Popular Posts

Friday, 9 October 2020

ಜೀವನ ದರ್ಶನ - Jeevana Darshana

ಭಾರತೀಯ ತತ್ವಶಾಸ್ತ್ರದ ಅನುಸಾರ ಜೀವನ ದರ್ಶನ.

ಜೀವನವೆಂದರೇನು? ಮಾನವನ ಜೀವನದ ಹೇಗಿರಬೇಕು? ಎಂಬ ಪ್ರಶ್ನೆ ಸಹಜವಾಗಿ ಕಾಡಿದಾಗ, ಭಾರತೀಯ ತತ್ವಶಾಸ್ತ್ರವು ಜೀವನವೆಂದರೇನೆಂದು ಈ ರೀತಿಯಾಗಿ ತಿಳಿಸುತ್ತದೆ.

ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಲು, ದೇಹ, ಪ್ರಾಣ, ಮನಸ್ಸು, ಬುದ್ದಿ ಮತ್ತು ಆತ್ಮವೆಂಬ ಪಂಚಕೋಶಗಳನ್ನು ಶುದ್ಧೀಕರಿಸಿ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳೆಂಬ ಅಷ್ಟಾಂಗ ಯೋಗವನ್ನು ಕಲಿತು, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂಬ ಯಮಗಳು ಮತ್ತು ಶೌಚ, ಸಂತೋಷ, ತಪ, ಸ್ವಾಧ್ಯಾಯ ಮತ್ತು ಈಶ್ವರ ಪ್ರಣೀಧಾನಗಳೆಂಬ ನಿಯಮಗಳನ್ನು ಆಚರಿಸಿ, ಸಂಚಿತ, ಪ್ರಾರಬ್ಧ, ಆಗಾಮಿಗಳೆಂಬ ಕ್ರ್ಮಗಳನ್ನು ಅರ್ಥಮಾಡಿಕೊಂಡು, ಆದಿದೈವಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ತಾಪತ್ರಯಗಳನ್ನು ಅರಿತು, ಕರ್ಮಗೈಯುವಾಗ ವಿಕರ್ಮದ ಮನೋಭಾವವನ್ನು ಬೆರೆಸಿ, ಅಕರ್ಮದ ಕಡೆಗೆ ಕೊಂಡೊಯ್ದು, ಪೃಥ್ವಿ, ಅಗ್ನಿ, ಜಲ, ವಾಯು ಮತ್ತು ಆಕಾಶಗಳೆಂಬ ಪಂಚತತ್ವಗಳೊಡನೆ ಬೆರೆತು, ಪೂರಕ, ರೇಚಕ, ಕುಂಭಕಗಳ ಆಧಾರದ ಮೇಲೆ ಉಸಿರಾಟ ನಡೆಸುತ್ತ, ಅಪಾನ, ಉದಾನ, ಸಮಾನ, ವ್ಯಾನ ಮತ್ತು ಪ್ರಾಣಗಳೆಂಬ ಪಂಚಪ್ರಾಣಗಳ ದ್ವಾರ, ಸ್ಥೂಲದಿಂದ ಸೂಕ್ಷ್ಮದೆಡೆಗೆ ಪಯಣ ಬೆಳೆಸುತ್ತ, ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ, ಆಜ್ಞಾಗಳೆಂಬ ಚಕ್ರಗಳಲ್ಲಿ ಚೇತನವು ಹರಿದು, ಕುಂಡಲಿನಿಯಲ್ಲಿರುವ ಶಕ್ತಿಯನ್ನು ಸಹಸ್ರಾರ ಚಕ್ರದಲ್ಲಿ ಆಸೀನನಾಗಿರುವ ಶಿವನೊಡನೆ ಬೆರೆಸಿ, ಇಡ, ಪಿಂಗಳಗಳಲ್ಲಿ ಹರಿಯುತ್ತಿರುವ ಪ್ರಾಣವನ್ನು ಸುಷುಮ್ನದಲ್ಲಿ ಇಳಿಬಿಟ್ಟು, ತಮಸ್ಸು, ರಜಸ್ಸು ಮತ್ತು ಸಾತ್ವಿಕಗಳೆಂಬ ತ್ರಿಗುಣಗಳನ್ನು ಮೀರಿ ನಿಂತು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಜಯಿಸಿ, ಕಣ್ಣು, ಕಿವಿ, ಬಾಯಿ, ಮೂಗು ಮತ್ತು ಚರ್ಮಗಳೆಂಬ ಪಂಚ ಜ್ಞಾನೇಂದ್ರಿಯಗಳ ಮೂಲಕ ವಿಶ್ವವನ್ನು ಸ್ವೀಕರಿಸಿ, ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತೂರಿಯಗಳೆಂಬ ಚತುರ್ ಅವಸ್ಥೆಗಳನ್ನು ಅನುಭವಿಸಿ, ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳೆಂಬ ತ್ರಿಶಕ್ತಿಗಳನ್ನು ಜಾಗೃತಗೊಳಿಸಿ, ಹಠಯೋಗ, ಕರ್ಮಯೋಗ, ರಾಜಯೋಗ, ತಂತ್ರಯೋಗ, ನಾದಯೋಗ, ಮಂತ್ರಯೋಗ, ಭಕ್ತಿಯೋಗ ಮತ್ತು 

No comments:

Post a Comment