Popular Posts

Monday, 24 August 2020

ವಿಶೇಷ ದೇವಾಲಯಗಳು Temples and it's specialties

A. 🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ  ಲಕ್ಷ್ಮಿ ದೇಗುಲ
3. ಬೆಂಗಳೂರು ಗವಿ ಗಂಗಾಧರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೋಗಳೇಶ್ವರ್
6. ಕೋದಂಡ ರಾಮ ಕಡಪ ಜಿಲ್ಲೆ
7. ಬೇಲೂರಿನ ಚೆನ್ನಕೇಶವ
 
B. 🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಮಲ್ಲೇಶ್ವರಂ.. ಬೆಂಗಳೂರು
6. ರಾಜರಾಜೇಶ್ವಿ ರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ತುಮಕೂರು

C. 🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏
1. ಜ್ವಾಲಾಮುಖಿ.. ಜ್ವಾಲದೇವಿ
2. ಅರುಣಾಚಲ ಈಶ್ವರ್
3. ಮಂಜುನಾಥ

D. 🙏ಶ್ವಾಸ ತಗೊಳ್ಳುವ ಕಾಲಹಸ್ತೀಸ್ವರ್.🙏

E. 🙏ಸಮುದ್ರ ಹಿಂದೆ ಹೋಗಿ🙏
1. ಗುಜರಾತ್ ನಿಷ್ಕಳಂಕ ಮಹಾದೇವ್
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ
🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏
1. ಅಸ್ಸಾಂ ಕಾಮಕ್ಯ ದೇವಿ
2. ಕೇರಳ ದುರ್ಗಾ ಮಾತ
🙏 ಬಣ್ಣ ಬದಲಾಗುವ ದೇಗುಲ🙏
1. ಉತ್ತರಾಯಣ ಮತ್ತು ದಕ್ಷಿಣಾಯಣ  ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ  ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ
G. 🙏ನಿರಂತರ ಬೆಳೆಯುವ ಮೂರ್ತಿಗಳು🙏
1. ಕಾಣಿಪಾಕಂ
2. ಯಾಗಂಟಿ ಬಸವಣ್ಣ
3. ಬಸವನಗುಡಿ ಬೆಂಗಳೂರು
4. ಬಿಕ್ಕವೊಳು ಲಕ್ಷ್ಮಿ ಗಣಪತಿ

🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏
1. ಕೇದಾರನಾಥ
2. ಬದರಿನಾಥ್
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ

H. 🙏ವರ್ಷಕ್ಕೊಮ್ಮೆ🙏
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರೂತೆ
I. 🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.
1. 🙏ಸ್ವಯಂ ಪ್ರಸಾದ ಸೇವಿಸೋ🙏
1. ಕೇರಳ ಶ್ರೀ ಕೃಷ್ಣ ದೇವಾಲಯ.. 
2. ಬೃಂದಾವನ ರಾಧಾಕೃಷ್ಣ

J. 🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏
ಘದಿಯ ಘಾಟ್ ಮಾತಾಜಿ ಮಂದಿರ.. M.P.

K. 🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ🙏
1. ಹಿಮಾಚಲ ನರಸಿಂಹ ದೇವಾಲಯ
2. ಇಷ್ಟ ಕಾಮೇಶ್ವರಿ . ಶ್ರೀಶೈಲ

L. 🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏
ಪಾನಕಾಲ ನರಸಿಂಹ ದೇವರು A. P.

M. 🙏ಛಾಯಾ ವಿಶೇಷ🙏
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ
2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..

N. 🙏ನೀರಿನಲ್ಲಿ ತೇಲುವ ದೇವರು🙏
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ

ಪೂರಿ ಜಗನ್ನಾಥ್ ವಿಶೇಷ:
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..

ಶೃಂಗೇರಿಯ ಆದಿಶಂಕರ ದೇವಾಲಯ :  ಪ್ರತಿ ಸಂಕ್ರಮಣ ದಿನದಂದು ಒಂದೊಂದು ಕಂಬದ ಮೇಲೆ ಸೂರ್ಯಬೆಳಕು ಬೀಳುತ್ತೆ.

..ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಬಾರತ ಖಂಡದಲ್ಲಿ ಇವೆ..🚩🛕

Thursday, 30 July 2020

ಪತಂಜಲಿ ಯೋಗ ಸೂತ್ರಗಳು

ಹರಿ ಓಂ
🌺ಸಂಸ್ಕಾರ   ಸಂಘಟನೆ     ಸೇವೆ🌺
SPYSS (R) ಕರ್ನಾಟಕ*
          ಪತಂಜಲಿ ಯೋಗ ಸೂತ್ರಗಳು

ಪತಂಜಲಿ ಪ್ರಾಚೀನ ಕಾಲದ ಶ್ರೇಷ್ಠ ಆಧ್ಯಾತ್ಮಿಕ ನಾಯಕರಾಗಿದ್ದು, ಅವರು ಆಧ್ಯಾತ್ಮಿಕ ಚೈತನ್ಯವನ್ನು ಯೋಗ ಸೂತ್ರಗಳಲ್ಲಿ ಬಣ್ಣಿಸಿದವರು. 

ಪ್ರತಿಯೊಬ್ಬರ ಆತ್ಮವು ಜೀವನದ ಹಾದಿಯಲ್ಲಿ ಅನಂತ ಚೇತನದತ್ತ ಸಾಗಬೇಕೆಂದು ಜ್ಞಾನಿ ಪತಂಜಲಿ ವ್ಯಾಖ್ಯಾನಿಸಿದ್ದಾರೆ.

ಪತಂಜಲಿಯವರನ್ನು ಯೋಗ ಸೂತ್ರದ ಸಂಸ್ಥಾಪಕ ಎಂದು ಕರೆಯಲಾಗುತ್ತದೆ.

ಪತಂಜಲಿ ಯೋಗ ಸೂತ್ರಗಳ 4 ಅಧ್ಯಾಯಗಳಲ್ಲಿ 196 ಸಂಸ್ಕೃತ ಸೂತ್ರಗಳನ್ನು ಅಳವಡಿಸಲಾಗಿದೆ. ಯೋಗ ಸೂತ್ರಗಳನ್ನು ಕ್ರಿ.ಪೂ 500 ರಿಂದ ಕ್ರಿ.ಪೂ 200 ರ ಅವಧಿಯಲ್ಲಿ ಅಳವಡಿಸಲಾಯಿತೆಂದು ಹೇಳಲಾಗಿದೆ. ಪತಂಜಲಿ ಯೋಗ ಸೂತ್ರಗಳಲ್ಲಿ ಸಮಾಧಿ ಪಾದ, ಸಾಧನಾ ಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎನ್ನುವ 4 ಯೋಗ ಸೂತ್ರದ ಅಧ್ಯಾಯಗಳನ್ನು ಉಲ್ಲೇಖಿಸಲಾಗಿದೆ.

1) ಸಮಾಧಿ ಪಾದ
      ಸಮಾದಿಯ ರೂಪ 
      ಸಮಾದಿಯ ಭೇದಗಳು 
      ಚಿತ್ತದ, ಚಿತ್ತ ವೃತ್ತಿಯ ವಿಚಾರ 

2) ಸಾಧನಾ ಪಾದ: 
- ಅಷ್ಟಾಂಗ ಯೋಗದ ವರ್ಣನೆ 
- ಈಶ್ವರ ಪ್ರಣಿಧಾನ 
- ಸ್ವಾಧ್ಯಾಯ ವಿಚಾರ 

3) ವಿಭೂತಿ ಪಾದ: 
- ಯೋಗಾನುಷ್ಠಾನದಿಂದ ದೊರೆಯುವ ಈಶ್ವರ್ಯ {ಫಲ}ದ  ವಿಚಾರ 

4) ಕೈವಲ್ಯ ಪಾದ: 
- ಸಮಾಧಿ ಸಿದ್ದಿ 
- ಕೈವಲ್ಯಗಳ ವರ್ಣನೆ
                    ಒಳಗೊಂಡಿದೆ. 
ಬಂದು ಭಗಿನಿಯರೇ, ಪೂರ್ವಜನ್ಮದ ಅಪೂರ್ಣ ಯೋಗಸಾದಕರೇ, ಶರೀರ, ಮನಸ್ಸು ಮತ್ತು ಆತ್ಮ ದ ಅರಿವಿನ ಹಾದಿಯಲ್ಲಿ ಈ 196 ಸೂತ್ರ ಗಳನ್ನು ಅರಿಯುವ ಸಂಕಲ್ಪವನ್ನು ಮಾಡೋಣ. 
ಹರಿಃ ಓಂ 

Monday, 27 July 2020

ಕನ್ನಡ ವರ್ಣಮಾಲೆ

ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು.  ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ.  ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ.  ಉದಾ.  ನೋಡಿ:

  ಕಖಗಘಙ - ಈ ಐದು ಅಕ್ಷರದ ಗುಂಪನ್ನು *ಕಾಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.


  ಚಛಜಝಞ - ಈ ಐದು ಅಕ್ಷರದ ಗುಂಪನ್ನು *ಅಂಗುಳ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

 ಟಠಡಢಣ : ಈ ಐದು ಅಕ್ಷರಗಳ ಗುಂಪನ್ನು *ಮುರ್ಧನ್ಯಾ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

  ತಥದಧನ - ಈ ಐದು ಅಕ್ಷರದ ಗುಂಪನ್ನು *ದಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ.  ಒಮ್ಮೆ ಪ್ರಯತ್ನಿಸಿ

  ಪಫಬಭಮ - ಈ ಐದು ಅಕ್ಷರದ ಗುಂಪನ್ನು *ಆಷ್ಟವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ.  ಒಮ್ಮೆ ಪ್ರಯತ್ನಿಸಿ

  ವಿಶ್ವದ ಬೇರೆ ಯಾವುದೇ ಭಾಷೆಯಲ್ಲಿ ಇಂತಹ ವೈಜ್ಞಾನಿಕ ವಿಧಾನವಿದೆಯೇ?  ನಮ್ಮ ಭಾರತೀಯ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಬೇಕು ಆದರೆ ಅದೇ ಸಮಯದಲ್ಲಿ ಏಕೆ ಎಂದು ನಮಗೆ ತಿಳಿಸಿ ಮತ್ತು ಜಗತ್ತಿಗೆ ತಿಳಿಸಿ
  
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Thursday, 16 July 2020

ಏಕಾದಶಿ ಮಹತ್ವ ಮತ್ತು ಆಚರಣೆ

ಕಾಮಿಕ ಏಕಾದಶಿ
ಚೈತ್ರ ಮಾಸ   ಶುಕ್ಲಪಕ್ಷ

ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ.
ಕಾಮಿಕಾ ಏಕಾದಶಿಯೂ* ಸಹ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ. ಎಲ್ಲ ಏಕಾದಶಿಗಳಂತೆ ಇಂದು ಉಪವಾಸ, ವಿಷ್ಣುವಿನ ಅರ್ಚನೆ, ಉಪಾಸನೆ, ಧ್ಯಾನ, ರಾತ್ರಿ ಜಾಗರಣೆಗಳನ್ನು ಮಾಡುವುದರಿಂದ ಪಾಪರಾಶಿಗಳೆಲ್ಲವು ನಾಶವಾಗಿ ಮೋಕ್ಷ ಲಭಿಸುವಂತಾಗುತ್ತದೆ.

ವರ್ಷದಲ್ಲಿ ಬರುವ ಪ್ರತಿಯೊಂದು ಏಕಾದಶಿಗೂ ಕೂಡ ತನ್ನದೇ ಆದ ವೈಶಿಷ್ಟ್ಯ ಮಹತ್ವ ಇದೆ .ಇಂದಿನ  ಏಕಾದಶಿಯೂ ಕೂಡ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಕಾಮಿಕ ಏಕಾದಶಿಯ ದಿನ ಈ ದೀಪವನ್ನು ಬೆಳಗಿಸಿ ಉಪವಾಸವನ್ನು ಆಚರಿಸಿದರೆ ಸಮಸ್ತ ಅಭೀಷ್ಟಗಳು ಕೂಡ ನೆರವೇರುತ್ತವೆ.
ಆಷಾಡ ಮಾಸದಲ್ಲಿ ಬರುವ ಈ *ಕಾಮಿಕ ಏಕಾದಶಿ* ಆಚರಣೆಯಿಂದ ಫಲಗಳು  ಏಕಾದಶಿಯ ವ್ರತವನ್ನು ಆಚರಿಸುವ ಜೀವಿಯ ಸಕಲ ಪಾಪಗಳು ತೊಲಗಿಸುವ ಸಕಲ ಶಕ್ತಿ ಸಾಮರ್ಥ್ಯಗಳು ಇವೆ .

ಅಂತೆಯೇ ನಾರದ ಮುನಿಯು ಸಾಕ್ಷಾತ್ ಬ್ರಹ್ಮನಿಗೆ ಕಾಮಿಕ ಏಕಾದಶಿಯ ದಿನ ಯಾವ ರೀತಿ ಆಚರಿಸಬೇಕು ? ಏನೆಲ್ಲಾ ಮಾಡಬೇಕು ? ಎಂದು ಸವಿಸ್ತಾರವಾಗಿ ಹೇಳಿರಿ ತಿಳಿಸಬೇಕು ಎಂದು ಪ್ರಾರ್ಥಿಸುತ್ತಾನೇ. ಪುತ್ರ ನಾರದ ಈ *ಕಾಮಿಕ ಏಕಾದಶಿಯು* ಎಲ್ಲ ಏಕಾದಶಿಗಳಿಗಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ .
 ಪುರುಷೋತ್ತಮನಾದ ಆ ಪರಮಾತ್ಮನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ಈ ದಿನ  ಏಕಾದಶಿ ವ್ರತವನ್ನು ಮಾಡಿ, ಉಪವಾಸ ಜಾಗರಣೆ ಮಾಡಿ ಪುರುಷೋತ್ತಮನಾದ ಪರಮಾತ್ಮನನ್ನು  ಪೂಜಿಸುವುದು
ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುವುದು ಉತ್ತಮ .ಮುಕ್ಕೋಟಿ ದೇವತೆಗಳಿಗೂ ನಾವು ನಮ್ಮ ನಮನಗಳನ್ನು ಸಲ್ಲಿಸಿದಂತಾಗುತ್ತದೆ ಜೊತೆಗೆ ಸಹಸ್ರ ನಾಮಾರ್ಚನೆಯನ್ನು ಕೂಡ ಮಾಡುವುದು ಅತಿ ಅವಶ್ಯಕ ಹೀಗೆ ಅಲಂಕಾರ ಪ್ರಿಯನಾದ ಮಹಾವಿಷ್ಣುವನ್ನು ಅಲಂಕರಿಸಿ ಪೂಜಿಸಿ ಪ್ರಾರ್ಥಿಸಬೇಕು ಮುಖ್ಯವಾಗಿ ಏಕಾದಶಿ ಸಕಲ ಪಾಪಗಳನ್ನು ತೊಳೆಯುವ ಶಕ್ತಿಯುಳ್ಳ ದಿನವಾಗಿದೆ.

 ಈ *ಕಾಮಿಕ ಏಕಾದಶಿಯ* ವ್ರತವನ್ನು ಆಚರಣೆ ಮಾಡುವವರಿಗೆ ಮುಂದಿನ ಜನ್ಮಗಳ ಪಾಪಗಳಷ್ಟೇ ಅಲ್ಲದೆ ,ಜನ್ಮ ಜನ್ಮಾಂತರಗಳ ನಂಟು ಇರುವುದಿಲ್ಲ.  ಶ್ರೀಮನ್ನಾರಾಯಣನಿಗೆ ಪ್ರೀತಿ ಪಾತ್ರವಾದ ತುಳಸಿ ದಳಗಳಿಂದ ಪೂಜಿಸಬೇಕು.ಈ ಕಾಮಿಕ ಏಕಾದಶಿಯ ದಿನ ತುಳಸಿ ಮಾಲೆಯನ್ನು ಶ್ರೀಮನ್ನಾರಾಯಣನಿಗೆ ಹಾಕಿ ಭಕ್ತಿ ಶ್ರದ್ಧೆಗಳಿಂದ ಪೂಜಿಸಬೇಕು . 
 ಕೇವಲ ಒಂದೇ ಒಂದು ತುಳಸಿದಳದಿಂದ ಪೂಜಿಸಿದರೂ ಕೂಡಾ ಶ್ರೀಮನ್ನಾರಾಯಣನು ಸಂಪೂರ್ಣವಾಗಿ ಅನುಗ್ರಹಿಸುತ್ತಾನೆ. ಕೇವಲ ತುಳಸಿದಳ ಮಾತ್ರದಿಂದಲೇ ಸಂಪೂರ್ಣ ಶ್ರೀಮನ್ನಾರಾಯಣನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಕ್ತಿ ಶ್ರದ್ಧೆಯಿಂದ ತುಳಸಿಯನ್ನು ಸಮರ್ಪಿಸಿ ಆಚರಿಸಬೇಕು.

ಸರಿಯಾದ ಅನುಷ್ಠಾನವನ್ನು , ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಬೇಕು. ಹೀಗೆ *ಕಾಮಿಕ ಏಕಾದಶಿಯ* ದಿನ ತುಳಸಿಯ ಪೂಜೆ ಅತ್ಯಂತ ಉತ್ತಮ. ಏಕಾದಶಿಯ ದಿನ ತುಪ್ಪದ ದೀಪವನ್ನು ನಾರಾಯಣನಿಗೆ ಅರ್ಪಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಕಲ ಪಾಪಗಳು ಜನ್ಮಜನ್ಮಾಂತರದ ಪಾಪಗಳು ತೊಲಗಿ ಹೋಗಿ ಪುಣ್ಯವು ಲಭಿಸುತ್ತದೆ .

ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.

*ವ್ರತವನ್ನು ಮಾಡುವ ಪದ್ಧತಿ*

ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು.
ಪೂರ್ಣದಿವಸ ಉಪವಾಸ ಮಾಡಬೇಕು.
ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು.
ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.  ಹೀಗೆ ಅಂದು ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.🚩


ಪಾಶಾಂಕುಶ ಏಕಾದಶಿ ಮಹತ್ವ ಮತ್ತು ಆಚರಣೆ
ಅಶ್ವಯಜ ಮಾಸ 
ಶುಕ್ಲ   ಪಕ್ಷ ಏಕಾದಶಿ

 ಪಾಶಾಂಕುಶ ಏಕಾದಶಿ ಇದರ ಮಹತ್ವ ಬಹಳವಿದೆ . ಈ ಏಕಾದಶಿ ವ್ರತ ಮಾಡುವುದರಿಂದ ಯಮನ ಪಾಶದ ನರಕಭಾಧೆ ತಪ್ಪುತ್ತದೆ. ಅಲ್ಲದೆ ಪಿತೃಗಳಿಗೂ ಸದ್ಗತಿ ದೊರೆಯುತ್ತದೆ... ಸಂಕಲ್ಪ ಪೂರ್ವಕ ಮಾಡಿದಾಗ ಫಲ ದೊರೆಯುತ್ತದೆ. ಯಾರಿಗೆ ಆಗುತ್ತೋ ಉಪವಾಸ ಮಾಡಲು ಅವರು ಪೂರ್ಣ ಉಪವಾಸ ಮಾಡಬೇಕು.. ಆಗದಿದ್ದವರು ಹಾಲು ಹಣ್ಣು ತೆಗೆದುಕೊಂಡು ಉಪವಾಸ ಮಾಡಬಹುದು... ಕೆಲವರಿಗೆ ಅನಾರೋಗ್ಯ ತೊಂದರೆ ಇರುತ್ತದೆ ಅಂತವರು ಹಚ್ಚಿದ ಅವಲಕ್ಕಿಯನ್ನು ತಿಂದು ಏಕಾದಶಿ ಆಚರಿಸಬಹುದು.... ಏಕಾದಶಿಯ ಮಹತ್ವ ಏನೆಂದರೆ

ಒಮ್ಮೆ ನಾರಾಯಣನು ಯಮನನ್ನು ನೋಡಲು ಹೋದಾಗ ದಕ್ಷಿಣ ದಿಕ್ಕಿನಲ್ಲಿ ಜೋರಾಗಿ ಅಳುವ ಶಬ್ಧ ಕೇಳಿ ಇದು ಎಲ್ಲಿಂದ ಬರುತ್ತಿದ್ದೆ ಎಂದು ಕೇಳಿದನು. ಆಗ ಯಮರಾಜನು ಪಾಪ ಮಾಡಿದವರು ಶಿಕ್ಷೆಯನ್ನು ಅನುಭವಿಸುತಿದ್ದಾರೆ ಎಂದು ಹೇಳಿದನು.. ಆಗ ವಿಷ್ಣುವು ಅವರನ್ನು ನೋಡಿ ಇವರೆಲ್ಲರೂ ನನ್ನಿಂದ ಸೃಷ್ಟಿ ಮಾಡಲ್ಪಟ್ಟವರು. ಇಲ್ಲಿ ಕಷ್ಟ ಪಡುತಿದ್ದಾರೆ ಎಂದು ಮರುಗಿ ಏಕಾದಶಿ ದೇವತೆಯನ್ನು ಸೃಷ್ಟಿಸಿದನು. ನರಕದಲ್ಲಿದ್ದವರು ಏಕಾದಶಿ ಆಚರಣೆ ಮಾಡಿ ಮುಕ್ತಿಯನ್ನು ಪಡೆದರು.
ಆಗ ಪಾಪ ಪುರುಷನು ಎಲ್ಲರು ಮುಕ್ತಿ ಪಡೆದರೆ ನನ್ನ ಗತಿ ಏನು. ನನ್ನನ್ನು ಏಕಾದಶಿಯೀಂದ ರಕ್ಷಿಸು ಎಂದು ಪಾಪ ಪುರುಷನು ನಾರಾಯಣನಲ್ಲಿ ಕೇಳಿಕೊಂಡನು.ಆಗ ವಿಷ್ಣು ಪಾಪಪುರುಷನಿಗೆ ನೀನು ಏಕಾದಶಿ ದಿವಸ ಕಾಳುಗಳಲ್ಲಿ ಆಡಗಕಿಕೊ. ಏಕಾದಶಿ ಆಚರಣೆ ಮಾಡದಿದ್ದರೆ ಪಾಪ ಮಾಡಿದಂತಾಗುತ್ತದೆ. ಒಂದು ತುತ್ತು ಆಹಾರ ಬಹು ಬ್ರಾಹ್ಮಣರನ್ನು ಕೊಂದ ಪಾಪ ಬರುತ್ತದೆ. ಆದ್ದರಿಂದ ಏಕಾದಶಿ ದಿವಸ ಕಾಳುಗಳನ್ನು ತಿನ್ನಬೇಡಿ ಎಂದು  ಹೇಳುತ್ತಾರೆ...

ಏಕಾದಶಿ ಆಚರಣೆ ವಿಧಿ
ವ್ರತಾಚರಣೆ ಮಾಡುವ ಮೊದಲು ದಶಮಿ,ಏಕಾದಶಿ ಮತ್ತು ದ್ವಾದಶಿ ಆಚರಣೆ ಮಾಡುತ್ತೇನೆಂದು ಸಂಕಲ್ಪ ಮಾಡಬೇಕು.
ದಶಮಿ ದಿವಸದ ಸಾಯಂಕಾಲದ ಊಟ, ಏಕಾದಶಿ ದಿವಸದ ಎರಡು ಊಟಗಳು ಮತ್ತು ದ್ವಾದಶಿ ದಿವಸದ ಸಾಯಂಕಾಲದ ಊಟ ನಿಷಿದ್ದ.
ಏಕಾದಶಿ ವ್ರತಮಾಡಲು ಸಂಕಲ್ಪಿಸಿದ್ದೇನೆ. ದಶಮಿ ದಿವಸೆ ಸಾಯಂಕಾಲ  ಯಾವ
ವಿಗ್ನಗಳು ಬರದಂತೆ ಕರುಣಿಸು.ಎಂದು ಭಗವಂತನಿಗೆ ಪ್ರಾರ್ಥಿಸಿ ಸಂಕಲ್ಪ ಮಾಡಿ..ದಶಮಿ ಊಟ ಮಾಡದೆ ಹಾಲು-ಹಣ್ಣು ತೆಗೆದುಕೊಳ್ಳಬೇಕು...ನಂತರ ಏಕಾದಶಿಯ ದಿನ 
 ಏಕಾದಶಿಯ  ದಿನ ಅಂಗಾರವನ್ನು ಮಾತ್ರ ಹಚ್ಚಿ ಕೊಳ್ಳಬೇಕು. ಅಕ್ಷಂತೆಯನ್ನು
ಹಚ್ಚಿಕೊಳ್ಳಬಾರದು.
ಏಕಾದಶಿ ದಿವಸ  ಪಾಶಾಂಕುಶಗಳನ್ನು ಹಿಡಿದ  ಶಂಖ ಶ್ರೀಚಕ್ರ ಧಾರಿಯಾದ ಪರಮಾತ್ಮನನ್ನು ಅನನ್ಯ ಭಕ್ತಿಯಿಂದ ಪೂಜೆ ,ಧ್ಯಾನ ಮತ್ತು ಹರಿ
ಸ್ಮರಣೆಮಾಡಬೇಕು.

ಏಕಾದಶ್ಯಂನಿರಾಹಾರಸ್ತಿವಹಾನಿಪರ್ಯೆಹಂಭುಕ್ಶಾಮಿಪುಂಡರಿಕಾಕ್ಷಶರಣಂಮೇಭವೇ ಆಚ್ಚತ.

ಏಕಾದಶಿ ನಂತರ ದ್ವಾದಶಿ ಯಂದು ಆಹಾರವನ್ನು ತೆಗೆದುಕೊಳ್ಳುತೇನೆl ಆಚ್ಚುತ ಕಾಪಾಡು ಬೇಡಿಕೊಂಡು ಊಟಮಾಡಬೇಕು... ನಿಮಗೆ ಏನು ಅನುಕೂಲ ಆಗುತ್ತೆ ಅದನ್ನು ಅಡುಗೆ ಮಾಡಿ ನೈವೇದ್ಯ ಮಾಡಿ... ಹಾಲು-ಹಣ್ಣು ಕೂಡ ನೈವೇದ್ಯ ಮಾಡಬಹುದು

Wednesday, 24 June 2020

ಆಷಾಢಮಾಸ ಎಂದರೇನು? ಅದರ ಮಹತ್ವ ಏನು?


ಆಷಾಢಮಾಸ ಎಂದರೇನು? ಅದರ ಮಹತ್ವ ಏನು?

ಆಷಾಡ 

ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ  ತಿಂಗಳುಗಳ ಪೈಕಿ ಐದನೆಯದು. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ ಪೂರ್ವಾಷಾಢಾ ಅಥವಾ ಉತ್ತರಾಷಾಢಾ ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ. 

ಸೂರ್ಯ ಮಿಥುನರಾಶಿಯಲ್ಲಿರುವಾಗ ಆಷಾಢ ಪ್ರಾರಂಭವಾಗಿ ಕರ್ಕಾಟಕರಾಶಿಯಲ್ಲಿರುವಾಗ ಮುಗಿಯುತ್ತದೆ.

ಹಲವು ವರ್ಷಗಳಿಗೊಮ್ಮೆ ಸೂರ್ಯ ಮಿಥುನರಾಶಿಯಲ್ಲಿರುವಾಗಲೇ ಮಾಸಮಧ್ಯದಲ್ಲಿ ಸೂರ್ಯಸಂಕ್ರಮಣವಿಲ್ಲದ ಚಾಂದ್ರಮಾಸ ಬರುತ್ತದೆ. 

ಆ ತಿಂಗಳಿಗೆ ಅಧಿಕಾಷಾಢವೆಂದು ಹೆಸರು. ಇದು ಚೈತ್ರಾದಿ ಮಾಸಗಣನೆಯಲ್ಲಿ ಐದನೆಯದಾಗುತ್ತದೆ. ಮುಂದಿನ ತಿಂಗಳೇ ನಿಜವಾದ ಆಷಾಢ.

ಅಧಿಕಾಷಾಢದಲ್ಲಿ ನಿತ್ಯವಿಧಿಗಳನ್ನು ಬಿಟ್ಟು ಯಾವ ವಿಶೇಷ ಕಾರ್ಯಗಳನ್ನೂ ಮಾಡಕೂಡದು. 

ವಿಶೇಷವಾಗಿ ಈ ಮಾಸಕ್ಕೆಂದೇ ವಿಹಿತವಾದ ವ್ರತಾದಿಗಳನ್ನು ನಿಜಾಷಾಢ ಮಾಸದಲ್ಲೇ ಮಾಡಬೇಕು. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು ಶೂನ್ಯಮಾಸವೆಂದು ಪರಿಗಣಿಸುತ್ತಾರೆ. 

ಈ ತಿಂಗಳಿನ ಶುಕ್ಲಪಕ್ಷದ ಏಕಾದಶಿಯಂದು ದಕ್ಷಿಣಾಯನ ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಭಗವಂತನಿಗೆ ಡೋಲೋತ್ಸವ ನಡೆಯುತ್ತದೆ.

 ಅಂದಿನಿಂದ ಚಾತುರ್ಮಾಸ್ಯವ್ರತ ಪ್ರಾರಂಭ. ನವ ವಿವಾಹಿತೆ ಆಷಾಢದಲ್ಲಿ ಪತಿಯ ಗೃಹದಲ್ಲಿರದೆ ತವರು ಮನೆಯಲ್ಲಿರುತ್ತಾರೆ. ಈ ತಿಂಗಳಿನಲ್ಲಿ ಅತ್ತೆ ಸೊಸೆಯರು ಒಂದೆಡೆ ಇರಕೂಡದೆಂಬುದೇ ಇದಕ್ಕೆ ಕಾರಣ. 

ಇದು ಕೆಲವರಲ್ಲಿ ಮಾತ್ರ ಆಚರಣೆಯಲ್ಲಿದೆ. ಆಷಾಢ ಮಾಸದ ಎಲ್ಲ ಶುಕ್ರವಾರಗಳಲ್ಲೂ ವಿಶೇಷ ಪೂಜೆಯುಂಟು.

ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇದವಾಗುವುದು.

 ಇದಕ್ಕೆ ಮುಖ್ಯವಾಗಿ ಕಾರಣ ನೂರಾರು. ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. 

ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. 

ಶಾಸ್ತ್ರದಲ್ಲಿ ಸಹ ಆಷಾಡ ಮಾಸ ಅಶುಭ ಮಾಸ ಎಂದು ಹೇಳಿಲ್ಲ. ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. 

ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದುಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
 
#ಆಷಾಢಮಾಸದ_ಮಹತ್ವ

* ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ

.* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.

* ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು

.* ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ

.* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ

.* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು.
 
#ಈಮಾಸ_ದಲ್ಲೇ_ಇದೆಲ್ಲಾ_ಆರಂಭವಾಗಿದ್ದು..

* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ.

* ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ. ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.

* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.

* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
 
ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂ ದ ಆಚರಿಸುತ್ತಾರೆ.

 ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.

#ಈ_ಮಾಸದ_ಪ್ರಮುಖ_ಹಬ್ಬಗಳು 

*ಪ್ರಥಮಾ ಶಯನೀ ಏಕಾದಶಿ; ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)

*ಗುರು ಪೂರ್ಣಿಮ/ವ್ಯಾಸ ಪೂರ್ಣಿಮ (ಹುಣ್ಣಿಮೆ)

*ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ

ಭೀಮನ ಅಮಾವಾಸ್ಯೆ ವ್ರತ..

*ಕೃಪೆ :Whatsapp*

*ಲೇಕಕರಿಗೆ ನನ್ನ ಅನಂತ ನಮನಗಳು*🙏🙏🙏🙏

🙏🙏🙏🙏🙏🙏🙏

Monday, 22 June 2020

ಸೂರ್ಯ ಗ್ರಹಣ - ಆಹಾರ

🕉 🕉 ‌   ‌   ‌                  ‌                                         ‌                                                                        ಸೂರ್ಯ ಗ್ರಹಣದ ಸಮಯದಲ್ಲಿ ಆಹಾರ ಯಾಕೆ ನಿಷಿದ್ಧ ಗೊತ್ತಾ? ಇಲ್ಲಿದೆ ನಿಜವಾದ ಕಾರಣ...

ಸೂರ್ಯಗ್ರಹಣದ ಸೂತಕದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಇದರ ಹಿಂದಿರುವ ಧಾರ್ಮಿಕ, ವೈಜ್ಞಾನಿಕ ಕಾರಣಗಳೇನು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ.
 
ಭಾನುವಾರ ಜೂನ್‌ 21ರಂದು ಭಾರತದ ಕೆಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣವು ಸಂಭವಿಸಲಿದೆ. ಗ್ರಹಣವು ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 01.32ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದ ಅವಧಿಯಲ್ಲಿ ಆಹಾರ ಸೇರಿದಂತೆ ನೀರು ಕುಡಿಯುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. 
                                                  ​ *ಧರ್ಮಗ್ರಂಥಗಳಲ್ಲಿ ಉಲ್ಲೇಖ*

ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದೆನ್ನುವುದು ಕುರುಡು ನಂಬಿಕೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಗ್ರಹಣದ ಅವಧಿ ಅತ್ಯಂತ ದುರದೃಷ್ಟಕರವಾದದ್ದು, ಈ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು. ಇಲ್ಲವಾದರೆ ಇದು ಅನೇಕ ರೋಗಗಳಿಗೆ ಕಾರಣವಾಗಬಹುದು ಎನ್ನುವುದನ್ನು ಧರ್ಮಗ್ರಂಥಗಳಲ್ಲಿಯೇ ಉಲ್ಲೇಖಿಸಲಾಗಿದೆ. ಪವಿತ್ರ ಸ್ಕಂದ ಪುರಾಣದಲ್ಲಿ 'ಈ ಅವಧಿಯಲ್ಲಿ ಆಹಾರ ಸೇವಿಸುವವನು, ನಂತರದಲ್ಲಿ ಅನಾರೋಗ್ಯವನ್ನು ಅನುಭವಿಸುವರು' ಎಂದು ಉಲ್ಲೇಖಿಸಲಾಗಿದೆ.

ಇದು ಆರೋಗ್ಯಕ್ಕೆ ಕೆಟ್ಟದ್ದೇ? ಗ್ರಹಣ ಸಮಯದಲ್ಲಿ ಆಹಾರ ಸೇವಿಸಿದರೆ ಕೆಟ್ಟದ್ದೋ? ಅಲ್ಲವೋ? ಎನ್ನುವುದರ ಕುರಿತು ಚರ್ಚೆಗಳಿಗೆ ಅಂತ್ಯವಿಲ್ಲದಿದ್ದರೂ ವೈದ್ಯಕೀಯ ವಿಜ್ಞಾನ ಮತ್ತು ಭಾರತೀಯ ಪುರಾಣಗಳು ಕೂಡಾ ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎನ್ನುವುದಾಗಿ ವಿವರಿಸುತ್ತವೆ. ಅಪಾಯಕಾರಿ ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ತುಳಸಿ ಎಲೆಗಳನ್ನು ಹಾಕಿಡುವಂತೆ ಸೂಚಿಸಲಾಗುತ್ತದೆ.

*​ಗ್ರಹಣ ಸಮಯದಲ್ಲಿ ಆಹಾರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು*

ಚಂದ್ರನು, ಭೂಮಿ ಮತ್ತು ಸೂರ್ಯನ ಮಧ್ಯೆ ಬಂದಾಗ ಸೂರ್ಯಗ್ರಹಣವು ಸಂಭವಿಸುವುದು ಎನ್ನುವುದು ಎಲ್ಲರಿಗೂ ಗೊತ್ತು. ಹೀಗೆ ಭೂಮಿ ಮತ್ತು ಸೂರ್ಯನ ಮಧ್ಯೆ ಬರುವ ಚಂದ್ರನು ಭೂಮಿಯ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಸೂರ್ಯನನ್ನು ಆವರಿಸುತ್ತಾನೆ. ಈ ಸಮಯದಲ್ಲಿ ಸೂರ್ಯನು ಮಾನವ ದೇಹಕ್ಕೆ ಒಳ್ಳೆಯದಲ್ಲದ ವಿಕರಿಣಗಳನ್ನು ಬಿಡುಗಡೆ ಮಾಡುತ್ತಾನೆ. ಈ ವಿಕಿರಣಗಳು ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದೇ ಆಹಾರವನ್ನು ಸೇವಿಸಿದಾಗ ಅಸ್ವಸ್ಥತೆ ಉಂಟಾಗುತ್ತದೆ, ಇದು ವಿವಿಧ ಖಾಯಿಲೆಗಳಿಗೆ ಕಾರಣವಾಗಬಹುದು. ತಜ್ಞರು ಹೇಳುವಂತೆ ಈ ವಿಕಿರಣಗಳು ಎಷ್ಟು ಶಕ್ತಿಯುತವಾಗಿರುತ್ತವೆಯೆಂದರೆ, ಮುಂದಿನ ಜನ್ಮದಲ್ಲೂ ಪರಿಣಾಮ ಬೀರುತ್ತವೆ.

*ಆಹಾರ ಸೇವನೆ ಅಜೀರ್ಣಕ್ಕೆ ಕಾರಣ*

ಸೂರ್ಯಗ್ರಹಣದ ಸಂದರ್ಭದಲ್ಲಿ ಕಿರಣಗಳು ಬೇಯಿಸಿದ ಆಹಾರದ ಮೇಲೆ ಪರಿಣಾಮ ಬೀರುವುದೆಂದು ಹೇಳಲಾಗುತ್ತದೆ. ಗ್ರಹಣದ ಅವಧಿಯಲ್ಲಿ ಇದನ್ನು ಸೇವಿಸಿದಾಗ ಅಜೀರ್ಣ ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗುವುದೆಂದು ಕೆಲವು ಸಂಶೋಧಕರೂ ಒಪ್ಪಿಕೊಂಡಿದ್ದಾರೆ.
                                                                                           *​ಬೇಯಿಸಿದ ಆಹಾರಗಳನ್ನು ಸಂರಕ್ಷಿಸುವುದು ಹೇಗೆ ?*

ನೀವು ಬೇಯಿಸಿದ ಆಹಾರವನ್ನು ಇನ್ನಷ್ಟು ಮಿಗಿಸಿದ್ದರೆ, ಅದನ್ನು ವ್ಯರ್ಥ ಮಾಡಲು ಇಷ್ಟವಿರದಿದ್ದಲ್ಲಿ ಗ್ರಹಣ ಪ್ರಾರಂಭವಾಗುವ ಮೊದಲು ಅದರಲ್ಲಿ ತುಳಸಿ ಎಲೆಗಳನ್ನು ಸೇರಿಸಿ. ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

*​ಯಾರು ಆಹಾರ ಸೇವಿಸಬಹುದು*

ಅನಾರೋಗ್ಯವಿರುವವರು, ಮಕ್ಕಳು ಹಾಗೂ ವಯಸ್ಸಾದವರು ಗ್ರಹಣದ ಸಂದರ್ಭದಲ್ಲಿ ಉಪವಾಸದಿಂದ ದೂರವಿರಬಹುದು. ಜೀರ್ಣಿಸಿಕೊಳ್ಳಲು ಸುಲಭವಾಗುವಂತಹ ಸರಳ ಸಾತ್ವಿಕ ಆಹಾರವನ್ನು ಸೇವಿಸಬಹುದು. ಆದಷ್ಟು ದ್ರವಾಹಾರಗಳನ್ನು ಸೇವಿಸಿದರೆ ಉತ್ತಮ. ಗ್ರಹಣದ ಸಮಯಲ್ಲಿ ನೀರನ್ನು ಸೇವಿಸುವುದೂ ನಿಷಿದ್ಧವೆಂದು ಹೇಳಲಾಗುತ್ತದೆ. ಸೂರ್ಯನ ಕಿರಣಗಳ ಅನುಪಸ್ಥಿತಿಯು ಬ್ಯಾಕ್ಟೀರಿಯಾಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀರನ್ನು ಸೇವಿಸಬಾರದೆಂದು ಹೇಳಲಾಗುತ್ತದೆ. ಆದರೆ ಅನಾರೋಗ್ಯವಿರುವವರು, ವಯಸ್ಸಾದವರು ಹಾಗೂ ಗರ್ಭಿಣಿಯರು ಕುಡಿಯುವ ನೀರಿಗೆ ತುಳಸಿಯ ಹನಿಯಗಳನ್ನು ಸೇರಿಸಿ ಸೇವಿಸಬಹುದು, ಅಥವಾ ಕುದಿಸಿದ ನೀರನ್ನು ಸೇವಿಸಬಹುದು. ಇದಲ್ಲದೇ ಗರ್ಭಿಣಿಯರು ಎಳನೀರನ್ನೂ ಸೇವಿಸಬಹುದು.

Tuesday, 19 May 2020

ಸಿರಿಧಾನ್ಯಗಳ ಔಷಧಿಯ ಗುಣಗಳು

ಸಿರಿಧಾನ್ಯಗಳ ಔಷಧಿಯ ಗುಣಗಳು

1. ನವಣೆ  - Foxtail Millet
2. ಹಾರಕ  - Kodo Millet
3.ಸಾಮೆ  Little Millet
4. ಕೊರಲೆ  Brown Top Millet
5. ಬರಗು Proso Millet
6. ಊದಲು Barnyard Millet
7. ಸಜ್ಜೆ Peral Millet
8. ಜೋಳ Great Millet
9. ರಾಗಿ Finger Millet

ನವಣೆ  Foxtail Millet
👉 ಮದುಮೇಹ ಹಾಗೂ ಬಿ ಪಿ ನಿಯಂತ್ರಣ ಮಾಡುತ್ತದೆ.
👉 ನರಗಳ ದೌರ್ಬಲ್ಯವನ್ನು ನಿಯಂತ್ರಿಸುತ್ತದೆ.
👉 ಶಕ್ತಿ ವರ್ದನೆಗಾಗಿ ಸಹಕಾರಿಯಾಗಿದೆ.

ಹಾರಕ  Kodo Millet
👉ರಕ್ತ ಶುದ್ದೀಕರಣಕ್ಕೆ ಸಹಕಾರಿ.
👉ರಕ್ತ ಉತ್ಪನ್ನ ಹೆಚ್ಚಿಸುತ್ತದೆ.
👉ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಸಾಮೆ  Little Millet
 👉ಬಂಜೆತನ ನಿವಾರಣೆ ಹಾಗೂ ಮುಟ್ಟಿನ ಸಮಸ್ಯೆ ನಿವಾರಿಸುತ್ತದೆ.
👉ಅಂಡಾಣು ಮತ್ತು ವೀರ್ಯಾಣು ವೃದ್ದಿಗಾಗಿ ಸಹಕಾರಿಯಾಗುತ್ತದೆ.
👉ಶರೀರದ ಉಷ್ಣವನ್ನು ನಿಯಂತ್ರಿಸುತ್ತದೆ. 

ಕೊರಲೆ  Brown Top Millet
👉ಜೀರ್ಣಕ್ರೀಯೆ ಸುಗಮವಾಗಲು ಸಹಕಾರಿ.
👉ಮಲಬದ್ದತೆ ನಿವಾರಣೆಯಾಗುತ್ತದೆ.
👉ನರ ದೌರ್ಬಲ್ಯವನ್ನು ನಿವಾರಿಸುತ್ತದೆ.

ಬರಗು  Proso Millet
👉ಕೊಲೆಸ್ಟ್ರಾಲ್ ತಗ್ಗಿಸುತ್ತದೆ.
👉ಚರ್ಮ ರೋಗಕ್ಕೆ ರಾಮಬಾಣ.
👉ತ್ವಚೆಯ ಹೊಳಪು ಹೆಚ್ಚಿಸುತ್ತದೆ.

ಊದಲು  Barnyard Millet
👉ಲಿವರ್ ಸಮಸ್ಯೆ ಹಾಗೂ ಕಾಮಾಲೆ ನಿವಾರಿಸುತ್ತದೆ. 
👉ಥೈರಾಯಿಡ್ ಹಾಗೂ ಕಿಡ್ನಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.
👉ಲೈಂಗಿಕ ಸಮಸ್ಯೆಗಳಿಗೆ ಪರಿಹಾರ 

ಸಜ್ಜೆ  Peral Millet
👉ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗುವದು.
👉ದೇಹದ ತೂಕ ಇಳಿಸಲು ಸಹಕಾರಿ
👉ದೇಹದ ಸಮತೋಲನ ಕಾಪಾಡುತ್ತದೆ.

ಜೋಳ  Great Millet
👉ಪಚನ ಕ್ರಿಯೆಗೆ ಸಹಕಾರಿಯಾಗುತ್ತದೆ.
👉ತಾರುಣ್ಯ ಕಾಪಾಡುತ್ತದೆ.
👉ಮದುಮೇಹ ನಿಯಂತ್ರಿಸಲು ಸಹಕಾರಿ.

ರಾಗಿ Finger Millet
👉ಮೂಳೆಗಳನ್ನು ನಿಯಂತ್ರಿಸುತ್ತದೆ.
👉ಹೃದಯ ಸಂಭಂದಿ ಕಾಯಿಲೆಗಳ ನಿವಾರಣೆಗೆ ಸಹಕಾರಿ.
👉ಕೆಂಪು ರಕ್ತಕಣ ಹೆಚ್ಚಿಸಲು ಸಹಕಾರಿಯಾಗುತ್ತದೆ.


ನಿಮಗಿದು ತಿಳಿದಿರಲಿ
ಅಕ್ಕಿಯಿಂದ ಮಾಡುವ ಎಲ್ಲ ತಿಂಡಿ ತಿನಸುಗಳನ್ನು ಸಿರಿಧಾನ್ಯಗಳಿಂದ ಮಾಡಬಹುದು

"ಶುದ್ಧ ಆಹಾರ - ಪರಿಶುದ್ಧ ಜೀವನ"

"ಆಹಾರ ಪದ್ಧತಿ ಬದಲಾಯಿಸೋಣ"

"ಬನ್ನಿ ಸಾವಯವ ಸಿರಿಧಾನ್ಯ ಬೆಳೆಯೋಣ"

 "ಸಾವಯವ ಸಿರಿಧಾನ್ಯ ಉಣ್ಣೋಣ"