#ಆದಿತ್ಯಸ್ಯ ನಮಸ್ಕಾರನ್ ಯೇ ಕುರ್ವಂತಿ ದಿನೇ ದಿನೇ |
#ಜನ್ಮಾಂತರ ಸಹಸ್ರಷು ವ್ಯಾಧಿರ್ನೋಪಜಾಯತೆ ||
ಎಂದು #ಸೂರ್ಯದೇವನನ್ನು ನಮಸ್ಕರಿಸುವದರಿಂದ ಹಿಂದಿನ ಜನ್ಮಗಳ ವ್ಯಾಧಿಗಳು ಭಾದಿಸದೇ ಆರೋಗ್ಯಯುತರೆಂಬ ನಂಬಿಕೆ ಇದೆ. ಹೌದು #ಸೂರ್ಯನಾರಾಯಣ ನಮಗೆ ಬೆಳಕನ್ನು ನೀಡುವ ಅಧಿದೇವತೆ ಅಬಾಲ-ವೃದ್ಧರಾಗಿ ಎಲ್ಲರೂ ಪೂಜಿಸುವ ದೇವತೆ. ಅದಕ್ಕಾಗಿಯೇ ಜನಪದರು ಈ ರೀತಿ ಹೇಳುತ್ತಾರೆ:
#ಮುಂಗೋಳಿ ಕೂಗ್ಯಾವ ಮೂಡು ಕೆಂಪೇರೇವ/ ರವಿನಾರಾಯಣ ರಥವೇರಿ/
#ರವಿನಾರಾಯಣ ರಥವೇರಿ – ಬರುವಾಗ
ನಾವೆದ್ದು ಕೈಯ ಮುಗಿದೇವು ||
ತೇರು ಎಳದಾವು ತಾಣಕ್ಕ ನಿಂತಾವು /
ತಾರೋ ಜಂಬಯ್ಯ ದವನವ /
ತಾರೋ ಜಂಬಯ್ಯ ದವನವ ಬಾಳೆಹಣ್ಣು
ಬೇಡಿಕೋಳ ಮಗಳs ಸೆರೆಗೊಡ್ಡಿ||
ಎಂದು ದಿನನಿತ್ಯವೂ ಪೂಜಿಸುವ ಸೂರ್ಯನಿಗೆ ಅವನಿಗೇ ಆದ ವಿಶೇಷ ಹಬ್ಬವಿದೆ. #ಸಂಕ್ರಾಂತಿಯಂದುಸೂರ್ಯನನ್ನು ವಿಶೇಷವಾಗಿ ಪೂಜಿಸುತ್ತಾರೆ. ಆದರೆ, ಪ್ರತಿವರ್ಷ ಮಾಘಮಾಸದ ಶುಕ್ಲಪಕ್ಷದ ಸಪ್ತಮಿಯೆಂದು #ರಥಸಪ್ತಮಿ ಎಂದರೆ ರಥವೇರಿ ಚಲಿಸುವ #ಸೂರ್ಯನಾರಾಯಣ ಜಯಂತಿ ಎಂದು ಆಚರಿಸಲಾಗುತ್ತವೆ.
#ಋಷಿಕಷ್ಯಪ & ಅದಿತಿಯ ಪುತ್ರನಾಗಿ ಇಂದು ಜನಿಸಿದ ಸೂರ್ಯನ ಹುಟ್ಟು ಹಬ್ಬವನ್ನು ಹಿಂದೂಗಳು ಅತ್ಯಂತ ಪವಿತ್ರ ದಿನವಾಗಿ ಆಚರಿಸುತ್ತಾರೆ.
#ಆಚರಿಸುವವಿಧಾನ: ದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ, #ಸೂರ್ಯನಿಗೆಅರ್ಘ್ಯನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜೊತೆಗೆ ಸೂರ್ಯನಿಗೆ ಪ್ರಿಯವಾದ #ಅರ್ಕಎಂದರೆ ಎಕ್ಕದ ಎಲೆಯನ್ನು ಸೂರ್ಯನಿಗೆ ಅರ್ಪಿಸುವ ಜೊತೆಗೆ #ತಲೆಯಮೇಲಿಟ್ಟು ಸ್ನಾನಮಾಡುವ ಪದ್ಧತಿ ಇದೆ
೧) #ಸೂರ್ಯನಚಿತ್ರವ ತೆಗೆಯಲಾಗುತ್ತದೆ.
೨) #ಮನೆಯಎಲ್ಲರ ಶ್ರೇಯಸ್ಸು ಬಯಸುವರು
೩) #ಬೇಯಿಸದೇಇರುವಅಕ್ಕಿ, ಬೆಲ್ಲ, ಹೂವನ್ನು ಸೂರ್ಯನ ರಥದ ಚಿತ್ರದ ವೀಳ್ಯಾದೆಲೆ, ಅಡಿಕೆ ಮೇಲೆ ಇಡಲಾಗುತ್ತದೆ.
೪) #ಜೊತೆಗೆಬಾಳೆಹಣ್ಣು, ವೀಳೆದೆಲೆ, ಅಡಿಕೆ, ಹಣ್ಣು, ಹಾಲನ್ನು ಸಮರ್ಪಿಸಲಾಗುತ್ತದೆ.
೫) #ಗಾಯಿತ್ರಿಮಂತ್ರ ಜಪಿಸಲಾಗುತ್ತದೆ.
೬) ನಂತರ ಆರತಿಯನ್ನು ಮಾಡಲಾಗುತ್ತದೆ.
೭) #ಸೂರ್ಯನಶ್ಲೋಕ, ಆದಿತ್ಯ ಹೃದಯ ಸೂರ್‍ಯ ಸಹಸ್ರನಾಮ ಪಠಿಸಲಾಗುತ್ತದೆ.
೮) #ಉಪವಾಸವನ್ನು ಮಾಡುತ್ತಾರೆ
೯) #ವಿಶೇಷವಾಗಿ ದಾನಗಳನ್ನು ಮಾಡುತ್ತಾರೆ
#ಆಧ್ಯಾತ್ಮಿಕವಾಗಿ:
ಸಿದ್ಧರ ಪ್ರಕಾರ ರಥವು ಮನುಷ್ಯನ ಮನಸ್ಸನ್ನು ಪ್ರತಿನಿಧಿಸುತ್ತದೆ.
#ಸೂರ್ಯನರಥದ ಏಳು ಕುದುರೆಗಳು ಗಾಯತ್ರಿ, ಬೃಹತಿ, ಉಷ್ಠಿರ್, ಜಗತಿ, ಧೃಷ್ಟುಪ್, ಅನುಷ್ಟುಪ್ ಮತ್ತು ಭಕ್ತಿ. ಒಬ್ಬನೆ ಸಾರಥಿ. [ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ ಆಜ್ಞಾ ,ಸಹಸ್ರಾರ]
#ಈಮನಸ್ಸೆಂಬ ರಥ ಚಕ್ರದಲ್ಲಿ ನಮ್ಮ ದೇಹದ ಏಳು ಚಿಕ್ರಗಳು, ಒಂದು ಚೇತನ ರೂಪದಲ್ಲಿ ಮುನ್ನಡೆಸುವ ಸಾರಥಿಯಾಗಿ ದೇವನಿಹವಂತೆ #ನಮ್ಮರಥದಚಕ್ರ ಸುಗಮವಾಗಿ ಚಲಿಸುತ್ತದೆ. ಅಂದರೆ ನಮ್ಮ ಜೀವನ ಕೂಡ #ಸೂರ್ಯಪಥ ದಿನವೂ ಹಗಲು-ರಾತಿರಗಳಾಗುವಂತೆ, ಜೀವನದಲ್ಲಿ ಏರು-ಪೇರಾಗುತ್ತವೆ. ಜಗದ ಜಡವ ಬಿಡುಸುತ್ತಾ #ಅಜ್ಞಾನದಕತ್ತಲೆಯನ್ನು ಹೋಗಲಾಡಿಸುತ್ತಾನೆ.
#ಪುರಾಣ & ಸಾಹಿತ್ಯಗಳಲ್ಲಿ ಸೂರ್ಯ:
##ರಾಮಾಯಣ ಕಾಲದಿಂದಲೂ ಸೂರ್ಯೋಪಾಸನೇ ಇದ್ದೇ ಇದೆ. ರಾವಣ ಸಂಹಾರ ಸಮಯದಲ್ಲಿ ಅಗಸ್ತ್ಯಮುನಿಗಳು ರಾಮನಿಗೆ ಆದಿತ್ಯ ಹೃದಯ ಪಠಣ ಮಾಡಲು ಸೂಚಿಸಿದರು.
##ಪಾಂಡವರು ವನವಾಸ ಸಮಯದಲ್ಲಿ ಅವರ ದಿನ ನಿತ್ಯದ ಆಹಾರಕ್ಕಾಗಿ ಅಕ್ಷಯ ಪಾತ್ರೆಗಾಗಿ ಸೂರ್ಯನನ್ನು ಪ್ರಾರ್ಥಿಸಿದರು. ಅಷ್ಟೇ ಅಲ್ಲ ಸತ್ರಾರ್ಜಿತ ಸ್ಯಮಂತಕ ಮಣಿಗಾಗಿ ಸೂರ್ಯಾರಾಧನೆ ಮಾಡಿದನು.
##ನವಗ್ರಹದ ಅಧಿಪತಿಯಾದ ಸೂರ್ಯ ಮತ್ತು ಅವನ ಮಗ ಶನೈಶ್ಚರ್‍ಯದೇವ ಅಗ್ರಸ್ಥಾನ ಪಡೆದಿದ್ದಾರೆ.ವೇದಗಳಲ್ಲಿ, ವಿಷ್ಣು, ಲಿಂಗ, ಸ್ಕಂದ ಮತ್ತು ವರಾಹ ಪುರಾಣಗಳಲ್ಲಿ ಭಗವದ್ಗೀತೆಯಲ್ಲಿ ಸೂರ್ಯನ ಉಕ್ತಿ ಇದೆ.
ನಮ್ಮ ಪ್ರಾಚೀನ ಕವಿ ರನ್ನನಂತೂ ’ಕುರುಕುಲಾರ್ಕನುಂ ಅರ್ಕನುಂ ಅಸ್ತಮೇಯ್ದಿದರ್’ ಎಂಬಲ್ಲಿ ಇಡೀ ಮಹಾ ಭಾರತವನ್ನು ಸೂರ್ಯನ ಅಸ್ತಂಗತದಲ್ಲಿ ಸಿಂಹಾವನಲೋಕ ಕ್ರಮದಲ್ಲಿ ತಿಳಿಸಿದ್ದಾನೆ.
##ಸೂರ್ಯನನ್ನು ಟಚ್ ಮಾಡದ ಕವಿಯೇ ಇಲ್ಲ ಎಂದು ಹೇಳಬಹುದು. ಕುವೆಂಪುರವರು ತಮ್ಮ ಮನೆಯೇ ಹೆಸರನ್ನೇ ’ಉದಯ ರವಿ’ ಎಂದಿದ್ದರೇ, ಬೇಂದ್ರೆಯವರು ’ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ’ ಎಂದಿದ್ದಾರೆ.
ಭಾರತದಲ್ಲಷ್ಟೇ ಅಲ್ಲ ಚೀನಾ, ಈಜಿಪ್ಟ, ಮೆಸಪೊಟೋಮಿಯಾ, ನೇಪಾಳಗಳಲ್ಲಿ ಸೂರ್ಯನನ್ನು ಪೂಜಿಸುತ್ತಾರೆ. ಸೂರ್ಯನನ್ನು ಪೂಜಿಸುವವರು ಸೂರ್ಯಪಂಥದವರು.
ವೈಜ್ಞಾನಿಕವಾಗಿ: ವೈಜ್ಞಾನಿಕವಾಗಿಯೂ ಸೂರ್ಯ ಅಗ್ರಸ್ಥಾನ ಪಡೆದಿದ್ದಾನೆ. ನಮ್ಮ ಸೌರ್‍ಯವ್ಯೂಹದ ಕೇಂದ್ರ ಬಿಂದು ಸೂರ್ಯ ನಮಗೆ ಗೊತ್ತಿರುವಂತೆ ಸೂರ್ಯನ ಸುತ್ತಲೇ ನಾವು ಸುತ್ತುತ್ತಿವೆ. ಸೂರ್ಯನ ಚಲನೆ ನಿಂತರೆ, ನಮ್ಮ ಬದುಕೇ ಸ್ತಬ್ಧವಾಗುವುದು.
ನಮ್ಮ ಬೆಳವಣಿಗೆಯಿಂದ ಹಿಡಿದು ಪ್ರಕೃತಿಯ ಪ್ರತಿ ಚಿಗುರು, ಬೆಳವಣಿಗೆ, ಹೂ, ಕಾಯಿ, ಹಣ್ಣು ಎಲ್ಲದಕ್ಕೂ ಪ್ರಮುಖವಾಗಿ ಋತು ಬದಲಾವಣೆ ನಮ್ಮ ಎಲ್ಲ ಅದ್ಭುತ ಕಾರಣಗಳಿಗೆ ಸೂರ್ಯನೇ ಪ್ರಮುಖ. ಹೀಗಾಗಿ ನಮ್ಮೆಲ್ಲಾ ಜೀವಿಗಳಿಗೆ ಸೂರ್ಯನೇ ಪ್ರಮುಖವಾಗಿದ್ದಾನೆ.
ಆ ಸೂರ್ಯನ ಇರುವಿಕೆಯನ್ನು ಮಹಿಮೆಯನ್ನು ಆಸ್ತಿಕಭಾವದಿಂದಲೂ ನಾಸ್ತಿಕಭಾವದಿಂದಲೂ ಒಪ್ಪಿಕೊಳ್ಳುವವರು ಅದೇ ಸೂರ್ಯನ.
ಮತ್ತೊಮ್ಮೆ ಎಲ್ಲರಿಗೂ ರಥಸಪ್ತಮಿ ಶುಭಾಶಯಗಳು. ಆ ಸೂರ್ಯದೇವ ಎಲ್ಲರ ಆರೋಗ್ಯವನ್ನು ಚೆನ್ನಾಗಿಡುವದರೊಂದಿಗೆ, ಶುಭವನ್ನು ತರಲಿ.
##ಕೃಪೆ ಅಂತರ್ಜಾಲ
No comments:
Post a Comment