Popular Posts

Wednesday, 24 June 2020

ಆಷಾಢಮಾಸ ಎಂದರೇನು? ಅದರ ಮಹತ್ವ ಏನು?


ಆಷಾಢಮಾಸ ಎಂದರೇನು? ಅದರ ಮಹತ್ವ ಏನು?

ಆಷಾಡ 

ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ  ತಿಂಗಳುಗಳ ಪೈಕಿ ಐದನೆಯದು. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ ಪೂರ್ವಾಷಾಢಾ ಅಥವಾ ಉತ್ತರಾಷಾಢಾ ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ. 

ಸೂರ್ಯ ಮಿಥುನರಾಶಿಯಲ್ಲಿರುವಾಗ ಆಷಾಢ ಪ್ರಾರಂಭವಾಗಿ ಕರ್ಕಾಟಕರಾಶಿಯಲ್ಲಿರುವಾಗ ಮುಗಿಯುತ್ತದೆ.

ಹಲವು ವರ್ಷಗಳಿಗೊಮ್ಮೆ ಸೂರ್ಯ ಮಿಥುನರಾಶಿಯಲ್ಲಿರುವಾಗಲೇ ಮಾಸಮಧ್ಯದಲ್ಲಿ ಸೂರ್ಯಸಂಕ್ರಮಣವಿಲ್ಲದ ಚಾಂದ್ರಮಾಸ ಬರುತ್ತದೆ. 

ಆ ತಿಂಗಳಿಗೆ ಅಧಿಕಾಷಾಢವೆಂದು ಹೆಸರು. ಇದು ಚೈತ್ರಾದಿ ಮಾಸಗಣನೆಯಲ್ಲಿ ಐದನೆಯದಾಗುತ್ತದೆ. ಮುಂದಿನ ತಿಂಗಳೇ ನಿಜವಾದ ಆಷಾಢ.

ಅಧಿಕಾಷಾಢದಲ್ಲಿ ನಿತ್ಯವಿಧಿಗಳನ್ನು ಬಿಟ್ಟು ಯಾವ ವಿಶೇಷ ಕಾರ್ಯಗಳನ್ನೂ ಮಾಡಕೂಡದು. 

ವಿಶೇಷವಾಗಿ ಈ ಮಾಸಕ್ಕೆಂದೇ ವಿಹಿತವಾದ ವ್ರತಾದಿಗಳನ್ನು ನಿಜಾಷಾಢ ಮಾಸದಲ್ಲೇ ಮಾಡಬೇಕು. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು ಶೂನ್ಯಮಾಸವೆಂದು ಪರಿಗಣಿಸುತ್ತಾರೆ. 

ಈ ತಿಂಗಳಿನ ಶುಕ್ಲಪಕ್ಷದ ಏಕಾದಶಿಯಂದು ದಕ್ಷಿಣಾಯನ ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಭಗವಂತನಿಗೆ ಡೋಲೋತ್ಸವ ನಡೆಯುತ್ತದೆ.

 ಅಂದಿನಿಂದ ಚಾತುರ್ಮಾಸ್ಯವ್ರತ ಪ್ರಾರಂಭ. ನವ ವಿವಾಹಿತೆ ಆಷಾಢದಲ್ಲಿ ಪತಿಯ ಗೃಹದಲ್ಲಿರದೆ ತವರು ಮನೆಯಲ್ಲಿರುತ್ತಾರೆ. ಈ ತಿಂಗಳಿನಲ್ಲಿ ಅತ್ತೆ ಸೊಸೆಯರು ಒಂದೆಡೆ ಇರಕೂಡದೆಂಬುದೇ ಇದಕ್ಕೆ ಕಾರಣ. 

ಇದು ಕೆಲವರಲ್ಲಿ ಮಾತ್ರ ಆಚರಣೆಯಲ್ಲಿದೆ. ಆಷಾಢ ಮಾಸದ ಎಲ್ಲ ಶುಕ್ರವಾರಗಳಲ್ಲೂ ವಿಶೇಷ ಪೂಜೆಯುಂಟು.

ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇದವಾಗುವುದು.

 ಇದಕ್ಕೆ ಮುಖ್ಯವಾಗಿ ಕಾರಣ ನೂರಾರು. ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. 

ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. 

ಶಾಸ್ತ್ರದಲ್ಲಿ ಸಹ ಆಷಾಡ ಮಾಸ ಅಶುಭ ಮಾಸ ಎಂದು ಹೇಳಿಲ್ಲ. ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. 

ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದುಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
 
#ಆಷಾಢಮಾಸದ_ಮಹತ್ವ

* ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ

.* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.

* ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು

.* ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ

.* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ

.* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು.
 
#ಈಮಾಸ_ದಲ್ಲೇ_ಇದೆಲ್ಲಾ_ಆರಂಭವಾಗಿದ್ದು..

* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ.

* ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ. ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.

* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.

* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
 
ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂ ದ ಆಚರಿಸುತ್ತಾರೆ.

 ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.

#ಈ_ಮಾಸದ_ಪ್ರಮುಖ_ಹಬ್ಬಗಳು 

*ಪ್ರಥಮಾ ಶಯನೀ ಏಕಾದಶಿ; ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)

*ಗುರು ಪೂರ್ಣಿಮ/ವ್ಯಾಸ ಪೂರ್ಣಿಮ (ಹುಣ್ಣಿಮೆ)

*ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ

ಭೀಮನ ಅಮಾವಾಸ್ಯೆ ವ್ರತ..

*ಕೃಪೆ :Whatsapp*

*ಲೇಕಕರಿಗೆ ನನ್ನ ಅನಂತ ನಮನಗಳು*🙏🙏🙏🙏

🙏🙏🙏🙏🙏🙏🙏

Monday, 22 June 2020

ಸೂರ್ಯ ಗ್ರಹಣ - ಆಹಾರ

🕉 🕉 ‌   ‌   ‌                  ‌                                         ‌                                                                        ಸೂರ್ಯ ಗ್ರಹಣದ ಸಮಯದಲ್ಲಿ ಆಹಾರ ಯಾಕೆ ನಿಷಿದ್ಧ ಗೊತ್ತಾ? ಇಲ್ಲಿದೆ ನಿಜವಾದ ಕಾರಣ...

ಸೂರ್ಯಗ್ರಹಣದ ಸೂತಕದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಇದರ ಹಿಂದಿರುವ ಧಾರ್ಮಿಕ, ವೈಜ್ಞಾನಿಕ ಕಾರಣಗಳೇನು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ.
 
ಭಾನುವಾರ ಜೂನ್‌ 21ರಂದು ಭಾರತದ ಕೆಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣವು ಸಂಭವಿಸಲಿದೆ. ಗ್ರಹಣವು ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 01.32ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. 
                                                  ​ *ಧರ್ಮಗ್ರಂಥಗಳಲ್ಲಿ ಉಲ್ಲೇಖ*

ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದೆನ್ನುವುದು ಕುರುಡು ನಂಬಿಕೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಗ್ರಹಣದ ಅವಧಿ ಅತ್ಯಂತ ದುರದೃಷ್ಟಕರವಾದದ್ದು, ಈ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು. ಇಲ್ಲವಾದರೆ ಇದು ಅನೇಕ ರೋಗಗಳಿಗೆ ಕಾರಣವಾಗಬಹುದು ಎನ್ನುವುದನ್ನು ಧರ್ಮಗ್ರಂಥಗಳಲ್ಲಿಯೇ ಉಲ್ಲೇಖಿಸಲಾಗಿದೆ. ಪವಿತ್ರ ಸ್ಕಂದ ಪುರಾಣದಲ್ಲಿ 'ಈ ಅವಧಿಯಲ್ಲಿ ಆಹಾರ ಸೇವಿಸುವವನು, ನಂತರದಲ್ಲಿ ಅನಾರೋಗ್ಯವನ್ನು ಅನುಭವಿಸುವರು' ಎಂದು ಉಲ್ಲೇಖಿಸಲಾಗಿದೆ.

ಇದು ಆರೋಗ್ಯಕ್ಕೆ ಕೆಟ್ಟದ್ದೇ? ಗ್ರಹಣ ಸಮಯದಲ್ಲಿ ಆಹಾರ ಸೇವಿಸಿದರೆ ಕೆಟ್ಟದ್ದೋ? ಅಲ್ಲವೋ? ಎನ್ನುವುದರ ಕುರಿತು ಚರ್ಚೆಗಳಿಗೆ ಅಂತ್ಯವಿಲ್ಲದಿದ್ದರೂ ವೈದ್ಯಕೀಯ ವಿಜ್ಞಾನ ಮತ್ತು ಭಾರತೀಯ ಪುರಾಣಗಳು ಕೂಡಾ ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎನ್ನುವುದಾಗಿ ವಿವರಿಸುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ತುಳಸಿ ಎಲೆಗಳನ್ನು ಹಾಕಿಡುವಂತೆ ಸೂಚಿಸಲಾಗುತ್ತದೆ.

*​ಗ್ರಹಣ ಸಮಯದಲ್ಲಿ ಆಹಾರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು*

ಚಂದ್ರನು, ಭೂಮಿ ಮತ್ತು ಸೂರ್ಯನ ಮಧ್ಯೆ ಬಂದಾಗ ಸೂರ್ಯಗ್ರಹಣವು ಸಂಭವಿಸುವುದು ಎನ್ನುವುದು ಎಲ್ಲರಿಗೂ ಗೊತ್ತು. ಹೀಗೆ ಭೂಮಿ ಮತ್ತು ಸೂರ್ಯನ ಮಧ್ಯೆ ಬರುವ ಚಂದ್ರನು ಭೂಮಿಯ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಸೂರ್ಯನನ್ನು ಆವರಿಸುತ್ತಾನೆ. ಈ ಸಮಯದಲ್ಲಿ ಸೂರ್ಯನು ಮಾನವ ದೇಹಕ್ಕೆ ಒಳ್ಳೆಯದಲ್ಲದ ವಿಕರಿಣಗಳನ್ನು ಬಿಡುಗಡೆ ಮಾಡುತ್ತಾನೆ. ಈ ವಿಕಿರಣಗಳು ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದೇ ಆಹಾರವನ್ನು ಸೇವಿಸಿದಾಗ ಅಸ್ವಸ್ಥತೆ ಉಂಟಾಗುತ್ತದೆ, ಇದು ವಿವಿಧ ಖಾಯಿಲೆಗಳಿಗೆ ಕಾರಣವಾಗಬಹುದು. ತಜ್ಞರು ಹೇಳುವಂತೆ ಈ ವಿಕಿರಣಗಳು ಎಷ್ಟು ಶಕ್ತಿಯುತವಾಗಿರುತ್ತವೆಯೆಂದರೆ, ಮುಂದಿನ ಜನ್ಮದಲ್ಲೂ ಪರಿಣಾಮ ಬೀರುತ್ತವೆ.

*ಆಹಾರ ಸೇವನೆ ಅಜೀರ್ಣಕ್ಕೆ ಕಾರಣ*

ಸೂರ್ಯಗ್ರಹಣದ ಸಂದರ್ಭದಲ್ಲಿ ಕಿರಣಗಳು ಬೇಯಿಸಿದ ಆಹಾರದ ಮೇಲೆ ಪರಿಣಾಮ ಬೀರುವುದೆಂದು ಹೇಳಲಾಗುತ್ತದೆ. ಗ್ರಹಣದ ಅವಧಿಯಲ್ಲಿ ಇದನ್ನು ಸೇವಿಸಿದಾಗ ಅಜೀರ್ಣ ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗುವುದೆಂದು ಕೆಲವು ಸಂಶೋಧಕರೂ ಒಪ್ಪಿಕೊಂಡಿದ್ದಾರೆ.
                                                                                           *​ಬೇಯಿಸಿದ ಆಹಾರಗಳನ್ನು ಸಂರಕ್ಷಿಸುವುದು ಹೇಗೆ ?*

ನೀವು ಬೇಯಿಸಿದ ಆಹಾರವನ್ನು ಇನ್ನಷ್ಟು ಮಿಗಿಸಿದ್ದರೆ, ಅದನ್ನು ವ್ಯರ್ಥ ಮಾಡಲು ಇಷ್ಟವಿರದಿದ್ದಲ್ಲಿ ಗ್ರಹಣ ಪ್ರಾರಂಭವಾಗುವ ಮೊದಲು ಅದರಲ್ಲಿ ತುಳಸಿ ಎಲೆಗಳನ್ನು ಸೇರಿಸಿ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

*​ಯಾರು ಆಹಾರ ಸೇವಿಸಬಹುದು*

ಅನಾರೋಗ್ಯವಿರುವವರು, ಮಕ್ಕಳು ಹಾಗೂ ವಯಸ್ಸಾದವರು ಗ್ರಹಣದ ಸಂದರ್ಭದಲ್ಲಿ ಉಪವಾಸದಿಂದ ದೂರವಿರಬಹುದು. ಜೀರ್ಣಿಸಿಕೊಳ್ಳಲು ಸುಲಭವಾಗುವಂತಹ ಸರಳ ಸಾತ್ವಿಕ ಆಹಾರವನ್ನು ಸೇವಿಸಬಹುದು. ಆದಷ್ಟು ದ್ರವಾಹಾರಗಳನ್ನು ಸೇವಿಸಿದರೆ ಉತ್ತಮ. ಗ್ರಹಣದ ಸಮಯಲ್ಲಿ ನೀರನ್ನು ಸೇವಿಸುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಸೂರ್ಯನ ಕಿರಣಗಳ ಅನುಪಸ್ಥಿತಿಯು ಬ್ಯಾಕ್ಟೀರಿಯಾಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀರನ್ನು ಸೇವಿಸಬಾರದೆಂದು ಹೇಳಲಾಗುತ್ತದೆ. ಆದರೆ ಅನಾರೋಗ್ಯವಿರುವವರು, ವಯಸ್ಸಾದವರು ಹಾಗೂ ಗರ್ಭಿಣಿಯರು ಕುಡಿಯುವ ನೀರಿಗೆ ತುಳಸಿಯ ಹನಿಯಗಳನ್ನು ಸೇರಿಸಿ ಸೇವಿಸಬಹುದು, ಅಥವಾ ಕುದಿಸಿದ ನೀರನ್ನು ಸೇವಿಸಬಹುದು. ಇದಲ್ಲದೇ ಗರ್ಭಿಣಿಯರು ಎಳನೀರನ್ನೂ ಸೇವಿಸಬಹುದು.