*ತಲೆ ಸುತ್ತು ಮತ್ತು ತಲೆ ನೋವಿಗೆ ಇಲ್ಲಿದೆ ಪರಿಹಾರ*
ಕೋಕಂ,ಪುರಂಪುಲಿ,ಮುರುಗಲ
ಹಣ್ಣು ಎಂದೂ ಕರೆಯಲ್ಪಡುವ ಈ
ಹಣ್ಣಿನ ರಸ ,ಸಾರು ಪಿತ್ತಕ್ಕೆ
ದಿವ್ಯಔಷದ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ
ತಿಳಿ ಯನ್ನು ದಿನಕ್ಕ್ಕೆ ಮೂರು
ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ
ದಿಂದ ಬರುವ ಎಲ್ಲಾ ತೊಂದರೆ
ಶಮನ ಗೊಳ್ಳುತ್ತದೆ…
* ಹಳೆ ಹುಣಿಸೆ ಹಣ್ಣನ್ನು ರಾತ್ರಿ
ನೀರಿಗೆ ಹಾಕಿಟ್ಟು, ಬೆಳಿಗ್ಗೆ ಅದನ್ನು ಕಿವುಚಿ ರಸ
ತೆಗೆದು ಅದಕ್ಕೆ ಸ್ವಲ್ಪ ಬೆಲ್ಲ
ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಅರ್ಧ ಗಂಟೆಯ ನಂತರ ಬೇರೆ
ಆಹಾರ ಸೇವಿಸಬಹು.
* ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು
ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು
ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ
ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ
ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು
ಕಡಿಮೆ ಮಾಡುತ್ತದೆ.
* ಒಂದು
ಲೋಟದಲ್ಲಿ ಹದವಾದ ಬಿಸಿ ನೀರನ್ನು
ತೆಗೆದುಕೊಂಡು ಅದಕ್ಕೆ ನಿಂಬುವನ್ನು ಬೆರೆಸಿ.ಇದನ್ನು ಕುಡಿದರೆ ನಿಮ್ಮ
ತಲೆನೋವು ತಕ್ಷಣ ಕಡಿಮೆ ಆಗುತ್ತದೆ.ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ
ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ.ಇದು
ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ
ಮುಕ್ತಿ ನೀಡುತ್ತದೆ.
* ತಲೆನೋವನ್ನು
ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್
ಮಾಡುವುದು.ಇದು ನೋವು ನಿವಾರಕವಾದ್ದರಿಂದ
ಬೇಗ ತಲೆನೋವು ನಿವಾರಿಸುತ್ತದೆ
* ತಲೆನೋವನ್ನು
ನಿವಾರಿಸಲು ಸುಲಭ ಉಪಾಯವೆಂದರೆ ದಾಲ್ಚಿನ್ನಿ
ಪುಡಿಯನ್ನು ನೀರು ಬೇರೆಸಿ ಪೇಸ್ಟ್
ಮಾಡಿ ಅದನ್ನು ತಲೆಗೆ ಹಚ್ಚಿದರೆ
ನೋವು ಕಡಿಮೆಯಾಗುತ್ತದೆ.ಇದನ್ನು ಹಣೆಗೆ ಹಚ್ಚಿದರೆ
ತಕ್ಷಣ ನೋವು ಕಡಿಮೆ ಆಗುತ್ತದೆ.
* ಕೊತ್ತಂಬರಿ,ಸಕ್ಕರೆ ಯನ್ನು ನೀರಿನೊಂದಿಗೆ
ಬೆರೆಸಿ ಕುಡಿದರೆ ತಲೆನೋವಿನಿಂದ ಪರಿಹಾರ
ದೊರಕುವುದು.ಸಾಮಾನ್ಯ ತಂಡಿಯಿಂದ ತಲೆನೋವು
ಬಂದಿದ್ದರೆ ಈ ರೀತಿ ಮಾಡಿ
ಕುಡಿಯುವುದರಿಂದ ಕಡಿಮೆ ಆಗುತ್ತದೆ.
* 15 ರಿಂದ
20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್
ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ.ಬೇಸಿಗೆಯ
ಬಿಸಿಲಿಗೆ ತಲೆನೋವು ಬಂದಾಗ ಈ
ರೀತಿ ಮಾಡಿದರೆ ಕೊಬ್ಬರಿ ಎಣ್ಣೆ
ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ
ಮಾಡುತ್ತದೆ.
* ಕೆಲವು
ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ.1
ಚಮಚದಷ್ಟು ರಸ ಕುಡಿಯಿರಿ.ಇದು
ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ
ಕಡಿಮೆ ಆಗುತ್ತದೆ.
* ಕೊತ್ತಂಬರಿ
ಸೊಪ್ಪು ,ಜೀರಿಗೆ ಮತ್ತು ಶುಂಟಿ
ಬೆರೆಸಿ ಮಾಡಿದ ಕಷಾಯ ಅಥವಾ
ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು
ಬೇಗ ಕಡಿಮೆ ಆಗುತ್ತದೆ.ಬಿಸಿ
ನೀರಿಗೆ ಮೇಲೆ ಹೇಳಿದ ಪದಾರ್ಥ
ಮಿಶ್ರಮಾಡಿ 5 ನಿಮಿಷಗಳವರೆಗೆ ಕುದಿಸಿ.ನಂತರ ಆ
ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ.ನಿಮಗೆ ಉತ್ತಮ ಎನಿಸುವವರೆಗೂ
ಕುಡಿಯುತ್ತಿರಿ.
* ಇಂಗನ್ನು
ತೆಂಗಿನ ಎಣ್ಣೆಯಲ್ಲಿ ಅರೆದು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆ ಆಗುತ್ತದೆ. ಕೀಲು ನೋವ್ವಿಗೂ ಇದನ್ನು ಹಚ್ಚಿದರೆ ನೋವು ಕಡಿಮೆ ಆಗುತ್ತದೆ.
* ಬಿಸಿಲಲ್ಲಿ
ತಿರುಗುವುದರಿಂದ
ಉಂಟಾಗುವ ತಲೆನೋವ್ವಿಗೆ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಅದರ
ರಸವನ್ನು ಸೇವಿಸುವುದು ಪರಿಣಾಮಕಾರಿ.
* ನಿಂಬೆ
ಹಣ್ಣಿನ ಸಿಪ್ಪೆಯನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರೆದು ಹಣೆಗೆ ಹಚ್ಚುವುದರಿಂದ ಅರೆತಲೆನೋವ್ವು ಗುಣವಾಗುತ್ತದೆ.
* ದಿನವು
10-15 ಒಣದ್ರಾಕ್ಷಿಗಳನ್ನು
ತಿಂದು ಹಾಲು ಕುಡಿಯುವುದರಿಂದ ದುರ್ಬಲತೆಯಿಂದ ತಲೆ ತಿರುಗುವುದು ನಿಲ್ಲುತ್ತದೆ.
* ನೆಲ್ಲಿಕಾಯಿಯ
ಶರಬತ್ತು ಮಾಡಿ ಕುಡಿಯುವುದರಿಂದ ತಲೆ ತಿರುಗುವುದು ನಿಲ್ಲುತ್ತದೆ.
* ಹುಣಿಸೆ
ಹಣ್ಣಿನ ಸಕ್ಕರೆ ಪಾನಕ ಕುಡಿದರೆ ತಲೆನೋವ್ವು ಪರಿಹಾರವಾಗುತ್ತದೆ.
* ಉಷ್ಣದಿಂದ
ತಲೆನೋವ್ವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ.
* ರಾತ್ರಿ
5-6 ಹನಿ ಬಾಧಾಮಿ ತೈಲವನ್ನು ಮೂಗಿಗೆ ಹಾಕಿದರೆ ತಲೆನೋವ್ವು ಕಡಿಮೆ ಆಗುತ್ತದೆ.
* ಸೇಬಿಗೆ
ಸ್ವಲ್ಪ ಉಪ್ಪು ಹಚ್ಚಿ ಸೇವಿಸಿದರೆ ತಲೆನೋವ್ವು ಕಡಿಮೆಯಾಗುತ್ತದೆ.
* ಏಲಕ್ಕಿ
ಚೂರ್ಣ ಬೆರೆಸಿದ ನಿಂಬೆ ಪಾನಕ ಸೇವಿಸಿದರು
ತಲೆ ತಿರುಗು ನಿಲ್ಲುತ್ತದೆ.
No comments:
Post a Comment