾನ್ಯಸು ಹಿ ದೀಕ್ಷು ವೈ."

ಐದನೇ ದಿನದ ಪ್ರಾಮುಖ್ಯತೆ

ನವರಾತ್ರಿಯ ಐದನೇ ದಿನ ಮಾಡಿದ ಮಾತೆಯ ಪೂಜೆಯಿಂದಾಗಿ ಭಕ್ತರ ಹೃದಯವು ಶುದ್ಧವಾಗುವುದು. ಅಲ್ಲದೆ ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುವಳು. ದೇವಿಯ ಆರಾಧನೆಯಿಂದ ಭಕ್ತರು ಪ್ರಖ್ಯಾತಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವರು.

ನವರಾತ್ರಿಯ ಐದನೇ ದಿನದ ಪೂಜೆಯ ದಿನವು ಮಹಾಲಕ್ಷ್ಮಿಯ ಎರಡನೇ ಪೂಜೆಯಾಗಿರುತ್ತದೆ. ಆದ್ದರಿಂದ ನವರಾತ್ರಿಯ ಐದನೇ ದಿನ ಸಂಪತ್ತು ಮತ್ತು ಖ್ಯಾತಿಗಾಗಿ ದೇವಿಯನ್ನು ಆರಾಧಿಸಬಹುದು.

**************************************

6   ಕಾತ್ಯಾಯನಿ ದೇವಿ



ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನ ಋಷಿಯ ಆಶ್ರಮದಲ್ಲಿ ಜನ್ಮತಾಳಿದ ಕಾರಣ ಕಾತ್ಯಾಯನಿ ಎಂದು ಕರೆಯಲಾಗುತ್ತದೆ. ನವರಾತ್ರಿಯ ಆರನೇ ದಿನ ದೇವಿಯ ಆರಾಧಕರ ಮನಸ್ಸು ಆಜ್ಞಾ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಈ ದಿನದಂದು ಆರಾಧಕರು ಅಲೌಕಿಕ ತೇಜಸ್ಸನ್ನು ಹೊಂದುತ್ತಾರೆ

ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ ಕಾತ್ಯಾಯಿನಿ ದೇವಿ ಋಷಿಮುನಿಯಾದ ಕಾತ್ಯಾಯನ್ ಮಗಳು. ಕಾತ್ಯಾಯಿನಿ ದೇವಿಯು ಸಿಂಹದ ಮೇಲೆ ಕುಳಿತು ಹತ್ತು ಆಯುಧಗಳನ್ನು ಹಿಡಿದು ಬರುತ್ತಾಳೆ. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.

ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಹಾಗೀ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುವುದು. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಒಳಗಾಗಬಹುದು.

 

ಕಾತ್ಯಾಯಿನಿ ಮಾತೆಯ ಕಥೆ

ಒಮ್ಮೆ ಕಾತ್ಯಾಯನ್ ಎನ್ನುವ ಋಷಿ ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕು ಎಂದು ಆಶಿಸಿದ್ದನು. ಈ ಹಿನ್ನೆಲೆಯಲ್ಲಿಯೇ ಭಕ್ತಿಯಿಂದ ತಪಸ್ಸನ್ನು ಕೈಗೊಂಡಿದ್ದನು. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ದುಷ್ಕøತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸನ ಸಂಹಾರಕ್ಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.

 ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ:

ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.

 

ನವರಾತ್ರಿಯ ಆರನೇ ದಿನ ಕಾತ್ಯಾಯನಿ ದೇವಿಯ ಆರಾಧನೆ

ಕಾತ್ಯಾಯಿನಿ ದೇವಿಗೆ ಕೆಂಪು ಗುಲಾಬಿಯು ಹೆಚ್ಚು ಶ್ರೇಷ್ಠವಾದದ್ದು. ದೇವಿಯ ಪೂಜೆ ಕೈಗೊಳ್ಳುವ ಮೊದಲು ಗಣೇಶನ ಪ್ರಾರ್ಥನೆ ಮಾಡಬೇಕು. ದೇವಿಗೆ ಷೋಡೋಸೋಪಚಾರ ಅರ್ಪಿಸಿದ ನಂತರ ಮಂಗಳಾರತಿಯ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಲಾಗುವುದು.

 

ಕಾತ್ಯಾಯಿನಿ ದೇವಿಯ ಮಂತ್ರ

"ಓಂ ದೇವಿ ಕಾತ್ಯಾಯಿನಿ ನಮಃ 

ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ 

ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ." 

ಕಾತ್ಯಾಯಿನಿ ದೇವಿಯ ಪ್ರಾರ್ಥನೆ

"ಚಂದ್ರಹಾಸೋಜ್ವಲಕಾರ ಶರ್ದೂಲವರವಾಹನ 

ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಟಿನಿ." 

ಕಾತ್ಯಾಯಿನಿ ದೇವಿಯ ಸ್ತುತಿ

"ಯಾ ದೇವಿ ಸರ್ವಭೂತೇಶ್ ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ 

ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"

 

ಕಾತ್ಯಾಯಿನಿ ದೇವಿಯ ಧ್ಯಾನ

"ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ

 ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್

 ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ

 ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ

 ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ

ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ

 ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್

 ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್."

 

ಕಾತ್ಯಾಯಿನಿ ದೇವಿಯ ಸ್ತೋತ್ರ

"ಕಾಂಚನಭಾ ವರಾಭಯಂ ಪದ್ಮಾಧರ ಮುಖತ್ವೋಜ್ವಲಮ್

 ಸ್ಮೇರಮುಖಿ ಶಿವಪತ್ನಿ ಕಾತ್ಯಾಯನೇಸುತೇ ಸಮೋಸ್ತುತೇ

 ಪತಂಭರಾ ಪರಿಧನಮ್ ನಾನಾಲಂಕಾರ ಭೂಷಿತಮ್

 ಸಿಂಹಸ್ಥಿತಂ ಪದ್ಮಹಸ್ತಂ ಕಾತ್ಯಾಯನಸ್ತುತೇ ನಮೋಸ್ತುತೇ

 ಪರಮಾನಂದಮಯೀ ದೇವಿ ಪರಬ್ರಹ್ಮಾ ಪರಮಾತ್ಮ

 ಪರಮಶಕ್ತಿ, ಪರಮಭುಕ್ತಿ ಕಾತ್ಯಾಯನಸ್ತುತೇ ನಮೋಸ್ತುತೇ

 ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಪ್ರತಿಮ,

 ವಿಶ್ವಾಚಿಂತ, ವಿಶ್ವಾತೀತ ಕಾತ್ಯಾಯನಸ್ತುತೇ ನಮೋಸ್ತುತೇ

 ಕಾಮ್ ಬಿಜಾ, ಕಾಮ್ ಜಪನಂದಕಮ್ ಬಿಜಾ ಜಪ ತೋಶೈಟ್

 ಕಾಮ್ ಕಾಮ್ ಬಿಜಾಮ್ ಜಪದಾಶಕ್ತಕಾಮ್ ಕಾಮ್ ಸಂತುತಾ

 ಕಾಮ್ಕರಹಾರ್ಶಿನಿಕಮ್ ಧನದಾಧಾನಮಸಾನ

 ಕಾಮ್ ಬೀಜ ಜಪಕಾರಿನಿಕಾಮ್ ಬಿಜಾ ತಪ ಮಾನಸ

 ಕಾಮ್ ಕರಿನಿ ಕಾಮ್ ಮಂತ್ರಪೂಜಿತಕಮ್ ಬೀಜ ಧಾರಿಣಿ

 ಕಾಂ ಕಿಮ್ ಕುಮ್‍ಕೈ ಕಾಹ್ ಥಾಹ್ ಚಾಹ್ ಸ್ವರೂಪಿಣಿ."

  

ಕಾತ್ಯಾಯಿನಿ ದೇವಿಯ ಕವಚ

"ಕಾತ್ಯಾಯನಮುಖ ಪತು ಕಾಮ್ ಸ್ವಾಹಸ್ವರೂಪಿಣಿ

 ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ

ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ."

*******************


ಕಾಳರಾತ್ರಿ



ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದೇವಿಯ ಸ್ವರೂಪ ಅತ್ಯಂತ ಭಯಾನಕವಾಗಿದ್ದರೂ, ಈಕೆಯ ಆರಾಧನೆಯಿಂದ ಶುಭಫಲವನ್ನು ಪಡೆಯಬಹುದಾಗಿದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ದೇವಿಯ ಈ ಸ್ವರೂಪ ಜಗತ್ತಿಗೆ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ನವರಾತ್ರಿಯ ಏಳನೇ ದಿನ ದೇವಿಯ ಆರಾಧಕರ ಮನಸ್ಸು ಸಹಸ್ರಾರ ಚಕ್ರದಲ್ಲಿ ಸ್ಥಿತವಾಗಿರುತ್ತದೆ.ಇದು ತುಂಬಾ ವಿಚಿತ್ರ ರೂಪವಾಗಿದೆ. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುವರು. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ಕತ್ತೆಯ ಮೇಲೆ ಆಕೆ ಸಂಚಾರಿಯಾಗಿದ್ದಾರೆ. ಕಾಲರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ.


ತಾಯಿ ಕಾಲರಾತ್ರಿಯ ಕಥೆ

ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ತಾಯಿ ದುರ್ಗೆಯು ಕಾಲರಾತ್ರಿಯಾಗಿ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುವಳು. ಕಾಲರಾತ್ರಿಯು ಕಪ್ಪು ಹಾಗೂ ವಿಚಿತ್ರವಾಗಿ ಕಾಣಿಸುವರು. ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುವರು. ಅದಾಗ್ಯೂ, ಆಕೆ ತನ್ನ ಭಕ್ತರಿಗೆ ವರ ನೀಡಿ ರಕ್ಷಿಸುವರು. ಆಕೆ ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವಳು. ಇದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ.

ಕಾಲರಾತ್ರಿಯ ಕಥೆ

ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.


ತಾಯಿ ಕಾಲರಾತ್ರಿಯ ಪೂಜೆಯ ಪ್ರಾಮುಖ್ಯತೆ

ತಾಯಿ ಕಾಲರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವರು. ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.


ನವರಾತ್ರಿ 7ನೇ ದಿನ ತಾಯಿ ಕಾಲರಾತ್ರಿ ಪೂಜೆ

ಮಲ್ಲಿಗೆ ಹೂ ತಾಯಿ ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂ. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನದಿಂದ ತಾಯಿ ಕಾಲರಾತ್ರಿಯ ಪೂಜೆ ಮಾಡಬೇಕು. ಗಣಪತಿ ಪೂಜೆಯ ಬಳಿಕ ಷೋಡಸೋಪಚಾರ ಪೂಜೆಯನ್ನು ಕಾಲರಾತ್ರಿ ತಾಯಿಗೆ ಮಾಡಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.


ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ

ಓಂ ದೇವಿ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ

ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ

ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ

ತಾಯಿ ಕಾಲರಾತ್ರಿ ಪ್ರಾರ್ಥನೆ

ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ

ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ

ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ

ತಾಯಿ ಕಾಲರಾತ್ರಿ ಸ್ತುತಿ

ಯಾ ದೇವಿ ಸರ್ವಭುತೇಶ್ ಮಾ ಕಾಲರಾತ್ರಿ ರೂಪೇನಾ ಸಂಹಿತಾ

ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ

ಕಾಲರಾತ್ರಿ ದೇವಿ ಧ್ಯಾನ

ಕರಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ

ಕಾಲರಾತ್ರಿಮ್ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭಾಷಿತಂ

ದಿವ್ಯಾಂ ಲಾಹುವಾಜ್ರಾ ಖಡ್ಗ ವಮೊಘೋರ್ಧ್ವಾ ಕರಂಭುಜಮ್

ಅಭಯಂ ವರದಂ ಚೈವ ದಕ್ಷಿಣೋಧವಘಹ್ ಪರ್ಣಿಕಾಮ್ ಮಾಮ್

ಮಹಮೇಘ ಪ್ರಬಂಧ ಶ್ಯಾಮಮ್ ತಕ್ಷ ಚೈವಾ ಗಾರ್ದಭಾರುಧ

ಘೋರದಾಂಶ ಕರಾಲ್ಯಾಸಂ ಪಿನ್ನೊನಾತಾ ಪಯೋಧರಂ

ಸುಖ ಪ್ರಸನ್ನವಧನ ಶರ್ಮೆನ್ನಾ ಸರೊರುಹಮ್

ಇವಾಮ್ ಸಚಿಯಂತಾಯೆತ್ ಕಾಲರಾತ್ರಿಮ್ ಸರ್ವಕಂ ಸಮೃದ್ಧಿಂ


ತಾಯಿ ಕಾಲರಾತ್ರಿ ಸ್ತೋತ್ರ

ಹಿಮ್ ಕಲಾರತ್ರಿ ಶಿಮ್ ಕರಾಳಿ ಚಾ ಕ್ಲೈಮ್ ಕಲ್ಯಾಣಿ ಕಲಾವತಿ

ಕಲಾಮತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ

ಕಾಮಬಿಜಪಂದ ಕಮಬಿಜಸ್ವರ್ಪಿನಿ

ಕುಮತಿಘಿನಿ ಕುಲಿನಾರ್ನಾನಿಶಿ ಕುಲಾ ಕಾಮಿನಿ

ಕ್ಲಿಮ್ ಹ್ರಮ್ ಶ್ರೀಮಿ ಮಾಂತ್ರ್ವರ್ನೆನಾ ಕಲಾಕಂತಕಘಾತಿನಿ

ಕೃಪಮಾಯಿ ಕೃಪಾಧಾರ ಕೃಪಾಪಾರಾ ಕೃಪಾಗಾಮಾ


ಏಳನೇ ದಿನ ಕಾಲರಾತ್ರಿ ಕವಚ

ಓಂ ಕ್ಲಿಮ್ ಮಿ ಹೃದಯಂ ಪತು ಪದೂ ಶ್ರೀಕಾಲಾರಾತ್ರಿ

ಲಲೇತೆ ಸತತಂ ಪತು ತುಶ್ಗ್ರಾಘ ನಿವಾರಿಣಿ

ರಾಸನಮ್ ಪತು ಕೌಮರಿ, ಭೈರವಿ ಚಕ್ರಶೋರ್ಭಮಾ

ಕತೂ ಪ್ರಿಶ್ಥ್ ಮಹೇಶನಿ, ಕರ್ಣಶಂಕರಾಭಮಿಣಿ

ವರ್ಜಿತಾನಿ ತು ಸ್ತಾನಭಿ ಯಾನಿ ಚಾ ಕವಚೇನಾ ಹಾಯ್

ತನಿ ಸರ್ವಾನಿ ಮೀ ದೇವಿಸತಾಪಂಪತು ಸ್ಟ್ಯಾಂಬಿಣಿ


ಕಾಲರಾತ್ರಿ ದೇವಿಯ ಪೂಜೆಯ ಮಹತ್ವ

ಕಾಲರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಅವರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಗುಣವಾಗದ ರೋಗವು ಗುಣವಾಗುವುದು, ಮಾನಸಿಕ ಶಾಂತಿ ಹಾಗೂ ಸುಖ ನೀಡುವರು. ಆಕೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಒಳ್ಳೆಯತನ ಮತ್ತು ಸಮೃದ್ಧಿ ಕರುಣಿಸುವರು. ಇದೇ ವೇಳೆ ಎಲ್ಲಾ ರೀತಿಯ ಪಾಪ ನಿವಾರಣೆ ಮಾಡಿ ಸರಿಯಾದ ಮಾರ್ಗದಲ್ಲಿ ಸಾಗಲು ನೆರವಾಗುವರು. ನವರಾತ್ರಿಯ ಏಳನೇ ದಿನವನ್ನು ಮಹಾಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಪೂಜೆಯು ಆರಂಭವಾಗುವುದು.

8  ಮಹಾಗೌರಿ



ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿ ಸ್ವರೂಪವನ್ನು ಪೂಜಿಸುವುದರಿಂದ ಸಮಸ್ತ ಪಾಪಗಳ ನಾಶವಾಗುತ್ತದೆ. ಮಹಾಗೌರಿ ಸ್ವರೂಪವನ್ನು ಅನ್ನಪೂರ್ಣೆ ಎಂದು ಸಹ ಕರೆಯಲಾಗುತ್ತದೆ. ನವರಾತ್ರಿಯ ಎಂಟನೇ ದಿನ ದೇವಿಯ ಆರಾಧಕರ ಮನಸ್ಸು ಸೋಮ ಚಕ್ರದಲ್ಲಿ ಸ್ಥಿತವಾಗಿರುತ್ತದೆ


ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ(ಚಂದ್ರ ಕರಗುವ ಎಂಟನೇ ದಿನ)ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24ರಂದು ಶನಿವಾರ ಈ ದಿನವನ್ನು ಆಚರಿಸಲಾಗುತ್ತಿದೆ.


ದೇವಿ ಮಹಾಗೌರಿಯ ಪೂಜೆ(ನವರಾತ್ರಿ 8ನೇ ದಿನ)

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುವರು. ಆಕೆಯು ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ.


ತಾಯಿ ಮಹಾಗೌರಿಯ ಕಥೆ

ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.


ಮಹಾಗೌರಿ ತಾಯಿಯ ಪೂಜೆಯ ಮಹತ್ವ

ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.


ನವರಾತ್ರಿ ಎಂಟನೇ ದಿನ ಮಹಾಗೌರಿ ಪೂಜೆ

ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.


ಎಂಟನೇ ದಿನದಂದು ಮಹಾಗೌರಿ ತಾಯಿಯ ಮಂತ್ರ

ಓಂ ದೇವಿ ಮಹಾಗೌರೈ ನಮಃ

ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ

ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

8ನೇ ದಿನ ಮಹಾಗೌರಿ ಪ್ರಾರ್ಥನೆ

ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ

ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

ಮಹಾಗೌರಿ ಸ್ತುತಿ

ಯಾ ದೇವಿ ಸರ್ವಭುತೇಶ ಮಾ ಮಹಾಗೌರಿ ರುಪೇನ ಸಂಹಿತಾ


ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ


8ನೇ ದಿನ ಮಹಾಗೌರಿ ತಾಯಿಯ ಧ್ಯಾನ

ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ


ಸಿಮರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್

ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಮ ಮಹಾಗೌರಿ ತ್ರಿನೇತಂ


ವರಭೀತಿಕಾರಾಮ್ ತ್ರಿಶುಲಾ ದಮಾರುಧರಂ ಮಹಾಗೌರಿ ಭಜೆಮ್


ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ


ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್


ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ


ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ


ಮಹಾಗೌರಿ ಸ್ತೋತ್ರ

ಸರ್ವಾಸಂಕಟ ಹಂತ್ರಿ ತುವಂಹಿ ಧಾನ ಐಶ್ವರ್ಯ ಪ್ರದಾಯನಮ್

ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ

ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್

ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಾಣಮಾಮಯಂ

ತ್ರಿಲೋಕ್ಯಮಂಗಲ ತ್ವಮಹಿ ತಾಪತ್ರಯ ಹರಿನಿಮ್

ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಾಣಮಾಮಯಂ

ಪೂಜೆಯ ಮಹತ್ವ

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಬೇಕಾಗಿರುವ ಎಲ್ಲವನ್ನು ಆಕೆ ಕರುಣಿಸವಳು.


ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.

*********************  


9 ಸಿದ್ದಿದಾತ್ರಿ ಮಾತೆ 




ನವಮಿ

ನವರಾತ್ರಿಯ ಕಡೆಯ ದಿನ ದೇವಿ ಸಿದ್ಧಿರಾತ್ರಿಗೆ ಮೀಸಲು. ನೇರಳೆ ಬಣ್ಣವನ್ನು ಇಷ್ಟ ಪಡುವ ಈ ದೇವಿ ಜ್ಞಾನ ಮತ್ತು ಬುದ್ಧಿಯ ಪ್ರತೀಕ. ಅಂಜೂರದ ಯಾವುದಾದರೂ ಸಿಹಿ ತಯಾರಿಸಬಹುದು.


ನವರಾತ್ರಿಯ 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು. ಈ ದಿನವನ್ನು ತುಂಬಾ ಸಂಭ್ರಮ ಹಾಗೂ ಸಡಗರಿಂದ ಆಚರಣೆ ಮಾಡಲಾಗುತ್ತದೆ.

ದುರ್ಗಾದೇವಿಯು ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ.ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ಅವರು ಸಿಂಹವಾಹಿನಿಯಾಗುವರು. ಅವರ ಕೈಯಲ್ಲಿ ಶಂಖ, ರಾಜದಂಡ ಮತ್ತು ತಾವರೆಯಿರುವುದು.


ಸಿದ್ಧಿಧಾತ್ರಿ ತಾಯಿಯ ಕಥೆ

ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವರು. ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುವರು. ಇದಕ್ಕೆ ಮೊದಲು ಅವರು ತುಂಬಾ ಆಧ್ಯಾತ್ಮಿಕ ಸಾಧನೆ ಮಾಡಬೇಕಾಯಿತು. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.


ತಾಯಿ ಸಿದ್ಧಿಧಾತ್ರಿಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿರುವರು. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುವರು. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು. ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.


ಸಿದ್ಧಿಧಾತ್ರಿ ದೇವಿಯ ಪೂಜೆ

ತಾಯಿ ಸಿದ್ಧಿಧಾತ್ರಿ ಪೂಜೆಗೆ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತವಾಗಿರುವ ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿದ ಬಳಿಕ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಷೋಡಸೋಪಚಾರ ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು.


ನವರಾತ್ರಿಯ 9ನೇ ದಿನ ತಾಯಿ ಸಿದ್ಧಿಧಾತ್ರಿಯ ಮಂತ್ರಗಳು

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ

ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ


ತಾಯಿ ಸಿದ್ಧಧಾತ್ರಿ ದೇವಿಯ ಪ್ರಾರ್ಥನೆ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ

ಸಿದ್ಧಿಧಾತ್ರಿ ದೇವಿಯ ಸ್ತುತಿ

ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ನವರಾತ್ರಿ 9ನೇ ದಿನ ಸಿದ್ಧಿಧಾತ್ರಿ ದೇವಿಯ ದ್ಯಾನ

ವಂದೇ ವಂಚಿತ ಮನೋರಥಾರ್ಥ ಚಂದ್ರಧಕ್ರತ್ವಶೇಖರಂ

ಕಮಲಸ್ತಿತ್ ಚತುರ್ಭುಜಾ ಸಿದ್ದಿದಾತ್ರಿ ಯಾಶಸ್ವಿನೀಂ

ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ

ಶಂಖ, ಚಕ್ರ, ಗಧ, ಪದ್ಮಧರಂ ಸಿದ್ದಿದಾತ್ರಿ ಭಜೆಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಂ

ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ಪಿನ್ ಪಯೋಧರಂ

ಕಾಮನಿಯಮ್ ಲವಣಂ ಶ್ರೀನಾಕತಿ ನಿಮ್ನಾನಾಭಿ ನಿತಂಬನಿಂ


 ದೇವಿ ಸಿದ್ಧಿಧಾತ್ರಿ ಸ್ತೋತ್ರ

ಕಂಚನಾಭ ಶಂಖಚಕ್ರಗಧಪದ್ಮಾಧರ ಮುಕುಟೊಜ್ವಲೋ

ಶೆರ್ಮಮುಖಿ ಶಿವಪತ್ನಿ ಸಿದ್ಧಿಧಾತ್ರಿ ನಮೋಸ್ತುತೆ

ಪತಂಬರ ಪರಿಧನಂ ನಾನಾಲಂಕಾರ ಭೂಷಿತಂ

ನಲಿಸ್ಥಿತಂ ನಳನಾರಕ್ಷಿ ಸಿದ್ದಿಧಾತ್ರಿ ನಮೋಸ್ತುತೆ

ಪರಮಾನಂದಮಯಿ ದೇವಿ ಪರಬ್ರಹ್ಮಾ ಪರಮಾತ್ಮ

ಪರಮಾಶಕ್ತಿ, ಪರಮಾಭಕ್ತಿ, ಸಿದ್ದಿಧಾತ್ರಿ ನಮೋಸ್ತುತೆ

ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಾಪ್ರಿತ

ವಿಶ್ವ ವರ್ಚಿತಾ, ವಿಶ್ವವಿತಾ ಸಿದ್ದಿಧಾತ್ರಿ ನಮೋಸ್ತುತೆ

ಭುಕ್ತಿಮುಕ್ತಿಕರಿಣಿ ಭಕ್ತಕಾಷ್ಟಾನಿವಾರಿಣಿ

ಭವಸಾಗರ ತರಿಣಿ ಸಿದ್ದಿಧಾತ್ರಿ ನಮೋಸ್ತುತೆ

ಧರ್ಮಾರ್ಥಕಮಾ ಪ್ರದಾಯಿಣಿ ಮಹಾಮೋಹ ವಿನಾಶಿನಿಂ

ಮೋಕ್ಷದಾಯಿನಿ ಸಿದ್ಧಿದಾಯಿನಿ ಸಿದ್ದಿದಾತ್ರಿ ನಮೋಸ್ತುತೆ


 ಪೂಜೆಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯ ಎಲ್ಲಾ ದೇವರು, ರಾಕ್ಷಸರು, ಗಂಧರ್ವರು, ಯಕ್ಷರು ಮತ್ತು ಸಿದ್ಧಿಗಳಿಗೆ ಸಿದ್ಧಿಯನ್ನು ದಯಪಾಲಿಸುವರು. ಆಕೆ ಈಶ್ವರ ದೇವರಿಗಿಂತ ಭಿನ್ನವಾಗಿಲ್ಲ. ಯಾಕೆಂದರೆ ಈಶ್ವರದೇವರ ಅರ್ಧಭಾಗದಲ್ಲಿ ದೇವಿಯಿರುವರು. ಇದರಿಂದ ಈಶ್ವರ ದೇವರನ್ನು ಅರ್ಧನಾರೀಶ್ವರ ಎಂದು ಕರೆಯುವರು. ನವರಾತ್ರಿಯ 9ನೇ ದಿನದಂದು ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯವು ಭಕ್ತರಿಗೆ ಸಿಗುವುದು. ಇದರಿಂದ ವೃತ್ತಿ, ಶಿಕ್ಷಣ ಹಾಗೂ ಬೇರೆ ವಿಭಾಗದಲ್ಲಿ ಯಶಸ್ಸು ಪಡೆಯಬಹುದು.9ನೇ ದಿನ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನವನ್ನು ಮಹಾನವಮಿ ಎಂದು ಕರೆಯಲಾಗುವುದು. ಸಪ್ತಮಿಯಂದು ದೇವಿ ಸರಸ್ವತಿಯ ಪೂಜೆಯು ಆರಂಭವಾಗಿ ನವಮಿಯಂದು ಕೊನೆಯಾಗುವುದು.

 ಪ್ರಥಮಂ ಶೈಲಪುತ್ರೀತಿ 

ದ್ವಿತೀಯಂ ಬ್ರಹ್ಮಚಾರಿಣೀ

ತೃತೀಯಂ ಚಂದ್ರಘಂಟೀತಿ 

ಕೂಷ್ಮಾಂಡೇತಿ ಚತುರ್ಥಕಮ್ 

ಪಂಚಮಂ ಸ್ಕಂದ ಮಾತೇತಿ 

ಷಷ್ಠಂ ಕಾತ್ಯಾಯನೀತಿ ಚ 

ಸಪ್ತಮಂ ಕಾಲರಾತ್ರಿಶ್ಚ 

ಮಹಾಗೌರೀತಿ ಚಾಷ್ಟಮಮ್

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ



 18 ಸಿದ್ಧಿಗಳ ಒಡತಿ ಸಿದ್ಧಿಧಾತ್ರೀ


ಸಿದ್ಧರು, ಗಂಧರ್ವರು, ಯಕ್ಷರು, ಅಸುರರು, ಸುರರು ಹೀಗೆ ಎಲ್ಲರಿಂದಲೂ ಪೂಜಿಸಲ್ಪಡುವವಳು, ಸಿದ್ಧಿಗಳನ್ನು ಅನುಗ್ರಹಿಸುವವಳು, ನವರಾತ್ರಿ ಪರ್ವದ ಒಂಭತ್ತನೆಯ ದಿನ ಎಲ್ಲೆಡೆ ಪೂಜಿಸಲ್ಪಡುವವಳು ಸಿದ್ದಿಧಾತ್ರೀ. ಸಿಂಹವಾಹನೆ, ಚತುರ್ಭುಜೆಯಾಗಿರುವ ಇವಳು ಕಮಲಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ.


ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯಪ್ರವೇಶ, ವಾಕ್‌ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರ ಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯತತ್ವ, ಭಾವನಾ ಮತ್ತು ಸಿದ್ಧಿ ಈ ಹದಿನೆಂಟು ಸಿದ್ಧಿಗಳನ್ನು ಅನುಗ್ರಹಿಸುವವಳು ಸಿದ್ಧಿಧಾತ್ರೀ. ಮಹಾಶಿವನು ಸಿದ್ಧಿಧರ. ಎಲ್ಲಾ ಸಿದ್ಧಿಗಳನ್ನು ತಿಳಿದುಕೊಂಡವನು. ಮಾತೆ ಸಿದ್ದಿಧಾತ್ರೀಯನ್ನು ಆರಾಧಿಸಿ ಗಳಿಸಿಕೊಂಡ ಸಿದ್ಧಿಗಳವು. ಇವಳ ಅನುಕಂಪದಿಂದಲೇ ಮಹಾಶಿವನ ಅರ್ಧ ಶರೀರವು ದೇವಿಯದಾಗಿತ್ತು. ಇದರಿಂದಾಗಿ ಅವನು ಅರ್ಧನಾರೀಶ್ವರ ಎಂದು ಪ್ರಸಿದ್ಧ್ಧನಾದನು.


ಈ ಎಂಟು ದಿನಗಳಲ್ಲಿ ಮಹಾಮಾತೆಯ ಆರಾಧನೆ ಪೂಜೆ, ಸೇವೆ, ಸತ್ಸಂಗ, ಉಪವಾಸವ್ರತ, ಶರಣುಭಾವ ಹೀಗೆ ನವವಿಧ ಭಕ್ತಿಗಳ ಮೂಲಕ ಮಾಡಿದ್ದಾಯಿತು. ನಮ್ಮ ಸುಪ್ತಮನಸ್ಸನ್ನು ಆಧ್ಯಾತ್ಮಿಕ ಪಥದತ್ತ ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾಯಿತು. ನಾವೆಷ್ಟೇ ಅಂದುಕೊಂಡರೂ ಎಲ್ಲವನ್ನೂ ಕರುಣಿಸುವ ಕರುಣಾಮಯಿ ಅವಳೇ ತಾನೇ. ಕೊಡುವ ಕೈಯ ಕೆಳಗೆ ಮಂಡಿಯೂರಿ ಕುಳಿತು ಧನ್ಯತಾಭಾವದಿಂದ ಅಂಗೈಗಳನ್ನು ಜೋಡಿಸಿಕೊಂಡು ಬೇಡುವ ವಿನಯವಂತಿಕೆ ನಮಗಿದ್ದರೆ ಮಾತ್ರ ಇಷ್ಟು ದಿನ ಮಾಡಿದ ತಪಸ್ಸಿಗೆ ಫಲ ಸಿಕ್ಕೀತು.

ಸಿದ್ಧಿಧಾರ್ತೈ ನಮ:


***************** 


10 ದಿನ ದಸರಾ..!


ವಿಜಯದಶಮಿ ಎಂದೂ ಕರೆಯಲ್ಪಡುವ ದಸರಾ, ದಾಸರ ಅಥವಾ ದಶೈನ್ ಹಬ್ಬವನ್ನು ದೇಶಾದ್ಯಂತ ಹೆಚ್ಚು ಉತ್ಸಾಹದಿಂದ ಆಚರಿಸಲಾಗುವ ಅತ್ಯಂತ ಮಹತ್ವದ ಹಿಂದೂ ಹಬ್ಬವಾಗಿದೆ. ಇದು ನವರಾತ್ರಿ ಹಬ್ಬದ ಅಂತ್ಯವನ್ನು ಸೂಚಿಸುತ್ತದೆ ಮತ್ತು ಒಂಬತ್ತು ರಾತ್ರಿ ಪೂಜೆಯ ನಂತರ ಭಕ್ತರು ಮಾ ದುರ್ಗಾದ ವಿಗ್ರಹವನ್ನು ಮುಳುಗಿಸುವ ದಿನವಾಗಿದೆ.ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನ ಅಥವಾ ಕಾರ್ತಿಕ ಮಾಸದಲ್ಲಿನ (ಸೆಪ್ಟೆಂಬರ್ ಮತ್ತು ಅಕ್ಟೋಬರ್) ಹತ್ತನೇ ದಿನ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ, 2020 ಅಕ್ಟೋಬರ್ 25 ರ ಭಾನುವಾರದಂದು ದಸರಾ ಅಥವಾ ವಿಜಯದಶಮಿ ಹಬ್ಬವನ್ನು ಆಚರಿಸಲಾಗುವುದು 


2020 ವಿಜಯದಶಮಿ ಅಥವಾ ದಸರಾ ಹಬ್ಬದ ಶುಭ ದಿನ ಮತ್ತು ಶುಭ ಮುಹೂರ್ತ:

ಶುಭ ದಿನಾಂಕ: 2020 ಅಕ್ಟೋಬರ್ 25 ರಂದು ಭಾನುವಾರ.

ವಿಜಯ ಮುಹೂರ್ತ: ಮಧ್ಯಾಹ್ನ 1:57 ರಿಂದ ಮಧ್ಯಾಹ್ನ 2:42 ರವರೆಗೆ

ಅಪರಾಹ್ಮ ಪೂಜಾ ಸಮಯ: ಮಧ್ಯಾಹ್ನ 1:12 ರಿಂದ ಮಧ್ಯಾಹ್ನ 3:27 ರವರೆಗೆ

ದಶಮಿ ತಿಥಿ ಪ್ರಾರಂಭ: 2020 ಅಕ್ಟೋಬರ್‌ 25 ರಂದು ಭಾನುವಾರ ಬೆಳಗ್ಗೆ 7:41 ರಿಂದ

ದಶಮಿ ತಿಥಿ ಮುಕ್ತಾಯ: 2020 ಅಕ್ಟೋಬರ್‌ 26 ರಂದು ಸೋಮವಾರ ಬೆಳಗ್ಗೆ 9:00 ಗಂಟೆಯಿಂದ


ವಿಜಯದಶಮಿ ಅಥವಾ ದಸರಾ ಮಹತ್ವ:

ರಾಮ, ಸೀತೆ ಮತ್ತು ಲಕ್ಷ್ಮಣರ ಕಥೆಯ ಸಂಕ್ಷಿಪ್ತ ಆವೃತ್ತಿಯಾದ ರಾಮಲೀಲಾದ ಅಂತ್ಯವನ್ನು ದಸರಾ ಸೂಚಿಸುತ್ತದೆ. ಭಗವಾನ್‌ ರಾಮನು ರಾವಣನ ವಿರುದ್ಧ ಜಯಗಳಿಸಿದ ನೆನಪನ್ನು ಇದು ಮರುಕಳಿಸುತ್ತದೆ. ದಸರಾ ಅಥವಾ ವಿಜಯದಶಮಿಯಂದು ಕೆಟ್ಟದ್ದನ್ನು ಸೂಚಿಸುವ ರಾವಣ, ಕುಂಭಕರ್ಣ, ಮೇಘನಾದರ ಅತ್ಯುನ್ನತ ಪ್ರತಿಮೆಗಳನ್ನು ರಚಿಸಿ ಅದನ್ನು ಸುಡಲಾಗುತ್ತದೆ. ದುಷ್ಟರ ವಿರುದ್ಧ ವಿಜಯವನ್ನು ಸಾಧಿಸುವ ಹಬ್ಬವೇ ವಿಜಯದಶಮಿಯಾಗಿದೆ.


ದಸರಾ ಅಥವಾ ವಿಜಯದಶಮಿ ಹಬ್ಬವು ನವರಾತ್ರಿ ಹಬ್ಬದ ಮುಕ್ತಾಯವನ್ನು ಸೂಚಿಸುವುದರೊಂದಿಗೆ ದೀಪಾವಳಿಯ ಆಗಮನವನ್ನೂ ಕೂಡ ಸೂಚಿಸುತ್ತದೆ, ದಸರಾ ಆಚರಣೆಯ ನಂತರದ 20 ದಿನಗಳಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.


ವಿಜಯದ ಸಂಕೇತವಾಗಿರುವ ಈ ಹಬ್ಬವನ್ನು ಅರಿಷಡ್ವರ್ಗಗಳ ಮೇಲಿನ ಜಯವೆಂದು ಭಾವಿಸಿ ಸಾಧಕನು ಸಂಪೂರ್ಣ ತೃಪ್ತಿಯಿಂದ ತಾಯಿಯ ಆರಾಧನೆ ಮಾಡಿ ತೃಪ್ತನಾಗಬೇಕು.

*****************

ಅಂಬಾರಿ

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ.ಒಮ್ಮೆ ಓದಿ 🎠🎠🎠ಮೈಸೂರು ದಸರ ಎಂದರೆ ಅದು ಕನ್ನಡ ನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ, ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹು ಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ‌. ಜಂಬೂ ಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ.


ಅಂಬಾರಿಯ ಇತಿಹಾಸ ಬಹಳ ರೋಚಕವಾಗಿದೆ. ಮೂಲತಃ ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ.


ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲ ರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನು ರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀ ರಂಗಪಟ್ಟಣ್ಣ ವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.


ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ

 ********************************************

ನವರಾತ್ರಿಯ ಒಂಭತ್ತು ಬಣ್ಣಗಳ ಮಹತ್ವ

ದುರ್ಗಾ ದೇವಿಯು ಒಂಬತ್ತು ದಿನಗಳ ಕಾಲ ಒಂಬತ್ತು ಬಗೆಯ ಅವತಾರದಲ್ಲಿ ವಿಭಿನ್ನ ಬಣ್ಣಗಳನ್ನು ಪ್ರತಿನಿಧಿಸುತ್ತಾಳೆ. ಆ ಪ್ರತಿಯೊಂದು ಬಣ್ಣವು ಒಂದೊಂದು ವಿಶೇಷ ಧಾರ್ಮಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿಯೇ ಒಂಬತ್ತು ದಿನಗಳ ಕಾಲ ಆಯಾ ಅವತಾರಗಳಿಗೆ ಸಂಬಂಧಿಸಿದಂತೆ ತಾಯಿಗೆ ಲೇಪನ, ವಸ್ತ್ರಾಲಂಕಾರ ಹಾಗೂ ಪೂಜೆಯನ್ನು ಸಲ್ಲಿಸಲಾಗುವುದು. ಆಯಾ ಅವತಾರಗಳಿಗೆ ತಕ್ಕಂತೆ ದೇವಿಯನ್ನು ಸಿಂಗರಿಸಿ ಪೂಜೆ ಮಾಡುವುದರಿಂದ ಭಕ್ತರ ಬದುಕಲ್ಲಿ ಶ್ರೇಯಸ್ಸು, ಶಾಂತಿ ಹಾಗೂ ನೆಮ್ಮದಿ ನೆಲೆಸುವುದು ಎಂದು ಹೇಳಲಾಗುತ್ತದೆ.

1. ಶೈಲಪುತ್ರಿ-ಕಿತ್ತಳೆಬಣ್ಣ

ಶೈಲಪುತ್ರಿ ಪಾರ್ವತಿ ದೇವಿಯ ಅವತಾರ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರ ಸಾಮೂಹಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ದೇವಿಯ ಈ ಅವತಾರವು ಪ್ರಕೃತಿ ಮತ್ತು ಶುದ್ಧತೆಯ ಗುಣಲಕ್ಷಣಗಳ ಸಂಕೇತ. ಹಾಗಾಗಿ ನವರಾತ್ರಿಯ ಮೊದಲನೇ ದಿನ ಕಿತ್ತಳೆವನ್ನು ಧರಿಸಬೇಕು.

2. ಬ್ರಹ್ಮಚಾರಿಣಿ-ಬಿಳಿ ಬಣ್ಣ

ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ

3. ಚಂದ್ರಘಂಟ-ಕೆಂಪು ಬಣ್ಣ

ಚಂದ್ರಘಂಟ ಎಂದರೆ ಸುಂದರವಾದ ಸೌಂದರ್ಯವನ್ನು ಹೊಂದಿರುವ ರೂಪ. ಕೆಂಪು ಬಣ್ಣದಲ್ಲಿ ಕಂಗೊಳಿಸುವ ದೇವಿಯು ಅನುಗ್ರಹ ಮತ್ತು ನೆಮ್ಮದಿಯನ್ನು ಕರುಣಿಸುತ್ತಾಳೆ . ಸೌಂದರ್ಯ ಮತ್ತು ಧೈರ್ಯದ ಸಂಕೇತವಾಗಿ ಈ ಅವತಾರದಲ್ಲಿ ದೇವಿ ಅವತರಿಸಿದಳು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ದಿನ ದೇವಿಗೆ ಕೆಂಪು ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ

4. ಕೂಷ್ಮಾಂಡ-ಗಾಢ ನೀಲಿ ಬಣ್ಣ

ಕೂಷ್ಮಾಂಡ ಅವತಾರವನ್ನು ಬ್ರಹ್ಮಾಂಡದ ಹಿಂದಿನ ಶಕ್ತಿ ಎಂದು ನಂಬಲಾಗಿದೆ. ಜಗತ್ತನ್ನು ಹಸಿರು ಸಸ್ಯವರ್ಗ, ಜೀವನದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸುಂದರ ಮಂದಹಾಸದ ಮೂಲಕವೇ ಭಕ್ತರ ಅಗತ್ಯತೆಗಳನ್ನು ನೆರವೇರಿಸುವಳು ಎನ್ನಲಾಗುತ್ತದೆ. ಆದ್ದರಿಂದ ಈ ದಿನ ದೇವಿಗೆ ಗಾಢ ನೀಲಿ ಬಣ್ಣದ ಸೀರೆಯಿಂದ ಅಲಂಕಾರ ಮಾಡುವುದರ ಮೂಲಕ ಪೂಜೆ ಮಾಡಲಾಗುವುದು.

5. ಸ್ಕಂದ ಮಾತಾ-ಹಳದಿ ಬಣ್ಣ

ಸ್ಕಂದ ಮಾತಾ ಅವತಾರವು ಕಾರ್ತಿಕೇಯನ ತಾಯಿಯ ಅವತಾರ. . ದುಷ್ಟ ರಾಕ್ಷಸನ ಸಂಹಾರಕ್ಕೆ ಅವತರಿಸಿ ಬಂದ ಈ ಅವತಾರವು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ. ಸ್ಕಂದ ಮಾತೆಯನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಈ ದಿನ ಭಕ್ತರು ಹಳದಿ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

6. ಕಾತ್ಯಾಯನಿ- ಹಸಿರು ಬಣ್ಣ

ದೇವಿಯ ಕಾತ್ಯಾಯನಿ ಅವತಾರವು ಅತ್ಯಂತ ಧೈರ್ಯಶಾಲಿಯ ಅವತಾರ. ಕಾತ್ಯಾಯನ್‌ ಋಷಿಯ ಮಗಳಾಗಿ ಜನಿಸಿದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಹಬ್ಬದ ಆರನೇ ದಿನ ಹಸಿರು ಬಣ್ಣದ ವಿಶೇಷ ಲೇಪನ ಹಾಗೂ ಅಲಂಕಾರಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನ ಹಸಿರು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

7. ಕಾಲರಾತ್ರಿ-ಬೂದು ಬಣ್ಣ

ದೇವಿಯ ಒಂಬತ್ತು ಅವತಾರದಲ್ಲಿ ಈ ಅವತಾರವೂ ಅತ್ಯಂತ ಶಕ್ತಿಶಾಲಿಯಾದ ಅವತಾರ. ಅದು ದೇವಿ ಕಾಳಿಯ ರೂಪದಲ್ಲಿ ಅವತರಿಸಿ ಬಂದ ದಿನ. ಈ ಅವತಾರದಲ್ಲಿ ಅಧಿಕ ಶಕ್ತಿಯನ್ನು ಹೊಂದಿರುವ ಭಂಗಿ ಹಾಗೂ ಮೂರು ಕಣ್ಣುಗಳನ್ನು ಹೊಂದಿದ್ದಳು ಎನ್ನಲಾಗುತ್ತದೆ. ಅವಳ ಪ್ರತಿ ಉಸಿರಿನಲ್ಲೂ ಬೆಂಕಿಯನ್ನು ಹೊರಹಾಕುತ್ತಿದ್ದಳು. ಇದು ತಾಯಿಯ ಭೀಕರ ರೂಪ. ತನ್ನ ಭಕ್ತರ ಎಲ್ಲಾ ಸಂಕಷ್ಟಗಳನ್ನು ಹಾಗೂ ಜೀವನದಲ್ಲಿ ಬರುವ ಎಲ್ಲಾ ಋಣಾತ್ಮಕ ಅಂಶಗಳನ್ನು ತೊಡೆದು ಹಾಕುವವಳು ಈ ತಾಯಿ. ಹಾಗಾಗಿ ಈ ದಿನ ಬೂದು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.
8. ಮಹಾ ಗೌರಿ-ಗುಲಾಬಿ ಬಣ್ಣ
ದುರ್ಗಾ ದೇವಿಯ ಈ ಅವತಾರ ಬುದ್ಧಿವಂತಿಕೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಪುರಾಣ ಕಥೆಗಳ ಪ್ರಕಾರ ಅವಳು ಹಿಮಾಲಯದ ಕಾಡುಗಳಲ್ಲಿ ಇದ್ದುದರಿಂದ ಅವಳ ಬಣ್ಣ ಅತ್ಯಂತ ಕಪ್ಪು ಬಣ್ಣದಿಂದ ಕೂಡಿತ್ತು ಎನ್ನಲಾಗುತ್ತದೆ. ಶಿವನು ಗಂಗಾ ನೀರಿನಿಂದ ಅವಳ ದೇಹವನ್ನು ಶುದ್ಧೀಕರಿಸಿದನು. ನಂತರ ಅವಳ ಸೌಂದರ್ಯವು ಅತ್ಯಂತ ಸುಂದರ ಹಾಗೂ ಹೊಳಪಿನಿಂದ ಮಾರ್ಪಟ್ಟಿತು. ಆಶಾವಾದದ ಬಣ್ಣವಾದ ಗುಲಾಬಿ ಬಣ್ಣದ ಸೀರೆಯನ್ನು ತೊಟ್ಟಿದ್ದಳು. ಹಾಗಾಗಿ ಈ ದಿನ ದೇವಿಗೆ ಗುಲಾಬಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಸಲ್ಲಿಸಲಾಗುತ್ತದೆ.
9. ಸಿದ್ಧಿಧಾತ್ರಿ- ಆಕಾಶ ನೀಲಿ ಬಣ್ಣ
ಇದು ದೇವಿಯ ಕೊನೆಯ ಅವತಾರ. ಈ ದಿನವು ಹಬ್ಬದ ಕೊನೆಯ ದಿನ. ಈ ಅವತಾರವು ಸಂತೋಷ, ಆಶೀರ್ವಾದ ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಎಲ್ಲಾ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದವಳು ಈಕೆ. ಶುದ್ಧವಾದ ಆಕಾಶ ನೀಲಿಯ ಬಣ್ಣದಂತೆ ಆನಂದದಿಂದ ಹರಸುತ್ತಾಳೆ. ಹಾಗಾಗಿ ಈ ದಿನದಂದು ತಾಯಿಗೆ ಆಕಾಶ ನೀಲಿ ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರೂ ಈ ದಿನ ನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕು

No comments:

Post a Comment