*ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!*
ಅಂದವಾದ
ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು
ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ
ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ
ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ
ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ
ಬಿಳಿ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು
ಕಾಣಬಹುದು.
ಇಂದಿನ ದಿನಗಳಲ್ಲಿ ಇನ್ನೂ ಮೂವತ್ತರ ಹರೆಯದಲ್ಲಿರುವವರ
ತಲೆ ಕೂದಲೂ ಬಿಳಿಯಾಗುತ್ತಿರುವುದು ಚಿಂತೆಯ
ವಿಷಯವಾಗಿದೆ. ಇದಕ್ಕೆ ಕಾರಣ ಏನೆಂದು
ಇದುವರೆಗೆ ನಿಖರವಾಗಿ ತಿಳಿದು ಬಂದಿಲ್ಲ. ಪ್ರದೂಷಿತ
ಗಾಳಿ, ಕಲ್ಮಶಗೊಂಡ ಅಂತರ್ಜಲ, ರಾಸಾಯನಿಕ ಗೊಬ್ಬರ ಬಳಸಿದ ತರಕಾರಿಗಳು,
ಸಿದ್ಧ ತಿನಿಸುಗಳು, ಏನೊಂದೂ ಇದಕ್ಕೆ ಕಾರಣವಾಗಬಲ್ಲದು. ಚಿಕ್ಕ ಪ್ರಾಯದಲ್ಲಿಯೇ ಬಿಳಿ
ಕೂದಲು ಬರಲು ಕಾರಣವೇನು?
ಕೆಲವೊಂದು
ಸಮೀಕ್ಷೆಗಳ ಪ್ರಕಾರ ಅಮೇರಿಕನ್ನರು ತಮ್ಮ
ಮೂವತ್ತೈದನೇ ಪ್ರಾಯದಲ್ಲಿ ಕೂದಲ ಬಣ್ಣ ಕಳೆದುಕೊಂಡರೆ
ಏಷ್ಯನ್ನರು ಮೂವತ್ತೆಂಟು ಮೂವತ್ತೊಂಭತ್ತರ ವಯಸ್ಸಿನಲ್ಲಿ ಬಿಳಿಕೂದಲ ತೊಂದರೆಯನ್ನು ಅನುಭವಿಸುತ್ತಾರೆ. ಆಫ್ರಿಕನ್ ಹಾಗೂ ಅಫ್ರಿಕನ್ ಅಮೇರಿಕನ್
ಸಂಜಾತರ ತಲೆಗೂದಲು ನಲವತ್ತೈದರ ಬಳಿಕ ನೆರೆಯುತ್ತದೆ. ಬಿಳಿ
ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು
ಸಂಗತಿ
ಕೂದಲಿಗೆ
ಕಪ್ಪುಬಣ್ಣ ಬರಲು ಮೆಲನಿನ್ ಎಂಬ
ವರ್ಣದ್ರವ್ಯ ಕಾರಣ. ಈ ಮೆಲನಿನ್
ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ
ಪರಿವರ್ತಿತವಾಗಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಆದರೆ ನಮ್ಮ ಯಾವ
ಆಹಾರದಿಂದ ಹೈಡ್ರೋಜನ್ ಪೆರಾಕ್ಸೈಡ್ ಕೂದಲಿಗೆ ಬರುತ್ತದೆ? ಇದನ್ನು
ತಡೆಯುವುದು ಹೇಗೆ? ಈಗಾಗಲೇ ಬಿಳಿಯಾಗಿರುವ
ಕೂದಲನ್ನು ಮತ್ತೆ ಒಂದೇ ತಿಂಗಳಿನಲ್ಲಿ
ಕಪ್ಪಗಾಗಿಸುವುದು ಹೇಗೆ ಎಂದು ಕುತೂಹಲಗಳನ್ನು
ಕೆಳಗಿನ ಮೂವತ್ತು ಸಾಬೀತುಪಡಿಸಿದ ಮನೆಮದ್ದುಗಳು
ತಣಿಸುತ್ತವೆ.
*ನೆಲ್ಲಿಕಾಯಿ*
ಶೀಘ್ರವಾಗಿ
ಬಿಳಿ ಕೂದಲನ್ನು ನಿವಾರಿಸಲು ನೆಲ್ಲಿಕಾಯಿಗಿಂತ ಇನ್ನೊಂದು ಮದ್ದಿಲ್ಲ. ಕೆಲವು ನೆಲ್ಲಿಕಾಯಿಗಳನ್ನು ಕೊಬ್ಬರಿ
ಎಣ್ಣೆಯಲ್ಲಿ ನಿಧಾನವಾದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆಯನ್ನು ತಣ್ಣಗಾಗಲು
ಬಿಟ್ಟು ಬಿಳಿಯಾಗಿರುವ ಕೂದಲಿಗೆ ಹಾಗೂ ಮುಖ್ಯವಾಗಿ
ಪ್ರತಿ ಕೂದಲ ಬುಡಕ್ಕೆ ನಯವಾಗಿ
ಮಾಲಿಷ್ ಮಾಡಬೇಕು. ಇದು ಇತ್ತೀಚೆಗೆ ನೆರೆದಿರುವ
ಕೂದಲಿಗೆ ಮತ್ತೆ ನೈಸರ್ಗಿಕ ಕಪ್ಪುಬಣ್ಣವನ್ನು
ನೀಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕುದಿಸುವ
ಬದಲಿಗೆ ನೆಲ್ಲಿಕಾಯಿಯನ್ನು ಅರೆದು ಅಥವಾ ಎಣ್ಣೆ
ತೆಗೆದು ಸಹಾ ಬಳಸಬಹುದು. ಶೀಘ್ರ
ಪರಿಣಾಮ ಬೀರಲು ನೆಲ್ಲಿಕಾಯಿಯ ಕಷಾಯವನ್ನು
ಉಪಯೋಗಿಸಬಹುದು. ಕಷಾಯ ತಯಾರಿಸಲು ಕೆಲವು
ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ
ನೆನೆಸಿದ ಬಳಿಕ ಒಂದು ಚಮಚ
ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ
ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು.
ಬೆಳಿಗ್ಗೆ ಈ ದ್ರಾವಣವನ್ನು ಒಂದು
ಮೊಟ್ಟೆ, ಒಂದು ಲಿಂಬೆಯ ರಸ
ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ
ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು
ಘಂಟೆಗಳ ಬಳಿಕ ಸ್ನಾನ ಮಾಡಬೇಕು.
ನೆಲ್ಲಿಕಾಯಿಯ
ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ
ಕೂದಲ ಆರೋಗ್ಯ ಹೆಚ್ಚುವುದು ಹಾಗೂ
ದೇಹದ ಇನ್ನೂ ಹಲವು ತೊಂದರೆಗಳಿಗೆ
ಪರಿಹಾರ ದೊರಕುತ್ತದೆ.
*ಶುಂಠಿ*
ಶುಂಠಿಯನ್ನು
ಜಜ್ಜಿ ಒಂದು ಚಮಚ ಅಪ್ಪಟ
ಜೇನುತುಪ್ಪದೊಂದಿಗೆ ಸೇರಿಸಿ (ಸಮಪ್ರಮಾಣದಲ್ಲಿ) ಪ್ರತಿದಿನ
ರಾತ್ರಿ ಸೇವಿಸುತ್ತಾ ಬರುವುದರಿಂದ ಕೂದಲು ನೆರೆಯುವುದನ್ನು ತಡೆಯಬಹುದು.
*ಕೊಬ್ಬರಿ
ಎಣ್ಣೆ*
ಚರ್ಮದ ಆರೈಕೆಗೆ ಅತ್ಯುತ್ತಮ ಎಂದು
ವರ್ಷಗಳಿಂದ ಸಾಬೀತುಪಡಿಸಿರುವ ಕೊಬ್ಬರಿ ಎಣ್ಣೆ ಬಿಳಿ
ಕೂದಲಿಗೂ ನೆರವಿಗೆ ಬರಬಲ್ಲುದು. ಕೊಬ್ಬರಿ
ಎಣ್ಣೆ ಮತ್ತು ಲಿಂಬೆ ಹಣ್ಣಿನ
ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ನೆರೆಗೂದಲಿಗೆ ಹಾಗೂ
ಕೂದಲ ಬುಡದಲ್ಲಿ ನಯವಾಗಿ ಮಸಾಜ್ ಮಾಡುವುದರಿಂದ
ಉತ್ತಮ ಪರಿಣಾಮ ದೊರಕುತ್ತದೆ.
*ಅಪ್ಪಟ
ಹಸುವಿನ ತುಪ್ಪ*
ವಾರಕ್ಕೆರಡು
ಬಾರಿ ಅಪ್ಪಟ ಹಸುವಿನ ತುಪ್ಪವನ್ನು
ಎಣ್ಣೆಯಂತೆ ಕೂದಲ ಬುಡಕ್ಕೆ ನಯವಾಗಿ
ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ.
*ಬೇವಿನ
ಎಲೆಗಳು*
ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ
ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು.
ತಣ್ಣಗಾದ ಬಳಿಕ ಈ ಎಣ್ಣೆಯನ್ನು
ಕೂದಲ ಬುಡಕ್ಕೆ ನಯವಾಗಿ ಮಸಾಜ್
ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ.
ಈ ಎಣ್ಣೆಗೆ ಕೊಂಚ
ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ
ಬಳಸಬಹುದು.
*ಮದರಂಗಿ
ಎಲೆಗಳು*
ಎರಡು ಚಮಚ ಮದರಂಗಿ ಪುಡಿ,
ಒಂದು ಚಮಚ ಮೆಂತೆಯ ಲೇಪನ
(ದ್ರವ್ಯ), ಎರಡು ಚಮಚ ಬಸಲೆ
ಎಲೆಗಳ ಲೇಪನ (ದ್ರವ್ಯ), ಮೂರು
ಚಮಚ ಕಾಫಿ ಪುಡಿ (ಸಾಂಪ್ರಾದಾಯಿಕ,
ಇನ್ಸ್ಟಂಟ್ ಬೇಡ), ಮೂರು ಚಮಚ
ಪುದಿನ ಸೊಪ್ಪಿನ ರಸ ಹಾಗೂ
ಒಂದು ಚಮಚ ಮೊಸರು ಇಷ್ಟನ್ನೂ
ಚೆನ್ನಾಗಿ ಕಲಸಿ ಪ್ರತಿದಿನ ತಲೆಗೆ
ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.
ಮದರಂಗಿ
ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ
ಮಾಡಿಕೊಂಡು ಸಹಾ ಬಳಸಬಹುದು. ಒಣ
ಅಕ್ರೋಟನ್ನು ನಯವಾಗಿ ಪುಡಿ ಮಾಡಿಕೊಂಡು
ರಾತ್ರಿಯಿಡೀ ನೆನೆಸಿಟ್ಟ ಮದರಂಗಿಪುಡಿಯ ಜೊತೆ ಮಿಶ್ರಮಾಡಿಕೊಂಡು ತಲೆಗೆ
ಹಚ್ಚಿಕೊಳ್ಳುವುದರಿಂದ ನೆರೆತ ಕೂದಲು ಕಪ್ಪಗಾಗುವುದಲ್ಲದೇ
ಹೆಚ್ಚಿನ ಹೊಳಪನ್ನೂ ನೀಡುತ್ತದೆ.
*ಹೀರೇಕಾಯಿ*
ಕೊಬ್ಬರಿ
ಎಣ್ಣೆಯನ್ನು ಚಿಕ್ಕ ಉರಿಯಲ್ಲಿ ಬಿಸಿ
ಮಾಡಿ ಹೀರೇಕಾಯಿಯ ಹೋಳುಗಳನ್ನು ಸುಮಾರು ಮೂರರಿಂದ ನಾಲ್ಕು
ಗಂಟೆಗಳ ಕಾಲ ಕುದಿಸಬೇಕು. ಕಪ್ಪಗಾಗಿರುವ
ಹೋಳುಗಳನ್ನು ಹಿಂಡಿತೆಗೆದ ಬಳಿಕ ಈ ಎಣ್ಣೆಯನ್ನು
ಪ್ರತಿದಿನ ಕೂದಲಿಗೆ ಹಚ್ಚುವುದರಿಂದ ನೆರೆಗೂದಲು
ಕಪ್ಪಗಾಗತೊಡಗುತ್ತದೆ.
*ಕಪ್ಪು
ಚಹಾ (ಬ್ಲ್ಯಾಕ್ ಟೀ)*
ಒಂದು ಕಪ್ ನೀರಿನಲ್ಲಿ ಮೂರು
ಅಥವಾ ನಾಲ್ಕು ಚಮಚ ಕಪ್ಪು
ಟೀ ಹಾಕಿ ಕುದಿಸಿ. ಬಳಿಕ
ಒಂದು ಟೇಬಲ್ ಚಮಚದಷ್ಟು ಉಪ್ಪನ್ನು
ಹಾಕಿ ಟೀಪುಡಿಯನ್ನು ಸೋಸಿ. ಪ್ರತಿದಿನ ಈ
ನೀರನ್ನು ಕೂದಲಿಗೆ ಹಚ್ಚಿಕೊಂಡು ಒಂದು
ಘಂಟೆಯ ಬಳಿಕ ಸ್ನಾನ ಮಾಡುವ
ಮೂಲಕ ನೆರೆಗೂದಲಿಗೆ ಉತ್ತಮ ಪರಿಣಾಮವನ್ನು ಪಡೆಯಬಹುದು.
*ಈರುಳ್ಳಿ*
ಈರುಳ್ಳಿಯ
ರಸವನ್ನು ಹಿಂಡಿಹೊಂಡು ಸ್ವಲ್ಪವಾಗಿಯೇ ಕೂದಲ ಬುಡಕ್ಕೆ ಹಚ್ಚಿ
ಮಾಲಿಶ್ ಮಾಡುವುದರಿಂದ ಕೂದಲು ನೆರೆಯದಂತೆ ತಡೆಯಬಹುದು
ಹಾಗೂ ಕೂದಲುದುರುವುದನ್ನೂ ತಡೆಯಬಹುದು.
*ಕಾಳುಮೆಣಸು*
ಅರ್ಧ ಕಪ್ ಮೊಸರಿಗೆ ಒಂದು
ಗ್ರಾಂ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕೂದಲಿಗೆ
ಪ್ರತಿದಿನ ಹಚ್ಚುವ ಮೂಲಕ ಬಿಳಿ
ಕೂದಲನ್ನು ತಡೆಯಬಹುದು. ಈ ಮಿಶ್ರಣಕ್ಕೆ ಲಿಂಬೆಹಣ್ಣಿನ
ರಸವನ್ನು ಸೇರಿಸಿದರೆ (ಪ್ರತಿದಿನ ಹೊಸದಾಗಿ ಸೇರಿಸಬೇಕು) ಇನ್ನೂ
ಉತ್ತಮ ಪರಿಣಾಮ ಪಡೆಯಬಹುದು.
*ಕ್ಯಾಮೋಮೈಲ್
ಹೂವುಗಳು*
ಸೇವಂತಿಗೆಯಂತಿರುವ
ಕ್ಯಾಮೋಮೈಲ್ ಹೂವುಗಳ ಒಣಗಿಸಿದ ದಳಗಳನ್ನು
ಕುದಿನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ
ಕುದಿಸಿ ಸೋಸಿ ತೆಗೆಯಬೇಕು. ಈ
ನೀರಿನಿಂದ ಪ್ರತಿದಿನ ಕೂದಲನ್ನು ತೊಳೆದುಕೊಳ್ಳುವ ಮೂಲಕ ನೆರೆಗೂದಲು ಕಪ್ಪಗಾಗತೊಡಗುತ್ತದೆ.
*ರೋಸ್ಮರಿ
ಎಲೆಗಳು*
ರೋಸ್ಮರಿ
ಎಲೆಗಳು ಹಾಗೂ ದೊಡ್ಡಪತ್ರೆ ಎಲೆ(sage
leaves)ಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಒಂದು ಕಪ್
ಉಪ್ಪುನೀರಿನಲ್ಲಿ ಒಂದು ರಾತ್ರಿ ನೆನೆಸಿಡಬೇಕು.
ಬೆಳಿಗ್ಗೆ ಈ ನೀರಿನಿಂದ ಎಲೆಗಳನ್ನು
ಕಿವುಚಿ ತೆಗೆದು ಕೂದಲಿಗೆ ಹಚ್ಚಿಕೊಂಡರೆ
ಕೂದಲು ನೈಸರ್ಗಿಕ ಕಪ್ಪು ಬಣ್ಣ ಪಡೆಯುತ್ತದೆ.
ರೋಸ್ಮರಿ ಎಲೆಗಳ ಎಣ್ಣೆಯನ್ನು ನೇರವಾಗಿಯೂ
ಕೂದಲಿಗೆ ಬಳಸಬಹುದು.
*ಬಾದಾಮಿ
ಎಣ್ಣೆ*
ಸಮಪ್ರಮಾಣದಲ್ಲಿ
ಬಾದಾಮಿ ಎಣ್ಣೆ, ಲಿಂಬೆರಸ ಮತ್ತು
ನೆಲ್ಲಿಕಾಯಿಯ ರಸಗಳನ್ನು ಮಿಶ್ರಣಮಾಡಿಕೊಂಡು (ಬಿಸಿ ಮಾಡಬಾರದು) ನೇರವಾಗಿ
ಕೂದಲಿಗೆ ಹಾಗೂ ಕೂದಲ ಬುಡಕ್ಕೆ
ಹಚ್ಚಿ ಮಸಾಜ್ ಮಾಡುವುದರಿಂದ ಬಿಳಿಗೂದಲು
ಶೀಘ್ರವೇ ಕಪ್ಪಗಾಗುತ್ತದೆ.
*ಸೀಗೆಕಾಯಿ
(Acacia concinna)*
ಮೂರರಿಂದ
ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ
ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್
ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಕ್ಕ್ಗೆ ಇದನ್ನು ಕುದಿಸಿ ತಣಿದ
ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು.
ಇದು ಪ್ರತಿದಿನ ಉಪಯೋಗಿಸುವ ಶ್ಯಾಂಪೂವಿನಂತೆ ಉಪಯೋಗಿಸಬೇಕು. ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ
ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ
ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು
ಕಂಡೀಶನರ್ ನಂತೆ ಬಳಸಬಹುದು. ಈ
ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು
ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ
ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ
ಬೆಳೆಯಲು ನೆರವಾಗುತ್ತದೆ.
*ಸೀಬೆಮರದ
ಎಲೆಗಳು*
ಸೀಬೆ (ಪೇರಲೆ ಹಣ್ಣು) ಮರದ
ಎಲೆಗಳನ್ನು ತಣ್ಣೀರಿನೊಂದಿಗೆ ನಯವಾಗಿ ಅರೆದು ಬಿಳಿ
ಕೂದಲಿಗೆ ಪ್ರತಿದಿನ ಹಚ್ಚುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪುಬಣ್ಣ
ಪಡೆಯುತ್ತದೆ.
*ಹರಿವೆ
ಸೊಪ್ಪು*
ಹರಿವೆಸೊಪ್ಪಿನ
(ತಣ್ಣಗಿನ) ರಸವನ್ನು ನಯವಾಗಿ ಪ್ರತಿದಿನ
ನೆರೆಗೂದಲಿಗೆ ಹಚ್ಚುವ ಮೂಲಕ ಉತ್ತಮ
ಪರಿಣಾಮ ಪಡೆಯಬಹುದು. ಇದು ಕೂದಲಿಗೆ ನೈಸರ್ಗಿಕ
ಬಣ್ಣವನ್ನು ನೀಡುವುದು ಮಾತ್ರವಲ್ಲದೇ ನೆತ್ತಿಯನ್ನು ತಂಪಾಗಿಡುತ್ತದೆ.
*ಲೋಳೆಸರ
(aloe vera)*
ಲೋಳೆಸರದ
ಕೋಡನ್ನು ಅರೆದು ನುಣುಪಾದ ದ್ರಾವಣವನ್ನಾಗಿ
ಮಾಡಿಕೊಳ್ಳಬೇಕು. ಈ ದ್ರಾವಣವನ್ನು ಪ್ರತಿದಿನ
ನೆರೆಗೂದಲಿಗೆ ಹಚ್ಚುವ ಮೂಲಕ ಉತ್ತಮ
ಪರಿಣಾಮ ಪಡೆಯಬಹುದು.
*ಸಾಸಿವೆ
ಎಣ್ಣೆ*
೨೫೦ ಗ್ರಾಂ ಸಾಸಿವೆ ಎಣ್ಣೆಯಲ್ಲಿ
ಅರವತ್ತು ಗ್ರಾಮ್ ಮದರಂಗಿ ಎಲೆಗಳನ್ನು
ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು
ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ
ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ
ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.
*ಅಶ್ವಗಂಧ
(Indian ginseng)*
ಅಶ್ವಗಂಧವನ್ನು
ತೇದಿದ ರಸವನ್ನು ಕೂದಲಿಗೆ ಹಚ್ಚಿಕೊಳ್ಳುವ
ಮೂಲಕ ಉತ್ತಮ ಹೊಳಪನ್ನು ಹಾಗೂ
ಕಪ್ಪುಗೂದಲನ್ನು ಪಡೆಯಬಹುದು.
*ಖೋಲಿ ಎಲೆಗಳು (Ligustrum vulgare ಅಥವಾ common privet)*
ಕಾಡು ಮಲ್ಲಿಗೆಯಂತಿರುವ ಖೋಲಿ ಎಲೆಗಳು ಮೂಲತಃ
ಚೀನಾದಿಂದ ಬಂದಿದ್ದು ಈ ಎಲೆಗಳ ರಸವನ್ನು
ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಕೂದಲಿಗೆ ನೈಸರ್ಗಿಕ
ಕಪ್ಪುಬಣ್ಣವನ್ನು ಪಡೆಯಬಹುದು.
*ವಿಟಮಿನ್
ಬಿ7 (Biotin)*
ಕೂದಲಿನ
ಆರೈಕಾಗಿ ವಿಟಮಿನ್ ಬಿ7 ಹೆಚ್ಚಿರುವ
ಆಹಾರಗಳನ್ನು ಸೇವಿಸುವ ಮೂಲಕ ನೆರೆಗೂದಲಿಗೆ
ದೇಹದ ಒಳಗಿನಿಂದಲೇ ಉತ್ತಮ ಆರೈಕೆ ನೀಡಬಹುದು.
ಮೊಟ್ಟೆಯ ಹಳದಿ ಭಾಗ, ಟೊಮ್ಯಾಟೋ
ಹಣ್ಣು, ಯೀಸ್ಟ್, ಸೋಯಾ ಅವರೆ,
ಅಕ್ರೋಟು, ಕ್ಯಾರಟ್, ಹಸುವಿನ ಹಾಲು, ಕುರಿಯ
ಹಾಲು, ಸೌತೆಕಾಯಿ, ಓಟ್ಸ್, ಬಾದಾಮಿ ಮೊದಲಾದವುಗಳನ್ನು
ಪ್ರತಿದಿನ ಸೇವಿಸುವುದರಿಂದ ಕೂದಲು ಸೊಂಪಾಗಿ ಹಾಗೂ
ಕಪ್ಪಗಾಗಿ ಬೆಳೆಯುತ್ತದೆ.
*ಸೋರೆಕಾಯಿ*
ಸೋರೆಕಾಯಿಯ
ರಸವನ್ನು ಹಿಂಡಿತೆಗೆದು ಸಾಸಿವೆ ಎಣ್ಣೆ ಅಥವಾ
ಆಲಿವ್ ಎಣ್ಣೆಯೊಂದಿಗೆ ಮಿಶ್ರಮಾಡಿಕೊಂಡು ಪ್ರತಿದಿನ ಕೂದಲಿಗೆ ಹಚ್ಚುವ ಮೂಲಕ
ನೆರೆಗೂದಲಾಗುವುದನ್ನು ತಡೆಯಬಹುದು.
*ಲವಂಗದ
ಎಣ್ಣೆ*
ಲವಂಗದ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಕೂದಲಿಗೆ
ಹಚ್ಚುವುದರಿಂದಲೂ ನೆರಗೂದಲಾಗುವುದನ್ನು ತಡೆಗಟ್ಟಬಹುದು.
*ಬೇವಿನ
ಎಣ್ಣೆ*
ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು
ಕೂದಲಿಗೆ ನೈಸರ್ಗಿಕ ಬಣ್ಣ ನೀಡುವುದರ ಜೊತೆಗೆ
ಸೀರು ಮೊದಲಾದ ಇತರ ತೊಂದರೆಗಳಿಂದಲೂ
ಮುಕ್ತಿ ದೊರಕುತ್ತದೆ.
*ಕಪ್ಪು
ಅಕ್ರೋಟು*
ಕಪ್ಪು ಅಕ್ರೋಟಿನ ಹೊರಕವಚವನ್ನು ಪ್ರತ್ಯೇಕಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ನೀರು ಕಪ್ಪಗಾದ ಬಳಿಕ
ಸೋಸಿ ತೆಗೆದು ತಣಿಸಿ ಕೂದಲಿಗೆ
ಹಚ್ಚಿಕೊಂಡು ಅರ್ಧ ಘಂಟೆಯ ಬಳಿಕ
ಸ್ನಾನ ಮಾಡಿಕೊಂಡರೆ ಉತ್ತಮ ಪರಿಣಾಮ ದೊರಕುತ್ತದೆ.
*ಅರ್ನಿಕಾ
ಎಣ್ಣೆ* (arnica oil)
ಸೇವಂತಿಗೆಯಂತಿರುವ
ಅರ್ನಿಕಾ ಹೂವುಗಳ ದಳಗಳನ್ನು ಒಣಗಿಸಿ
ಹಿಂಡಿ ತೆಗೆದ ಎಣ್ಣೆ ನೆರೆಗೂದಲಿಗೆ
ಉತ್ತಮವಾಗಿದೆ.
*ಬ್ರಾಹ್ಮಿ
ತೈಲ*
ಮಾರುಕಟ್ಟೆಯಲ್ಲಿ
ಹಲವು ಬ್ರಾಹ್ಮಿ ತೈಲಗಳು ಲಭ್ಯವಿದ್ದು ಕೂದಲ
ನೈಸರ್ಗಿಕ ಬಣ್ಣ ನೀಡುತ್ತವೆ. ಕೂದಲ
ತುದಿಗಳಲ್ಲಿ ಸೀಳಿದ ಹಾಗೂ ಕೂದಲು
ಉದುರುವ ತೊಂದರೆಗಳನ್ನೂ ನಿವಾರಿಸುತ್ತದೆ.
*ಮಾವಿನ
ಬೀಜ*
ಮಾವಿನ ಗೊರಟಿನೊಳಗಿನ ಬೀಜವನ್ನು ಒಣಗಿಸಿ ಪುಡಿಮಾಡಿ ನೆಲ್ಲಿಕಾಯಿ
ಪುಡಿಯೊಂಗಿದೆ ಬೆರೆಸಿ ಕೊಬ್ಬರಿ ಎಣ್ಣೆಯೊಂದಿಗೆ
ಮಿಶ್ರ ಮಾಡಿ ಕೂದಲಿಗೆ ಹಚ್ಚುವ
ಮೂಲಕ ನೆರೆಗೂದಲು ನೈಸರ್ಗಿಕ ಕಪ್ಪುಬಣ್ಣವನ್ನು ಪಡೆಯುತ್ತದೆ.
*ಕ್ಯಾರಟ್
ಜ್ಯೂಸ್*
ಪ್ರತಿದಿನ
ಒಂದು ಲೋಟ ತಾಜಾ ಕ್ಯಾರಟ್
ನ ರಸವನ್ನು ಸೇವಿಸುವುದರಿಂದಲೂ
ನೆರೆಗೂದಲಿಗೆ ಉತ್ತಮ ಪರಿಣಾಮವನ್ನು ಪಡೆಯಬಹುದು.