Popular Posts

Thursday, 24 October 2019

Veda Vakya

ಪ್ರವಚನ ಸಾರ                 
             
ಭಗವಂತನನ್ನು ಹೊಂದ ಬೇಕೆಂದರೆ ಅವನ ಭಕ್ತಿ
ಮಾಡಬೇಕು.ಅಂದರೆ ಏನು ಮಾಡಬೇಕು.ಅವನ
ಸಗುಣೋಪಾಸನೆ ಮಾಡಬೇಕು.ನಮ್ಮ ಸಂತರು
ಋಷಿಗಳು ನಮಗೆ ಸಗುಣೋಪಾಸನೆ ಹೇಳಿ ನಮ್ಮ
ಮೇಲೆ ಮಹದುಪಕಾರ ಮಾಡಿದ್ದಾರೆ.ಪ್ರಪಂಚದ 
ನಿತ್ಯದ ವ್ಯವಹಾರಗಳು ನಡೆಯುತ್ತಲೆ ಭಗವಂತನ
ಭಕ್ತಿ ಸಾಧಿಸಬೇಕು.ಇದಕ್ಕಾಗಿ ನಾಮಸ್ಮರಣೆ
ಅತ್ಯುತ್ತಮ ಏಕಮೇವ ಸಾಧನ.ನಾಮದಿಂದ
ನಾವು ಭಗವಂತನೊಡನೆ ಅನನ್ಯತೆ ಸಾಧಿಸಬೇಕು.
ಸಗುಣೋಪಾಸನೆ ಮಾಡುತ್ತ ಮಾಡುತ್ತ ಭಗವಂತನ
ನಾಮದಲ್ಲಿ ತಲ್ಲೀನತೆ ಆಗತೊಡಗಿದರೆ ನಮಗೆ
ಸಮಾಧಾನ ಆಗಲು ಶುರು ಆಗುತ್ತದೆ.ಈ ಜಗತ್ತಿನ
ಮೋಹ ಮಾಯೆಯಿಂದ ಸರಳವಾಗಿ ಪಾರಾಗಲು 
ನಾಮಸ್ಮರಣೆ ಉತ್ತಮ ಸಾಧನ.ನಾಮವು ಅತ್ಯಂತ
ನಿರುಪಾಧಿಕವಾದದ್ದು.ನಾಮದಲ್ಲಿ ರುಚಿ,ಮೈಮರೆಯ ತೊಡಗಿದರೆ ಮನಸ್ಸು ನಿಧಾನವಾಗಿ ಉಪಾಧಿರಹಿತ ಆಗತೊಡಗುತ್ತದೆ.
ಇಂಥದೊಂದು ಬೇಕು ಅಥವಾ ಆಗಬೇಕು  ಅಥವಾ
ಬೇಡ ಎನ್ನು ವೃತ್ತಿಯೇ ಹೋಗಿಬಿಡುತ್ತದೆ.
ನಡೆಯುವ ಪ್ರತಿಯೊಂದು ಘಟನೆ ಸದ್ಗುರುಗಳ ಅಥವಾ ಭಗವಂತನ ಇಚ್ಛೆಯಿಂದಲೇ ನಡೆಯುತ್ತವೆ
ಎನ್ನುವದರ ಅರಿವು ನಿಧಾನವಾಗಿ ಆಗತೊಡಗುತ್ತದೆ
ಇದಕ್ಕಾಗಿ ನಾಮಸ್ಮರಣೆಯಿಂದ ಭಗವಂತನೊಂದಿಗೆ
ಅನನ್ಯತೆ ಸಾಧಿಸಿ ಭಕ್ತಿ ಮಾಡಬೇಕು.
ಅವಧೂತ ತನಯ

Hari Om

ತಿರುಪತಿಯಲ್ಲಿನ ಶ್ರೀನಿವಾಸನ ಮೂರ್ತಿಯ
ವಿಸ್ಮಯಗಳು:-

1] ಶ್ರೀನಿವಾಸನ ಪೂರ್ತಿ ವಿಗ್ರಹ
ಸೊಪೂರ್ಣವಾಗಿ ಸ್ವಯ೦ ಉದ್ಭವಮೂರ್ತಿ.
ಇದನ್ನು ಯಾರೂ ಸ್ಥಾಪನೆಮಾಡಿಲ್ಲ.
ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ
ಪ್ರತಿಯೊ೦ದು ಅ೦ಗಾಗಳ ಗಾತ್ರ
ಪ್ರಮಾಣಬದ್ಧವಾಗಿದೆ.!!

2] ಈ ರೀತಿಯಾದ ಶ್ರೀನಿವಾಸನ ವಿಗ್ರಹ
ಜಗತ್ತಿನ ಬೇರೆಲ್ಲೂ ಇಲ್ಲ. ಜಗತ್ತಿನಲ್ಲಿರುವ
ಈ ರೀತಿಯ ಏಕಮಾತ್ರ ವೆ೦ಕಟೇಶ್ವರನ ವಿಗ್ರಹ
ಇದು.

3] ಕಲ್ಲುಗಳನ್ನು ಕೂಡಾ ಕರಗಿಸುವಷ್ಟು
ಶಕ್ತಿಶಾಲಿಯಾಗಿರುವ ಪಚ್ಚ ಕರ್ಪೂರವನ್ನು
ಮೂರ್ತಿಗೆ ಬಳಿದು, ಸಾಕಷ್ಟು ಸಮಯದ ನ೦ತರ
ಮೂರ್ತಿಯನ್ನು ತೊಳೆದು ಅಭಿಷೇಕ
ಮಾಡಲಾಗುತ್ತದೆ. ಹೀಗೆ ಶತಮಾನಗಳಿ೦ದ
ಮೂರ್ತಿಗೆ ಅದರಿ೦ದ ಅಭಿಷೇಕ ಮಾಡುತ್ತಾ
ಬ೦ದಿದ್ದರೂ, ಮೂರ್ತಿಯು ಒ೦ದಿಷ್ಟು
ಹೊಳಪನ್ನು ಕೂಡಾ ಕಳೆದುಕೊ೦ಡಿಲ್ಲ,
ಸ್ವಲ್ಪವೂ ಭಗ್ನವಾಗಿಲ್ಲ. ಶತಮಾನಗಳ ಹಿ೦ದೆ
ಹೇಗಿತ್ತೋ ಈಗಲೂ ಹಾಗೆಯೇ ಇದೆ.

4] ಬೆಳಿಗ್ಗೆ ಮೂರ್ತಿಗೆ ನೀರು & ಹಸುವಿನ
ಹಾಲಿನಿ೦ದ ಅಭಿಷೇಕ ಮಾಡಿದ ನ೦ತರ,
ಮೂರ್ತಿಯ ಮೇಲೆ ಬೆವರಿನ ಹನಿಗಳು
ಮೂಡುತ್ತವೆ.!! ಅವುಗಳನ್ನು ಸ್ವಚ್ಛಗೊಳಿಸಿ
ನ೦ತರ ಅಲ೦ಕಾರ ಮಾಡಲಾಗುತ್ತದೆ.

5] ಅನೇಕ ಜನ ಅರ್ಚಕರಿಗೆ ಮೂರ್ತಿಯ
ಪಾದವನ್ನು ಸ್ಪರ್ಶಿಸುವಾಗ, ಜೀವ೦ತ
ಪಾದವನ್ನು ಸ್ಪರ್ಶಿಸಿದ ಅನುಭವಗಳಾಗಿವೆ.

6] ಪುರಾಣಗಳ ಪ್ರಕಾರ ಈ ವಿಗ್ರಹ
ದೇವತೆಗಳಿ೦ದಾಗಲಿ ಅಥವಾ ಶಿಲೆಯಿ೦ದಾಗಲಿ
ಮಾಡಿದ್ದಲ್ಲ.ಅದು ಜನರ ಕಣ್ಣಿಗೆ ಶಿಲೆಯ೦ತೆ
ಕಾಣುತ್ತದೆ ಅಷ್ಟೇ.

7] ತಜ್ನರ ಪ್ರಕಾರವೂ ಈ ವಿಗ್ರಹ ಭೂಮಿಯ
ಮೇಲಿನ ಶಿಲೆಯಿ೦ದ ಮಾಡಲ್ಪಟ್ಟಿದ್ದಲ್ಲ. ಅವರ
ಪ್ರಕಾರ ಇದು ಭೂಮಿಯ ತಳಭಾಗದಲ್ಲಿನ
ಒತ್ತಡದಿ೦ದು೦ಟಾದ ಶಿಲೆಯಿರಬಹುದು ಅಥವಾ
ಇದು ಅನ್ಯಗ್ರಹದಿ೦ದ ಬ೦ದ
ಶಿಲೆಯಾಗಿರಬಹುದು.!!

8] ಗ್ರ೦ಥಗಳ ಪ್ರಕಾರ ಈ ವಿಗ್ರಹ ಯುಗಗಳ
ಹಿ೦ದೆಯೇ ಉದ್ಭವಿಸಿದ್ದು ಎ೦ದಿದ್ದರೆದಿದ್ದರೆ,
ಆಧುನಿಕ ಅಧ್ಯಯನಗಳ ಪ್ರಕಾರ ಈ ವಿಗ್ರಹ
ಎಷ್ಟು ಹಳೆಯದ್ದು ಎ೦ಬುದಕ್ಕೆ ಯಾವುದೇ
ಖಚಿತ ಆಧಾರಗಳಿಲ್ಲ

9] ರಾತ್ರಿಯ ಸಮಯದಲ್ಲಿ ಅಥವಾ ನೈವೇದ್ಯ
ಸಮರ್ಪಣೆಗಾಗಿ ಗರ್ಭಗುಡಿಯ ಬಾಗಿಲು
ಮುಚ್ಚಿದ ಕೆಲ ಸ೦ದರ್ಭಗಳಲ್ಲಿ, ಒ೦ದು ಬೆಕ್ಕು
ಗರ್ಭಗುಡಿಯಿ೦ದ ನಿಗೂಢವಾಗಿ
ಹೊರಬರುತ್ತದೆ. ಅದು ಬರುವ ದಾರಿಗಳಾಗಲಿ
ಅಥವಾ ಹೇಗೆ ಪ್ರತ್ಯಕ್ಷವಾಗುತ್ತದೆ
ಎನ್ನುವುದಾಗಲಿ ಎಲ್ಲವೂ ನಿಗೂಢ.!! 
🙏🙏🙏🙏🙏🙏🙏🙏🙏🙏🙏🙏🙏🙏

*ಅಮೂಲ್ಯ ಮಾಹಿತಿ*

1. ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ.
2. ಗೌರೀಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ.
3. ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ.
4. ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ.
5. ತಾಯಿತಂದೆಯರಿಗೆ ಸಮನಾದ ದೇವರಿಲ್ಲ.
6. ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ.
7. ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ.
8. ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ.
9. ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ .
10. ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ.
11. ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ.
12. ಗಾಯತ್ರಿಗೆ ಸಮನಾದ ಮಂತ್ರ ಇನ್ನೊಂದಿಲ್ಲ.
13. ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ.
14. ಗುರು ಹಿರಿಯರ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ.
***†*******************

*ಸಮಸ್ತ ಸನ್ಮಂಗಳಾನಿ ಭವಂತು*

*ನರಕ ಚತುರ್ದಶಿಯಂದು ಎಣ್ಣೆಶಾಸ್ತ್ರ....!!!*
🚩🚩🚩🚩

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು

“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .  

 ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 

ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.
ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು
ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||🙏

(ಸಂಗ್ರಹಿಸಿದ್ದು)

ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺

!!!!Jai HINDUTWA!!!🚩🚩🚩

ನಮ್ಮ ಪ್ರಬಲ *ನಮೋ ರಾಷ್ಟ್ರ ಭಕ್ತರು* ವಾಟ್ಸ್ ಆಪ್ ಗ್ರೂಪ್ ಗೆ ಸೇರಲಿಚ್ಛಿಸುವ ನಮೋ ಅಭಿಮಾನಿಗಳು ಹಾಗೂ ದೇಶ ಭಕ್ತರು ನಮ್ಮ ಈ ಕೆಳಗಿನ ನಂಬರಿಗೆ ತಮ್ಮ *ವಾಟ್ಸ್ ಆಪ್ ನಂಬರಿಂದ ತಮ್ಮ ಹೆಸರು, ಊರಿನ ಜೊತೆ *ನಮೋ* ಎಂದು *WhatsApp* ಮಾಡಿ ಹಾಗೂ ಆದಷ್ಟು ಇದನ್ನು ಶೇರ್ ಮಾಡಿ...🙏🚩

8123030544
9663641922

⛳ ​" ​*ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ*  "​ ⛳ ​
=========================  
        🚩🌞ನಮೋ ಭಾರತ🚩🌞
=========================

ಯಮ : ಚಿತ್ರ ಗುಪ್ತರೆ ಈತ ಯಾರು ?
ಚಿತ್ರಗುಪ್ತ ; ಸ್ವಾಮಿ ಈತ ವೃತ್ತಿಯಲ್ಲಿ ವೈದ್ಯ.
ಯಮ ; ಹಾಗಾದರೆ ಈತ ಹಣದ ಆಸೆಗೆ ಅನವಶ್ಯಕ ಆಪರೇಷನ್ ಗಳನ್ನು ಮಾಡಿರುತ್ತಾನೆ. ಈತನನ್ನು ನರಕಕ್ಕೆ ಕಳುಹಿಸಿ.
ಚಿತ್ರ ಗುಪ್ತ : ಆಯಿತು ಸ್ವಾಮಿ.
ಯಮ : ಈತ ಯಾರು ?
ಚಿತ್ರಗುಪ್ತ : ಸ್ವಮಿ ಈತ ವಕೀಲ.
ಯಮ : ಈತ ಸಾಕಷ್ಟು ಸುಳ್ಳು ಹೇಳಿರುತ್ತಾನೆ. ಈತನನ್ನೂ ನರಕಕ್ಕೆ ಕಳುಹಿಸು.
ಚಿತ್ರಗುಪ್ತ : ಹಾಗೆ ಆಗಲಿ ಸ್ವಾಮಿ.
ಯಮ : ಚಿತ್ರಗುಪ್ತರೆ ಈತ ಯಾರು ?  ಒಣಗಿದ ಸೋರೆಕಾಯಿಯಂತೆ ಇದ್ದಾನೆ.
ಚಿತ್ರಗುಪ್ತ : ಸ್ವಾಮಿ ಈತ ವೃತ್ತಿಯಲ್ಲಿ ಗ್ರಾಮೀಣ ಭಾಗದ ಪ್ರಾಥಮಿಕ ಶಾಲಾ ಶಿಕ್ಷಕ. 
ಯಮ : ಈತ ಸರ್ಕಾರಿ ನೌಕರಳನ್ನು ಮದುವೆ ಆಗಿದ್ದಾನಾ ?
ಚಿತ್ರಗುಪ್ತ : ಇಲ್ಲ ಸ್ವಾಮಿ ಈತ ಸರ್ಕಾರಿ ಉದ್ಯೋಗಿಯನ್ನು ಮದುವೆ ಆಗಿಲ್ಲ.
ಯಮ:    ಹಾಗಾದರೆ ಈತನನ್ನು ಸ್ವರ್ಗಕ್ಕೆ ಕಳುಹಿಸು. 
ಚಿತ್ರಗುಪ್ತ : ಸ್ವಾಮಿ ಅವರೆಲ್ಲರನ್ನು ನರಕಕ್ಕೆ ಕಳುಹಿಸಿದಿರಿ. ಈತನನ್ನು ಏಕೆ ಸ್ವರ್ಗಕ್ಕೆ ಕಳುಹಿಸಬೇಕು.
ಯಮ : ಚಿತ್ರಗುಪ್ತ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಅದರಲ್ಲೂ ಗ್ರಾಮೀಣ ಶಿಕ್ಷಕರಾದರೆ ಮುಗಿಯಿತು. ಪ್ರತಿ ಬಾರಿಯೂ ಪತಿ ಪತ್ನಿ ಪ್ರಕರಣದವರೇ ಟ್ರಾನ್ಸ್ ಫರ್  ಆಗುತ್ತಿರುತ್ತಾರೆ. ಇವರ ಜನ್ಮದಲ್ಲಿ ಟ್ರಾನ್ಸ್ ಫರ್ ಆಗಲ್ಲ. ಇನ್ನೂ ಈ ಜಗತ್ತಿನಲ್ಲಿ ಎಲ್ಲಾ ಹುದ್ದೆಗಳಲ್ಲಿ ಪ್ರಮೋಷನ್ ಇದೆ. ಆದರೆ ಇವರು ಮಾತ್ರ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇರಿ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನಿವೃತ್ತಿ ಆಗುತ್ತಾರೆ. ನಮ್ಮ ಲೋಕದಲ್ಲಿ ಇದಕ್ಕಿಂತ ಕ್ರೂರ ಶಿಕ್ಷೆ ಇದೆಯಾ ? ಚಿತ್ರಗುಪ್ತರೆ.
ಚಿತ್ರಗುಪ್ತ : ಇಲ್ಲ ಸ್ವಾಮಿ ಮುವ್ವತ್ತೈದು ವರ್ಷಗಳ ಕಠಿಣ ಶಿಕ್ಷೆ ಮೂರು ಲೋಕಕಳಲ್ಲೂ ಇಲ್ಲ.   ನಿಮ್ಮ ನ್ಯಾಯವನ್ನು ತ್ರಿಮೂರ್ತಿಗಳು ಒಪ್ಪುತ್ತಾರೆ.


*****************
*ಶ್ರದ್ಧೆಯೇ ಪವಾಡಕ್ಕೆ ಮಾರ್ಗ*


ನದಿಯ ಆಚೆ ಕಡೆ ಇರುವ ಬ್ರಾಹ್ಮಣ ಪೂಜಾರಿಗೆ ಹಾಲಿನವಳೊಬ್ಬಳು ಹಾಲನ್ನು ಕೊಡುತ್ತಿದ್ದಳು. ದೋಣಿ ಸಕಾಲದಲ್ಲಿ ಬರದೆ, ಕಾಲಕ್ಕೆ ಸರಿಯಾಗಿ ಹಾಲನ್ನೊದಗಿಸಲು ಅವಳಿಗೆ ಆಗುತ್ತಿರಲಿಲ್ಲ. ಒಂದು ದಿನ ಬಹಳ ಹೊತ್ತಾದ ಮೇಲೆ ಹಾಲನ್ನು ತಂದಳು. ಬ್ರಾಹ್ಮಣನು ಅವಳನ್ನು ಗದರಿಸಿದನು. ಹಾಲು ಮಾರುವವಳು "ನಾನೇನು ಮಾಡಲಿ, ಕಾಲಕ್ಕೆ ಸರಿಯಾಗಿ ನಾನು ಮನೆಯಿಂದ ಹೊರಡುತ್ತೇನೆ. ಆದರೆ ದೋಣಿಗಾಗಿ ನಾನು ಕಾಯಬೇಕಾಗುತ್ತದೆ" ಎಂದಳು. ಬ್ರಾಹ್ಮಣನು "ಎಲೈ ಹೆಂಗಸೆ, ಭಗವಂತನ ನಾಮವನ್ನು ಉಚ್ಚರಿಸಿ ಜನ ಭವಸಾಗರವನ್ನು ದಾಟುತ್ತಾರೆ. ಈ ಒಂದು ಸಣ್ಣ ನದಿಯನ್ನು ನೀನು ದಾಟಲಾರೆಯಾ?" ಎಂದನು. 

ಸರಳ ಭಕ್ತಿಯುಳ್ಳ ಹೆಂಗಸಿಗೆ ನದಿಯನ್ನು ದಾಟುವ ಉಪಾಯವನ್ನು ಕೇಳಿ ಸಂತೋಷವಾಯಿತು. 

ಮಾರನೆ ದಿನದಿಂದ ಕಾಲಕ್ಕೆ ಸರಿಯಾಗಿ ಹಾಲನ್ನು ತರುತ್ತಿದ್ದಳು. ಒಂದು ದಿನ ಪೂಜಾರಿಯು "ಇತ್ತೀಚೆಗೆ ನೀನು ಸಮಯಕ್ಕೆ ಸರಿಯಾಗಿ ಹಾಲನ್ನು ತರುತ್ತಿರುವೆಯಲ್ಲಾ"?" ಎಂದು ಕೇಳಿದನು. ಅದಕ್ಕೆ ಹಾಲು ಮಾರುವವಳು "ನೀವೇ ಹೇಳಿದಂತೆ ನಾನು ಭಗವಂತನ ಹೆಸರನ್ನು ಹೇಳುತ್ತ ನದಿಯ ಮೇಲೆ ನಡೆದುಕೊಂಡು ಬಂದೆ. ನನಗೆ ಈಗ ದೋಣಿಯ ಅವಶ್ಯಕತೆ ಇಲ್ಲ" ಎಂದಳು. ಪೂಜಾರಿಗೆ ಇದನ್ನು ನಂಬಲು ಆಗಲಿಲ್ಲ. "ನೀನು ನದಿಯನ್ನು ಹೇಗೆ ದಾಟುತ್ತಿರುವೆ ಎಂಬುದನ್ನು ತೋರಿಸುತ್ತೀಯಾ?" ಎಂದು ಕೇಳಿದ.

 ಹಾಲಿನ ಹೆಂಗಸು ಪೂಜಾರಿಯನ್ನು ತನ್ನೊಡನೆ ಕರೆದುಕೊಂಡು ಹೋದಳು. ಆಕೆ ನದಿಯ ಮೇಲೆ ನಡೆಯಲಾರಂಭಿಸಿದಳು. ಹಿಂತಿರುಗಿ ನೋಡಿದಾಗ ಪೂಜಾರಿಗಳು ಬಹಳ ದುರವಸ್ಥೆಯಲ್ಲಿದ್ದುದನ್ನು ನೋಡಿದಳು. "ಸ್ವಾಮಿಗಳೆ, ನೀವು ದೇವರ ಹೆಸರನ್ನು ಬಾಯಲ್ಲಿ ಹೇಳುತ್ತಿರುವಿರಿ. ಅದೇ ವೇಳೆಗೆ ಒದ್ದೆಯಾಗದಿರಲಿ ಎಂದು ಪಂಚೆಯನ್ನು ಮೇಲಕ್ಕೆತ್ತುತ್ತಿರುವಿರಿ. ನೀವು ನಿಜವಾಗಿಯೂ ಭಗವಂತನ ಮೇಲೆ ಭಾರ ಹಾಕಿಲ್ಲ" ಎಂದಳು.

*ಯಾವ ಒಂದು ಅದ್ಭುತವನ್ನು ಸಾಧಿಸಬೇಕಾದರೂ ಭಗವಂತನಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಶರಣಾಗತಿ ಇರಬೇಕು.*
†********************†

🌳🕉🌳 #ಸಮುದ್ರಮಥನ 🌳🕉🌳
🌿🌿🌿🌿🌿🌿🌿🌿🌿🌿🌿🌿

👉ಸಮುದ್ರ ಮಥನದ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಆಸ್ತೀಕ ಪರ್ವ (ಅಧ್ಯಾಯ ೧೫-೧೭) ದಲ್ಲಿ ಬರುತ್ತದೆ. ಈ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತ ಪೌರಾಣಿಕ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಹೇಳಿದನು.

🔹ಅನುತ್ತಮ ತೇಜೋರಾಶಿಯಾಗಿ ಪ್ರಜ್ವಲಿಸುತ್ತಿರುವ ಮೇರು ಎಂಬ ಪರ್ವತವಿದೆ. ಅದರ ಶೃಂಗದ ಮೇಲೆ ಬಿದ್ದ ಸೂರ್ಯ ಕಿರಣಗಳು ಕಾಂಚನ-ಜ್ವಾಲೆಗಳಂತೆ ಹೊರಸೂಸುತ್ತಿದ್ದವು. ಆ ಗಂಧರ್ವಸೇವಿತ ಅಪ್ರಮೇಯ ಚಿತ್ರವರ್ಣದ ಕಾಂಚನಾಭರಣದಂತಿದ್ದ ಆ ಪರ್ವತವು ಅಧರ್ಮಿ ಬಹುಜನರಿಗೆ ಕಾಣದೇ ಇರುವಂಥಹುದು. ದಿವ್ಯೌಷಧಿಗಳಿಂದ ಬೆಳಗುತ್ತಿರುವ ಆ ಮಹಾಗಿರಿಯ ಉತ್ತುಂಗ ಶಿಖರದಲ್ಲಿ ಘೋರಪ್ರಾಣಿಗಳು ಸಂಚರಿಸುತ್ತಿರುತ್ತವೆ. ಮನಸ್ಸಿಗೂ ಅಗಮ್ಯವಾದ ಅದು ಅನೇಕ ನದೀ-ವೃಕ್ಷಗಳಿಂದ ಕೂಡಿ ನಾನಾ ಪಕ್ಷಿಗಳ ಸುಮನೋಹರ ನಾದಗಳಿಂದ ತುಂಬಿದೆ. 

🔹ಅನಂತ ಕಲ್ಪಗಳಿಂದಲೂ ಅನೇಕ ರತ್ನಗಳಿಂದ ಶೋಭಿಸುತ್ತಾ ಎತ್ತರವಾಗಿ ನಿಂತಿರುವ ಅದರ ಶುಭ ಶಿಖರದ ಮೇಲೆ ಮಹೌಜಸ ಸುರರೆಲ್ಲರೂ ಸಭೆಯನ್ನು ರಚಿಸಿದ್ದರು. ಆ ತಪೋನಿಯಮ ಸಂಸ್ಥಿತ ದಿವೌಕಸರು ಅಲ್ಲಿ ಕುಳಿತು ಅಮೃತವನ್ನು ಹೇಗೆ ಪಡೆಯಬಹುದು ಎಂದು ಪರಸ್ಪರರಲ್ಲಿ ವಿಚಾರಿಸುತ್ತಿದ್ದರು. ಮಂತ್ರಾಲೋಚನೆಯಲ್ಲಿ ತೊಡಗಿದ್ದ ಬ್ರಹ್ಮ ಮತ್ತು ಸುರರೆಲ್ಲರನ್ನೂ ಉದ್ದೇಶಿಸಿ ದೇವ ನಾರಾಯಣನು ಇಂತೆಂದನು: “ದೇವತೆಗಳೂ ಅಸುರರೂ ಒಂದಾಗಿ ಕಲಶೋದಧಿಯನ್ನು ಮಥಿಸಲಿ. ಮಹೌದಧಿಯನ್ನು ಕಡೆಯುವಾಗ ಅಲ್ಲಿ ಅಮೃತವು ಹುಟ್ಟುವುದು. ದೇವತೆಗಳೇ! ಕ್ಷೀರಸಾಗರವನ್ನು ಮಥಿಸುವಾಗ ಅಮೃತದ ಜೊತೆ ಸರ್ವ ಔಷಧಿ-ರತ್ನಗಳನ್ನೂ ಪಡೆಯುತ್ತೀರಿ!”

🔹ಮೋಡಗಳೇ ಶಿಖರಾಕಾರವಾಗಿರುವ, ಗಿರಿಶೃಂಗಗಳಿಂದ ಅಲಂಕೃತ, ಲತಾಜಾಲ ಸಮಾವೃತ ಪರ್ವತಶ್ರೇಷ್ಠವೇ ಮಂದರ. ಅಲ್ಲಿ ನಾನಾ ಪಕ್ಷಿಸಂಕುಲಗಳು ನಿನಾದಗೈಯುತ್ತಿರುತ್ತವೆ ಮತ್ತು ನಾನಾ ಮೃಗಸಂಕುಲಗಳಿವೆ. ಅಲ್ಲಿ ಕಿನ್ನರ-ಅಪ್ಸರ-ದೇವತೆಗಳು ವಿಹರಿಸುತ್ತಿರುತ್ತಾರೆ. ಅದು ಭೂಮಿಯ ಮೇಲೆ ಹನ್ನೊಂದು ಸಾವಿರ ಯೋಜನ ಮತ್ತು ಕೆಳಗೆ ಹನ್ನೊಂದು ಸಾವಿರ ಯೋಜನ ಆಳದಲ್ಲಿದೆ. ಅದನ್ನು ಕೀಳಲು ಅಶಕ್ತರಾದ ಸರ್ವ ದೇವಗಣಗಳೂ ಬ್ರಹ್ಮನೊಂದಿಗೆ ಆಸೀನನಾಗಿದ್ದ ವಿಷ್ಣುವಿನ ಬಳಿಬಂದು ಹೇಳಿದರು: “ಮಂದರವನ್ನು ಎತ್ತುವುದರ ಕುರಿತು ಏನಾದರೂ ಉಪಾಯವನ್ನು ಯೋಚಿಸಿರಿ. “ಹಾಗೆಯೇ ಆಗಲಿ!” ಎಂದು ಹೇಳಿ ವಿಷ್ಣು-ಬ್ರಹ್ಮರು ಕರ್ಮವೀರ್ಯವಾನ್ ಆದಿಶೇಷನಿಗೆ ಪ್ರಚೋದಿಸಲು ಅವನು ಅದನ್ನು ಎತ್ತಿ ಹಿಡಿದನು. ಆ ಮಹಾಬಲ ಅನಂತನು ಬಲವನ್ನುಪಯೋಗಿಸಿ ವನ-ವೃಕ್ಷಗಳ ಸಹಿತ ಆ ಪರ್ವತರಾಜನನ್ನು ಎಳೆದು ಕಿತ್ತನು.

🔹ನಂತರ ಸುರರೆಲ್ಲರೂ ಸಮುದ್ರತಟವನ್ನು ಸೇರಿ “ಸಮುದ್ರ! ಅಮೃತಕ್ಕಾಗಿ ನಿನ್ನನ್ನು ಮಥಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ” ಎಂದು ಹೇಳಿದರು. ಆಗ ಅಪಾಂಪತಿಯು “ಅದರಲ್ಲಿ ಒಂದು ಭಾಗವನ್ನು ನನಗೂ ಕೊಡಿ. ಮಂದರವು ಕಡೆಯುವುದರಿಂದ ಉಂಟಾಗುವ ವಿಪುಲ ಅಲ್ಲೋಲ-ಕಲ್ಲೋಲವನ್ನು ನಾನು ತಡೆಯಬಲ್ಲೆ!” ಎಂದನು.

🔹ಸುರಾಸುರರೆಲ್ಲರೂ ಕೂರ್ಮರಾಜ ಅಕೂಪಾರನಲ್ಲಿಗೆ ಹೋಗಿ “ನಿನ್ನ ಬೆನ್ನ ಮೇಲೆ ಈ ಪರ್ವತವನ್ನು ಎತ್ತಿ ಹಿಡಿದುಕೊಳ್ಳಬೇಕು” ಎಂದು ಕೇಳಿಕೊಂಡರು. “ಹಾಗೆಯೇ ಆಗಲಿ!” ಎಂದು ಕೂರ್ಮವು ಹೇಳಲು ಅದರ ಬೆನ್ನ ಮೇಲೆ ಇಂದ್ರನು ಒಂದು ಯಂತ್ರದ ಸಹಾಯದಿಂದ ಮಂದರ ಪರ್ವತವನ್ನು ಎತ್ತಿ ನಿಲ್ಲಿಸಿದನು.

🔹ಮಂದರವನ್ನು ಕಡೆಗೋಲನ್ನಾಗಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ದೇವತೆಗಳು ದೈತ್ಯ-ದಾನವರೊಂದಿಗೆ ನಿಧಿಮಾಂಭಸ ಸಮುದ್ರವನ್ನು ಅಮೃತಕ್ಕೋಸ್ಕರ ಕಡೆಯತೊಡಗಿದರು. ಒಂದು ಕಡೆ ನಾಗರಾಜನ ಹೆಡೆಯನ್ನು ಮಹಾ ಅಸುರರು ಹಿಡಿದಿದ್ದರೆ ಇನ್ನೊಂದೆಡೆ ಅದರ ಬಾಲವನ್ನು ಹಿಡಿದು ಸರ್ವದೇವತೆಗಳೂ ನಿಂತಿದ್ದರು. ಭಗವಾನ್ ನಾರಾಯಣ ಸ್ವರೂಪೀ ನಾಗ ಅನಂತನು ಶಿರವನ್ನು ಪುನಃ ಪುನಃ ಮೇಲೆತ್ತಿ ಕೆಳಗಿಳಿಸುತ್ತಿದ್ದನು. ಸುರರಿಂದ ಜೋರಾಗಿ ಎಳೆದಾಡಲ್ಪಟ್ಟ ನಾಗ ವಾಸುಕಿಯ ಬಾಯಿಯಿಂದ ಆಗ ಧೂಮ-ಜ್ವಾಲೆಗಳಿಂದೊಡಗೂಡಿದ ಹವೆಯು ಹೊರಹೊಮ್ಮಿತು. 

🔹ಆ ಹವೆಯು ಮಿಂಚಿನಿಂದೊಡಗೂಡಿದ ಮೇಘಗಳಾಗಿ ಶ್ರಮಸಂತಾಪದಿಂದ ಬಳಲಿದ ಸುರಗಣಗಳ ಮೇಲೆ ಮಳೆಸುರಿಸಿತು. ಆ ಗಿರಿಕೂಟದ ಕಣಿವೆಗಳಲ್ಲಿದ್ದ ಮರಗಳಿಂದ ಉದುರುತ್ತಿದ್ದ ಪುಷ್ಪಮಾಲೆಗಳು ಸುರಾಸುರಗಣಗಳೆಲ್ಲರ ಆಯಾಸವನ್ನು ಪರಿಹರಿಸಿದವು. ಸುರಾಸುರರು ಮಂದರದಿಂದ ಕಡೆಯುತ್ತಿದ್ದ ಸಮುದ್ರದಿಂದ ಮಹಾಮೇಘಗರ್ಜನೆಯಂಥಹ ಮಹಾ ಘೋಷವು ಕೇಳಿಬರುತ್ತಿತ್ತು. ಅಲ್ಲಿದ್ದ ನಾನಾ ಜಲಚರಗಳು ಮಹಾದ್ರಿಯಿಂದ ಪುಡಿಪುಡಿಯಾಗಿ ನೂರಾರು ಸಂಖ್ಯೆಗಳಲ್ಲಿ ಆ ಲವಣಾಂಭಸಿಯಲ್ಲಿ ಲಯವಾದವು. ವರುಣ ಲೋಕದ ವಿವಿಧ ಜೀವಿಗಳು ಮತ್ತು ಪಾತಾಲತಲ ವಾಸಿಗಳು ಈ ಘರ್ಷಣೆಯಲ್ಲಿ ಲಯಹೊಂದಿದವು. 

🔹ತಿರುಗುತ್ತಿದ್ದ ಮಂದರ ಪರ್ವತದ ಮೇಲಿದ್ದ ಮಹಾದ್ರುಮಗಳು ಪರಸ್ಪರ ಸಂಘರ್ಷಿಸಿ ಗೂಡುಕಟ್ಟಿದ್ದ ಪಕ್ಷಿಗಳೊಡನೆ ಸಾಗರಕ್ಕೆ ಉರುಳಿದವು. ಅವುಗಳ ಸಂಘರ್ಷದಿಂದ ಹಲವಾರು ಬಾರಿ ಬೆಂಕಿಯು ಭುಗಿಲೆದ್ದು ಆ ಮಂದರ ಗಿರಿಯು ಮಿಂಚಿನಿಂದೊಡಗೂಡಿದ ಕಪ್ಪು ಮೋಡಗಳಿಂದ ಆವರಿಸಿರುವಂತೆ ಕಂಡುಬರುತ್ತಿತ್ತು. ಅಲ್ಲಿ ವಾಸಿಸುತ್ತಿದ್ದ ವಿವಿಧ ಪಕ್ಷಿ-ಪ್ರಾಣಿಗಳು, ಆನೆ-ಸಿಂಹಗಳು ಎಲ್ಲವೂ ಅದರಲ್ಲಿ ಸುಟ್ಟುಹೋದವು. 

🔹ಆಗ ಅಮರಶ್ರೇಷ್ಠ ಇಂದ್ರನು ಭಾರೀ ಮಳೆಯನ್ನು ಸುರಿಸಿ ಉರಿಯುತ್ತಿರುವ ಅಗ್ನಿಯನ್ನು ಶಮನಗೊಳಿಸಿದನು. ಆ ಮಹಾದ್ರುಮಗಳಲ್ಲಿದ್ದ ಅಂಟು-ಸ್ರಾವ-ಔಷಧಿ ರಸಗಳು ಸಾಗರದ ನೀರಿನೊಂದಿಗೆ ಸೇರಿ ಕರಗಿದವು. ಆ ರಸ-ಹಾಲು-ಅಂಟುಗಳಲ್ಲಿದ್ದ ಅಮೃತವೀರ್ಯಗಳಿಂದಲೇ ಸುರರು ಅಮರತ್ವವನ್ನು ಪಡೆದರು. ಸಮುದ್ರದ ನೀರಿನಿಂದ ಉತ್ತಮ ರಸಮಿಶ್ರಿತ ಹಾಲು-ತುಪ್ಪಗಳು ಉತ್ಪನ್ನವಾದವು.

🔹ಆಗ ದೇವತೆಗಳೆಲ್ಲರೂ ವರದ ಬ್ರಹ್ಮನು ಉಪಸ್ಥಿತನಿದ್ದಲ್ಲಿಗೆ ಹೋಗಿ “ಬ್ರಹ್ಮ! ನಾವು ಆಯಾಸದಿಂದ ಬಳಲಿದ್ದೇವೆ. ಇನ್ನೂ ಅಮೃತವು ದೊರಕಲಿಲ್ಲ! ದೇವ ನಾರಾಯಣನನ್ನು ಬಿಟ್ಟು ಬೇರೆ ಯಾವ ದೈತ್ಯ-ನಾಗೋತ್ತಮರಿಂದಲೂ ಈ ಸಾಗರ ಮಂಥನವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ” ಎಂದರು. ಆಗ ಬ್ರಹ್ಮನು ದೇವ ನಾರಾಯಣನಲ್ಲಿ “ವಿಷ್ಣು! ನಿನ್ನ ಪರಾಯಣರಾದ ಇವರಿಗೆ ಬಲವನ್ನು ಕರುಣಿಸು!” ಎಂದನು. ಆಗ ವಿಷ್ಣುವು “ಈ ಕರ್ಮದಲ್ಲಿ ತೊಡಗಿರುವ ಸರ್ವರಿಗೂ ಬಲವನ್ನು ಕೊಡುತ್ತಿದ್ದೇನೆ. ಮಂದರವನ್ನು ಮುಳುಗಿಸಿ ಸರ್ವರೂ ಕಡೆಯಲು ಪ್ರಾರಂಭಿಸಿ!” ಎಂದನು. 

🔹ನಾರಾಯಣನ ಮಾತುಗಳನ್ನು ಕೇಳಿ ಹೊಸಶಕ್ತಿಯನ್ನು ಪಡೆದ ಅವರು ಪರ್ವತವನ್ನು ಬಳಸಿ ಪುನಃ ಕಡೆಯಲು ಪ್ರಾರಂಭಿಸಿದರು. ನಂತರ ಶತಸಹಸ್ರಾಂಶು ಸಮಾನ, ಪ್ರಸನ್ನ ಪ್ರಖರವನ್ನು ಹೊಂದಿ ಬೆಳಗುತ್ತಿದ್ದ ಶೀತಾಂಶು ಸೋಮನು ಸಾಗರದಿಂದ ಉತ್ಪನ್ನನಾದನು. ನಂತರ ತುಪ್ಪದಿಂದ ಪಾಂಡುರವಾಸಿನೀ ಶ್ರೀಯು ಉತ್ಪನ್ನಳಾದಳು. ನಂತರ ಸುರಾದೇವಿ ಮತ್ತು ಶ್ವೇತ ತುರಗಗಳು ಉತ್ಪನ್ನರಾದರು. ಶ್ರೀಮಾನ್ನಾರಾಯಣನು ತನ್ನ ಎದೆಯ ಮೇಲೆ ಧರಿಸಿರುವ ದಿವ್ಯ ವಿಕಸಿತ ಕೌಸ್ತುಭಮಣಿಯೂ ಕೂಡ ರೋಗರಹಿತ ಅಮೃತದೊಂದಿಗೆ ಉತ್ಪನ್ನವಾಯಿತು. 

🔹ಆದಿತ್ಯಮಾರ್ಗವನ್ನಾಶ್ರಯಿಸಿ ಸೋಮ ಮತ್ತು ತುರಗಗಳು ಮನೋವೇಗದಲ್ಲಿ ಬಂದು ದೇವತೆಗಳನ್ನು ಸೇರಿದರು. ಅನಂತರ ದೇವ ಧನ್ವಂತರಿಯು ಅಮೃತದಿಂದ ತುಂಬಿದ ಶ್ವೇತ ಕಮಂಡಲುವನ್ನು ಹಿಡಿದು ಸಾಗರದಿಂದ ಎದ್ದು ಬಂದನು. ಆ ಅತ್ಯದ್ಭುತವನ್ನು ನೋಡಿ ದಾನವರು ಅಮೃತಕ್ಕಾಗಿ “ಇದು ನಮ್ಮದು!” ಎಂದು ಮಹಾನಾದಗೈದರು. ಆಗ ಪ್ರಭು ನಾರಾಯಣನು ಮಾಯೆಯಿಂದ ಅದ್ಭುತ ಮೋಹಿನೀ ಸ್ತ್ರೀರೂಪವನ್ನು ಧರಿಸಿ ದಾನವರನ್ನು ಮರುಳುಮಾಡಿದನು. ಮೂಢಚೇತಸ ದಾನವ ದೈತ್ಯರೆಲ್ಲರೂ ಅವಳಲ್ಲಿಯೇ ಮನಸ್ಸನ್ನಿಟ್ಟುಕೊಂಡು ಅಮೃತವನ್ನು ಆ ಸ್ತ್ರೀಯ ಕೈಗಳಲ್ಲಿಟ್ಟರು. ಆಗ ದೇವಗಣಗಳೆಲ್ಲವೂ ವಿಷ್ಣುವಿನಿಂದ ಅಮೃತವನ್ನು ಪಡೆದು ಸಂಭ್ರಮ-ತುಮುಲಗಳೊಂದಿಗೆ ಕುಡಿದರು. 

🔹ದೇವತೆಗಳು ಬಹಳ ಆಸೆಯಿಂದ ಅಮೃತವನ್ನು ಕುಡಿಯುತ್ತಿರುವಾಗ ದೇವತೆಗಳ ರೂಪದಲ್ಲಿದ್ದ ದಾನವ ರಾಹುವೂ ಅದನ್ನು ಕುಡಿದನು. ಅಮೃತವು ಆ ದಾನವನ ಕಂಠವನ್ನು ಸೇರುವ ಸಮಯದಲ್ಲಿಯೇ ಸುರರ ಹಿತಕಾಮೀ ಚಂದ್ರ-ಸೂರ್ಯರು ಅದರ ಕುರಿತು ಹೇಳಿದರು. ತಕ್ಷಣವೇ ಭಗವಂತನು ತನ್ನ ಚಕ್ರಾಯುಧದಿಂದ ಅಮೃತವನ್ನು ಕುಡಿಯುತ್ತಿದ್ದ ಅವನ ಅಲಂಕೃತ ಶಿರಸ್ಸನ್ನು ತುಂಡರಿಸಿದನು. ಆ ದಾನವನ ಶೈಲಶೃಂಗ ಸಮಾನ ಮಹಾ ಶಿರವು ಚಕ್ರದಿಂದ ಕತ್ತರಿಸಲ್ಪಟ್ಟು ಆಕಾಶವನ್ನೇರಿತು ಮತ್ತು ಶಿರರಹಿತ ದೇಹವು ಭೂತಲದಲ್ಲಿ ಬಿದ್ದಿತು. ಅಂದಿನಿಂದ ರಾಹುವಿನ ಮುಖ ಮತ್ತು ಚಂದ್ರ-ಸೂರ್ಯರ ನಡುವೆ ಶಾಶ್ವತ ವೈರತ್ವವು ಬೆಳೆಯಿತು ಮತ್ತು ಅವರೀರ್ವರ ಗ್ರಹಣಗಳು ನಿರಂತರವಾಗಿ ನಡೆಯುತ್ತಿವೆ. ಈ ಮಧ್ಯದಲ್ಲಿ ವೀರ್ಯವಾನ್ ಪ್ರಭು ವಿಷ್ಣುದೇವನು ನರನ ಜೊತೆಗೂಡಿ ದಾನವೇಂದ್ರರಿಂದ ಅಮೃತವನ್ನು ಕೊಂಡೊಯ್ದನು.

🔹ಆಗ ಪ್ರಮುಖ ದೈತ್ಯ-ದಾನವರು ಕವಚಧಾರಿಗಳಾಗಿ ನಾನಾ ಆಯುಧಗಳನ್ನು ಹಿಡಿದು ದೇವತೆಗಳನ್ನು ಬೆನ್ನಟ್ಟಿದರು. ನಂತರ ಭಗವಾನ್ ಹರಿಯು ಸರಿಸಾಟಿಯಿಲ್ಲದ ಸ್ತ್ರೀರೂಪವನ್ನು ತೊರೆದು ನಾನಾ ತರಹದ ಭೀಷಣ ಆಯುಧಗಳನ್ನು ಎಸೆಯುತ್ತಾ ದಾನವರು ತತ್ತರಿಸುವಂತೆ ಮಾಡಿದನು. ಆಗ ಲವಣಾಂಭಸದ ತೀರದಲ್ಲಿ ಸುರಾಸುರರ ಸರ್ವ ಘೋರತರ ಮಹಾ ಸಂಗ್ರಾಮವು ಪ್ರಾರಂಭವಾಯಿತು. ಸಹಸ್ರಾರು ಪ್ರಾಸಗಳು, ತೀಕ್ಷ್ಣವಾದ ವಿಪುಲ ಈಟಿಗಳು, ಮೊನಚಾದಿ ತುದಿಗಳ ತೋಮರಗಳು ಮತ್ತು ವಿವಿಧ ಶಸ್ತ್ರಗಳನ್ನು ಎಲ್ಲೆಡೆಯಿಂದ ಎಸೆಯಲಾಯಿತು. ಚಕ್ರದಿಂದ ತುಂಡಾದ ಅಸುರರು ರಕ್ತವನ್ನು ಕಾರಿದರು ಮತ್ತು ಬಹಳಷ್ಟು ಮಂದಿ ಖಡ್ಗ-ಈಟಿ-ಗದಾ ಪ್ರಹಾರಗಳಿಂದ ಭೂಮಿಯ ಮೇಲೆ ಉರುಳಿ ಬಿದ್ದರು. 

🔹ಆ ದಾರುಣ ಯುದ್ಧದಲ್ಲಿ ಬಂಗಾರದ ಕಿರೀಟಗಳಿಂದ ಅಲಂಕೃತ ಕಾಂತಿಯಿಂದ ಹೊಳೆಯುತ್ತಿದ್ದ ಶಿರಗಳು ಚಕ್ರದಿಂದ ಕತ್ತರಿಸಲ್ಪಟ್ಟು ಬೀಳುತ್ತಲೇ ಇದ್ದವು. ರಕ್ತಲಿಪ್ತಾಂಗರಾಗಿ ಎಲ್ಲೆಲ್ಲಿಯೂ ಸತ್ತು ಬಿದ್ದಿದ್ದ ಮಹಾ ಅಸುರರು ರಕ್ತದಿಂದ ಬಳಿಯಲ್ಪಟ್ಟ ಪರ್ವತ ಶಿಖರಗಳಂತೆ ಕಾಣುತ್ತಿದ್ದರು. ಸೂರ್ಯಾಸ್ತವಾಗುತ್ತಿದ್ದಂತೆ ಅನ್ಯೋನ್ಯರ ಶಸ್ತ್ರಗಳ ಗಾಯದಿಂದ ಸಾಯುತ್ತಿರುವ ಸಾವಿರಾರು ಅಸುರರ ಹಾಹಾಕಾರವು ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿತ್ತು. ಸಮರದಲ್ಲಿ ಒಬ್ಬರನ್ನೊಬ್ಬರು ಪರಿಘಗಳಿಂದ ತುಂಡರಿಸುವ ಮತ್ತು ಮುಷ್ಟಿಗಳಿಂದ ಹೊಡೆದಾಡುವ ಶಬ್ಧವು ಆಕಾಶವನ್ನೇರಿತು. “ಕತ್ತರಿಸು! ಚುಚ್ಚು! ಬೆನ್ನಟ್ಟು! ಮುನ್ನುಗ್ಗು! ಬೀಳಿಸು!” ಮೊದಲಾದ ಮಹಾಘೋರ ಕದನ ಕೂಗುಗಳು ಅಲ್ಲಿ ಕೇಳಿಬರುತ್ತಿದ್ದವು.

🔹ಈ ರೀತಿ ಭಯಾನಕ ಯುದ್ಧವು ನಡೆಯುತ್ತಿರುವಾಗ ದೇವ ನರ ಮತ್ತು ನಾರಾಯಣರು ಸಮರವನ್ನು ಪ್ರವೇಶಿಸಿದರು. ನರನಲ್ಲಿದ್ದ ದಿವ್ಯ ಧನುಸ್ಸನ್ನು ನೋಡಿ ದಾನವಸೂದನ ಭಗವಾನ್ ವಿಷ್ಣುವು ಚಕ್ರವನ್ನು ಸ್ಮರಿಸಿದನು. ಅವನು ಸ್ಮರಿಸುತ್ತಿದ್ದಂತೆಯೇ ಆಕಾಶದಿಂದ ತೇಜಸ್ಸಿನಲ್ಲಿ ವಿಭಾವಸುವಿನಂತಿದ್ದ, ಶತ್ರುತಾಪನ, ಯುದ್ಧಭಯಂಕರ, ಮಹಾಪ್ರಭೆಯ ಉತ್ತಮ ಸುದರ್ಶನ ಚಕ್ರವು ಆಗಮಿಸಿತು. ಅದು ಬಂದಕೂಡಲೇ ಪ್ರಜ್ವಲಿಸುತ್ತಿರುವ ಅಗ್ನಿಪ್ರಭೆಯ ಭಯಂಕರ ಅಚ್ಯುತನು ಆನೆಯ ಸೊಂಡಲಿನಂತಿದ್ದ ತನ್ನ ಬಾಹುಗಳಿಂದ ಅತಿ ವೇಗದಲ್ಲಿ ಶತ್ರುಗಳ ನಗರವನ್ನಿಡೀ ನಾಶಪಡಿಸಬಲ್ಲ ಆ ಮಹಪ್ರಭೆಯ ಚಕ್ರವನ್ನು ಎಸೆದನು. 

🔹ಪುರುಷಶ್ರೇಷ್ಠನು ಪ್ರಯೋಗಿಸಿದ ಪ್ರಳಯಾಗ್ನಿಯ ಜ್ವಾಲೆಯಂತೆ ಉರಿಯುತ್ತಿದ್ದ ಆ ಚಕ್ರವು ಸಹಸ್ರಾರು ದೈತ್ಯರನ್ನು ನಾಶಪಡಿಸಿತು. ಅದು ಕೆಲವೊಮ್ಮೆ ಅಗ್ನಿಯಂತೆ ಉರಿದು ಅವರನ್ನೆಲ್ಲಾ ಭಸ್ಮಮಾಡುತ್ತಿತ್ತು. ಕೆಲವೊಮ್ಮೆ ಕ್ಷಿಪಣಿಯಂತೆ ಅವರ ಮೇಲೆ ಬಿದ್ದು ಹೊಡೆಯುತ್ತಿತ್ತು. ಕೆಲವೊಮ್ಮೆ ಪಿಶಾಚಿಯಂತೆ ಭೂಮ್ಯಾಕಾಶಗಳಲ್ಲಿ ತಿರುಗುತ್ತಾ ಕೆಳಗೆ ಬಿದ್ದಿದ್ದ ಅಸುರರ ರಕ್ತವನ್ನು ಕುಡಿಯುತ್ತಿತ್ತು. ಆಗ ನೀರಿಲ್ಲದ ಮೇಘಗಳಂತೆ ತೋರುತ್ತಿದ್ದ ಮಹಾಬಲಶಾಲೀ ಅಸುರರು ಗಗನವನ್ನೇರಿ ಸಹಸ್ರಾರು ಪರ್ವತಗಳನ್ನು ದೇವಗಣಗಳ ಬೀಳಿಸಿ ಹಿಂಸಿಸತೊಡಗಿದರು. ಕಾಡು-ಕಣಿವೆಗಳಿದ್ದ ಆ ಮಹಾಪರ್ವತಗಳು ಆಕಾಶದಿಂದ ಕೆಳಗೆ ಬೀಳುವಾಗ ಪರಸ್ಪರ ತಾಗಿ ಮೇಘಗಳಂತೆ ಮಹಾಗರ್ಜನೆಯನ್ನುಂಟುಮಾಡುತ್ತಿದ್ದವು. 

🔹ರಣಭೂಮಿಯಲ್ಲಿ ಕಾಡುಗಳಿದ್ದ ಪರ್ವತಗಳು ಬೀಳುವಾಗ ಮತ್ತು ಸಹಾಸ್ರಾರು ಯೋಧರು ಗರ್ಜಿಸುವಾಗ ಭೂಮಿಯು ತತ್ತರಿಸಿತು. ಆಗ ನರನು ಸುರಾಸುರರ ಮಧ್ಯೆ ನಡೆಯುತ್ತಿದ್ದ ಆ ಮಹಾಭಯಂಕರ ಯುದ್ಧವನ್ನು ಪ್ರವೇಶಿಸಿ ಶ್ರೇಷ್ಠ ಕನಕಾಗ್ರದಿಂದ ಅಲಂಕೃತ ಶರಗಳಿಂದ ಆ ಪರ್ವತಗಳನ್ನು ಪುಡಿಮಾಡಿ ಅಂತರಿಕ್ಷವನ್ನು ಧೂಳಿನಿಂದ ತುಂಬಿಸಿದನು. ಪ್ರಜ್ವಲಿಸುತ್ತಿರುವ ಬೆಂಕಿಯಂತೆ ಭೂಮಿಯಲ್ಲಿ ತಿರುಗುತ್ತಾ ಉರಿಯುತ್ತಿದ್ದ ಪರಿಕುಪಿತ ಸುದರ್ಶನವನ್ನು ನೋಡಿ ಸುರರಿಂದ ಪರಾಭವಗೊಂಡ ಮಹಾ ಅಸುರರು ಭೂಮಿಯ ಕೆಳಗೆ ಮತ್ತು ಉಪ್ಪುನೀರಿನ ಸಮುದ್ರವನ್ನು ಸೇರಿದರು. 

🔹ವಿಜಯಿ ಸುರರು ಮಂದರವನ್ನು ಅದರ ಸ್ಥಳದಲ್ಲಿಯೇ ಕೊಂಡೊಯ್ದಿಟ್ಟು ಪೂಜಿಸಿ, ಸಂತಸಭರಿಸ ಘೋಷಗಳಿಂದ ಆಕಾಶ-ಸ್ವರ್ಗಗಳನ್ನು ತುಂಬಿಸುತ್ತಾ ತಮ್ಮ ತಮ್ಮ ಸ್ಥಾನಗಳನ್ನು ಸೇರಿದರು. ಸ್ವರ್ಗವನ್ನು ಸೇರಿದ ಸುರರು ಪುಷ್ಕಳ ಸಂತೋಷಗೊಂಡು ಆ ಅಮೃತನಿಧಿಯನ್ನು ಜಾಗ್ರತೆಯಿಂದ ಕಾದುಕೊಂಡರು. ಇಂದ್ರ ಮತ್ತು ಇತರ ಅಮರರು ಅದನ್ನು ಒಂದು ಪಾತ್ರೆಯಲ್ಲಿಟ್ಟು ರಕ್ಷಣೆಗೆಂದು ನರನಿಗೆ ಕೊಟ್ಟರು.

🙏🌺🙏ಶ್ರೀ ಕೃಷ್ಣಾರ್ಪಣಾಮಸ್ತು🙏🌺🙏

🥀🥀ಸರ್ವರಿಗೂ ವಂದನೆಗಳು, ಶುಭರಾತ್ರಿ🥀🥀

***********
*ಕುಂಕುಮಾರ್ಚನೆಯನ್ನು ಮಾಡುವುದರ ಹಿಂದಿನ ಮಹತ್ವ*

ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪವನ್ನು ಮಾಡುತ್ತಾ, ಒಂದು ಚಿಟಕಿ ಕುಂಕುಮವನ್ನು ಅರ್ಪಿಸುವ ಕೃತಿಗೆ ಕುಂಕುಮಾರ್ಚನೆ ಎಂದು ಕರೆಯುತ್ತಾರೆ .

ದೇವಿಯ ನಾಮ ಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ಹಿಡಿದು ತಲೆಯ ತನಕ ಅರ್ಪಿಸಬೇಕು ಅಥವಾ ಕುಂಕುಮದ ಅಭಿಷೇಕ ಮಾಡಬೇಕು ಕೆಲವೆಡೆಗಳಲ್ಲಿ ಚರಣಗಳಿಗೆ ಮಾತ್ರ ಕುಂಕುಮವನ್ನು ಅರ್ಪಿಸುತ್ತಾರೆ
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸಬೇಕು. 

ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಬೇಕು. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ

ಶಕ್ತಿ ತತ್ವದ ನಿರ್ಮಿತಿಯು ಕೆಂಪು ಪ್ರಕಾಶದಿಂದ ಆಗಿದೆ. ಕುಂಕುಮದಲ್ಲಿ ಶಕ್ತಿ ತತ್ವವನ್ನು ಆಕರ್ಷಿಸುವ ಕ್ಷಮತೆಯೂ ಹೆಚ್ಚಾಗಿ ಬರುತ್ತದೆ. ಆದುದರಿಂದ ದೇವಿಯ ಮೂರ್ತಿ ಕುಂಕುಮಾರ್ಚನೆಯನ್ನು ಮಾಡಿದರೆ ದೇವಿಯು ಜಾಗೃತವಾಗುತ್ತಾಳೆ. 

ಜಾಗೃತ ಮೂರ್ತಿಯಲ್ಲಿನ ಶಕ್ತಿ ತತ್ವವು ಕುಂಕುಮದಲ್ಲಿ ಬರುತ್ತದೆ. ಆಮೇಲೆ ಆ ಕುಂಕುಮವನ್ನು ನಾವು ಹಚ್ಚಿಕೊಳ್ಳುವುದರಿಂದ ಅದರಲ್ಲಿನ ದೇವಿಯ ಶಕ್ತಿಯೂ ನಮಗೆ ಲಭಿಸುತ್ತದೆ

#ಕುಂಕುಮ

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?

#ಶಾಸ್ತ್ರ :

ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ.

 ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.

ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. 

ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

#ಕುಂಕುಮಾರ್ಚನೆ

    ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.

    ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.

    ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.

    ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.

    ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

#ಹಣೆಗೆ_ಕುಂಕುಮಧಾರಣೆ_ಮಾಡಿಕೊಳ್ಳುವಾಗ

ಕುಂಕುಮಂ  ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ | ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ 

ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.

ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್‌ ದೇವಿ ಗೌರಿಯಂತೆ ಎನ್ನುವುದುಂಟು!

 ಮಹಿಳೆಯರು ಮಾತ್ರವಲ್ಲ, ಪುರುಷರೂ ವಿವಿಧ ರೀತಿಯಲ್ಲಿ ಕುಂಕುಮ ಧಾರಣೆ ಮಾಡುತ್ತಾರೆ.

 ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು. ಉಂಗುರದ ಬೆರಳಿನಿಂದ ಭ್ರೂಮಧ್ಯೆ ಪುರುಷರೂ, ಸ್ತ್ರೀಯರೂ ಮಕ್ಕಳೂ ಕುಂಕುಮಧಾರಣೆ ಮಾಡುತ್ತಾರೆ. 

ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್‌ ಮೇ ಸಿಂಧೂರ್‌ ಲಗಾನಾ' ಎನ್ನಲಾಗುತ್ತದೆ.

 ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ. 

ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯ.

 ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ. 

ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.

 ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

 ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. 

ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಸ್ರಾವ (ಹಾರ್ಮೋನ್‌) ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ. 

ಮಾತ್ರವಲ್ಲ ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಇತರ ನಿರ್ನಾಳ ಗ್ರಂಥಿಯಿಂದ ಹಾರ್ಮೋನ್‌ಗಳೂ ಕ್ರಮಬದ್ದವಾಗಿ ಸ್ರವಿಸಲು ಸಾಧ್ಯವಾಗುವಂತೆ ಮಾಡುತ್ತದೆ.

 ಕುಂಕುಮವನ್ನು ಅರಸಿನ ಅಥವಾ ಕೇಸರಿಯಿಂದ ತಯಾರಿಸಲಾಗುತ್ತದೆ. ಅರಸಿನ ಪುಡಿಯೊಂದಿಗೆ ಸುಣ್ಣವನ್ನು ಸೇರಿಸಿದರೆ ಅದು ಅದ್ಭುತ ಕೆಂಪು ಬಣ್ಣದ ಕುಂಕುಮವಾಗಿ ಮಾರ್ಪಡುತ್ತದೆ. 

ಹಾಂ! ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.

 ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ. 

ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ. 

ಆದರೂ ನಾವು ಅನುಕೂಲಕ್ಕೆಂದೋ, ಫ್ಯಾಷನ್‌ ಎಂದೋ ಕುಂಕುಮದ ಬಿಂದಿ, ಸ್ಟಿಕರ್‌ಗಳನ್ನು , ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.

 ಹಾಂ, ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ. 

ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ. 

ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು. 

ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ. "ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ'. 

 ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. 

ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ. 

ಶಕ್ತಿ ಮತ್ತು ಲಕ್ಷ್ಮೀದೇವಿಯರ ಪೂಜೆಯಲ್ಲಿ ಕುಂಕುಮಾರ್ಚನೆಗೆ ಹೆಚ್ಚು ಮಹತ್ವವಿದೆ. ಹಾಂ! ಕುಂಕುಮ ಔಷಧೀಯವೂ ಹೌದು ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆ ಮಾಯುತ್ತದೆ. 

ಕುಂಕುಮದೊಂದಿಗೆ ಇತರ ಅಂಶಗಳನ್ನು ಹೊಂದಿರುವ ತೈಲವನ್ನು (ಕುಂಕುಮಾದಿ ತೈಲ)ನಿತ್ಯ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲ ಮೊಗದ ಚರ್ಮವೂ ಸ್ನಿಗ್ಧ ಮತ್ತು ಕೋಮಲವಾಗಿ
ಹೊಳೆಯುತ್ತದೆ.

 ಉತ್ತರ ಭಾರತದ ದೇವಾಲಯಗಳಲ್ಲಿ "ಟೀಕಾಲಗಾನ' ಎಂದು ಹೆಬ್ಬೆಟ್ಟಿನಿಂದ ದೇವರಿಗೆ ಅರ್ಚಿಸಿದ ಕುಂಕುಮದಿಂದ ಹಣೆಯ ಮೇಲೆ ತಿಲಕ ಲೇಪನ ಮಾಡುತ್ತಾರೆ. 

ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ. 

ನಿತ್ಯ ಕುಂಕುಮದ ತಿಲಕಧಾರಣೆ ಸೌಭಾಗ್ಯ, ದೇವದೇವತೆಗಳ ಆಶೀರ್ವಾದ ಉಂಟುಮಾಡುತ್ತದೆ. ದೀರ್ಘ‌ ಜೀವನಕ್ಕೆ ಸಹಕಾರಿ. 

ಯೌವ್ವನಕಾರಕವೂ ಹೌದು ಎನ್ನಲಾಗಿದೆ. ಅನಾಮಿಕಾ (ಉಂಗುರದ) ಬೆರಳಿನಿಂದ ಸರಿಯಾದ ರೀತಿಯಲ್ಲಿ ಧಾರಣೆ ಮಾಡಿದ ಕುಂಕುಮಾದಿಗಳ ತಿಲಕವು ಮೋಕ್ಷಕಾರಕವೆಂದು ಅದರ ಮಹತ್ವವನ್ನು ಶಾಸ್ತ್ರಗಳಲ್ಲಿ ಸಾರಲಾಗಿದೆ. 

ಶಿಕ್ಷಪತ್ರಿ ಶ್ಲೋಕಗಳಲ್ಲಿ ಇವುಗಳನ್ನು ವಿವರಿಸಲಾಗಿದೆ. ಉಪನಿಷದ್‌, ಬ್ರಹ್ಮಾನಂದ ಪುರಾಣ, ಪದ್ಮ ಪುರಾಣಗಳಲ್ಲೂ ತಿಲಕದ ಉಲ್ಲೇಖವಿದೆ.

 ಹೋಳಿ ಹಬ್ಬದ ಸಮಯದಲ್ಲೂ ಕುಂಕುಮದ ಜೊತೆಗೆ ವಿವಿಧ ರಂಗುಗಳನ್ನು ಎರಚಿ ಸಂತಸ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಹೀಗೆ ಕುಂಕುಮಧಾರಣೆಗೆ ವಿವಿಧ ಬಗೆಯ ಮಹತ್ವ, ಅರ್ಥಗಳಿವೆ.

ಸರ್ವರಿಗೂ ಶುಭವಾಗಲಿ ಸುಮಂಗಲಿಯರಿಗೆ
ಸುರಕ್ಷಾ ಕವಚ ಈ ಕುಂಕುಮ
ನಿಮ್ಮ ಸುರಕ್ಷೆ ನಿಮ್ಮ ಬೆರಳಿನಲ್ಲಿದೆ.
ಅನುಸರಿಸುವುದು ನಿಮಗೆ ಕಷ್ಟಕರ ಅನ್ನಿಸಬಹುದು
ಅದನ್ನು ರೂಢಿಸಿಕೊಂಡು ಬಂದಾಗ ಕಷ್ಟ ಅನ್ನೊದೆ ಇರೊದಿಲ್ಲ ಅಲ್ವ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

*********
ಜ್ಞಾನಿ ಮಾಡಿದ ಕ್ರಿಯೆವೇ ಕರ್ಮ

ಪರಮಾತ್ಮನ ಪ್ರೀತ್ಯರ್ಥವಾದ ಕರ್ಮ ಜ್ಞಾನಕ್ಕೆ ಉಪಾಯ ಅದುವೇ ಯೋಗ ಎಂದು ಕೃಷ್ಣ ಹೇಳಿದ.

ಎಲ್ಲರೂ ಜ್ಞಾನ ಪಡೆಯುವುದಕ್ಕಾಗಿಯೇ ಕರ್ಮವನ್ನು ಅನುಸರಿಸುತ್ತಾರೆ. ಜ್ಞಾನಿ ಯಾದವನಿಗೆ ಕರ್ಮ ಅಗತ್ಯವೇ. ಯಾವುದನ್ನು ಪಡೆಯುವುದಕ್ಕೆ ಪ್ರಯತ್ನ ಪಡುತ್ತೇವೆ ಅದನ್ನು ದೊರೆತ ನಂತರ ಮತ್ತೆ ಅದನ್ನು ಬಯಸುವುದ್ಯಾಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಜ್ಞಾನಿಯಾದವರು ಕರ್ಮ ಮಾಡಲೇಬೇಕು. ಜ್ಞಾನಿ ಮಾಡಿದ ಕ್ರಿಯೆವೇ ನಿಜವಾದ ಕರ್ಮ. ಯೋಗ ವೃತ್ತಿಯನ್ನು ಅವಲಂಬಿಸಿ ಕರ್ಮ ಮಾಡಬೇಕು. ಪರಮಾತ್ಮನ ಅಪರೋಕ್ಷ ದರ್ಶನದ ಹಿನ್ನೆಲೆ0ುಲ್ಲಿ  ಮಾಡುವ ಕ್ರಿಯೆವೇ ಕರ್ಮ ಎನಿಸುತ್ತದೆ. ಜ್ಞಾನಿಯಾದವನಿಗೆ ಕರ್ಮ ಮಾಡುವ ಅಧಿಕಾರವಿದೆ. ಧರ್ಮ ಜ್ಞಾನ ಪಡೆದವರು ಜಗತ್ತೇ ಸುಳ್ಳು ಎಂದು ಭಾವಿಸುತ್ತಾರೆ. ಅಂದರೆ ಅಭಿಮಾನ ತ್ಯಾಗ ಮಾಡುತ್ತಾರೆ. 

ಸ್ತ್ರೀ ಧನ ಎನಿಸಿಕೊಂಡ ಊರ್ವಸಿ0ು ಸಂಗವನ್ನು ನಿರಾಕರಿಸುವ ಮೂಲಕ ನೀನು ಧನಂಜ0ುನಾದೆ. ಮೂಲ ಇಂದ್ರ ಅವತಾರದಲ್ಲಿ ಭಗವಂತನ ವಿಶ್ವದರ್ಶನ ಪಡೆದು ಧನಂಜ0ುನಾದ ನಿನಗೆ ಸಂಸಾರ ಬಂಧನದಿಂದ ಹೊರಗೆ ಬಂದು ಧರ್ಮ0ುುದ್ಧ ಮಾಡುವುದು ಕಷ್ವವೆನಲ್ಲ.

ಕರ್ಮ ಯೋಗವಾಗಬೇಕೆ ವಿನಹ ರೋಗವಾಗಬಾರದು. ಕಾಮ್ಯ ಕರ್ಮ ಬೇಗ ಫಲ ನೀಡಿದರೂ ಅದು ಅಲ್ಪ ಸುಖ ನೀಡುತ್ತದೆ. ನಿಷ್ಕಾಮ ಕರ್ಮದಿಂದ ಫಲ ಸಿಗಲು ವಿಳಂಬವಾಗಬಹುದು. ಆದರೆ ಶಾಶ್ವತ ಸುಖ ಪ್ರಾಪ್ತಿಯಾಗುತ್ತದೆ. ಕಾಮ್ಯ ಕರ್ಮ ಬಂಧಕವಾಗಿದೆ. ಈ ಕರ್ಮ ಮೊದಲಿಗೆ ಹಿತ ಎನಿಸಿದರೂ ನಂತರದಲ್ಲಿ ಅನಂತ ದುಃಖವನ್ನು ನಿಡುತ್ತದೆ. ಅದರೆ ನಿಷ್ಕಾಮ ಕರ್ಮ ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ಶಾಶ್ವತವಾದ ಸುಖವನ್ನು ಕರುಣಿಸುತ್ತದೆ. 

ಅಂತಕರಣ ಶುದ್ಧಿದ್ವಾರ ಜ್ಞಾನ ಪಡೆದು ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ನಿಷ್ಕಾಮ ಕರ್ಮ ಸಾಧನ ವಾಗಿದೆ. ಈ ಕರ್ಮ ಅನುಸರಿಸಿದರೆ ಕೆಲವರು ಇದೇ ಜನ್ಮದಲ್ಲಿ ಪಾಪ, ಪುಣ್ಯಗಳನ್ನು ಕಳಚಿಕೊಳ್ಳುತ್ತಾರೆ. ಇಲ್ಲಿ ಪುಣ್ಯ ಎಂದರೆ ಅಕಾಮ್ಯ ಕರ್ಮದಿಂದ ಗಳಿಸಿದ ಅನಿಷ್ಟ ಪುಣ್ಯ ನಾಶವಾಗಿ ಶಾಶ್ವತ ಪುಣ್ಯ ಎಂಬ ಮೋಕ್ಷ ಸಿಗುತ್ತದೆ ಎಂದರ್ಥ.

ಸಮಬುದ್ಧಿ ರೂಪಕವಾದ ಕರ್ಮ ಇದ್ದರೆ ಮಾತ್ರ ನೀನು ಮಾಡುವ ಕರ್ಮ ಯೋಗವಾಗುತ್ತದೆ. 

ಹಲಸಿನ ಹಣ್ಣು ಸೇವಿಸಬೇಕಾದರೆ ಅದರ ಮೇಲಿರುವ ಅಂಟಿನ ಪದಾರ್ಥದಿಂದ ಬೇರ್ಪಡಿಸಬೇಕು. ಅಂಟಿನ ಪದಾರ್ಥ ಬೇರ್ಪಡಿಸಬೇಕಾದರೆ ತೆೆಂಗಿನ ಎಣ್ಣೆ0ುನ್ನು ಕೈಗೆ ಹಚ್ಚಿಕೊಳ್ಳಬೇಕು. ತೆಂಗಿನ ಎಣ್ಣೆ ಬದಲು ಸೀಮೆ ಎಣ್ಣೆ ಹಚ್ಚಿದರೆ ಹಲಸು ನಿನ್ನಲೂ ಆಗದು. ಅದರಂತೆ ಹಲಸು ಎಂಬ ಪುಣ್ಯಗಳಿಸಬೇಕಾದರೆ ಪಾಪ ಎಂಬ ಅಂಟಿನ ಪದಾರ್ಥವನ್ನು ನಿಷ್ಕಾಮ ಕರ್ಮ ಎಂಬ ತೆಂಗಿನ ಎಣ್ಣೆ ಬಳಸುವ ಮೂಲಕ ದೂರಸರಿಸಬೇಕು. ಆದರೆ ಅಕಾಮ್ಯ ಕರ್ಮ ಎಂಬ ಸೀಮೆ ಎಣ್ಣೆ ಬಳಸಿದರೆ ಪುಣ್ಯ ಎಂಬ ಹಲಸು ಸೇವಿಸಲು ಆಗವುದಿಲ್ಲ ಎಂದು ಕೃಷ್ಣ ಜ್ಞಾನ ಮಾರ್ಗದ ಸಂದೇಶ ನೀಡಿದ.
       **                                  -******
🌹🌹 #ಅವಿರತ #ಪ್ರಯತ್ನದಿಂದ #ಯಶಸ್ಸು 🌹🌹

🔹ಗುರುಕುಲ ಒಂದರಲ್ಲಿ ಬೋಪದೇವನೆಂಬ ಓರ್ವ ವಿದ್ಯಾರ್ಥಿ ಅಧ್ಯಯನ ಮಾಡುತ್ತಿದ್ದ. ಆತ ಸ್ವಲ್ಪ ಮಂದ ಬುದ್ಧಿಯವನಾಗಿದ್ದರಿಂದ ಕೆಲ ಸಹಪಾಠಿಗಳು ಬೋಪದೇವ ‘ದಡ್ಡ’ನೆಂದು ಅಪಹಾಸ್ಯ ಮಾಡುತ್ತಿದ್ದರು. ಗುರುಗಳು ಹೀಗೆ ಮಾಡದಂತೆ ಶಿಷ್ಯರಿಗೆ ಅನೇಕ ಬಾರಿ ಎಚ್ಚರಿಸಿದರೂ ಅಪಹಾಸ್ಯ ಮುಂದುವರಿದಿತ್ತು. 

🔹ಇದರಿಂದ ನೊಂದ ಬೋಪದೇವ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ, ಗುರುಕುಲದಿಂದ ಹೊರಬಂದ. ದಾರಿಯಲ್ಲಿ ಬರುವಾಗ ದಾಹ ನೀಗಿಸಲು ಹತ್ತಿರ ಇರುವ ಬಾವಿಯನ್ನು ಕಂಡ. ಬಾವಿ ಬಳಿಯಲ್ಲಿ ಅನೇಕ ಹೆಂಗಸರು ಕೊಡದಿಂದ ನೀರನ್ನು ಮೇಲಕ್ಕೆತ್ತುತ್ತಿದ್ದನ್ನು ಕಂಡು, ಅವರ ಬಳಿ ಕುಡಿಯಲು ನೀರು ಯಾಚಿಸಿದ. ಅದರಲ್ಲಿ ಓರ್ವ ಹೆಂಗಸು ಬೋಪದೇವನಿಗೆ ನೀರು ನೀಡುತ್ತ, ‘ನಿನ್ನ ಹೆಸರೇನು, ಎಲ್ಲಿಂದ ಬಂದಿರುವಿ, ಎಲ್ಲಿಗೆ ಹೊರಟಿರುವಿ?’ ಎಂದು ವಿಚಾರಿಸಿದಳು.

🔹ಅವನು ನಡೆದ ವೃತ್ತಾಂತವನ್ನೆಲ್ಲ ಆಕೆಗೆ ಅರುಹಿದ. ತಾನು ದಡ್ಡನೆಂದು, ಬದುಕಿ ಪ್ರಯೋಜನವಿಲ್ಲವೆಂದು ಹತಾಶೆಯಿಂದ ಹೇಳಿದ. ಆತನ ನೋವನ್ನರಿತ ಆ ತಾಯಿ ಅವನಿಗೆ, ನಿತ್ಯವೂ ಕಲ್ಲಿನ ಮೇಲೆ ಕೊಡವಿರಿಸಿ ಉಂಟಾದ ಗುರುತನ್ನು ತೋರಿಸಿದಳು, ‘ದಿನಾಲೂ ಇಲ್ಲಿ ಅನೇಕರು ಬಾವಿಯಿಂದ ನೀರನ್ನು ಮೇಲಕ್ಕೆತ್ತಿ, ತುಂಬಿದ ಕೊಡವನ್ನು ಈ ಕಲ್ಲಿನ ಮೇಲೆ ಇಡುವುದರಿಂದ ಇಂತಹ ಗುರುತಾಗಿದೆ. 

🔹ನಿತ್ಯ ಪುನರಾವರ್ತನೆಯಿಂದ ಕಲ್ಲಿನ ಮೇಲೂ ಇಂತಹ ಬದಲಾವಣೆ ಸಾಧ್ಯವಾಗುವುದಾದರೆ, ನಿನ್ನ ಬುದ್ಧಿಯಲ್ಲಿಯೂ ಪರಿವರ್ತನೆ ಸಾಧ್ಯವಿದೆ. ಅನವರತ ಪ್ರಯತ್ನದಿಂದ ಅಧ್ಯಯನ ನಡೆಸಿದರೆ ವಿದ್ಯೆ ನಿನ್ನದಾಗುತ್ತದೆ’ ಎಂದು ವಿಶ್ವಾಸ ತುಂಬಿದಳು. ಅದರಂತೆ ಬೋಪದೇವ ಮುಂದೆ ವ್ಯಾಕರಣ ಗ್ರಂಥಕ್ಕೆ ವ್ಯಾಖ್ಯಾನ ಬರೆಯುವಷ್ಟು ಅದ್ವಿತೀಯ ಪಾಂಡಿತ್ಯ ಗಳಿಸಿದ.

🔹ಪ್ರತಿಯೊಬ್ಬ ಮನುಷ್ಯನೂ ವಿಭಿನ್ನ, ಅಂತೆಯೇ ಆತನ ಬುದ್ಧಿಮತ್ತೆಯಲ್ಲೂ ಭಿನ್ನತೆ ಕಾಣಬಹುದು. ಬುದ್ಧಿವಂತ ಒಂದೆರಡು ಬಾರಿ ಓದಿ ಗ್ರಹಿಸಿಕೊಂಡ ವಿಷಯ ಮತ್ತೊಬ್ಬನಿಗೆ ಹತ್ತು, ಹದಿನೈದು ಬಾರಿ ಪುನರಾವರ್ತಿಸಿದಾಗ ಅರ್ಥವಾಗಬಹುದು. ಆಸಕ್ತಿಯಿಂದ ಕೂಡಿದ ಸತತ ಪ್ರಯತ್ನದಿಂದ ಯಶಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. 

🔹ಸಮುದ್ರವನ್ನು ಸುರಾಸುರರು ಪ್ರಯತ್ನದಿಂದ ಕಷ್ಟಪಟ್ಟು ಕಡೆದಾಗ ಸುಧೆ ದೊರಕಿದ್ದು. ಸತತ ಪ್ರಯತ್ನದಿಂದ ಆತ್ಮಶಕ್ತಿ ವರ್ಧಿಸುವುದರ ಜೊತೆಗೆ ಜೀವನಕ್ಕೆ ಶಿಕ್ಷಣ ದೂರಕುತ್ತದೆ, ಮುಂದಿನ ಹಾದಿ ಸುಗಮಗೊಳ್ಳುತ್ತದೆ. ಬಿದ್ದೆಯಾ ಎಂದರೆ ಎದ್ದೆ ಎಂಬಂತೆ, ಅವಿರತ ಪ್ರಯತ್ನ ಮತ್ತು ದೈವಬಲದ ಪ್ರೇರಣೆಯೊಂದಿಗೆ ಯಶಸ್ಸು ಸರಾಗ. 

👉ಇದನ್ನು ಅರ್ಥೈಸಿಕೊಂಡು ನಮ್ಮ ನಮ್ಮ ಕ್ಷೇತ್ರದಲ್ಲಿ, ಗುರುಗಳ ಮಾರ್ಗದರ್ಶನದೊಂದಿಗೆ, ಶ್ರದ್ಧಾ ಭಕ್ತಿಯಿಂದ, ನಮ್ಮ ಆಸಕ್ತಿಯಲ್ಲಿ ಅವಿರತ ಪ್ರಯತ್ನಗಳನ್ನು ಹಾಕುವ ಮೂಲಕ ಯಶಸ್ಸಿನ, ಸಾರ್ಥಕತೆಯ ಹೊಸ ಮಜಲುಗಳನ್ನು ತಲುಪೋಣ.
(ಲೇಖನ ಕೃಪೆ: ಶಿಲ್ಪಾ ಕುಲಕರ್ಣಿ)
Shri Gurubhyoo namaha.
*********"*"

No comments:

Post a Comment