Popular Posts

Sunday, 6 June 2021

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾ

 

ದೇಹ ಜೀರ್ಣವಾಯಿತು ಧನದಾಹ ಜೀರ್ಣವಾಗದು ಕೃಷ್ಣಾs I

ಅಯ್ಯಾ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಸೆ ಮಂದವಾಗದು ಕೃಷ್ಣಾs I

ಕಾಲು ಕೈ ಜವಗುಂದಿದವು ಭೋಗಲೋಲತೆ ಜವಗುಂದವು ಕೃಷ್ಣಾs I

ಜರೆ ರೋಗದಿಂದ ನೆರೆಹೊರೆ ಹೇಸಿತು ಶರೀರದಲ್ಲಿ ಹೇಸಿಕೆ ಇನಿತಿಲ್ಲ I

ನನ್ನ ದೇಹ ಪಾಪಕೋಟಿಗಳ ಮಾಡಿದರಿನ್ನು ತಾಪ ಮನದೊಳಗಿನಿತಿಲ್ಲ I

ಹೀಗೆ ಸಂದು ಹೋಯಿತು ಕಾಲವೆಲ್ಲವು ಮುಂದಣಗತಿ ದಾರಿ ತೋರದು ಕೃಷ್ಣಾss I

ಅನಾದಿಯಿಂದ ನಿನ್ನವನೆನಿಸಿದೆ ಎನ್ನ ಕುಂದು ನಿನ್ನದಲ್ಲವೆ ಇನ್ನಾದರು ದಯೆಯಿಂದೆನ್ನ ನೋಡಿ ಮನ್ನಿಸಬೇಕಯ್ಯ ಸಿರಿಕೃಷ್ಣಾss II

----
ಶ್ರೀ ವ್ಯಾಸರಾಜರ ರಚನೆಯ ಒಂದು ಅದ್ಭುತವಾದ ಕೃತಿ ( ಉಗಾಭೋಗ

Sunday, 16 May 2021

ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

 ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ...

ಇದು ಕೇವಲ ಧಾರ್ಮಿಕ ಅಥವಾ ದೈವಿಕ ಮಹತ್ವವನ್ನು ಮಾತ್ರ ಪಡೆದಿಲ್ಲ. ಬದಲಿಗೆ ಶರೀರದ ತೇಜೋಶಕ್ತಿಯನ್ನು ಹೆಚ್ಚಿಸಲು ಧ್ವನಿ, ಶ್ವಾಸ ಮತ್ತು ಲಯಬದ್ಧತೆಯಿಂದ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ಸಾಧ್ಯ. ಲವಲವಿಕೆಯ ಜೀವನಶೈಲಿಗೆ 'ಓಂಕಾರ ಮಂತ್ರ ಪಠಿಸಿ'

ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಂತ್ರಗಳನ್ನು ಹೇಗೆ ಪಠಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಮಂತ್ರಗಳನ್ನು ಮೂಲತಃ ವೇದಗಳಲ್ಲಿ ಬರೆಯಲಾಗಿದ್ದು ಪ್ರತಿ ಮಂತ್ರವೂ 24 ಉಚ್ಛಾರಗಳನ್ನು ಹೊಂದಿದೆ. ಪ್ರತಿ ಉಚ್ಛಾರವೂ ದೇಹದ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೇತೋಹಾರಿಯಾಗಿದೆ, ಮುಂದೆ ಓದಿ...

*ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ*

ಕೆಲವು ಮಂತ್ರಗಳ ಪಠಣ ಕಷ್ಟಕರವಾಗಿದ್ದು ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದರೊಂದಿಗೆ ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿಸಲು ಅಗತ್ಯವಾದ ಇತರ ಅಂಗಗಳಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಮಂತ್ರಪಠಣದ ಮೂಲಕ ಉಂಟಾಗುವ ಕಂಪನ ಹೈಪೋಥಲಮಸ್ ಎಂಬ ಗ್ರಂಥಿಯನ್ನು ಪ್ರಚೋದಿಸುತ್ತದೆ.

ಈ ಪ್ರಚೋದನೆಯಿಂದ ಸ್ರವಿಸುವ ಹಾರ್ಮೋನುಗಳು ದೇಹದ ಹಲವು ಕಾರ್ಯಗಳಿಗೆ ಅಗತ್ಯವಾಗಿದ್ದು ರೋಗ ನಿರೋಧಕ ಶಕ್ತಿಯೂ ಇದರಲ್ಲೊಂದಾಗಿದೆ. ಮನಸ್ಸನ್ನು ಸಂತೋಷಕರವಾಗಿರಿಸಲು ಅಗತ್ಯವಿರುವ ಹಾರ್ಮೋನುಗಳೂ ಬಿಡುಗಡೆಯಾಗುತ್ತವೆ. ಆದ್ದರಿಂದ ಮಂತ್ರೋಚ್ಛಾರಣೆಯ ಬಳಿಕ ಒಂದು ರೀತಿಯ ಆಹ್ಲಾದತೆ, ತನ್ಮಯತೆ ಮತ್ತು ಪರವಶತೆಯನ್ನು ಅನುಭವಿಸಬಹುದು. ಮನ ಆನಂದದಿಂದ ಇದ್ದಷ್ಟೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ಇನ್ನಷ್ಟು ಉತ್ತಮವಾಗುತ್ತದೆ.

*ಮನಸ್ಸು ನಿರಾಳವಾಗುತ್ತದೆ*

ಮನಸ್ಸು ಉದ್ವೇಗಗೊಂಡಿದ್ದಾಗ ಮನಸ್ಸಿನ ಚಿತ್ತವನ್ನು ಬೇರೆಡೆಗೆ ಹೊರಳಿಸಿ ಎಂದು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಆದರೆ ಇದು ಹೇಳಿದಷ್ಟು ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ. ಆದರೆ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.

ಬಳಿಕ ತಣ್ಣನೆಯ ಮನಸ್ಸಿನಿಂದ ಸಮಸ್ಯೆಯನ್ನು ಅವಲೋಕಿಸಿ ಉತ್ತಮವಾದ ನಿರ್ಧಾರ ತಳೆಯಲು ಸಾಧ್ಯವಾಗುತ್ತದೆ. ಈ ವಿಧಾನ ಒಂದು ತರಹ ಟ್ರಾಂಕ್ವಿಲೈಸರ್ ನಂತೆ ಕೆಲಸ ಮಾಡುತ್ತದೆ.

*ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ*

ನಮ್ಮ ದೇಹದಲ್ಲಿ ಹಲವು ಶಕ್ತಿಕೇಂದ್ರಗಳಿವೆ. ಇವನ್ನು ಚಕ್ರಗಳು ಎಂದು ಕರೆಯಲಾಗುತ್ತದೆ. ದೇಹದ ಸಮರ್ಪಕ ಕಾರ್ಯನಿರ್ವಹಣೆಗಾಗಿ ಈ ಚಕ್ರಗಳಿಂದ ಸೂಕ್ತ ಪ್ರಮಾಣದ ಶಕ್ತಿ ಪ್ರವಹಿಸುತ್ತಾ ಇರಬೇಕು. ಒಂದು ವೇಳೆ ಈ ಶಕ್ತಿಗಳ ಪ್ರಮಾಣದಲ್ಲಿ ಏರುಪೇರಾದರೆ ದೇಹದ ಕಾರ್ಯನಿರ್ವಹಣೆಯೂ ಏರುಪೇರಾಗುತ್ತದೆ.
ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆಗಳು ಎದುರಾಗುತ್ತವೆ. ಮಂತ್ರಪಠಣದಿಂದ ಈ ಚಕ್ರಗಳ ಶಕ್ತಿಗಳು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ದೇಹ ಕಾಯಿಲೆಯಿಲ್ಲದ ಉತ್ತಮ ಆರೋಗ್ಯವನ್ನು ಹೊಂದುತ್ತದೆ.

*ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ*

ಒಂದು ಹೊತ್ತಿನಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಿ ಎಂದು ಸುಭಾಷಿತವೊಂದು ಹೇಳುತ್ತದೆ. ಒಂದು ಕಾಲದಲ್ಲಿ ಒಂದು ಕೆಲಸದತ್ತ ತಮ್ಮ ಪೂರ್ಣಪ್ರಮಾಣದ ಗಮನವನ್ನು ಹರಿಸುವುದಕ್ಕೇ ಏಕಾಗ್ರತೆ ಎಂದು ಕರೆಯುತ್ತಾರೆ. ಮಂತ್ರಪಠಣದಿಂದ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ.

ಏಕೆಂದರೆ ಮಂತ್ರಪಠಣ ಸಮರ್ಪಕವಾಗಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಮಂತ್ರಪಠಣ ಸಾಧ್ಯವಾದರೆ ಬೇರೆಲ್ಲಾ ಕೆಲಸಗಳಿಗೂ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ. ಇದರಿಂದಾಗಿ ಹೊಸ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ. ಜಾಣ್ಮೆ, ಸ್ಮರಣಶಕ್ತಿ, ಮೇಧಾವಿತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

*ಹೃದಯದ ಕ್ಷಮತೆ ಹೆಚ್ಚುತ್ತದೆ*

ಮಂತ್ರಪಠಣದ ಮೂಲಕ ವ್ಯಗ್ಯಗೊಂಡಿದ್ದ ಮೆದುಳು ಅತಿ ಕ್ಷಿಪ್ರವಾಗಿ ನಿರಾಳವಾಗುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ. ವ್ಯಗ್ರಗೊಂಡಿದ್ದ ಸಮಯದಲ್ಲಿ ಮೆದುಳು ಅಪಾರವಾದ ಪ್ರಮಾಣದ ರಕ್ತವನ್ನು ಬೇಡುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ.

ಕೆಟ್ಟ ಸುದ್ದಿ ಕೇಳಿದ ಸಮಯದಲ್ಲಿ ಹೃದಯಾಘಾತವಾಗಿ ಮರಣಗಳು ಸಂಭವಿಸುವುದೂ ಇದೇ ಕಾರಣಕ್ಕೆ. ಮಂತ್ರಪಠಣದ ಮೂಲಕ ಮೆದುಳನ್ನು ನಿರಾಳಗೊಳಿಸಿ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಯಾಗಿಸಿ ಆಯಸ್ಸು ಹೆಚ್ಚಿಸಬಹುದು.

*ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ*

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಕಾರಣದಿಂದಾಗಿ ಎದುರಾಗುವ ಉದ್ವೇಗ, ದುಗುಡಗಳನ್ನೂ ಮಂತ್ರಪಠಣದಿಂದ ಕಡಿಮೆಯಾಗಿಸಿಕೊಳ್ಳಬಹುದು. ನಿಯಮಿತವಾಗಿ ಮಂತ್ರವನ್ನು ಪಠಿಸುತ್ತಾ ಬರುವ ಮೂಲಕ ಒತ್ತಡ ಮೂಲಕ ಮೆದುಳಿಗೆ ಮತ್ತು ದೇಹಕ್ಕೆ ಆಗಿದ್ದ ಘಾಸಿಯನ್ನು ಕಡಿಮೆಗೊಳಿಸಿ ಮೊದಲಿನ ಆರೋಗ್ಯವನ್ನು ಮತ್ತೊಮ್ಮೆ ಪಡೆಯಬಹುದು.

*ಖಿನ್ನತೆಯನ್ನು ನಿವಾರಿಸುತ್ತದೆ*

ಬದುಕಿನ ಸೋಲು ಅಥವಾ ಈಡೇರದ ಯಾವುದೋ ಬಯಕೆ ಹೆಚ್ಚಿನವರಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವು ಕಂಡುಬರುತ್ತದೆ. ಈ ಹೊತ್ತಿನಲ್ಲಿ ಮಂತ್ರ ಪಠಿಸುವ ಮೂಲಕ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.

ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ. ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನುಗಳ ಪ್ರಭಾವದಿಂದ ಇದು ಸಾಧ್ಯವಾಗುತ್ತದೆ.

*ತೇಜಸ್ಸನ್ನು ಹೆಚ್ಚಿಸುತ್ತದೆ*

ಮಂತ್ರೋಚ್ಛಾರಣೆಯ ಕಾಲದಲ್ಲಿ ಉಂಟಾಗುವ ಕಂಪನಗಳು ಮುಖದ ಕೆಲವು ಪ್ರಮುಖ ಭಾಗಗಳಲ್ಲಿ ಹೆಚ್ಚಿನ ಪ್ರಚೋದನೆ ಮೂಡಿಸಿ ಈ ಭಾಗಗಳಲ್ಲಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಇಲ್ಲಿನ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತದೆ ಮತ್ತು ಆ ಸ್ಥಳದಲ್ಲಿ ಹೊಸ ರಕ್ತ ಮತ್ತು ಶಕ್ತಿ ತುಂಬಿಕೊಳ್ಳುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸಬೇಕಾದ ಅನಿವಾರ್ಯತೆ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ತನ್ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತೇಜಸ್ಸು ಸಹಾ ಹೆಚ್ಚುತ್ತದೆ.

*ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ*

ಶ್ವಾಸನಾಳಗಳು ಕಿರಿದಾಗಿದ್ದು ಇದರ ಮೂಲಕ ಎದುರಾಗುವ ಅಸ್ತಮಾ ರೋಗಕ್ಕೂ ಮಂತ್ರಗಳ ಪಠಣ ತಕ್ಕಮಟ್ಟಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಶ್ವಾಸಕೋಶದಿಂದ ಹೊರಟ ವಾಯು ಕೊಂಚ ಹೆಚ್ಚಿನ ಒತ್ತಡದಲ್ಲಿ ಶ್ವಾಸನಾಳಗಳ ಮೂಲಕ ಹೊರಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಸಂಕುಚಿತಗೊಂಡಿದ್ದ ಶ್ವಾಸನಾಳಗಳು ಒಳಗಿನಿಂದ ಹಿಗ್ಗಲು ಸಾಧ್ಯವಾಗುತ್ತದೆ. ಇದು ತಕ್ಕಮಟ್ಟಿಗೆ ಅಸ್ತಮಾ ರೋಗವನ್ನು ನಿವಾರಿಸಲು ನೆರವಾಗುತ್ತದೆ.

Friday, 9 April 2021

ಪೂರ್ವ ಜನ್ಮದ ಸುಕೃತಗಳು

ಪೂರ್ವ ಜನ್ಮದ ಸುಕೃತಗಳು

ಆಯುಃ ,ಕರ್ಮ ಚ, ವಿತ್ತಂಚ , ವಿದ್ಯಾ , ನಿಧನಮೇವ ಚ|
ಪಂಚೈತಾನಿ ಹಿ ಸೃಜ್ಯಂತೆ
ಗರ್ಭಸ್ಥಸ್ಯೈವ ದೇಹಿನಃ.

(೧)ಆಯುಷ್ಯ,   
(೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ,
  (೩)ಹಣ,
    (೪)ಗಳಿಸಬಹುದಾದ ವಿದ್ಯೆ
        (೫) ಮರಣ.
ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.,

ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳಿಗೆ ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ, ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ ಸುಭಾಷಿತದಲ್ಲಿ ಕಾಣ ಬಹುದು.

ಮೊದಲನೆಯದಾಗಿ ಆಯುಷ್ಯ.


 ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ
ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.

   ಕರ್ಮ
    ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.

ಹಣ

ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ, ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು ದುಡಿದದ್ದಲ್ಲ. ಇದನ್ನೇ  ಕವಿವಾಣಿ ಹೇಳುವುದು

"ಸಿರಿಯದು ನೀರಿನ ತೆರೆಯಂತೆ;
  ಜೀವನ ಮಿಂಚಿನ ಸೆಳಕಂತೆ
   ಅರಿತಿದ ನಡೆ ನೀ ನಿನ್ನಂತೆ
     ಅಳಿದೂ ಉಳಿಯುವ ತೆರನಂತೆ"
ಎಂದು ನಮ್ಮನ್ನು ಎಚ್ಚರಿಸಿದೆ.

ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ
ಅಂದರೆ 

"ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ"
ಎಂದು ಗೀತೆ ಸಾರುತ್ತದೆ.

ವಿದ್ಯೆ

ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ 
ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ. ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.

ಮರಣ
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂತಲ್ಲಿ ಮರಣವೆಂಬುದು ಮೊದಲೇ ಬರೆದಿರುತ್ತದೆ.

ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು. 

     🙏ಓಂ ತತ್ಸತ್🙏

Thursday, 8 April 2021

ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು


 


ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು



1. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ.


2. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ.


3. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ.


4. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ.


5. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ.


6. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.


7. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..


8. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..


9. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..


10. ನಾಲಗೆಯಲ್ಲಿ ವರುಣನ ವಾಸ.


11. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ.


12. ತುಟಿಗಳಲ್ಲಿ ಸಂಧ್ಯಾದೇವತೆ ವಾಸ.


13. ಕುತ್ತಿಗೆಯಲ್ಲಿ ಇಂದ್ರನ ವಾಸ.


14. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ.


15. ತೊಡೆಯಲ್ಲಿ ಧರ್ಮ ದೇವತೆಯ ವಾಸ.


16. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ.


17. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ.


18. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ.


19. ಬೆನ್ನಿನಲ್ಲಿ ರುದ್ರರ ವಾಸ.


20. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.


21. ಬಾಲದಲ್ಲಿ ಸೋಮದೇವತೆಯ ವಾಸ.


22. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ.


23. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ.


24. ಗೋಮೂತ್ರದಲ್ಲಿ ಗಂಗೆಯ ವಾಸ.


25. ಗೋಮಯದಲ್ಲಿ ಯಮುನೆಯ ವಾಸ.


26. ಹಾಲಿನಲ್ಲಿ ಸರಸ್ವತಿಯ ವಾಸ.


27. ಮೊಸರಿನಲ್ಲಿ ನರ್ಮದೆಯ ವಾಸ.


28. ತುಪ್ಪದಲ್ಲಿ ಅಗ್ನಿಯ ವಾಸ.


29. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ.


30. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ.


31. ಉದರದಲ್ಲಿ ಪೃಥ್ವೀ ದೇವತೆಗಳ ವಾಸ.


32. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ.


ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ  ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ...

Friday, 2 April 2021

ಬೆಳ್ಳಿ ಧರಿಸಿದರೆ ನಿಮ್ಮ ಬಾಳು ಬಂಗಾರವಾಗುವುದು..!

 ಬೆಳ್ಳಿ ಧರಿಸಿದರೆ ನಿಮ್ಮ ಬಾಳು ಬಂಗಾರವಾಗುವುದು..!


ಆಭರಣ ಎನ್ನುವುದು ಸೌಂದರ್ಯ ಪ್ರತಿಬಿಂಬಿಸುವ ವಸ್ತು. ಹಾಗಾಗಿಯೇ ನಾಗರೀಕತೆ ಬೆಳೆದು ಬಂದಾಗಿನಿಂದಲೂ ಪುರುಷರು ಮತ್ತು ಮಹಿಳೆಯರು ವಿವಿಧ ಲೋಹಗಳ ಆಭರಣಗಳನ್ನು ಹಾಗೂ ಆಯುಧಗಳನ್ನು ಬಳಸುವುದು ರೂಢಿಯಲ್ಲಿವೆ. ಧಾರ್ಮಿಕ ವಿಚಾರದಲ್ಲಿ ವ್ಯಕ್ತಿ ಧರಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಅವನ ವೈಯಕ್ತಿಕ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅವು ದುಬಾರಿ ಬೆಲೆಯ ಆಭರಣಗಳಾಗಿರುವುದರಿಂದ ಆರ್ಥಿಕವಾಗಿಯೂ ಅನುಕೂಲವನ್ನು ಉಂಟುಮಾಡುವುದು.

ಧಾರ್ಮಿಕವಾಗಿಯೂ ಸ್ಥಾನ ಪಡೆದಿರುವ ಬೆಳ್ಳಿ


ಚಿನ್ನ-ಬೆಳ್ಳಿಯ ಎರಡು ಲೋಹಗಳು ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ತರದ ಅಂಶಗಳನ್ನು ಪಡೆದುಕೊಂಡಿವೆ. ಹಾಗಾಗಿಯೇ ಇಂದಿಗೂ ಸ್ತ್ರೀ ಆದವಳು ಬೆಳ್ಳಿ ಕಾಲುಂಗುರ, ಓಲೆ, ಕಾಲ್ಗೆಜ್ಜೆ, ಸೊಂಟದ ದಾಬು, ತೋಳ ಬಳೆ ಸೇರಿದಂತೆ ಇನ್ನಿತರ ಆಭರಣಗಳನ್ನು ನಿತ್ಯವೂ ಧರಿಸಬೇಕು ಎಂದು ಹೇಳಲಾಗುವುದು.

                                                                   ಚಂದ್ರನಿಗೂ ಬೆಳ್ಳಿಗೂ ನಂಟು


ಬೆಳ್ಳಿಯು ಚಂದ್ರನನ್ನು ಪ್ರತಿಬಿಂಬಿಸುತ್ತದೆ. ನಿತ್ಯವೂ ಬೆಳ್ಳಿಯನ್ನು ಧರಿಸಿದರೆ ನಮ್ಮ ಬದುಕಲ್ಲಿ ಇರುವ ಸಾಕಷ್ಟು ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಹಾಗಾಗಿ ಕುಂಡಲಿಯಲ್ಲಿ ಇರುವ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಲು ಸಹ ನಿತ್ಯವೂ ಬೆಳ್ಳಿಯ ಆಭರಣವನ್ನು ಧರಿಸಬೇಕು ಎಂದು ಹೇಳಲಾಗುವುದು. ಚಿನ್ನವು ಬೆಳ್ಳಿಗಿಂತಲೂ ಬೆಲೆ ಬಾಳುವ ಲೋಹ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ಪವಿತ್ರತೆಯನ್ನು ಹಾಗೂ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.

                                                                               ಬೆಳ್ಳಿಯು ಪ್ರಯೋಜನಕಾರಿ


ಬೆಳ್ಳಿಯು ಧಾರ್ಮಿಕವಾಗಿ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವುದು. ಕಾಲಿನಲ್ಲಿ ಧರಿಸುವ ಬೆಳ್ಳಿಯ ಕಾಲುಂಗುರ, ಕಾಲ್ಗೆಜ್ಜೆ, ಕೈ ಬಳೆ, ಸೇರಿದಂತೆ ಇನ್ನಿತರ ಆಭರಣಗಳು ಧಾರ್ಮಿಕ ಹಿನ್ನೆಲೆಯೊಂದಿಗೆ ವೈಜ್ಞಾನಿವಾಗಿಯೂ ಮಹತ್ವವನ್ನು ಪಡೆದುಕೊಂಡಿವೆ. ನಮ್ಮ ದೇಹದಲ್ಲಿ ಬೆಳ್ಳಿಯ ಆಭರಣಗಳನ್ನು ಇರಿಸಿಕೊಳ್ಳುವುದು ಮತ್ತು ಬೆಳ್ಳಿ ಲೋಟದಲ್ಲಿ ಹಾಲನ್ನು ಕುಡಿಯುವುದು ಮಾಡಿದರೆ ಜೀವನದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಹಾಗೂ ಪ್ರಗತಿಯನ್ನು ಕಾಣುವರು ಎಂದು ಹೇಳಲಾಗುವುದು.

                                                                                          ಬಾಂಧವ್ಯ ಬೆಸೆಯಲು ಬೆಳ್ಳಿಯ ಸಹಾಯ


ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಾಮಾನ್ಯ. ಅಂತಹ ಭಿನ್ನಾಭಿಪ್ರಾಯಗಳು ಅತಿಯಾದಾಗ ಅದು ಘರ್ಷಣೆ ಹಾಗೂ ಮನಃಸ್ತಾಪಗಳಿಗೆ ಕಾರಣವಾಗುತ್ತವೆ. ಇಂತಹ ಸಮಸ್ಯೆಗಳನ್ನು ಬೆಳ್ಳಿ ಎನ್ನುವ ಲೋಹ ಅಥವಾ ಆಭರಣವು ನಿವಾರಣೆ ಮಾಡುವುದು. ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆ ದಿಂಬಿನ ಕೆಳಗೆ ಬೆಳ್ಳಿಯ ಆಭರಣ ಅಥವಾ ಬೆಳ್ಳಿಯ ವಸ್ತುವನ್ನು ಇಡುವುದರಿಂದ ಸಂಗಾತಿಗಳ ನಡುವೆ ಸಂಘರ್ಷ ನಡೆಯದು. ದಾಂಪತ್ಯದ ನಡುವೆ ನಡೆಯುವ ಸಂಘರ್ಷವನ್ನು ತಪ್ಪಿಸಲು ಆಲದ ಎಲೆಯಲ್ಲಿ ಬೆಳ್ಳಿಯ ವಸ್ತು, ಹೂವು ಮತ್ತು ಹಾಲನ್ನು ಒಂದು ದೊಣ್ಣೆ ಅಥವಾ ದೋಣಿಕಾಯಾರದಲ್ಲಿ ಇರಿಸಿ. ಅದನ್ನು ಆಲದ ಮರದ ಬಳಿ ಇಟ್ಟು ದೀಪವನ್ನು ಬೆಳಗಿ. ಇಲ್ಲವೇ ನೀರಿನಲ್ಲಿ ಬಿಡಿ. ಈ ಪರಿಹಾರ ಕ್ರಮವನ್ನು 43 ದಿನಗಳವರೆಗೆ ಮುಂದುವರಿಸಿದರೆ ಸಮಸ್ಯೆ ನಿವಾರಣೆಯಾಗುವುದು. ಈ ಕ್ರಮವನ್ನು ಪ್ರತಿ ಶನಿವಾರ ಸಹ ಮಾಡಬಹುದು ಎಂದು ಹೇಳಲಾಗುವುದು.

                                                                                                 ಬೆಳ್ಳಿಯ ಉಂಗುರ


ವ್ಯಕ್ತಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಈ ಉಂಗುರವನ್ನು ಹೆಬ್ಬೆರಳಿನಲ್ಲಿ ಧರಿಸಬೇಕು. ಹೊಟ್ಟೆ ನೋವನ್ನು ಅನುಭವಿಸುವ ಮಹಿಳೆಯರು ಕಾಲಿನ ಹೆಬ್ಬೆರಳಿನಲ್ಲಿ ಉಂಗುರವನ್ನು ಧರಿಸಬೇಕು. ಇದ್ದಕ್ಕಿದ್ದಂತೆ ಮಲಬದ್ಧತೆಯನ್ನು ಹೊಂದಿದ್ದರೆ ಹೆಬ್ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಬಹುಬೇಗ ಸಮಸ್ಯೆ ನಿವಾರಣೆಯಾಗುವುದು.

                                                                                                 ‌ ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು


ಅದೃಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬೆಳ್ಳಿಯ ಬಳೆ, ಉಂಗುರ, ಕಂಕಣ ಅಥವಾ ಹಾರವನ್ನು ಧರಿಸಬಹುದು. ಬೆಳ್ಳಿಯ ಅಭರಣವನ್ನು ಧರಿಸುವಾಗ ಸೋಮವಾರ ಧರಿಸಬೇಕು. ಆಗ ವ್ಯಕ್ತಿಯ ಅದೃಷ್ಟವು ಉತ್ತಮಗೊಳ್ಳುವುದು. ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ವ್ಯಕ್ತಿಯಲ್ಲಿ ಇರುವ ಕೋಪದ ಸಂವೇದನೆಯು ಕಡಿಮೆಯಾಗುತ್ತದೆ.

                                                              ವೈಜ್ಞಾನಿಕ ಸಂಗತಿ


ಬೆಳ್ಳಿಯಲ್ಲಿ ಬಲವಾದ ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡುವುದು. ಶೀತ ಮತ್ತು ಜ್ವರದಂತಹ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಸೌಂದರ್ಯ ಹೆಚ್ಚಾಗುತ್ತದೆ. ಇದರ ಪ್ರಭಾವದಿಂದ ಮುಖ ಮತ್ತು ದೇಹದ ಮೇಲಿರುವ ಕಪ್ಪು ಕಲೆಗಳನ್ನು ಮತ್ತು ಮೊಡವೆಗಳನ್ನು ಸಹ ಕಡಿಮೆ ಮಾಡುತ್ತದೆ.

                                                                                              ಕೋಪವನ್ನು ಕಡಿಮೆ ಮಾಡುವುದು


ತಮ್ಮ ಭಾವನೆಗಳ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದೀರಿ, ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದಾದರೆ ಬೆಳ್ಳಿಯ ಉಂಗುರವನ್ನು ಕೈ ಬೆರಳುಗಳಲ್ಲಿ ಧರಿಸಿ. ಇದರಿಂದ ವ್ಯಕ್ತಿಯ ಮನಸ್ಸು ತಂಪಗಾಗುವುದು. ಶಾಂತವಾದ ಪ್ರವೃತ್ತಿಯನ್ನು ಹೊಂದುವನು. ಜೊತೆಗೆ ಕೋಪವೂ ಕಡಿಮೆಯಾಗುತ್ತದೆ.

                                                                                        ಮೆದುಳು ತೀಕ್ಷ್ಣವಾಗುವುದು


ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವುದು, ಬೆಳ್ಳಿ ಲೋಟದಲ್ಲಿ ಹಾಲು ಕುಡಿಯುವುದು ಹಾಗೂ ಬೆಳ್ಳಿಯ ಆಭರಣವನ್ನು ಧರಿಸುವುದು ಮಾಡಿದರೆ ವ್ಯಕ್ತಿಯ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದು. ಬುದ್ಧಿವಂತಿಕೆಯು ಹೆಚ್ಚುವುದು. ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.

                                                                                           ಕೀಲು ಸಂಬಂಧಿ ಸಮಸ್ಯೆ ನಿವಾರಣೆಯಾಗುವುದು


ಬೆಳ್ಳಿಯು ಧಾರ್ಮಿಕವಾಗಿ ಉತ್ತಮ ಪ್ರಭಾವ ನೀಡುವುದರ ಜೊತೆಗೆ ವೈಜ್ಞಾನಿಕವಾಗಿಯೂ ಸಾಕಷ್ಟು ಸಹಾಯ ಮಾಡುವುದು. ಬೆಳ್ಳಿ ಆಭರಣ ಧರಿಸುವುದರಿಂದ ಅಥವಾ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಕೀಲು ನೋವು, ಕೆಮ್ಮು, ಶೀತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು. ಬೆಳ್ಳಿಯ ಸರ ಅಥವಾ ಹಾರವನ್ನು ಕತ್ತಿನಲ್ಲಿ ಧರಿಸುವುದರಿಂದ ದಿಗ್ಭ್ರಮೆಯ ಸಮಸ್ಯೆಯು ನಿವಾರಣೆಯಾಗುವುದು.

                                                                                       ಬೆಳ್ಳಿಯ ಬಣ್ಣ ಬದಲಾಗುವುದು


ಬೆಳ್ಳಿಯು ಜೀವಾಣುಗಳೊಂದಿಗೆ ಪ್ರತಿಕ್ರಿಯಿಸಿದಾಗ ಅದರ ಬಣ್ಣವು ಬದಲಾಗುತ್ತದೆ. ಹಾಗಾಗಿಯೇ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾದರೆ ಧರಿಸಿದ ಉಂಗುರ ಅಥವಾ ಬೆಳ್ಳಿಯ ಆಭರಣವು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತವೆ. ಒಟ್ಟಾರೆಯಾಗಿ ಬೆಳ್ಳಿಯ ಉಂಗುರ ಧರಿಸುವುದರಿಂದ ದೇಹ ಮತ್ತು ಮನಸ್ಸು ಉತ್ತಮ ಸ್ವಾಸ್ತ್ಯವನ್ನು ಪಡೆದುಕೊಳ್ಳುತ್ತದೆ. ಅನೇಕ ರೋಗಗಳಿಂದ ದೇಹವನ್ನು ದೂರ ಇರಿಸುವುದು. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಗೆ ಬೆಳ್ಳಿಯ ಉಂಗುರ ಮತ್ತು ಒಡವೆಯನ್ನು ಧರಿಸಲು ಸಲಹೆ ನೀಡುವುದು.

ಸನಾತನ ಧರ್ಮ

 ಸನಾತನ ಧರ್ಮದ ಬಗ್ಗೆ ಮಾಹಿತಿ:

     ಕೃತಿ                ಕರ್ತೃ


 1-ಅಷ್ಟಾಧ್ಯಾಯಿ -- ಪಾಣಿನಿ

 2-ರಾಮಾಯಣ-- ವಾಲ್ಮೀಕಿ

 3-ಮಹಾಭಾರತ ---ವೇದ ವ್ಯಾಸ

 4-ಅರ್ಥಶಾಸ್ತ್ರ ---ಚಾಣಕ್ಯ

 5-ಮಹಾಭಾಷ್ಯ ---ಪತಂಜಲಿ

 6-ಸತ್ಸಸಾರಿಕ ಸೂತ್ರ-- ನಾಗಾರ್ಜುನ

 7 - ಬೌದ್ಧ ಚರಿತಮ್--- ಅಶ್ವಘೋಷ

 8-ಸೌಂದರಾನಂದ-- ಅಶ್ವಘೋಷ

 9- ಮಹಾವಿಭಾಶ ಶಾಸ್ತ್ರ-- ವಸುಮಿತ್ರ

 10- ಸ್ವಪ್ನ ವಾಸವದತ್ತಮ್--ಭಾಸ

 11-ಕಾಮಸೂತ್ರ--ವಾತ್ಸಯನ

 12-ಕುಮಾರಸಂಭವಂ ಕಾಳಿದಾಸ

 13- ಅಭಿಜ್ಞಾನ ಶಾಕುಂತಲಂ-- ಕಾಳಿದಾಸ+

 14-ವಿಕ್ರಮೋರ್ವಶಿಯಾಮ್---

 ಕಾಳಿದಾಸ

 15 ಮೇಘದೂತಂ---- ಕಾಳಿದಾಸ

 16-ರಘುವಂಶಂ --ಕಾಳಿದಾಸ

 17-ಮಾಳವಿಕಾಗ್ನಿಮಿತ್ರಂ-- ಕಾಳಿದಾಸ

 18-ನಾಟ್ಯಶಾಸ್ತ್ರ--- ಭರತಮುನಿ

 19-ದೇವಿಚಂದ್ರಗುಪ್ತಂ-- ವಿಶಾಖದತ್ತ

 20-ಮೃಚ್ಛ ಕಟಿಕಂ --ಶೂದ್ರಕ

 21-ಸೂರ್ಯ ಸಿದ್ಧಾಂತ-- ಆರ್ಯಭಟ

 22-ಬೃಹತ್ ಸಂಹಿತ --ವರಾಹಮಿಹಿರ

 23-ಪಂಚತಂತ್ರ-- ವಿಷ್ಣು ಶರ್ಮಾ

 24-ಕಥಾಸರಿತ್ಸಗರ-- ಸೋಮದೇವ

 25-ಅಭಿಧಮ್ಮಕೋಶಕಾರಿಕ--- ವಸುಬಂಧು

 26-ಮುದ್ರಾರಾಕ್ಷಸ --- ವಿಶಾಖದತ್ತ

 27-ರಾವಣವಧ-- ಭಟ್ಟಿ

 28-ಕಿರಾತಾರ್ಜುನೀಯಂ--ಭಾರವಿ

 29-ದಶಕುಮಾರ ಚರಿತಂ-- ದಂಡಿ

 30-ಹರ್ಷಚರಿತ-- ಬಾಣಭಟ್ಟ

 31-ಕಾದಂಬರಿ--- ಬಾಣ

 32-ವಾಸವದತ್ತಾ-- ಸುಬಂಧು

 33-ನಾಗಾನಂದ---- ಹರ್ಷವರ್ಧನ

 34-ರತ್ನಾವಳಿ --ಹರ್ಷವರ್ಧನ

 35-ಪ್ರಿಯದರ್ಶಿಕಾ-- ಹರ್ಷವರ್ಧನ

 36-ಮಾಲತಿ ಮಾಧವ-- ಭವಭೂತಿ

 37-ಪೃಥ್ವಿರಾಜ ವಿಜಯ-- ಜಯನಕ

 38-ಕರ್ಪೂರ ಮಂಜರಿ-- ರಾಜಶೇಖರ

 39-ಕಾವ್ಯಮೀಮಾಂಸ-- ರಾಜಶೇಖರ

 40-ನವಸಹಸಾಂಕ ಚರಿತ--ಪದ್ಮಗುಪ್ತ

 41 ಶಬ್ದಾನುಶಾಸನ-- ರಾಜ ಭೋಜ

 42-ಬೃಹತ್ ಕಥಾಮಂಜರಿ--   ಕ್ಷೇಮೇಂದ್ರ

 43-ನೈಶಧ ಚರಿತಂ-- ಶ್ರೀಹರ್ಷ

 44-ವಿಕ್ರಮಾಂಕದೇವಚರಿತಂ-- ಬಿಲ್ಹಣ

 45-ಕುಮಾರಪಾಲ ಚರಿತಂ-- ಹೇಮಚಂದ್ರ

 46-ಗೀತ  ಗೋವಿಂದ-- ಜಯದೇವ

 47-ಪೃಥ್ವಿರಾಜ ರಾಸೊ ಚಂದ್ರವರದಾಯಿ

 48-ರಾಜತರಂಗಿಣಿ-- ಕಲ್ಹಣ

 49-ಮಾನಸಲ್ಲೋಸ--- ಸೋಮೇಶ್ವರ

 50-ಶಿಶುಪಾಲ ವಧ--  ಮಾಘ

 51-ಗೌಡವಾಹೋ---ವಾಕ್ಪತಿ

 52-ರಾಮ ಚರಿತ--- ಸಂಧ್ಯಾಕರಾನಂದಿ

 53-ದ್ವಯಾಶ್ರಯ ಕಾವ್ಯ--ಹೇಮಚಂದ್ರ. 


 ವೇದಗಳು: -


 ಪ್ರ .1- ಯಾರನ್ನು ವೇದ ಎಂದು ಕರೆಯಲಾಗುತ್ತದೆ?

 ಉತ್ತರ - ದೈವಿಕ ಜ್ಞಾನದ ಪುಸ್ತಕವನ್ನು ವೇದ ಎಂದು ಕರೆಯಲಾಗುತ್ತದೆ.


 Q.2- ವೇದಗಳ ಜ್ಞಾನವನ್ನು ನೀಡಿದವರು ಯಾರು?

 ಉತ್ತರ - ಈಶ್ವರ (ದೇವರು) ಕೊಟ್ಟರು.


 Q.3- ದೇವರು ವೇದ-ಜ್ಞಾನವನ್ನು ಯಾವಾಗ ಕೊಟ್ಟರು?

 ಉತ್ತರ - ಸೃಷ್ಟಿಯ ಆರಂಭದಲ್ಲಿ  ವೇದ- ಜ್ಞಾನವನ್ನು ಕೊಟ್ಟರು.


 Q.4- ದೇವರು ವೇದ ಜ್ಞಾನವನ್ನು ಏಕೆ ಕೊಟ್ಟರು?

 ಉತ್ತರ: ಮನುಷ್ಯರ ಕಲ್ಯಾಣಕ್ಕಾಗಿ ಮಾತ್ರ.


 Q.5- ವೇದಗಳು ಎಷ್ಟು?

 ಉತ್ತರ - ನಾಲ್ಕು.

 1-ಋಗ್ವೇದ

 2-ಯಜುರ್ವೇದ

 3-ಸಾಮವೇದ

 4-ಅಥರ್ವವೇದ


 ಪ್ರ .6- ವೇದಗಳ ಬ್ರಾಹ್ಮಣರು ಯಾರು?

         ವೇದ -ಬ್ರಾಹ್ಮಣ

 1 - ಋಗ್ವೇದ - ಐತರೇಯ

 2 - ಯಜುರ್ವೇದ - ಶತಪಥ

 3 - ಸಾಮವೇದ - ತಾಂಡ್ಯ

 4 - ಅಥರ್ವವೇದ - ಗೋಪಥ


 ಪ್ರ .7- ವೇದಗಳಲ್ಲಿ ಎಷ್ಟು ಉಪವೇದಗಳಿವೆ.

 ಉತ್ತರ - ನಾಲ್ಕು.

       ವೇದ --ಉಪವೇದ

     1- ಋಗ್ವೇದ - ಆಯುರ್ವೇದ

     2- ಯಜುರ್ವೇದ - ಧನುರ್ವೇದ

     3-ಸಾಮವೇದ - ಗಾಂಧರ್ವವೇದ

     4- ಅಥರ್ವವೇದ - ಅರ್ಥ ವೇದ


 ಪ್ರಶ್ನೆ 8- ವೇದಗಳಲ್ಲಿ ಎಷ್ಟು  ಅಂಗಗಳಿವೆ(ವೇದಾಂಗ)?

 ಉತ್ತರ - ಆರು.

 1 - ಶಿಕ್ಷಣ

 2 - ಕಲ್ಪ

 3 - ನಿರುಕ್ತ

 4 - ವ್ಯಾಕರಣ

 5 - ಛಂದ

 6 - ಜ್ಯೋತಿಷ್ಯ


 Q.9- ಈಶ್ವರ ಯಾವ ಋಷಿಮುನಿಗಳಿಗೆ ವೇದಗಳ ಜ್ಞಾನವನ್ನು ಕೊಟ್ಟರು?

 ಉತ್ತರ- ನಾಲ್ಕು ಋಷಿಮುನಿಗಳು.

          ಋಷಿ--- ವೇದ

 1-  ಋಗ್ವೇದ - ಅಗ್ನಿ

 2 - ಯಜುರ್ವೇದ - ಗಾಳಿ

 3 - ಸಾಮವೇದ - ಆದಿತ್ಯ

 4 - ಅಥರ್ವವೇದ - ಅಂಗಿರಾ


 ಪ್ರ .10- ಋಷಿಗಳಿಗೆ ದೇವರು ವೇದಗಳ ಜ್ಞಾನವನ್ನು ಹೇಗೆ ಕೊಟ್ಟರು?

 ಉತ್ತರ - ಸಮಾಧಿ ಅವಸ್ಥೆಯಲ್ಲಿ .


 ಪ್ರಶ್ನೆ 11. ವೇದಗಳಲ್ಲಿ ಯಾವ ಜ್ಞಾನವಿದೆ?

 ಉತ್ತರ - ಎಲ್ಲಾ ಸತ್ಯವಾದ ವಿದ್ಯೆಗಳ ಜ್ಞಾನ-ವಿಜ್ಞಾನ


 ಪ್ರಶ್ನೆ 12. ವೇದದ ವಿಷಯಗಳು ಯಾವುವು?

 ಉತ್ತರ - ನಾಲ್ಕು.

         ವೇದ -ವಿಷಯ

 1- ಋಗ್ವೇದ - ಜ್ಞಾನ

 2- ಯಜುರ್ವೇದ - ಕರ್ಮ

 3- ಸಾಮವೇದ - ಪೂಜೆ,ಉಪಾಸನೆ

 4- ಅಥರ್ವವೇದ - ವಿಜ್ಞಾನ


 ಪ್ರ .13 - ವೇದಗಳಲ್ಲಿ ಭಾಗಗಳು


 I

ಋಗ್ವೇದದಲ್ಲಿ.

 1- ಮಂಡಲ- 10

 2 - ಅಷ್ಟಕ - 08

 3 - ಸೂಕ್ತ - 1028

 4 - ಅನುವಾಕ - 85

 5 - ಋಕ್ಕ್ ಗಳು - 10589


 ಯಜುರ್ವೇದದಲ್ಲಿ.

 1- ಅಧ್ಯಾಯ - 40

 2- ಮಂತ್ರ - 1975


 ಸಾಮವೇದದಲ್ಲಿ.

 1- ಆರ್ಚಿಕ - 06

 2 - ಅಧ್ಯಾಯ - 06

 3- ಋಕ್ಕ್  ಗಳು- 1875


 ಅಥರ್ವವೇದದಲ್ಲಿ.

 1- ಕಾಂಡ - 20

 2- ಸೂಕ್ತ - 731

 3 - ಮಂತ್ರ - 5977

          

 ಪ್ರ .14. ವೇದಗಳನ್ನು ಓದುವ ಹಕ್ಕು ಯಾರಿಗೆ ಇದೆ?  ಉತ್ತರ: ವೇದಗಳನ್ನು ಓದುವ ಹಕ್ಕು ಎಲ್ಲ ಮನುಷ್ಯರಿಗೆ ಇದೆ


Tuesday, 23 March 2021

ಶ್ರೀ ವಿಷ್ಣು ಸಹಸ್ರ ನಾಮ - ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು

 ಅಪಾಯ ಕೋಟಿಗಳಿಗೆ ಉಪಾಯ ಒಂದೇ - ಹರಿನಾಮ : - ಶ್ರೀ ವಿಷ್ಣು ಸಹಸ್ರ ನಾಮ. 

(ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)


1. ಸಂಸ್ಕೃತಿ ಸಂವರ್ಧನ ಸ್ತೋತ್ರ - ಮಕ್ಕಳ ಯಶಸ್ಸಿಗಾಗಿ:

ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ |

ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್‌ ಕವಿಃ || ೧೪ ||


2. ಸಿದ್ಧಿಸಂಕಲ್ಪ ಸ್ತೋತ್ರ - ಸಂಕಲ್ಪ ಸಿದ್ಧಿಗಾಗಿ:

ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ |

ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||


3. ದಂಪತಿಗಳ ಅನೋನ್ಯತೆಗೆ:

ಭೂತಭವ್ಯಭವನ್ನಾಥಃ ಪವನಃ ಪಾವನೋಽನಲಃ |

ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||


4. ಉದ್ಯೋಗ ಪ್ರಾಪ್ತಿಗಾಗಿ:

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ |

ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ || ೪೨ ||


5. ದಾರಿದ್ರ್ಯನಾಶನ, ಧನಪ್ರಾಪ್ತಿಗೆ:

ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ |

ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || ೪೬ ||


6. ಐಶ್ವರ್ಯ ಪ್ರಾಪ್ತಿಗೆ:

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |

ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||


7. ವಿದ್ಯೆ ಪ್ರಾಪ್ತಿಗೆ:

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ |

ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || ೧೯ ||

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |

ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||


8. ಸಂತಾನ ಪ್ರಾಪ್ತಿಗೆ:

ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |

ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||


9. ಸರ್ವ ರೋಗ ನಿವಾರಣೆಗೆ:

ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ |

ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||


10. ಪಾಪ ನಾಶನಕ್ಕೆ:

ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ |

ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||


11. ಸುಖ ಪ್ರಸವಕ್ಕೆ:

ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |

ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || ೧೦೭ ||


12. ಪ್ರೀತಿವರ್ಧನ ಸ್ತೋತ್ರ - ಕೌಟುಂಬಿಕ ಸಾಮರಸ್ಯಕ್ಕೆ:

ಸತ್ತ್ವವಾನ್‌ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |

ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||


13. ಭಯನಾಶನ ಸ್ತೋತ್ರ:

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |

ಅಮೂರ್ತಿರನಘೋಽಚಿಂತ್ಯೋ(ಽ)ಭಯಕೃದ್ಭಯನಾಶನಃ || ೮೯ ||


14. ದುಸ್ವಪ್ನನಾಶನ ಸ್ತೋತ್ರ:

ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ |

ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || ೯೯ ||


15. ಸ್ವಸ್ತಿ ಮಂತ್ರ - ಮನಸ್ಸಿನಲ್ಲಿ ಮೂಡುವ ಆಸೆಗಳ ಸಿದ್ಧಿಗಾಗಿ:

ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |

ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||


16. ಕೊನೆಯ ದಿನಗಳಲ್ಲಿ  - ಸದ್ಗತಿಗಾಗಿ:

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ |

ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||

ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |

ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||


ಈ ಮೇಲಿನವು ಕೆಲವು ಉದಾಹರಣೆ ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೊಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು 

ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ ವನ್ನು 

ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.


 ಶ್ರೀ ಕೃಷ್ಣಾರ್ಪಣಮಸ್ತು 

*****************************