🕉 🕉 ಸೂರ್ಯ ಗ್ರಹಣದ ಸಮಯದಲ್ಲಿ ಆಹಾರ ಯಾಕೆ ನಿಷಿದ್ಧ ಗೊತ್ತಾ? ಇಲ್ಲಿದೆ ನಿಜವಾದ ಕಾರಣ...
ಸೂರ್ಯಗ್ರಹಣದ ಸೂತಕದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಇದರ ಹಿಂದಿರುವ ಧಾರ್ಮಿಕ, ವೈಜ್ಞಾನಿಕ ಕಾರಣಗಳೇನು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ.
ಭಾನುವಾರ ಜೂನ್ 21ರಂದು ಭಾರತದ ಕೆಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣವು ಸಂಭವಿಸಲಿದೆ. ಗ್ರಹಣವು ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 01.32ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ.
*ಧರ್ಮಗ್ರಂಥಗಳಲ್ಲಿ ಉಲ್ಲೇಖ*
ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದೆನ್ನುವುದು ಕುರುಡು ನಂಬಿಕೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಗ್ರಹಣದ ಅವಧಿ ಅತ್ಯಂತ ದುರದೃಷ್ಟಕರವಾದದ್ದು, ಈ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು. ಇಲ್ಲವಾದರೆ ಇದು ಅನೇಕ ರೋಗಗಳಿಗೆ ಕಾರಣವಾಗಬಹುದು ಎನ್ನುವುದನ್ನು ಧರ್ಮಗ್ರಂಥಗಳಲ್ಲಿಯೇ ಉಲ್ಲೇಖಿಸಲಾಗಿದೆ. ಪವಿತ್ರ ಸ್ಕಂದ ಪುರಾಣದಲ್ಲಿ 'ಈ ಅವಧಿಯಲ್ಲಿ ಆಹಾರ ಸೇವಿಸುವವನು, ನಂತರದಲ್ಲಿ ಅನಾರೋಗ್ಯವನ್ನು ಅನುಭವಿಸುವರು' ಎಂದು ಉಲ್ಲೇಖಿಸಲಾಗಿದೆ.
ಇದು ಆರೋಗ್ಯಕ್ಕೆ ಕೆಟ್ಟದ್ದೇ? ಗ್ರಹಣ ಸಮಯದಲ್ಲಿ ಆಹಾರ ಸೇವಿಸಿದರೆ ಕೆಟ್ಟದ್ದೋ? ಅಲ್ಲವೋ? ಎನ್ನುವುದರ ಕುರಿತು ಚರ್ಚೆಗಳಿಗೆ ಅಂತ್ಯವಿಲ್ಲದಿದ್ದರೂ ವೈದ್ಯಕೀಯ ವಿಜ್ಞಾನ ಮತ್ತು ಭಾರತೀಯ ಪುರಾಣಗಳು ಕೂಡಾ ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎನ್ನುವುದಾಗಿ ವಿವರಿಸುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ತುಳಸಿ ಎಲೆಗಳನ್ನು ಹಾಕಿಡುವಂತೆ ಸೂಚಿಸಲಾಗುತ್ತದೆ.
*ಗ್ರಹಣ ಸಮಯದಲ್ಲಿ ಆಹಾರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು*
ಚಂದ್ರನು, ಭೂಮಿ ಮತ್ತು ಸೂರ್ಯನ ಮಧ್ಯೆ ಬಂದಾಗ ಸೂರ್ಯಗ್ರಹಣವು ಸಂಭವಿಸುವುದು ಎನ್ನುವುದು ಎಲ್ಲರಿಗೂ ಗೊತ್ತು. ಹೀಗೆ ಭೂಮಿ ಮತ್ತು ಸೂರ್ಯನ ಮಧ್ಯೆ ಬರುವ ಚಂದ್ರನು ಭೂಮಿಯ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಸೂರ್ಯನನ್ನು ಆವರಿಸುತ್ತಾನೆ. ಈ ಸಮಯದಲ್ಲಿ ಸೂರ್ಯನು ಮಾನವ ದೇಹಕ್ಕೆ ಒಳ್ಳೆಯದಲ್ಲದ ವಿಕರಿಣಗಳನ್ನು ಬಿಡುಗಡೆ ಮಾಡುತ್ತಾನೆ. ಈ ವಿಕಿರಣಗಳು ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದೇ ಆಹಾರವನ್ನು ಸೇವಿಸಿದಾಗ ಅಸ್ವಸ್ಥತೆ ಉಂಟಾಗುತ್ತದೆ, ಇದು ವಿವಿಧ ಖಾಯಿಲೆಗಳಿಗೆ ಕಾರಣವಾಗಬಹುದು. ತಜ್ಞರು ಹೇಳುವಂತೆ ಈ ವಿಕಿರಣಗಳು ಎಷ್ಟು ಶಕ್ತಿಯುತವಾಗಿರುತ್ತವೆಯೆಂದರೆ, ಮುಂದಿನ ಜನ್ಮದಲ್ಲೂ ಪರಿಣಾಮ ಬೀರುತ್ತವೆ.
*ಆಹಾರ ಸೇವನೆ ಅಜೀರ್ಣಕ್ಕೆ ಕಾರಣ*
ಸೂರ್ಯಗ್ರಹಣದ ಸಂದರ್ಭದಲ್ಲಿ ಕಿರಣಗಳು ಬೇಯಿಸಿದ ಆಹಾರದ ಮೇಲೆ ಪರಿಣಾಮ ಬೀರುವುದೆಂದು ಹೇಳಲಾಗುತ್ತದೆ. ಗ್ರಹಣದ ಅವಧಿಯಲ್ಲಿ ಇದನ್ನು ಸೇವಿಸಿದಾಗ ಅಜೀರ್ಣ ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗುವುದೆಂದು ಕೆಲವು ಸಂಶೋಧಕರೂ ಒಪ್ಪಿಕೊಂಡಿದ್ದಾರೆ.
*ಬೇಯಿಸಿದ ಆಹಾರಗಳನ್ನು ಸಂರಕ್ಷಿಸುವುದು ಹೇಗೆ ?*
ನೀವು ಬೇಯಿಸಿದ ಆಹಾರವನ್ನು ಇನ್ನಷ್ಟು ಮಿಗಿಸಿದ್ದರೆ, ಅದನ್ನು ವ್ಯರ್ಥ ಮಾಡಲು ಇಷ್ಟವಿರದಿದ್ದಲ್ಲಿ ಗ್ರಹಣ ಪ್ರಾರಂಭವಾಗುವ ಮೊದಲು ಅದರಲ್ಲಿ ತುಳಸಿ ಎಲೆಗಳನ್ನು ಸೇರಿಸಿ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.
*ಯಾರು ಆಹಾರ ಸೇವಿಸಬಹುದು*
ಅನಾರೋಗ್ಯವಿರುವವರು, ಮಕ್ಕಳು ಹಾಗೂ ವಯಸ್ಸಾದವರು ಗ್ರಹಣದ ಸಂದರ್ಭದಲ್ಲಿ ಉಪವಾಸದಿಂದ ದೂರವಿರಬಹುದು. ಜೀರ್ಣಿಸಿಕೊಳ್ಳಲು ಸುಲಭವಾಗುವಂತಹ ಸರಳ ಸಾತ್ವಿಕ ಆಹಾರವನ್ನು ಸೇವಿಸಬಹುದು. ಆದಷ್ಟು ದ್ರವಾಹಾರಗಳನ್ನು ಸೇವಿಸಿದರೆ ಉತ್ತಮ. ಗ್ರಹಣದ ಸಮಯಲ್ಲಿ ನೀರನ್ನು ಸೇವಿಸುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಸೂರ್ಯನ ಕಿರಣಗಳ ಅನುಪಸ್ಥಿತಿಯು ಬ್ಯಾಕ್ಟೀರಿಯಾಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀರನ್ನು ಸೇವಿಸಬಾರದೆಂದು ಹೇಳಲಾಗುತ್ತದೆ. ಆದರೆ ಅನಾರೋಗ್ಯವಿರುವವರು, ವಯಸ್ಸಾದವರು ಹಾಗೂ ಗರ್ಭಿಣಿಯರು ಕುಡಿಯುವ ನೀರಿಗೆ ತುಳಸಿಯ ಹನಿಯಗಳನ್ನು ಸೇರಿಸಿ ಸೇವಿಸಬಹುದು, ಅಥವಾ ಕುದಿಸಿದ ನೀರನ್ನು ಸೇವಿಸಬಹುದು. ಇದಲ್ಲದೇ ಗರ್ಭಿಣಿಯರು ಎಳನೀರನ್ನೂ ಸೇವಿಸಬಹುದು.
No comments:
Post a Comment