ತುಲಸೀ ಪೂಜೆ
ಕಾರ್ತೀಕ ಶುದ್ಧ
ದ್ವಾದಶಿ.
"ಉತ್ಥಾನ
ದ್ವಾದಶಿ" ಎಂದೂ ಕರೆಯುತ್ತಾರೆ.
ತನ್ನಿಮಿತ್ತ
ತುಲಸಿಯ
ಕತೆ.
ತುಳಸೀ
ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.
ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.
" ಉತ್ಥಾನದ್ವಾದಶಿ-ತುಲಸೀ ವಿವಾಹ "
ಆಷಾಢ
ಶುದ್ಧ ಏಕಾದಶಿಯಂದು ಶಯನಿಸಿದ ವಿಷ್ಣುವು ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ.ಆದ್ದರಿಂದ "ಶಯನೈಕಾದಶೀ,ಉತ್ಥಾನದ್ವಾದಶಿ ಎಂದು ಈ ಎರಡೂ ಹಬ್ಬಗಳಿಗೆ
ಹೆಸರಿದೆ.
ವಿಷ್ಣುವಿನ
ಯೋಗನಿದ್ರಾಕಾಲದ ಈ ನಾಲ್ಕು ತಿಂಗಳು
ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.
ಉತ್ತರ
ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.
ತುಲನೆ
ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.
*************************************************************
ಅಮೃತ
ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸೀ.
ಕೃಷ್ಣನ
ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.
ಇದು
ತುಳಸಿಯ ಶಕ್ತಿ.
ಉತ್ಥಾನ
ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.
ಜಲಂಧರಾಸುರನು
ಲೋಕ ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.
ಜಲಂಧರ
ಪತ್ನಿ ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ.
ಪವಿತ್ರ
ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು.
ಇದರ
ಕುರುಹಾಗಿ ತುಲಸಿಕಟ್ಟೆಗೆ ಬೃಂದಾವನ ಎಂಬ ಹೆಸರು,
ಮತ್ತು
ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸೀಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.
ಅಂದಿನವರೆಗೆ
ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆ ಅದಕ್ಕೆ ಅಶೌಚ.ಆ ದಿನ ತುಳಸಿಯೊಂದಿಗಿಟ್ಟು
ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.
ತುಲಸಿಯು ಔಷಧೀಯ ಸಸ್ಯ.
ಜಲಮಾಲಿನ್ಯ,ಅರ್ಬುದ,ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,
ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.
ತುಳಸಿಯಲ್ಲಿ
ಬಿಳಿ ಮತ್ತು ಕರಿ ತುಳಸಿ ಎಂದು ಎರಡು ಪ್ರಭೇದಗಳಿವೆ.
ಔಷಧೀಯ
ಗುಣ ಎರಡಲ್ಲೂ ಒಂದೇ ರೀತಿ ಇದೆ.
ಸುಮಂಗಲಿಯರು
ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಕ್ಷೀರ
ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ" ಯ ದಿನ.ಹಾಗಾಗಿ
ಮಥನ ದ್ವಾದಶಿ,ಕ್ಷೀರಾಬ್ಧಿ ವ್ರತ ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.
ನಮಸ್ತುಲಸಿ ಕಲ್ಯಾಣೀ
ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ
ನಮಃ ಸಂಪತ್ಪ್ರದಾಯಿನೀ ||
ತುಲಸಿಯ
ಬಗ್ಗೆ ಇನ್ನೊಂದು ಕತೆ ಇದೆ.
" ತುಲಸೀ
"
ಹಂಸಧ್ವಜನ
ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.
ಈಕೆಯು
ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು.
ಬ್ರಹ್ಮನು
"ನಿನ್ನ ಕೋರಿಕೆ ಈಡೇರುತ್ತದೆ.
ಆದರೆ
ನೀನು ಗಿಡವಾಗುವೆ" ಎಂದನು.
ದಂಭಾಸುರನ
ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.
ಅಕಸ್ಮಾತ್ತಾಗಿ
ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.
ಕೆಲಕಾಲದ
ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.
ದುರ್ವಾಸನ
ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.
***********************************************
ತುಳಸಿ ಮದುವೆಗಾಗಿ, ಮುಂಜಾನೆ ಬೇಗ ಎದ್ದು, ಮೊದಲು ತುಳಸಿ ಕಟ್ಟೆಯನ್ನು ಮತ್ತು ಗಿಡವನ್ನು ಶುದ್ಧಗೊಳಿಸಿ.ತುಳಸಿ ಕಟ್ಟೆಯ ಮುಂದೆ ನೀರು ಅಥವಾ ಸಗಣಿ ನೀರನ್ನು ಹಾಕಿ, ನಂತರ ರಂಗೋಲಿಯನ್ನು ಬಿಡಿಸಿ.ನಂತರ ಅದರ ಸುತ್ತಲೂ ಕಬ್ಬಿನ ಮೇಲಾವರಣವನ್ನು ಮಾಡಿ.ತುಳಸಿಯ ಮೇಲೆ, ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಸುಮಂಗಲಿಯ ಸಂಕೇತವಾಗಿ ಇರಿಸಿ.ಇದು ತುಳಸಿ ಸಸ್ಯದ ಮೇಲೆ ಚಳಿಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಹಸಿರಾಗಿರುತ್ತದೆ.ನೀವು ಬಯಸಿದರೆ, ನೀವು ಸೀರೆ ಉಡಿಸಿ ವಧುವಿನಂತೆ ಅಲಂಕರಿಸಬಹುದು ಮತ್ತು ತುಳಸಿಗೆ ಆಭರಣಗಳನ್ನು ಕೂಡ ಹಾಕಿ ಅಲಂಕರಿಸಬಹುದು.ಒಡೆಯದ, ಬಿರುಕು ಬಿಡದ ಒಂದು ತೆಂಗಿನಕಾಯಿಯನ್ನು, ವೀಳ್ಯದೆಲೆ, ಅಡಿಕೆಯನ್ನು ತುಳಸಿಯ ಮೇಲಿಟ್ಟು, ತುಳಸಿಗೆ ಸಿಂಧೂರವನ್ನು ಹಚ್ಚಿ.ಇದರ ನಂತರ, ಶಾಲಿಗ್ರಾಮವನ್ನು ವಿಷ್ಣುವಾಗಿ ಒಂದು ಆಸನದ ಮೇಲೆ ಇರಿಸಿ.ನಂತರ ಮದುವೆಯ ಸಮಯದಲ್ಲಿ ನೀವು ವಧುವಿನ ಕೈಗೆ ಅರಿಶಿನವನ್ನು ಹಚ್ಚಿದಂತೆಯೇ ಅವರಿಬ್ಬರಿಗೂ ಅರಿಶಿನ ಹಚ್ಚಿ.ನಂತರ ತುಳಸಿ ಗಿಡದ ಸುತ್ತ ಏಳು ಸುತ್ತುಗಳನ್ನು ಹಾಕಿ ನಂತರ ಅವೆರಡನ್ನೂ ಆರತಿ ಮಾಡಿ ಮದುವೆ ಮಾಡಿ.ಕೊನೆಯದಾಗಿ ವಿವಾಹದಲ್ಲಿ ಹಾಡುವಂತಹ ಸೋಬಾನೆ ಹಾಡುಗಳನ್ನು ಹಾಡಿ.
ತುಳಸಿ ವಿವಾಹದ ಕಥೆ
ಜಲಂಧರ ಎಂಬ ರಾಕ್ಷಸನನ್ನು ಅಂತ್ಯಗೊಳಿಸುವ ಸಲುವಾಗಿ ವಿಷ್ಣು ವೃಂದಾ ಸತಿತ್ವವನ್ನು ಅಂದರೆ ಆಕೆಯ ಮಾನವನ್ನು ತೆಗೆದಿದ್ದನು ಎಂದು ದಂತಕಥೆಗಳು ಹೇಳುತ್ತದೆ. ವೃಂದಾ ವಿಷ್ಣುವಿನ ಪರಮ ಭಕ್ತೆ. ವೃಂದಾ ಅವರ ದೃಢತೆ ಮತ್ತು ಸದ್ಗುಣದಿಂದಾಗಿ ಸಾಕಷ್ಟು ಶಕ್ತಿಶಾಲಿಯಾಗಿದ್ದರು. ವೃಂದಾ ಜಲಂಧರನನ್ನು ಮದುವೆಯಾದರು ಮತ್ತು ವೃಂದಾ ಅವಳ ತಪಸ್ಸಿನಿಂದ ಸಾಕಷ್ಟು ಶಕ್ತಿಶಾಲಿಯಾದಳು, ಇದು ದೇವತೆಗಳಿಗೆ ತೊಂದರೆಯಾಯಿತು. ಜಲಂಧರ ತನ್ನ ಅಧಿಕಾರದ ಬಗ್ಗೆ ಅತಿಯಾದ ದುರಾಂಹಕಾರವನ್ನು ಹೊಂದಿದನು. ಜಲಂಧರನು ಪಾರ್ವತಿಯ ಮೇಲೂ ಕೂಡ ತನ್ನ ಕೆಟ್ಟ ನೋಟವನ್ನು ಬೀರಿದ್ದನು.
ವೃಂದಾ ವಿಷ್ಣುವಿಗೆ ಶಾಪವನ್ನು ನೀಡಿದಳು.
ಜಲಂಧರನಿಂದ ವಿಚಲಿತರಾದ ಎಲ್ಲಾ ದೇವರುಗಳು ಭಗವಾನ್ ವಿಷ್ಣುವನ್ನು ತಲುಪಿ ಅವರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ಆಗ ದೇವರುಗಳು ಒಗ್ಗೂಡಿ, ಜಲಂಧರ ಕೊನೆಗೊಳ್ಳಬೇಕಾದರೆ ವೃಂದಾಳ ಶಕ್ತಿಯನ್ನು ಕೊನೆಗೊಳಿಸಬೇಕೆಂದು ತೀರ್ಮಾನ ಮಾಡಿದರು. ನಂತರ ಭಗವಾನ್ ವಿಷ್ಣು, ಜಲಂಧರ ರೂಪವನ್ನು ತೆಗೆದುಕೊಂಡು ತನ್ನ ಭಕ್ತ ವೃಂದಾಳ ಸತಿತ್ವವನ್ನು ವಂಚನೆಯಿಂದ ಮರೆಮಾಚಿದನು, ನಂತರ ಜಲಂಧರನನ್ನು ದೇವರುಗಳು ನಾಶ ಮಾಡಲು ಸಾಧ್ಯವಾಯಿತು. ಇದರ ಸತ್ಯತೆಯನ್ನು ತಿಳಿದ ವೃಂದಾ ವಿಷ್ಣುವಿಗೆ ನೀನು ಕಲ್ಲಾಗು ಎಂದು ಶಾಪವನ್ನು ನೀಡಿದಳು.
ಭಗವಾನ್ ವಿಷ್ಣು ಶಾಲಿಗ್ರಾಮನಾದದ್ದು ಹೇಗೆ..?
ಈ ಶಾಪದಿಂದ ವಿಷ್ಣು ಕಪ್ಪು ಕಲ್ಲಾಗಿ ಮಾರ್ಪಟ್ಟನು ಮತ್ತು ಅದೇ ಕಲ್ಲನ್ನು ಶಾಲಿಗ್ರಾಮ ಎಂದು ಕರೆಯಲಾಯಿತು. ಇದು ಇಡೀ ವಿಶ್ವದಲ್ಲಿ ಪ್ರಳಯದ ಸ್ಥಿತಿಗೆ ಕಾರಣವಾಯಿತು. ಆಗ ದೇವರು ಮತ್ತು ತಾಯಿ ಲಕ್ಷ್ಮಿ ವೃಂದಾಳನ್ನು ಕೋರಿದರು. ವೃಂದಾ ವಿಷ್ಣುವನ್ನು ಶಾಪದಿಂದ ಮುಕ್ತಗೊಳಿಸಿ ತಾನು ಅಗ್ನಿಗೆ ಹಾರಿ ಪ್ರಾಣವನ್ನು ತ್ಯಜಿಸುತ್ತಾಳೆ. ವೃಂದಾ ದೇವಿಯು ತನ್ನ ಬೂದಿಯ ಮೇಲೆ ತುಳಸಿಯಾಗಿ ಕಾಣಿಸಿಕೊಂಡಳು. ಆಗ ಭಗವಾನ್ ವಿಷ್ಣು ನಾನು ನಿನ್ನನ್ನು ಯಾವಾಗಲೂ ನನ್ನ ತಲೆಯ ಮೇಲೆ ಧರಿಸುತ್ತೇನೆ ಮತ್ತು ಲಕ್ಷ್ಮಿ ದೇವಿಯಂತೆ ನೀನು ಯಾವಾಗಲೂ ನನ್ನ ಪ್ರೀತಿ ಪಾತ್ರಳಾಗಿರುತ್ತೀಯ ಮತ್ತು ನೀನಿಲ್ಲದೇ ನಾನು ಏನನ್ನು ಸ್ವೀಕರಿಸುವುದಿಲ್ಲವೆಂದು ಹೇಳುತ್ತಾನೆ.
ಈ ಘಟನೆಯ ನಂತರ, ವಿಷ್ಣು ನಾಲ್ಕು ತಿಂಗಳ ನಿದ್ರೆಯಿಂದ ಎಚ್ಚರಗೊಂಡಾಗ ತುಳಸಿಯೊಂದಿಗೆ ಮದುವೆ ನಡೆಯಿತು. ಈ ದಿನವನ್ನೇ ದೇವ ಉತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿಯಂದು, ತುಳಸಿ ಮತ್ತು ಶಾಲಿಗ್ರಾಮದಲ್ಲಿ ಭಕ್ತನು ಏನೇ ಬಯಸಿದರೂ ಅವರ ಎಲ್ಲಾ ಆಶಯಗಳು ಈಡೇರುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ವಿಷ್ಣು ಮತ್ತು ಮಹಾಲಕ್ಷ್ಮಿ ಅವರ ಸಾಂಕೇತಿಕ ವಿವಾಹದಂತೆಯೇ ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಆಚರಿಸಲಾಗುತ್ತದೆ.
4444444444444444444444444444444
ಶ್ರೀ ತುಳಸಿ
ಪೂಜಾ
ವಿಧಾನ
ಶ್ರೀ
ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.
|| ಶ್ರೀಯಃ
ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ
ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್
||
ಮೇಲಿನ
ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ
ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ
ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
ಸರ್ವವೇದಾಸ್ಚ
ತುಳಸೀ ತ್ವಾಂ ನಮಾಮ್ಯಹಂ ||
|| ತುಳಸಿ
ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ
ನಾರದನುತೇ ನಾರಾಯಣಮನಃ ಪ್ರಿಯೇ ||
ಮೇಲಿನ
ಮಂತ್ರ ಹೇಳಿ ನಮಸ್ಕರಿಸಿ.
ಶ್ರೀ ತುಳಸಿ
ಪ್ರಾರ್ಥನೆ
ನಮಸ್ತುಳಸಿ
ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ
ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||
ಶ್ರೀ
ತುಳಸಿ ಧ್ಯಾನ
ಧ್ಯಾಯೇಸ್ಚ
ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ
ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ
ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ
ಸಂಯುಕ್ತಾಂ ನಿಶಿದುಶೀಮ್ ||
ಶ್ರೀ ತುಳಸಿ
ಪ್ರಣಾಮ
ವೃಂದಾಯೈ
ತುಳಸಿ ದೇವ್ಯೈ
ಪ್ರಿಯಾಯೈ
ಕೇಶವಸ್ಯ ಚ
ಕೃಷ್ಣ
ಭಕ್ತಿ ಪರದೆ ದೇವಿ
ಸತ್ಯವತ್ಯೈ
ನಮೋ ನಮಃ
ಶ್ರೀ ತುಳಸಿ
ಪ್ರದಕ್ಷಿಣ
ಮಂತ್ರ
ಯಾನಿ
ಕಾನಿ ಚಪಾಪಾನಿ
ಬ್ರಹ್ಮ
ಹತ್ಯಾದಿಕಾನಿ ಚ
ತಾನಿ
ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ
ಪದೇ ಪದೇ
ಶ್ರೀ ತುಳಸಿ
ನಮಸ್ಕಾರ
ಯನ್ಮೂಲೇ
ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ
ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||
ಪ್ರಸೀದ
ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ
ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||
ಅಷ್ಟ
ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ,
ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ
ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು
ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ
ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ
ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ
ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.
************************************************
ನಮಸ್ತುಳಸೀ
ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ
ನಮೋ
ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||
ಯನ್ಮೂಲೆ
ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ
ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||
ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣವಾದ , ವಿಷ್ಣುಪ್ರಿಯೆಯಾದ, ಶುಭಸೂಚಕಳಾದ, ಮೋಕ್ಷಪ್ರದಳಾದ, ಸರ್ವಸಂಪತ್ಪ್ರದಾಯಿನಿಯಾದ ಜಗನ್ಮಾತೆ ಶ್ರೀತುಳಸೀ ದೇವಿಯನ್ನು ನಮಸ್ಕರಿಸುತ್ತೇನೆ..
ತುಳಸೀದೇವಿಯೇ ನಿನ್ನ ಮೂಲದಲ್ಲಿಯೇ ಗಂಗಾದಿ ಸರ್ವ ತೀರ್ಥಗಳು ವಾಸಿಸುತ್ತಿರುವವು, ನಿನ್ನ ಮಧ್ಯಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿದ್ದಾರೆ, ನಿನ್ನ ಅಗ್ರಭಾಗದಲ್ಲಿ ಸಕಲ ವೇದಗಳೂ ಇರುವುದರಿಂದ ಇಂತಹ ತುಳಸೀ ದೇವಿಗೆ ನಿತ್ಯವೂ ನಮಸ್ಕಾರ ಮಾಡವೆನು..
ಸರ್ವದೇವತೆಗಳ
ಪ್ರತ್ಯಕ್ಷ ರೂಪವನ್ನು ಹೊಂದಿರುವ ತುಳಸೀ ದೇವಿಯು ಅತ್ಯಂತ ಪವಿತ್ರಳೂ, ಶುಭಪ್ರದಳೂ, ಪೂಜ್ಯಳೂ ಆಗಿದ್ದು ಕಾಮಧೇನು, ಕಲ್ಪವೃಕ್ಷದಂತೆ ಕಲಿಯುಗದಲ್ಲಿ ಮಹಿಮಾನ್ವಿತ ಸ್ಥಾನವನ್ನು ಹೊಂದಿರುವಳು ...
ಇಂತಹ
ಅಮೃತ ಸಮಾನವಾದ "ತುಳಸೀ" ಗಿಡದ ಪೂಜೆಯನ್ನು ಮಾಡುವುದು ಎಲ್ಲಾ ಸ್ತ್ರೀಯರ ಪ್ರಮುಖ ಕರ್ತವ್ಯವಾಗಿದೆ..
ಪುರುಷರೂ
ಮಾಡಬಹುದು..
ಕೆಲವು
ಮುಖ್ಯ ಸೂಚನೆಗಳು
೧.
ತುಳಸೀ ಪೂಜೆಯನ್ನು ನಿತ್ಯವೂ ಮಾಡುವುದರಿಂದ ಸರ್ವಸೌಭಾಗ್ಯವೂ ದೊರೆಯುತ್ತದೆ..
ಇಲ್ಲದಿದ್ದಲ್ಲಿ
ಪ್ರತಿ ತಿಂಗಳ ಶುದ್ಧ ದ್ವಾದಶಿಯಂದು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ..ಈ ದಿನ ಯಾವುದೇ
ಕಾರಣಕ್ಕೂ ತುಲಸಿಯನ್ನು ಕೀಳಬಾರದು.
೨.
ವಿಶೇಷವಾಗಿ ಪ್ರತೀ ವರ್ಷದ ಕಾರ್ತಿಕಮಾಸದ "ಶುದ್ಧ ದ್ವಾದಶಿ" ಯಂದು ತುಳಸೀಪೂಜೆ ಮಾಡಲೇಬೇಕು..
೩.
ತುಳಸೀ ಗಿಡವನ್ನು ನೆಲಕ್ಕಿಂತ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಬೆಳೆಸಬೇಕು..ಉದಾ:-ತುಳಸೀ ಕಟ್ಟೆ ಅಂದಾಜು ನಮ್ಮ ಮೊಣಕಾಲಿಗಿಂತ ಕೆಳಗಿರುವುದು ಉತ್ತಮವಲ್ಲ.(ಪಾಟ್ ಗಳಲ್ಲಿಟ್ಟ ಗಿಡಗಳಿಗೆ ಇದು ಅನ್ವಯಿಸುವುದಿಲ್ಲ)
೪.
ಕಾರ್ತಿಕಮಾಸದಲ್ಲಿ ಪೂರ್ತಿಯಾಗಿ
ತುಳಸೀ ಗಿಡದ ಸುತ್ತಲೂ "ನೆಲ್ಲಿ ಕಾಯಿ" ದೀಪವನ್ನು ಬೆಳಗಿ ಪೂಜಿಸಿದರೆ ಉತ್ತಮ ಫಲ ದೊರೆಯುವುದು..
ಹಣದ
ಸಮಸ್ಯೆ ನಿವಾರಣೆಯಾಗಿ, ಸಂಸಾರದಲ್ಲಿ ನೆಮ್ಮದಿ ಕಾಣುವಿರಿ..ವಿಶೇಷವಾಗಿ ದ್ವಾದಶೀ ದಿನದಿಂದ ಪೂರ್ಣಿಮಾ ಪರ್ಯಂತ.ಶ್ರೀ ತುಲಸ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕಾರ್ತೀಕ ರಾಧಾ ದಾಮೋದರನನ್ನು ಪೂಜಿಸಬೇಕು.
೫.
"ಶ್ರೀ ತುಳಸೀ ಮತ್ತು ಕೃಷ್ಣತುಳಸೀಗಳಲ್ಲಿ ಪರಮಾತ್ಮನ ಪೂಜೆಗೆ ಶ್ರೀ ತುಲಸಿಯೇ ಶ್ರೇಷ್ಠ. ಕೃಷ್ಣ ತುಲಸೀಯನ್ನು ಪೂಜೆಗೆ ಉಪಯೋಗಿಸುವಾಗ ಅದರೊಂದಿಗೆ ಒಂದಾದರೂ ಶ್ರೀ ತುಲಸೀ ಇರಲಿ.
೬.
ತುಳಸೀ ಪೂಜೆಯಲ್ಲಿ ಸಿಹಿ ನೈವೇದ್ಯ ಮಾಡಬೇಕು.. ದ್ವಾದಶೀ ದಿನ ದೋಸೆ ಬೆಲ್ಲ ಹಾಕಿದ ಅವಲಕ್ಕಿ ವಿಶೇಷ.
೭.
ಸ್ನಾನಕ್ಕೆ ಮುಂಚೆ ಮತ್ತು ಊಟದ ನಂತರ ತುಳಸಿಯನ್ನು ಬಿಡಿಸಲೇಬಾರದು..
೮.
ತುಳಸೀದಳವನ್ನು ಆದಷ್ಟೂ ಅಷ್ಟಮೀ, ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶೀ,ದ್ವಾದಶೀ, ಸಂಕ್ರಮಣ, ಭಾನುವಾರ, ಮಂಗಳವಾರ, ಶುಕ್ರವಾರಗಳಂದು,(ಮಧ್ಯಾಹ್ನ ಹಾಗೂ ಸಂಜೆ ಯಾವುದೇ ದಿನವಾದರೂ) ಕೀಳಬಾರದು..
(ಅನಿವಾರ್ಯ
ಪರಿಸ್ಥಿತಿಯಲ್ಲಿ ಪರವಾಗಿಲ್ಲ)ವೈಷ್ಣವೈಸ್ತು ಸದಾ ಗ್ರಾಹ್ಯಾ ತುಲಸೀ ದ್ವಾದಶೀಂ ವಿನಾ। ಅನ್ಯೇ ವಿಧಿ ನಿಷೇಧಾಸ್ತು ಅನ್ಯಯೋರೇವ ಕೇವಲಮ್।।
೯.
ತುಲಸೀ ಪೂಜೆಗಾಗಿ ಇರಿಸಿರುವ ತುಳಸೀ ಗಿಡದಿಂದ ತುಳಸಿಯನ್ನು ಕೀಳಬಾರದು..(ಅನಿವಾರ್ಯತೆಯ ಹೊರತು)
೧೦.
ತುಳಸೀ ಗಿಡದ ಮೃತ್ತಿಕೆಯು ಕುಂಕುಮದಂತೆಯೇ ಶ್ರೇಷ್ಠ ಸ್ಥಾನ ಹೊಂದಿದೆ..
ಇದನ್ನು
ಧರಿಸಿರುವುದರಿಂದ ಯಾವ ದುಷ್ಟಭಯವೂ ಇರುವುದಿಲ್ಲ ಮತ್ತು ಮಾಟ ಮಂತ್ರ ತಟ್ಟುವುದಿಲ್ಲ..
೧೧.
ಲಕ್ಷ್ಮೀ ಪೂಜೆಯನ್ನು ಮಾಡುವವರು ಮೊದಲು ತುಳಸೀ ಪೂಜೆಯನ್ನು ಮಾಡಿ, ನಂತರ ಲಕ್ಷ್ಮೀ ಪೂಜೆ ಮಾಡಿದರೆ ಅತ್ಯಂತ ಶುಭಫಲಗಳು ಶೀಘ್ರವಾಗಿ ಬರುವುದು..ಗೌರೀ ಪೂಜೆಯಲ್ಲೂ ಕೂಡಾ.
12. ಮನೆಯ
ಹತ್ತಿರ ಅಥವಾ ಅಂಗಡಿಯ ಹತ್ತಿರ... ಮಾಟ ಮಂತ್ರದ ವಸ್ತುಗಳು ಬಿದ್ದಿದ್ದರೆ , ಅಂತಹ ವಸ್ತುಗಳ ಮೇಲೆ ತುಳಸೀ ಪತ್ರೆಯನ್ನು ಹಾಕುವುದರಿಂದ ತುಲಸೀ ಮೃತ್ತಿಕೆಯಿಂದ ಕೂಡಿದ ನೀರು ಚಿಮುಕಿಸುವುದರಿಂದ, ಆ ಮಾಟ ಮಂತ್ರದಲ್ಲಿನ
ವಸ್ತುಗಳ ಶಕ್ತಿ ಪೂರ್ಣವಾಗಿ ಹೊರಟುಹೋಗುತ್ತದೆ..
ಮಾಟ
ಮಂತ್ರ ಕೆಲಸ ಮಾಡುವುದಿಲ್ಲ..!
ಇಂತಹ
ತುಳಸೀ ಪೂಜೆಯನ್ನು ಪ್ರತಿದಿನ ಮಾಡುವುದು ಅತ್ಯಂತ ಶ್ರೇಯಸ್ಕರವಾದುದು..
Courtesy : Whatsapp