Popular Posts

Friday, 10 May 2019

ಗಾಯತ್ರಿ ಮಂತ್ರದ ಅರ್ಥ

ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ
〰〰〰〰〰〰〰〰〰〰〰〰〰〰
ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್||

ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.

ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.

ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.

ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ , ಕೃಷ್ಣ….
ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.

ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.

ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….

ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ…

ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ…

ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….

ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”…

ಧಿಯಃ – ಅಂದರೆ ರಾಮಾವತಾರ
“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…

ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”.

ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…

ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ
ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.

ಸಿರಿಧಾನ್ಯಗಳ ಔಷಧಿಯ ಗುಣಗಳು

*ಸಿರಿಧಾನ್ಯಗಳ ಔಷಧಿಯ ಗುಣಗಳು*

*ನವಣೆ*
(Foxtail Millet)
👉 ಮದುಮೇಹ ಹಾಗೂ ಬಿ ಪಿ ನಿಯಂತ್ರಣ ಮಾಡುತ್ತದೆ.
👉 ನರಗಳ ದೌರ್ಬಲ್ಯವನ್ನು ನಿಯಂತ್ರಿಸುತ್ತದೆ.
👉 ಶಕ್ತಿ ವರ್ದನೆಗಾಗಿ ಸಹಕಾರಿಯಾಗಿದೆ.

*ಹಾರಕ*
(Kodo Millet)
👉ರಕ್ತ ಶುದ್ದೀಕರಣಕ್ಕೆ ಸಹಕಾರಿ.
👉ರಕ್ತ ಉತ್ಪನ್ನ ಹೆಚ್ಚಿಸುತ್ತದೆ.
👉ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

*ಸಾಮೆ*
(Little Millet)
👉ಬಂಜೆತನ ನಿವಾರಣೆ ಹಾಗೂ ಮುಟ್ಟಿನ ಸಮಸ್ಯೆ ನಿವಾರಿಸುತ್ತದೆ.
👉ಅಂಡಾಣು ಮತ್ತು ವೀರ್ಯಾಣು ವೃದ್ದಿಗಾಗಿ ಸಹಕಾರಿಯಾಗುತ್ತದೆ.
👉ಶರೀರದ ಉಷ್ಣವನ್ನು ನಿಯಂತ್ರಿಸುತ್ತದೆ.

*ಕೊರಲೆ*
(Brown Top Millet)
👉ಜೀರ್ಣಕ್ರೀಯೆ ಸುಗಮವಾಗಲು ಸಹಕಾರಿ.
👉ಮಲಬದ್ದತೆ ನಿವಾರಣೆಯಾಗುತ್ತದೆ.
👉ನರ ದೌರ್ಬಲ್ಯವನ್ನು ನಿವಾರಿಸುತ್ತದೆ.

*ಬರಗು*
(Proso Millet)
👉ಕೊಲೆಸ್ಟ್ರಾಲ್ ತಗ್ಗಿಸುತ್ತದೆ.
👉ಚರ್ಮ ರೋಗಕ್ಕೆ ರಾಮಬಾಣ.
👉ತ್ವಚೆಯ ಹೊಳಪು ಹೆಚ್ಚಿಸುತ್ತದೆ.

*ಊದಲು*
(Barnyard Millet)
👉ಲಿವರ್ ಸಮಸ್ಯೆ ಹಾಗೂ ಕಾಮಾಲೆ ನಿವಾರಿಸುತ್ತದೆ.
👉ಥೈರಾಯಿಡ್ ಹಾಗೂ ಕಿಡ್ನಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.
👉ಲೈಂಗಿಕ ಸಮಸ್ಯೆಗಳಿಗೆ ಪರಿಹಾರ

*ಸಜ್ಜೆ*
(Peral Millet)
👉ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗುವದು.
👉ದೇಹದ ತೂಕ ಇಳಿಸಲು ಸಹಕಾರಿ
👉ದೇಹದ ಸಮತೋಲನ ಕಾಪಾಡುತ್ತದೆ.

*ಜೋಳ*
(Great Millet)
👉ಪಚನ ಕ್ರಿಯೆಗೆ ಸಹಕಾರಿಯಾಗುತ್ತದೆ.
👉ತಾರುಣ್ಯ ಕಾಪಾಡುತ್ತದೆ.
👉ಮದುಮೇಹ ನಿಯಂತ್ರಿಸಲು ಸಹಕಾರಿ.

*ರಾಗಿ*
(Finger Millet)
👉ಮೂಳೆಗಳನ್ನು ನಿಯಂತ್ರಿಸುತ್ತದೆ.
👉ಹೃದಯ ಸಂಭಂದಿ ಕಾಯಿಲೆಗಳ ನಿವಾರಣೆಗೆ ಸಹಕಾರಿ.
👉ಕೆಂಪು ರಕ್ತಕಣ ಹೆಚ್ಚಿಸಲು ಸಹಕಾರಿಯಾಗುತ್ತದೆ.

*ನಿಮಗಿದು ತಿಳಿದಿರಲಿ*
ಅಕ್ಕಿಯಿಂದ ಮಾಡುವ ಎಲ್ಲ ತಿಂಡಿ ತಿನಸುಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು

*"ಶುದ್ಧ ಆಹಾರ - ಪರಿಶುದ್ಧ ಜೀವನ"*

*"ಆಹಾರ ಪದ್ಧತಿ ಬದಲಾಯಿಸೋಣ"*

*"ಬನ್ನಿ ಸಾವಯವ ಸಿರಿಧಾನ್ಯ ಬೆಳೆಯೋಣ"*

*"ಸಾವಯವ ಸಿರಿಧಾನ್ಯ ಉಣ್ಣೋಣ"*

Saturday, 13 April 2019

ಶ್ರೀರಾಮನವಮಿ ಮಹತ್ವ

🔯🕉🔯🌹🚩🙏ಜೈ ಶ್ರೀರಾಮ್🙏🚩
🌿🍃ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ🍃🌿

🔶ಶ್ರೀ ವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನ ಜನ್ಮಪ್ರಿತ್ಯರ್ಥವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ಚೈತ್ರ ಶುಕ್ಲ ನವಮಿಯನ್ನು ರಾಮನವಮಿ ಎನ್ನುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಪಂಚಗ್ರಹಗಳಿದ್ದಾಗ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನನವಾಯಿತು.

🔯ಶ್ರೀರಾಮನವಮಿ ಮಹತ್ವ🔯
🔶ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ|’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.

🔶ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ಈ ಉತ್ಸವವು ಜರಗುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ, ಕೀರ್ತನೆಗಳ ಆಯೋಜನೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರಗಳು, ರಥದಲ್ಲಿ ಮೆರವಣಿಗೆ ಮುಂತಾದ ವಿಧಗಳಲ್ಲಿ ಈ ಉತ್ಸವವು ಆಚರಿಸಲ್ಪಡುತ್ತದೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಹರಿಕಥೆ ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಕುಲಾವಿ) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂಗಳನ್ನು ಅರ್ಪಿಸುತ್ತಾರೆ.

🔶ರಾಮ ನವಮಿ ಶ್ರೀರಾಮನ ಜನ್ಮದಿನ. ಆದ್ದರಿಂದಲೇ ಹಿಂದೂಗಳಿಗೆ ರಾಮನವಮಿ ಒಂದು ಮಹತ್ವಪೂರ್ಣ ಹಬ್ಬವಾಗಿದೆ. ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ಭಜನೆ, ಕೀರ್ತನೆಗಳು ಮತ್ತು ಮೆರವಣಿಗೆ ಹಬ್ಬದ ಪ್ರಮುಖ ಭಾಗಗಳಾಗಿವೆ. ಮೆರವಣಿಗೆ ಹಬ್ಬದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಶ್ರೀರಾಮ ದೇವರು, ಸೀತಾಮಾತೆ, ಲಕ್ಷ್ಮಣ, ಹನುಮಂತ ದೇವರುಗಳ ಪ್ರತಿಮೆಗಳನ್ನು ರಥದಲ್ಲಿ ಸಿಂಗರಿಸಿ ಪ್ರತಿಷ್ಟಾಪಿಸುತ್ತಾರೆ. ನಂತರ ಬೀದಿಯ ಉದ್ದಕ್ಕೂ ಮೆರವಣಿಗೆಯಲ್ಲಿ ರಥವನ್ನು ಎಳೆದುಕೊಂಡು ಹೋಗುತ್ತಾರೆ.

🔯ಮರ್ಯಾದಾ ಪುರುಷೋತ್ತಮ🔯
🔶ಆದರ್ಶ ಪುತ್ರ :
ರಾಮನು ತಂದೆ ತಾಯಿಯರ ಆಎಯನ್ನು ಪಾಲಿಸಿದನು; ಆದರೆ ಸಂದರ್ಭ ಬಂದಾಗ ಹಿರಿಯರಿಗೂ ಉಪದೇಶ ಮಾಡಿದನು. ಉದಾ. ವನವಾಸದ ಪ್ರಸಂಗದಲ್ಲಿ ದುಃಖಿತರಾಗಬೇಡಿ ಎಂದು ತಂದೆತಾಯಿಗೆ ಹೇಳಿದನು. ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಲು ಕಳುಹಿಸಿದ ಕೈಕೇಯಿ ಮಾತೆಯನ್ನು ವನವಾಸದಿಂದ ಹಿಂತಿರುಗಿ ಬಂದ ರಾಮನು ನಮಸ್ಕರಿಸಿ ಪ್ರೇಮದಿಂದ ಮಾತನಾಡಿಸಿದನು.

🔶ಆದರ್ಶ ಸಹೋದರ :
ಇಂದಿಗೂ ಆದರ್ಶ ಸಹೋದರರ ಪ್ರೇಮಕ್ಕೆ ರಾಮ-ಲಕ್ಷ ಣರ ಉಪಮೆಯನ್ನೇ ಕೊಡುತ್ತಾರೆ.

🔶ಆದರ್ಶ ಪತಿ :
ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದನು. ಸೀತೆಯನ್ನು ತ್ಯಾಗ ಮಾಡಿದ ನಂತರ ರಾಮನು ವಿರಕ್ತ ಜೀವನವನ್ನು ನಡೆಸುತ್ತಿದ್ದನು. ಮುಂದೆ ಯಜ್ಞವನ್ನು ಮಾಡುವಾಗ ಪತ್ನಿಯ ಅವಶ್ಯಕತೆ ಇದ್ದರೂ ಬೇರೆ ಪತ್ನಿಯನ್ನು ಸ್ವೀಕರಿಸದೇ ಸೀತೆಯ ಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಇರಿಸಿಕೊಂಡಿದ್ದನು. ಇದರಿಂದ ರಾಮನ ಏಕಪತ್ನಿ ವ್ರತವು ಕಂಡು ಬರುತ್ತದೆ. ಆ ಕಾಲದಲ್ಲಿ ರಾಜರು ಹಲವಾರು ರಾಣಿಯರನ್ನು ವರಿಸುವ ವಾಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ರಾಮನ ಏಕಪತ್ನಿ ವ್ರತವು ವಿಶಿಷ್ಟವಾಗಿದೆ.

🔶ಆದರ್ಶ ಮಿತ್ರ :
ರಾಮನು ಸುಗ್ರೀವ, ವಿಭೀಷಣ ಮುಂತಾದವರಿಗೆ ಅವರ ಸಂಕಟದ ಸಮಯದಲ್ಲಿ ಸಹಾಯ ಮಾಡಿದನು.

🔶ಆದರ್ಶ ರಾಜ :
ಪ್ರಜೆಗಳು ಸೀತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ದಾಗ ರಾಮನು ತನ್ನ ವೈಯಕ್ತಿಕ ಸುಖದ ಬಗ್ಗೆ ಚಿಂತಿ ಸದೇ, ರಾಜನ ಧರ್ಮವೆಂದು ತನ್ನ ಧರ್ಮಪತ್ನಿ ಯನ್ನು ತ್ಯಜಿಸಿದನು. ಇದರ ಬಗ್ಗೆ ಕಾಳಿದಾಸನು ಕೌಲಿನ ಭೀತೇನ ಗೃಹನ್ನಿರಸ್ತಾ ನ ತೇನ ವೈದೇಹ ಸುತಾ ಮನಸ್ತಃ | (ಅರ್ಥ : ಜನರ ಆಪಾದನೆಯ ಭಯದಿಂದ ರಾಮನು ಸೀತೆಯನ್ನು ಮನೆಯಿಂದ ಹೊರಗೆ ಹಾಕಿದನು, ಮನಸ್ಸಿನಿಂದ ಅಲ್ಲ.) ಎನ್ನು ವಂತಹ ಮಾರ್ಮಿಕ ಶ್ಲೋಕವನ್ನು ರಚಿಸಿದ್ದಾನೆ.

🔶ಆದರ್ಶ ಶತ್ರು :
ರಾವಣನ ಮೃತ್ಯುವಿನ ನಂತರ ರಾವಣನ ತಮ್ಮನಾದ ವಿಭೀಷಣನು ಅಣ್ಣನಿಗೆ ಅಗ್ನಿಸಂಸ್ಕಾರವನ್ನು ಮಾಡಲು ನಿರಾಕರಿಸಿದಾಗ, ರಾಮನು ಮರಣದೊಂದಿಗೆ ಶತ್ರುತ್ವವೂ ಮುಗಿದು ಹೋಗುತ್ತದೆ, ನೀನು ರಾವಣನ ಅಂತ್ಯಸಂಸ್ಕಾರವನ್ನು ಮಾಡದಿದ್ದರೆ ನಾನೇ ಮಾಡುತ್ತೇನೆ; ಅವನು ನನಗೂ ಸಹೋದರನೇ ಆಗಿದ್ದಾನೆ ಎಂದು ಹೇಳಿದನು.

🔶ಧರ್ಮಪಾಲಕ :
ರಾಮನು ಧರ್ಮದ ಎಲ್ಲ ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದುದ ರಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಎನ್ನುತ್ತಾರೆ.

🔶ಏಕವಚನೀ :
ಯಾವುದೇ ಒಂದು ವಿಷಯವನ್ನು ಸತ್ಯವಾಗಿದೆ ಎಂದು ಒತ್ತಿ ಹೇಳ ಬೇಕಾದರೆ, ನಾವು ಅದನ್ನು ಮತ್ತೆ ಮತ್ತೆ ಹೇಳುತ್ತೇವೆ ಅಥವಾ ನಾನು ತ್ರಿವಾರ ಸತ್ಯ ಹೇಳುತ್ತೇನೆ ಎನ್ನುತ್ತೇವೆ. ಶಾಂತಿಃ | ಶಾಂತಿಃ | ಶಾಂತಿಃ | ಹೀಗೂ ಮೂರು ಬಾರಿ ಹೇಳುತ್ತಾರೆ. ತ್ರಿವಾರ ಸತ್ಯದಲ್ಲಿನ ತ್ರಿವಾರ ಈ ಶಬ್ದವನ್ನು ಮುಂದಿನ ಎರಡು ಅರ್ಥಗಳಲ್ಲಿ ಉಪಯೋಗಿಸಲಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಹಾಗೆಯೇ ಮೂರು ಬಾರಿ ಯಾವುದೇ ವಿಷಯವನ್ನು ಕೇಳಿದರೆ ಅದು ಸತ್ಯವೆಂದು ತಿಳಿಯಬೇಕು.

🔶ಏಕಬಾಣೀ :
ರಾಮನ ಒಂದೇ ಬಾಣವು ಗುರಿಯನ್ನು ಭೇದಿಸುತ್ತಿತ್ತು. ಆದುದ ರಿಂದ ಅವನು ಎರಡನೆಯ ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ.

✡️ಶ್ರೀರಾಮನವಮಿ-ರಾಮಾಯಣ ಮಹತ್ವ✡️
🔶ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತಲೋಕ ಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ‘

ಶ್ರೀರಾಮ ಮಂತ್ರವೊಂದಿರಲು ಸಾಕು....
ಶ್ರೀರಾಮನಾಮ ಸ್ಮರಣೆ ಮಾತ್ರದಿಂದ ಕಪಿ ಸೈನ್ಯ ರಾಮೇಶ್ವರದಿಂದ ಲಂಕೆಗೆ ಸೇತುವೆಯನ್ನೇ ಕಟ್ಟಿತು... ದುಷ್ಟ ರಾವಣ, ಸಮುದ್ರಕ್ಕೆ ಎಸೆದ ಕಲ್ಲೂ ತೇಲಿತು.. ಇಲ್ಲಿದೆ ರಾಮಾಯಣದ ಸ್ವಾರಸ್ಯಕರ ಕಥೆ..

ಶ್ರೀರಾಮ ಮಂತ್ರದಲ್ಲೇ ಪ್ರಚಂಡ ಶಕ್ತಿ ಅಡಗಿದೆ ಹೀಗಾಗೇ ಕನ್ನಡ ಕುಲ ಪುಂಗವ ಹನುಮಂತ ಶ್ರೀರಾಮ ಜಪ ಮಾಡಿ ಭಗವಂತನೇ ಆದ. ಶ್ರೀರಾಮ ನಾಮದ ಶಕ್ತಿಯನ್ನು ನಿರೂಪಿಸುವ ಪ್ರಸಂಗವೂ ರಾಮಾಯಣದಲ್ಲಿದೆ. ದಶಕಂಠನಾದ ರಾವಣ ಸೀತಾ ಮಾತೆಯನ್ನು ಅಪಹರಿಸಿದ್ದ. ಶ್ರೀರಾಮ ಕಪಿ ಸೈನ್ಯದ ನೆರವಿನಿಂದ ಲಂಕೆಯ ಮೇಲೆ ಯುದ್ಧಕ್ಕೆಹೊರಟ.ರಾವಣನಿಗೆ  ದೂತರು ಈ ಸುದ್ದಿ ಮುಟ್ಟಿಸಿದರು. ಅಯ್ಯಾ ರಾವಣ, ಕಪಿಗಳು ಲಂಕೆಗೆ ಸೇತುವೆ ಕಟ್ಟುತ್ತಿದ್ದಾರೆ. ಕಲ್ಲಿನ ಮೇಲೆ ಶ್ರೀರಾಮ, ಜಯರಾಮ ಎಂದು ಬರೆದು ಸಾಗರಕ್ಕೆ ಎಸೆಯುತ್ತಿದ್ದಾರೆ. ಏನಾಶ್ಚರ್ಯ ಆ ಕಲ್ಲುಗಳು ತೇಲುತ್ತಿವೆ. ಸೇತುವೆ ಕಾರ್ಯ ನಿರ್ವಿಘ್ನವಾಗಿ ಸಾಗಿದೆ.
ಆಗ ರಾವಣ ಹೇಳಿದ. ಇದ್ಯಾವ ದೊಡ್ಡ ವಿಷಯ. ನಾನೂ ಕೂಡ ಸಮುದ್ರಕ್ಕೆ ಕಲ್ಲು ಎಸೆದರೆ ಅದೂ ತೇಲುತ್ತದೆ. ಎಲ್ಲರಿಗೂ ಆಶ್ಚರ್ಯ ಆಯಿತು. ಅಲ್ಲ ರಾವಣ ಹೇಳಿ ಕೇಳಿ ರಾಕ್ಷಸ. ದುಷ್ಟ. ಇವನು ಎಸೆದ ಕಲ್ಲು ತೇಲಲು ಸಾಧ್ಯವೇ ಎಂದು ಅನುಮಾನಗೊಂಡರು. ಸಭಾಸದರ ಮುಖದಲ್ಲಿ ಮೂಡಿದ ಪ್ರಶ್ನೆಯನ್ನು ಗ್ರಹಿಸಿದ ರಾವಣ ಎಲ್ಲರನ್ನೂ ಉದ್ದೇಶಿಸಿ, ನಿಮಗೆ ಅನುಮಾನ ಬೇಡ. ನನ್ನೊಂದಿಗೆ ಸಾಗರದ ತೀರಕ್ಕೆ ಬನ್ನಿ, ಕಲ್ಲು ಎಸೆಯುತ್ತೇನೆ. ಅದು ತೇಲುವುದನ್ನು ನೀವೇ ಕಣ್ಣಾರೆ ಕಾಣುವಿರಂತೆ ಎಂದು ಎಲ್ಲರನ್ನೂ ಕರೆದೊಯ್ದ.
ಅಲ್ಲೇ ಬಿದ್ದಿದ್ದ ಒಂದು ದೊಡ್ಡ ಕಲ್ಲು ಬಂಡೆಯನ್ನು ಕೈಗಳಲ್ಲಿ ಹಿಡಿದು ಮೇಲೆತ್ತಿ ಸಮುದ್ರಕ್ಕೆ ಎಸೆದ, ಆ ಹೆಬ್ಬಂಡೆ ದೋಣಿಯಂತೆ ಸಾಗರದಲ್ಲಿ ತೇಲಿತು. ಎಲ್ಲರೂ ಆಶ್ಚರ್ಯ. ನಮ್ಮ ರಾವಣನೇನು ಕಡಿಮೆ ಇಲ್ಲ. ರಾಮನಿಗೆ ಇವನು ಸರಿಸಾಟಿ ಎಂದು ಜಯಘೋಷ ಮಾಡಿದರು.
ರಾವಣನ ಮಡದಿ ಮಂಡೋದರಿಗೂ ಇದು ಆಶ್ಚರ್ಯ ಎನಿಸಿತು. ತನ್ನ ಪತಿ ರಾವಣ ಘಾತುಕ. ರಾವಣ ಎಸೆದ ಕಲ್ಲು ಹೇಗೆ ತೇಲಲು ಸಾಧ್ಯ. ಈ ಮರ್ಮ ಅರಿಯಲೇಬೇಕೆಂದು ಮಂಡೋದರಿ ಏಕಾಂತದಲ್ಲಿದ್ದಾಗ ರಾವಣನನ್ನೇ ಈ ಬಗ್ಗೆ ಕೇಳುತ್ತಾಳೆ. ಮಡದಿಯ ಒತ್ತಾಯಕ್ಕೆ ಮಣಿದ ರಾವಣ ಸತ್ಯ ಹೇಳುತ್ತಾನೆ.
ನೋಡು ಪ್ರಿಯೆ, ಇದು ರಾಜಕೀಯ ಮರ್ಮ. ರಾಮ ನನ್ನ ಮೇಲೆ ಯುದ್ಧ ಸಾರಲು ಬರುತ್ತಿದ್ದಾನೆ. ಈಗ ನನ್ನ ಸೈನಿಕರಿಗೆ ಧೈರ್ಯ ತುಂಬಬೇಕು. ನಾನೂ ರಾಮನಿಗೆ ಕಡಿಮೆ ಇಲ್ಲ ಎಂದು ನಿರೂಪಿಸಬೇಕಿತ್ತು. ಹೀಗಾಗಿ ನಾನು ಕಲ್ಲು ತೇಲುವಂತೆ ಮಾಡಲೇ ಬಿಕಿತ್ತು. ಅನಿವಾರ್ಯವಾಗಿ ಈ ಪರೀಕ್ಷೆಗೆ ನನ್ನನ್ನು ನಾನು ಒಡ್ಡಿಕೊಂಡೆ ಎಂದ.
ಆಗ ಮಂಡೋದರಿ ಅದೆಲ್ಲಾ ಸರಿ. ಆದರೆ, ನೀವು ಸಮುದ್ರಕ್ಕೆ ಹಾಕಿದ ಕಲ್ಲು ತೇಲಿದ್ದರ ಗುಟ್ಟೇನು? ಎಂದು ಕೇಳಿದಳು. ಆಗ ರಾವಣ ಹೇಳುತ್ತಾನೆ. ಇದು ರಾಜ ರಹಸ್ಯ ಯಾರಿಗೂ ಹೇಳಬೇಡ. ನನಗೂ ಕೂಡ ನಾನು ಹಾಕುವ ಕಲ್ಲು ತೇಲಲ್ಲ ಮುಳುಗತ್ತೆ ಅಂತ ಗೊತ್ತಿತ್ತು. ಹೀಗಾಗಿ ನಾನು ಕಲ್ಲನ್ನು ಸಮುದ್ರಕ್ಕೆ ಹಾಕುವ ಮುನ್ನ ಈ ಕಲ್ಲು ತೇಲದಿದ್ದರೆ ಶ್ರೀರಾಮ ಚಂದ್ರನ ಮೇಲಾಣೆ ಎಂದು ಹೇಳಿ ಹಾಕಿದೆ. ಕಲ್ಲು ತೇಲಿತು ಎಂದ.
ಅಂದರೆ ಶತ್ರುವಾದ ರಾವಣನಿಗೂ ರಾಮನ ಮಹಿಮೆ ತಿಳಿದಿತ್ತು. ಅಂಥದರಲ್ಲಿ ನಾವು ರಾಮನ ಪೂಜಿಸದಿದ್ದರೆ ಅದು ಸರಿಯಾದೀತೆ? ಇದು ಮಂತ್ರಾಲಯ ಮಠದ ಕಿರಿಯ ಸ್ವಾಮಿಗಳಾಗಿದ್ದ ಸುವಿದ್ಯೇಂದ್ರ ತೀರ್ಥರು 14 ವರ್ಷಗಳ ಹಿಂದೆ ಹೇಳಿದ ಕಥೆ ಇದು.

           ದುಷ್ಟನಾಶಕನಾದ ಶಿಷ್ಟರಕ್ಷಕನಾದ ಹನುಮಂತನ ಸ್ವಾಮಿಯಾದ
ಶ್ರೀಸೀತಾರಾಮಚಂದ್ರನನ್ನು ಭಕ್ತಿಯಿಂದ ಸ್ಮರಿಸಿದರೆ ಮಹಾಪಾಪಗಳೂಪರಿಹಾರವಾಗುತ್ತವೆ.ಸ್ವಾಮಿಯು ನಿಮಗೆಲ್ಲಾ ಒಳ್ಳೆಯದನ್ನೇ ಮಾಡಲಿ.
   "ಶ್ರೀರಾಮ ಜಯರಾಮ ಜಯ ಜಯ ರಾಮ"

Tuesday, 9 April 2019

ಸಂವತ್ಸರಗಳು

ಸಂವತ್ಸರಗಳ ವಿವರ

( 1867, 1927,1987,): ಪ್ರಭವ
(1868,1928,1988): ವಿಭವ
(1869,1929,1989): ಶುಕ್ಲ
(1870,1930,1990): ಪ್ರಮೋದೂತ
(1871,1931, 1991): ಪ್ರಜೋತ್ಪತ್ತಿ
(1872,1932,1992): ಅಂಗೀರಸ
(1873,1933,1993): ಶ್ರೀಮುಖ
(1874,1934,1994): ಭಾವ
(1875,1935,1995):ಯುವ
(1876,1936,1996): ధాత
(1877,1937,1997): ಈಶ್ವರ
(1878,1938,1998): ಬಹುಧಾನ್ಯ
(1879,1939,1999): ಪ್ರಮಾದಿ
(1880,1940,2000): ವಿಕ್ರಮ
(1881,1941,2001): ವೃಷ
(1882,1942,2002): ಚಿತ್ರಭಾನು
(1883,1943,2003): ಸ್ವಭಾನು
(1884,1944,2004): ತಾರಣ
(1885,1945,2005): ಪಾರ್ಥಿವ
(1886,1946,2006): ವ್ಯಯ
(1887,1947,2007): ಸರ್ವಜಿತ್
(1888,1948,2008): ಸರ್ವಧಾರಿ
(1889,1949,2009): ವಿರೋಧಿ
(1890,1950,2010): ವಿಕೃತಿ
(1891,1951,2011): ಖರ
(1892,1952,2012): ನಂದನ
(1893,1953,2013): ವಿಜಯ
(1894,1954,2014): ಜಯ
(1895,1955,2015): ಮನ್ಮಥ
(1896,1956,2016): ದುರ್ಮುಖಿ
(1897,1957,2017): ಹೇವಿಳಂಬಿ
(1898,1958,2018): ವಿಳಂಬಿ
(1899,1959,2019): ವಿಕಾರಿ
(1900,1960,2020): ಶಾರ್ವರಿ
(1901,1961,2021): ಪ್ಲವ
(1902,1962,2022): ಶುಭಕೃತ
(1903,1963,2023): ಶೋಭಕೃತ
(1904,1964,2024): ಕ್ರೋಧಿ
(1905,1965,2025): ವಿಶ್ವಾವಸು
(1906,1966,2026): ಪರಾಭವ
(1907,1967,2027): ಪ್ಲವಂಗ
(1908,1968,2028): ಕೀಲಕ
(1909,1969,2029): ಸೌಮ್ಯ
(1910,1970,2030): ಸಾಧಾರಣ
(1911,1971,2031): ವಿರೋಧಿಕೃತ
(1912,1972,2032): ಪರಿಧಾವಿ
(1913,1973,2033): ಪ್ರಮಾದ
(1914,1974,2034): ಆನಂದ
(1915,1975,2035): ರಾಕ್ಷಸ
(1916,1976,2036): ನಳ
(1917,1977,2037): ಪಿಂಗಳ
(1918,1978,2038): ಕಾಳಯುಕ್ತಿ
(1919,1979,2039): ಸಿದ್ಧಾರ್ಥಿ
(1920,1980,2040): ರೌದ್ರಿ
(1921,1981,2041): ದುರ್ಮತಿ
(1922,1982,2042): ದುಂದುಭಿ
(1923,1983,2043): ರುಧಿರೋದ್ಗಾರಿ
(1924,1984,2044): ರಕ್ತಾಕ್ಷಿ
(1925,1985,2045): ಕ್ರೋಧನ
(1926,1986,2046): ಅಕ್ಷಯ

Sunday, 7 April 2019

ಪಂಚಾಂಗವೆಂದರೆ

ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!
ಯುಗಾದಿ, ಪಂಚಾಂಗ ಪೂಜಿಸುವ ದಿನ.
ತಿಥಿ,
ವಾರ,
ನಕ್ಷತ್ರ,
ಯೋಗ ಹಾಗೂ
ಕರ್ಣ
ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ....

ಲೇಖಕರು : ಟಿ.ಎಂ. ಸತೀಶ್, ಸಂಪಾದಕರು, ourtemples.in

ಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ ನೋಡಲು ಬರುವುದಿಲ್ಲ. ಹಲವರು ಪಂಚಾಂಗ ಎಂದರೆ ಅರ್ಥವಾಗದ ಕಗ್ಗಂಟು, ಅದು ಪುರೋಹಿತರ ಸ್ವತ್ತು ಎಂದೇ ತಿಳಿದಿದ್ದಾರೆ.
ವಾಸ್ತವವಾಗಿ ಪಂಚಾಂಗ ಎಂದರೆ ಅರ್ಥವಾಗದ ಹಲವು ಶ್ಲೋಕಗಳಿಂದ ಕೂಡಿದ ಕಗ್ಗಂಟಲ್ಲ. ಬದಲಾಗಿ ಪಂಚಾಂಗ ಎಂಬುದು ಜನ ಜೀವನದ ನಿತ್ಯ ನಡೆವಳಿಕೆಗಳನ್ನು ವೈಜ್ಞಾನಿಕ ಆಧಾರಗಳ ಮೇಲೆ ವಿಶ್ಲೇಷಿಸುವ ಅತ್ಯದ್ಭುತ ಕಾಲಗಣನಾ ಶಾಸ್ತ್ರ.
ನಾವು ದೈನಂದಿನ ಲೌಕಿಕ ಚಟುವಟಿಕೆಗೆ ಬಳಸುವ ಜನವರಿ1ರಿಂದ ಡಿಸೆಂಬರ್ 31ರವರೆಗೆ ವಾರ ದಿನಾಂಕ ತೋರಿಸುವ ರೋಮನ್ ಕ್ಯಾಲೆಂಡರ್ ಹುಟ್ಟಿದ್ದು ಕ್ರಿಸ್ತ ಪೂರ್ವ 753ರಲ್ಲಿ. ಆದರೆ, ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ಅಂದರೆ ಸುಮಾರು 10 ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯುಗಯುಗಗಳಿಂದ ಹಿಂದೂ ಪಂಚಾಂಗ ಕಾಲಗಣನಾ ಶಾಸ್ತ್ರವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ. ಇದಕ್ಕೆ ವೇದ, ಪುರಾಣಗಳಲ್ಲಿ ಹಲವು ಆಧಾರಗಳೂ ದೊರಕುತ್ತವೆ.
ಈಗ ವಿಶ್ವ ವ್ಯಾಪಿ ಚಾಲ್ತಿಯಲ್ಲಿರುವ ಕ್ಯಾಲೆಂಡರ್ ಗಳು ಇನ್ನೂ ಹುಟ್ಟದಿದ್ದ ಕಾಲದಲ್ಲಿ, ಹುಟ್ಟು, ಸಾವು, ವಿವಾಹದಿನ, ಗ್ರಹಣ ವಿಚಾರ ಸೇರಿದಂತೆ ಬದುಕಿನ ಮಹತ್ವದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲೆಂದೇ ವೈಜ್ಞಾನಿಕ ತಳಹದಿಯ ಮೇಲೆ ತಯಾರಿಸಿದ ವಾರ್ಷಿಕ ಕೈಪಿಡಿಯೇ ಪಂಚಾಂಗ.

ಐದರ ಸಮಾಗಮ: ವಾಸ್ತವವಾಗಿ ಪಂಚಾಂಗವೆಂಬುದು ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ ಎಂಬ ಐದು ವೈeನಿಕ ಅಂಗಗಳ ಸಮ್ಮಿಲನ ಹಾಗೂ ಮಾಹಿತಿ ಸಂಚಯ.
ಸೂರ್ಯದ, ಚಂದ್ರ, ಭೂಮಿಯೂ ಸೇರಿದಂತೆ ನವಗ್ರಹಗಳ ಚಲನೆಯನ್ನೂ ಗುರುತಿಸುತ್ತಿದ್ದ ಶ್ರೇಷ್ಠ ಖಭೌತಜ್ಞರಾಗಿದ್ದ ನಮ್ಮ ಪೂರ್ವಿಕರು ವೈಜ್ಞಾನಿಕ ತಳಹದಿಯ ಅಧ್ಯಯನದಿಂದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣಗಳನ್ನು ವಿಶ್ಲೇಷಿಸಿ ಪಂಚಾಂಗ ಸೃಷ್ಟಿಸಿದ್ದರು. ಗ್ರಹಣ ಯಾವ ದಿನ ಘಟಿಸುತ್ತದೆ. ಹುಣ್ಣಿಮೆ, ಅಮಾವಾಸ್ಯೆ ಎಂದು ಬರುತ್ತದೆ ಎಂಬಿತ್ಯಾದಿ ಮಹತ್ವದ ಮಾಹಿತಿಗಳನ್ನು ಈ ಪಂಚಾಂಗದಲ್ಲಿ ಸೆರೆಹಿಡಿಯುತ್ತಿದ್ದರು. ಈ ಎಲ್ಲ ಲೆಕ್ಕಾಚಾರಗಳಿಗೆ ತಿಥಿ, ವಾರ, ನಕ್ಷತ್ರ, ಕರ್ಣ ಹಾಗೂ ಯೋಗವೇ ಆಧಾರವಾಗಿತ್ತು.

ತಿಥಿ, ವಾರ, ನಕ್ಷತ್ರ, ಕರ್ಣ, ಯೋಗ ಎಂದರೇನು ?

ನಕ್ಷತ್ರ : ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಕಾಣಿಸಿದರೂ, ಸೂರ್ಯಸನ ಸುತ್ತ ಇರುವ ಅಶ್ವಿನಿ, ಭರಣಿ, ಕೃತ್ತಿಕೆ, ರೋಹಿಣಿ, ಮೃಗಶಿರೆ, ಆರಿದ್ರೆ, ಪುನರ್ವಸು, ಪುಷ್ಯ... ಇತ್ಯಾದಿ 27 ನಕ್ಷತ್ರಗಳನ್ನು ಮಾತ್ರ ಜ್ಯೋತಿಷಿಗಳು ದಿನ ಗಣನೆಗೆ ಪರಿಗಣಿಸಿದ್ದಾರೆ. ಇನ್ನುಳಿದ ನಕ್ಷತ್ರಗಳನ್ನು ಆಕಾಶಕಾಯಗಳು ಅಥವಾ ತ್ಯಾಜ್ಯ ನಕ್ಷತ್ರ ಎಂದು ಅವರು ವಿಶ್ಲೇಷಿಸಿದ್ದಾರೆ. ನಮ್ಮ ಭಾರತೀಯ ಋಷಿಮುನಿಗಳು ಹೀಗೆ ನಿರ್ಣಯಕ್ಕೆ ಬರಲು ಬಲವಾದ ವೈಜ್ಞಾನಿಕ ಆಧಾರವಿದೆ. ನಕ್ಷತ್ರದಿಂದ ದಿನವನ್ನು ಗುರುತಿಸುವುದು ಅತಿ ಪುರಾತನ ಪದ್ಧತಿಯಾಗಿದೆ. ಅದು ಹೇಗೆ ಎಂಬುದೂ ಅತಿ ಸ್ವಾರಸ್ಯಕರ. ಅಷ್ಟೇ ಅಲ್ಲ ನಮ್ಮ ಹಿರಿಯರ ಜ್ಞಾನಕ್ಕೆ ಹಿಡಿದ ಕನ್ನಡಿ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಗುತ್ತಿರುತ್ತದೆ. ಒಂದು ರಾತ್ರಿ ಚಂದ್ರನ ಸಮೀಪದಲ್ಲಿ ಯಾವ ನಕ್ಷತ್ರ ಇರುತ್ತದೆ ಎಂದು ಗುರುತಿಸಿದ್ದಾರೆ. ಅದೇ ನಕ್ಷತ್ರದ ಸಮೀಪಕ್ಕೆ ಚಂದ್ರ ಮತ್ತೆ ಯಾವಾಗ ಬರುತ್ತಾನೆ ಎಂಬುದನ್ನೂ ಅವರು ಗುರುತಿಸಿದ್ದಾರೆ. ಇಂದು ಒಂದು ನಕ್ಷತ್ರದ ಬಳಿ ಕಾಣಿಸಿಕೊಳ್ಳುವ ಚಂದ್ರ ಮತ್ತೆ ಅದೇ ನಕ್ಷತ್ರದ ಸನಿಹಕ್ಕೆ ಬರಲು ಸುಮಾರು 27.32ದಿನಗಳು ಬೇಕಾಗುತ್ತದೆಂಬುದನ್ನು ನಿರ್ಧರಿಸಿದ್ದಾರೆ. ಹೀಗಾಗಿಯೇ ತಿಂಗಳಲ್ಲಿ 30 ದಿನ ಬಂದಿರುವುದು. ಈ ಚಲನೆಗೆ ಅನುಗುಣವಾಗಿಯೇ ಎರಡೆರಡು ದಿನ ಒಂದೇ ತಿಥಿ ಇರುವುದು ಎಂಬುದನ್ನು ನಮ್ಮ ಪುರಾತನ ಭಾರತೀಯ ಖಗೋಳಜ್ಞರು ನಿರ್ಣಯಿಸಿದ್ದರು. ವೈಜ್ಞಾನಿಕ ಉಪಕರಣಗಳೇ ಇಲ್ಲದ ಸಮಯದಲ್ಲಿ ಈ ಎಲ್ಲ ಲೆಕ್ಕಾಚಾರ ಮಾಡಿದ ನಮ್ಮ ಪೂರ್ವಿಕರ ಜ್ಞಾನ ಶ್ರೀಮಂತಿಕೆಗೆ ನಾವೆಲ್ಲಾ ತಲೆ ಬಾಗಲೇ ಬೇಕು.

ತಿಥಿ : ತಿಥಿ ಎಂದರೆ, ಭೂಮಿಯನ್ನು ಸುತ್ತಲು ಚಂದ್ರನು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ. ಚಂದ್ರನು ನಿತ್ಯ ಸುಮಾರು 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. (ಈ ಚಲನೆಯಲ್ಲಿ ಚಂದ್ರ ಭೂಮಿಯ ಮೇಲೆ ಬೀರುವ ಪರಿಣಾಮ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.) ಈ ಚಲನೆಯನ್ನು ಆಧರಿಸಿ ಶುಭ - ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆಯನ್ನು ನಮ್ಮ ಹಿರಿಯರು ಮಾಡಿದ್ದಾರೆ. ವಾಸ್ತವವಾಗಿ ದಿನ ನಿರ್ಧರಣೆಯನ್ನು ನಕ್ಷತ್ರದಿಂದ ಮಾತ್ರ ಮಾಡುವುದು ವ್ಯಾವಹಾರಿಕವಾಗಿ ಸರಿಯಲ್ಲ ಎಂದು ಮನಗಂಡ ನಮ್ಮ ಪೂರ್ವಿಕರು, ಚಂದ್ರನ ವೃದ್ಧಿಕ್ಷಯಗಳನ್ನು ಸೂಚಿಸುವ ತಿಥಿಗಳಿಂದಲೂ ದಿನವನ್ನು ನಿರ್ಧರಿಸುವ ಮಾರ್ಗ ಕಂಡುಕೊಂಡರು. ಅಮಾವಾಸ್ಯೆ, ಹುಣ್ಣಿಮೆಯ ಲೆಕ್ಕಾಚಾರದ ಮೇಲೆ ಮಾಸದಲ್ಲಿ ಎರಡು ಪಕ್ಷ ನಿರ್ಧರಿಸಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮಾವಾಸ್ಯೆ ಎಂಬ 15 ತಿಥಿಗಳನ್ನೂ ಗುರಿತಿಸಿದರು.

ವಾರ : ವಾರಗಳು ಎಂದರೆ ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ 7 ಅವಧಿ. (24 ಗಂಟೆ x 7 ದಿನ) ಈ ಚಲನೆ 7 ದಿನಕ್ಕೊಮ್ಮೆ ಪುನರಾವರ್ತನೆ ಆಗುವುದರಿಂದ ಇವುಗಳನ್ನು 7 ಗ್ರಹಗಳು ಎಂದು ಗುರುತಿಸಲಾಗಿದೆ. ಖಗೋಳ ವಿಜ್ಞಾನಿಗಳು ಸೂರ್ಯಇನನ್ನು ನಕ್ಷತ್ರ ಎಂದರೆ, ನಮ್ಮ ಋಷಿ ಮುನಿಗಳು, ಪಂಚಾಂಗಕರ್ತರು ಹಾಗೂ ಜ್ಯೋತಿಷಿಗಳು ಸೂರ್ಯನನನ್ನೂ ಒಂದು ಗ್ರಹ ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ನವಗ್ರಹಗಳ ಪೈಕಿ ಸೂರ್ಯಯನೂ ಒಬ್ಬ. ಹೀಗಾಗೆ ನಮಃಸೂರ್ಯಾ ಯ ಚಂದ್ರಾಯ ಮಂಗಳಾಯ ಬುಧಾಯಚ, ಗುರು ಶುಕ್ರ ಶನಿ ಭ್ರಶ್ಚ, ರಾಹುವೇ ಕೇತುವೇ ನಮಃ ಎಂಬು ಶ್ಲೋಕವೂ ಹುಟ್ಟಿರುವುದು. ಆ ಪ್ರಕಾರವಾಗಿ ಏಳು ದಿನಗಳಲ್ಲಿ ರವಿವಾರ, ಸೋಮ (ಚಂದ್ರ) ವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಎಂದು ಗುರುತಿಸಲಾಗಿದೆ. ಗ್ರಹಗಳ ಹೆಸರಿನ ಮೂಲಕ, ಶುಭ ಹಾಗೂ ಅಶುಭ ದಿನಗಳನ್ನೂ ನಿರ್ಧರಿಸಲಾಗಿದೆ. ರೋಮನ್ನರು ಕೂಡ ಹಿಂದೂ ಪಂಚಾಗದ ರೀತಿಯೇ ತಮ್ಮ ಕ್ಯಾಲೆಂಡರ್ ರಚಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ತಜ್ಞರ ಪ್ರಕಾರ ವಾರದ ಬಳಕೆ ಕ್ರಿ.ಶ. 4ನೇ ಶತಮಾನಕ್ಕೆ ಮೊದಲು ಭಾರತದಲ್ಲಿ ಬಳಕೆಯಲ್ಲಿರಲಿಲ್ಲ. ವೇದಗಳ ಕಾಲದಲ್ಲಿ ಆರು ದಿವಸಗಳ ವಾರ ಪ್ರಚಾರದಲ್ಲಿತ್ತು ಎಂದೂ ಹೇಳುತ್ತಾರೆ.

ಯೋಗ : ಸೂರ್ಯಿ ಚಂದ್ರರಿಬ್ಬರು 13 ಡಿಗ್ರಿ ಮತ್ತು 20 ಡಿಗ್ರಿ ಅಂತರಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದೇ ಯೋಗ. ಹಾಗೆಯೆ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಇದಕ್ಕೆ ಅಶ್ವಿನಿ ಮೂಲಬಿಂದುವಾಗಿರುತ್ತದೆ. ಸೂರ್ಯನ ರೇಖಾಂಶ ಮತ್ತು ಚಂದ್ರನ ರೇಖಾಂಶಗಳ ಈ ಯೋಗದಲ್ಲಿ ಸೂರ್ಯಕ ಚಂದ್ರರ ಚಲನೆ ಆಧರಿಸಿ 27 ಯೋಗಗಳನ್ನು ಹಾಗೂ ಸೂರ್ಯಶಚಂದ್ರರ ಚಲನೆಯ ವ್ಯತ್ಯಾಸ ಅರಿಯಲಾಗಿದೆ. ಇದು ಗ್ರಹಣ ಮೊದಲಾದ ವಿಷಯಗಳನ್ನು ಖಚಿತವಾಗಿ ಹೇಳಲು ನೆರವಾಗುತ್ತದೆ.

ಕರಣ : ಕರಣ ಎಂಬುದು ಒಂದು ದಿನದ ಅರ್ಧಭಾಗದಲ್ಲಿ ಸೂರ್ಯದ ಚಂದ್ರರ ನಡುವೆ ಇರುವ ದೂರದ ಪ್ರಮಾಣ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಯೇ ಕರಣ. ಹೀಗಾಗಿ ಕರಣ ಕೂಡ ಸೂರ್ಯಶ ಚಂದ್ರರ ಚಲನೆಯನ್ನು ಅರ್ಥೈಸುವ ಮಾನದಂಡಗಳಲ್ಲೊಂದಾಗಿದೆ. ಕಾಲ ದೇಶಕ್ಕೆ ಅನುಗುಣವಾಗಿ ಪಂಚಾಂಗಗಳಿವೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯ ರೀತ್ಯ ಕಾಲ ಗಣನೆ ಮಾಡುತ್ತಾರೆ. ವಿಕ್ರಮ ಶಕೆಯ ಆರಂಭದ ದಿನವಾದ ಕಾರ್ತೀಕ ಶುಕ್ಲ ಪಾಡ್ಯದಿಂದ (ದೀಪಾವಳಿ) ಉತ್ತರ ಭಾರತೀಯರಿಗೆ ಹೊಸವರ್ಷದ ದಿನ. ಆದರೆ, ದಕ್ಷಿಣ ಭಾರತೀಯರು ವಿಕ್ರಮಾದಿತ್ಯನನ್ನು ಶಾಲಿವಾಹನನು ಸಂಹರಿಸಿದ ದಿನದಿಂದ ಕಾಲಗಣನೆ ಆರಂಭಿಸುತ್ತಾರೆ. ಆದ್ದರಿಂದ ಶಾಲಿವಾಹನ ಶಕೆಯಲ್ಲಿ ಚೈತ್ರ ಶುಕ್ಲ ಪಾಡ್ಯವೇ ಪ್ರಥಮದಿನ. ಚೈತ್ರ ಮಾಸದ ಪೌರ್ಣಿಯ ದಿನ ಚಂದ್ರನು ಚಿತ್ತಾನಕ್ಷತ್ರದಲ್ಲಿ ಇರುವ ಕಾರಣ ಈ ಮಾಸಕ್ಕೆ ಚೈತ್ರ ಮಾಸ ಎಂದು ಹೆಸರು ಬಂದಿದೆ. ಅದೇ ರೀತಿ ದ್ವಾದಶ ರಾಶಿಗಳನ್ನು ಆಧರಿಸಿ 12 ತಿಂಗಳನ್ನು ನಿರ್ಧರಿಸಲಾಗಿದೆ. ಸೂರ್ಯೀನು ತನ್ನ ಉಪ ಗೋಚರ ವಾರ್ಷಿಕ ಚಲನೆಯಲ್ಲಿ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ.. ಇತ್ಯಾದಿ ದ್ವಾದಶ ರಾಶಿಗಳನ್ನು ಪ್ರವೇಶಿಸುವ ಕ್ಷಣಗಳನ್ನು ಆಯಾ ರಾಶಿಗಳ ಸಂಕ್ರಮಣವೆಂದೂ ಅರ್ಥೈಸಲಾಗುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ಪಂಚಾಂಗದ ಭಾಗವಲ್ಲದಿದ್ದರೂ ಈ ಐದನ್ನೂ ಒಳಗೊಂಡ ವರ್ಷದ ಬಗ್ಗೆಯೂ ಹೇಳಲೇಬೇಕು. ನಮ್ಮ ಪೂರ್ವಿಕರು ಈಗಿನ ಇಸವಿ ಪದ್ಧತಿ ಜಾರಿಗೆ ಬರುವ ಮುನ್ನವೇ ನಮ್ಮ 12 ತಿಂಗಳ ಅವಧಿಯನ್ನು ವರ್ಷ ಎಂದು ಪರಿಗಣಿಸಿ ಒಂದೊಂದಕ್ಕೆ ಒಂದೊಂದು ಹೆಸರಿಟ್ಟಿದ್ದರು.
ಅದನ್ನು ಪ್ರಭವ, ವಿಭವ, ಶುಕ್ಲ, ಪ್ರಮೋದೂತ, ಪ್ರಜೋತ್ಪತ್ತಿ, ಆಂಗೀರಸ, ಶ್ರೀಮುಖ, ಭಾವ, ಯುವ, ಧಾತ್ರಿ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ (ವಿಷು), ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇ ವಿಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್ , ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾಧಿ, ಆನಂದ, ರಾಕ್ಷಸ, ನಳ, ಪೈಂಗಳ(ಪಿಂಗಳ), ಕಾಳಯುಕ್ತಿ, ಸಿದ್ಧಾರ್ಥಿ, ರುದ್ರ (ರೌದ್ರಿ), ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ ಹಾಗೂ ಅಕ್ಷಯ (ಕ್ಷಯ). 60 ವರ್ಷಗಳ ಬಳಿಕ ಮತ್ತೆ ಪ್ರಭವದಿಂದ ಆರಂಭವಾಗುತ್ತದೆ.

ಒಟ್ಟಾರೆಯಾಗಿ ಪಂಚಾಗ ನಮ್ಮ ಪೂರ್ವಿಕರು ಸಂಶೋಧಿಸಿದ ವೈಜ್ಞಾನಿಕ ಕಾಲ ನಿರ್ಣಯ. (ಈ ಲೇಖನ ಬರೆಯಲು ಹಲವು ಗ್ರಂಥಗಳನ್ನು ಆಕರವಾಗಿ ಪರಿಗಣಿಸಲಾಗಿದೆ).🙏..✍...

Friday, 8 February 2019

ಆದಿತ್ಯ ಹೃದಯಂ - Aditya Hrudayam

ಚನ: ಅಗಸ್ತ್ಯ ಋಶಿ

ಧ್ಯಾನಮ್
ನಮಸ್ಸವಿತ್ರೇ ಜಗದೇಕ ಚಕ್ಷುಸೇ
ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ





ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋ‌உಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

ಫಲಶ್ರುತಿಃ
ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || 30 ||

ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ದಕಾಂಡೇ ಪಂಚಾಧಿಕ ಶತತಮ ಸರ್ಗಃ ||