*ಚಕ್ರಗಳು*
* ಯೋಗ ಬಂಧುಗಳೆ,
ಒಂದು Car. ಆ ಕಾರಿಗೆ ನಾಲ್ಕು ಚಕ್ರಗಳು. ನಾಲ್ಕೂ ಚಕ್ರಗಳು ಸುಸ್ಥಿತಿಯಲ್ಲಿ ಇದ್ದರೆ ಕಾರ್ ಸುಗಮವಾಗಿ ಚಲಿಸಬಲ್ಲುದು. ಆಕಸ್ಮಾತ್ ಯಾವುದಾದರೂ ಚಕ್ರ ಸುಸ್ಥಿತಿಯಲ್ಲಿ ಇಲ್ಲದಿದ್ದರೆ, ಅದನ್ನು ಸರಿಪಡಿಸಬೇಕು.
ತದೋರೀತಿಯಲ್ಲಿ ದೇಹ ಎಂಬ ಕಾರಿಗೆ ಏಳು ಚಕ್ರಗಳು. ಒಂದೇ ಒಂದು ವ್ಯತ್ಯಾಸ ಏನೆಂದರೆ, ಕಾರಿನ ಚಕ್ರಗಳು ಕಣ್ಣಿಗೆ ಕಾಣುತ್ತವೆ. ದೇಹದ ಚಕ್ರಗಳು ಕಣ್ಣಿಗೆ ಕಾಣುವುದಿಲ್ಲ. ಏಕೆಂದರೆ ದೇಹದ ಚಕ್ರಗಳು ಸ್ಥೂಲ ದೇಹದ ಚಕ್ರಗಳಲ್ಲ. ಬದಲಾಗಿ ಸೂಕ್ಷ್ಮ ದೇಹದ ಸೂಕ್ಷ್ಮ ಚಕ್ರಗಳು.
ಒಟ್ಟು 44 ಚಕ್ರಗಳು. ಅವುಗಳಲ್ಲಿ 21 ಮುಖ್ಯ, 7 ಅತೀ ಮುಖ್ಯ ಚಕ್ರಗಳು. ಈ ಅತೀ ಮುಖ್ಯ ಚಕ್ರಗಳು ಸಮತೋಲನದಿಂದ ಇದ್ದರೆ ಮಾತ್ರ ದೇಹ ಸುಸ್ಥಿತಿಯಲ್ಲಿ ಇರುತ್ತದೆ. ಇಲ್ಲದಿದ್ದರೆ ಇಲ್ಲ ಸಲ್ಲದ ಕಾಯಿಲೆ ಕಸಾಲೆಗಳು ಬಾಧೆ ಕೊಡುತ್ತವೆ. ಈ ಚಕ್ರಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ ಮಾಡೋಣ.
ಈ ಚಕ್ರಗಳೋ ಸೂಕ್ಷ್ಮಾತಿ ಸೂಕ್ಷ್ಮ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು. ದೇಹ, ಆತ್ಮ ಹಾಗೂ ಮನಸ್ಸುಗಳು ಸಮತೋಲಿತವಾಗಿ ಇರಲು ಸಹಕಾರಿಯಾಗಿವೆ.
ಸ್ಥೂಲ ಮೇರುದಂಡದಲ್ಲಿ ಆಧ್ಯಾತ್ಮಿಕ ಸ್ಥಾನ ಪಡೆದುಕೊಂಡಿರುವ ಪ್ರತಿ ಚಕ್ರವೂ ತನ್ನದೇ ಆದ ಮಹತ್ವ ಹೊಂದಿದೆ. ಈ ಚಕ್ರಗಳು ಗ್ರಂಥಿ ಸಂಬಂಧಿತ(Endocrine)ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಹೊಂದಿವೆ. ಈ 7 ಚಕ್ರಗಳು ಯಾವುವೆಂದರೆ,
1.ಮೂಲಾಧಾರ ಚಕ್ರ
2.ಸ್ವಾಧಿಷ್ಟಾನ ಚಕ್ರ
3.ಮಣಿಪೂರ ಚಕ್ರ
4.ಅನಹತ ಚಕ್ರ
5.ವಿಶುದ್ಧಿ ಚಕ್ರ
6.ಆಜ್ಞಾ ಚಕ್ರ
7.ಸಹಸ್ರಾರ ಚಕ್ರ
ಈ ಚಕ್ರಗಳ ಕಾಲ್ಪನಿಕ ಕಲ್ಪನಾ ವಿವರಗಳನ್ನು ತಿಳಿದುಕೊಳ್ಳೊಣ
** 1.ಮೂಲಾಧಾರ ಚಕ್ರ*
ಹೆಸರೇ ಸೂಚಿಸುವಂತೆ ಇದು ಮೇರುದಂಡದ(ಬೆನ್ನು ಹುರಿ)ಮೂಲದಲ್ಲಿ, ಆಸನ ದ್ವಾರದಿಂದ ಸ್ವಲ್ಪ ಮೇಲೆ ಇದೆ.
ಕೆಂಪು ಬಣ್ಣ ನಾಲ್ಕು ದಳಗಳು. ಪೃಥ್ವಿ ತತ್ವವನ್ನು ಹೊಂದಿದೆ. ಗಣಪತಿ ಇದರ ಅಧಿಪತಿ. ಇದಕ್ಕೆ ಸಂಪರ್ಕ ಹೊಂದಿರುವ ಗ್ರಂಥಿ ಪ್ರಾಸ್ಟ್ರೇಟ್. ಇದು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಆರೋಗ್ಯ ದಕ್ಷತೆ ಯಲ್ಲಿ ಏರುಪೇರು ಉಂಟಾಗುತ್ತದೆ.
*2.ಸ್ವಾಧಿಷ್ಟಾನ ಚಕ್ರ*
ಇದರ ಸ್ಥಳ ಹೊಕ್ಕಳ ಭಾಗದಿಂದ ಅಂದಾಜು ಮೂರು ಇಂಚು ಕೆಳಗೆ. ಕಿತ್ತಳೆ ಬಣ್ಣ ಆರು ದಳಗಳು. ವರುಣ(ಜಲ)ತತ್ವ ಹೊಂದಿರುವ ಇದರ ಅಧಿಪತಿ ಬ್ರಹ್ಮದೇವ. ಆಡ್ರೆನಲ್ ಗ್ರಂಥಿ ಇದಕ್ಕೆ ಸಂಪರ್ಕ ಹೊಂದಿದೆ. ಇದು ಜಾಗೃತ ಸ್ಥಿತಿಯಲ್ಲಿ ಇಲ್ಲದಿದ್ದರೆ, ಮಹಿಳೆಯರಿಗೆ ಋತುಸ್ರಾವ, ಋತುಚಕ್ರ ಹಾಗೂ ಗರ್ಭಾಶಯ ಸಂಬಂಧಿತ ಹಾಗೂ ಪುರುಷರಿಗೆ ವೃಷಣ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
*3.ಮಣಿಪೂರ ಚಕ್ರ*
ಹಳದಿ ಬಣ್ಣ ಹತ್ತು ದಳಗಳನ್ನು ಹೊಂದಿರುವ ಇದರ ಸ್ಥಾನ ಹೊಕ್ಕಳ ಹಿಂಭಾಗ. ಅಗ್ನಿ ತತ್ವ ಹೊಂದಿರುವ ಇದರ ಅಧಿಪತಿ ಮಹಾವಿಷ್ಣು. ಪ್ಯಾಂಕ್ರಿಯಾಸ್ ಗ್ರಂಥಿಯೊಂದಿಗೆ ಸಂಪರ್ಕ ಹೊಂದಿರುವ ಇದು ಸಮತೋಲನ ತಪ್ಪಿದರೆ ಮಧುಮೇಹ, ಮಲಬದ್ಧತೆ ಹಾಗೂ ಅಪಚನ ದಂತಹ ಸಮಸ್ಯೆಗಳು ಉಲ್ಬನಗೊಳ್ಳುತ್ತವೆ.
*4.ಅನಹತ ಚಕ್ರ*
ಹಸಿರು ಬಣ್ಣ 12 ದಳಗಳನ್ನು ಹೊಂದಿರುವ ಇದರ ಸ್ಥಾನ ಎದೆಯ ಮಧ್ಯಭಾಗ. ವಾಯುತತ್ವ ಹೊಂದಿರುವ ಇದರ ಅಧಿಪತಿ ರುದ್ರದೇವ.
ಥೈಮಸ್ ಗ್ರಂಥಿಯೊಂದಿಗೆ ಸಂಪರ್ಕ ಹೊಂದಿರುವ ಈ ಚಕ್ರ ಜಾಗೃತ ಸ್ಥಿತಿಯಲ್ಲಿ ಇಲ್ಲದಿದ್ದರೆ ಹೃದಯ ಸಂಬಂಧೀ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
*5.ವಿಶುದ್ಧಿ ಚಕ್ರ*
ನೀಲಿ ಬಣ್ಣ 16 ದಳಗಳನ್ನು ಹೊಂದಿರುವ ಈ ಚಕ್ರದ ಸ್ಥಾನ ಗ್ರೀವ ಸಂಧಿ(ಗಂಟಲು ಭಾಗ). ಆಕಾಶ ತತ್ವ ಹೊಂದಿರುವ ಇದರ ಅಧಿಪತಿ ಜೀವಾತ್ಮ. ಥೈರಾಯ್ಡ ಗ್ರಂಥಿಗೆ ಸಂಬಂಧ ಇರುವ ಈ ಚಕ್ರ ಜಾಗೃತ ಸ್ಥಿತಿ ತಪ್ಪಿದರೆ ಶ್ವಾಶಕೋಶ ಹಾಗೂ ಗಂಟಲಿಗೆ ಸಂಬಂಧಿಸಿದ ತೊಂದರೆ ಹೆಚ್ಚಾಗುತ್ತವೆ.
*6.ಆಜ್ಞಾ ಚಕ್ರ*
ಇಂಡಿಗೊ(ಆಕಾಶ ನೀಲಿ)
ಬಣ್ಣ ಎರಡು ದಳ ಹೊಂದಿರುವ ಇದರ ಜಾಗ ಭೃಕುಟಿ. ಮಹೇಶ್ವರ ಅಧಿಪತಿಯಾಗಿರುವ ಈ ಚಕ್ರ ಆಕಾಶ ತತ್ವವಳ್ಳದ್ದು. ಪಿಟ್ಯುಟರಿ ಗ್ರಂಥಿಯೊಂದಿಗೆ ನೇರ ಸಂಪರ್ಕ ಹೊಂದಿರುವ ಈ ಚಕ್ರ ಸುಸ್ಥಿತಿ ತಪ್ಪಿದರೆ ಒತ್ತಡ, ತಲೆನೋವು, ಸೈನಸ್ ಮೊದಲಾದ ತೊಂದರೆಗಳು ಉಲ್ಬನ ಗೊಳ್ಳುತ್ತವೆ.
*7.ಸಹಸ್ರಾರ ಚಕ್ರ*
ಮೆದುಳಿನ ಮೇಲ್ಭಾಗದಲ್ಲಿ ಇರುವ ಈ ಚಕ್ರವು ನೇರಳೆ(ವಾಯ್ಲೆಟ್)ಬಣ್ಣ ಸಹಸ್ರ ದಳಗಳನ್ನು ಹೊಂದಿದ್ದು, ಸೆರೆಬ್ರಲ್ ಗ್ರಂಥಿಯೊಂದಿಗೆ ಸಂಪರ್ಕ ಪಡೆದಿದೆ. ಪರಮೇಶ್ವರ ಅಧಿಪತಿಯಾಗಿರುವ ಇದು ಜಾಗೃತ ಆಗದಿದ್ದಲ್ಲಿ ಮನೋರೋಗ, ಖಿನ್ನತೆ ಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
*ಯಾವುದೇ ಕಾಯಿಲೆ ಬಾರದೇ ನಮ್ಮ ಆರೋಗ್ಯ ಸದಾ ಉತ್ತಮವಾಗಿರಬೇಕು ಎಂದಾದಲ್ಲಿ ಸಪ್ತ ಚಕ್ರಗಳನ್ನು ಜಾಗೃತಗೊಳಿಸಬೇಕು. ಅದಕ್ಕಾಗಿ ಭೂತಶುದ್ಧಿ ಕ್ರಿಯೆ ಮಾಡಬೇಕು.
🙏ಹರಿ ಓಂ🙏