*ಮುಖದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬೇಕೆ?*
ಮುಖದ ಮೇಲೆ ಕೂದಲು ಬಂದರೆ
ಹೆಣ್ಣು ಮಕ್ಕಳಿಗೆ ತುಂಬಾ ಮುಜುಗರ ಉಂಟಾಗುವುದು.
ತೆಳುವಾದ ಕೂದಲು ಹೆಚ್ಚಿನವರ ಮುಖದಲ್ಲಿ
ಕಂಡು ಬರುತ್ತದೆ, ಆದರೆ ಕೂದಲು ಸ್ವಲ್ಪ
ಮಂದವಾಗಿದ್ದು, ಗಲ್ಲ ಮತ್ತು ಮೂಗಿನ
ಕೆಳಗೆ ಕೂದಲು ಎದ್ದು ಕಾಣುವಂತಿದ್ದರೆ
ತುಂಬಾ ಮುಜುಗರ ಉಂಟಾಗುತ್ತದೆ, ಯಾವ
ಮೇಕಪ್ ನಿಂದಲೂ ಮುಖದಲ್ಲಿರುವ ಕೂದಲನ್ನು
ಮರೆಮಾಚಲು ಸಾಧ್ಯವಾಗುವುದಿಲ್ಲ.
ಸ್ತ್ರೀಯರ
ಮುಖದಲ್ಲಿ ಬೇಡದ ಕೂದಲು ಇಲ್ಲದಿದ್ದರೆ
ಮಾತ್ರ ಆಕರ್ಷಕವಾಗಿ ಕಾಣುವುದು. ಆದರೆ ಬೇಡದ ಕೂದಲನ್ನು
ಹೋಗಲಾಡಿಸಲು ಶೇವ್ ಮಾಡಲು ಸಾಧ್ಯವಿಲ್ಲ,
ಶೇವ್ ಮಾಡಿದ್ದರೆ ಮುಖದ ನುಣಪು ಮಾಯವಾಗಿ
ತ್ವಚೆ ಒರಟಾಗಿ ಸೌಂದರ್ಯ ಕಳೆಕುಂದುವುದು.
ಇದನ್ನು ಬ್ಲೀಚ್ ಮಾಡಿಸಿ ಮರೆ
ಮಾಚಬಹುದು. ಇಲ್ಲದಿದ್ದರೆ ಥ್ರೆಡ್ಡಿಂಗ್ ಮಾಡಿ ಬೇಡದ ಕೂದಲನ್ನು
ತೆಗೆಯಬಹುದು. ಆದರೆ ಸ್ವಲ್ಪ ದಿನಗಳ
ಬಳಿಕ ಬೇಡದ ಕೂದಲು ಮತ್ತೆ
ಹುಟ್ಟುತ್ತದೆ. ಬೇಡದ ಕೂದಲನ್ನು ಸಂಪೂರ್ಣವಾಗಿ
ಹೋಗಲಾಡಿಸಲು ಈ ಕೆಳಗಿನ ವಿಧಾನಗಳನ್ನು
ಅನುಸರಿಸಬಹುದು.
*ಹಾರ್ಮೋನ್
ಗಳ ಸಮತೋಲನ*
ಹೆಣ್ಣು
ಮಕ್ಕಳ ಮುಖದಲ್ಲಿ ಬೇಡದ ಕೂದಲು ಹಾರ್ಮೋನ್
ಗಳ ವ್ಯತ್ಯಾಸದಿಂದ ಉಂಟಾಗುತ್ತದೆ. ಹೆಣ್ಣು ಮಕ್ಕಳ ದೇಹದಲ್ಲಿ
ಟೆಸ್ಟೋಸ್ಟಿರೋನ್ ಹಾರ್ಮೋನ್ ಅಧಿಕವಿದ್ದರೆ ಬೇಡದ ಕೂದಲು ಹೆಚ್ಚಾಗಿ
ಕಂಡು ಬರುವುದು. ಕೂದಲು ಬರುವುದನ್ನು ತಡೆಯಲು
ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಿಸಬೇಕು. ವ್ಯಾಯಾಮ ಮಾಡಿದರೆ ಹಾರ್ಮೋನ್
ಗಳನ್ನು ಸಮತೋಲನದಲ್ಲಿಡಬಹುದು.
*ಆಹಾರಕ್ರಮ*
ಈಸ್ಟ್ರೋಜನ್
ಹೆಚ್ಚಿಸುವ ಆಹಾರಗಳನ್ನು ತಿನ್ನಿ. ಸೋಯಾಬೀನ್ , ಟೊಮೆಟೊ,
ಕಡಲೆ, ದಾಳಿಂಬೆ, ಆಲೂಗಡ್ಡೆ, ಜೀರಿಗೆ, ಸೋಂಪು, ಪ್ಲಮ್,
ಬೀನ್ಸ್, ಸೂರ್ಯಕಾಂತಿ ಎಣ್ಣೆ ಮತ್ತು ಬೀಜ,
ಅಗಸೆ ಬೀಜ ಇವೆಲ್ಲಾ ಈಸ್ಟ್ರೋಜನ್
ಪ್ರಮಾಣವನ್ನು ಹೆಚ್ಚಿಸುತ್ತದೆ.
*ಮನೆ ಮದ್ದು 1*
ಇದರ ಜೊತೆಗೆ ಈ ಮನೆ
ಮದ್ದಿನಿಂದ ಬೇಡದ ಕೂದಲನ್ನು ಹೋಗಲಾಡಿಸಬಹುದು.
ನಿಂಬೆ ರಸಕ್ಕೆ ಸ್ವಲ್ಪ ಅರಿಶಿಣ
ಮಿಕ್ಸ್ ಮಾಡಿ ಪ್ರತೀದಿನ ಹಚ್ಚುತ್ತಾ
ಬಂದರೆ ಬೇಡದ ಕೂದಲು ನಿಧಾನಕ್ಕೆ
ಮಾಯವಾಗುವುದು, ಅಲ್ಲದೆ ಈ ವಿಧಾನದಲ್ಲಿ
ಕೂದಲು ಹೋಗಲು ಸ್ವಲ್ಪ ಸಮಯ
ತೆಗೆದುಕೊಳ್ಳುವುದಾದರು, ಪುನಃ ಹುಟ್ಟುವುದಿಲ್ಲ. ನುಣಪಾದ
ತ್ವಚೆ ನಿಮ್ಮದಾಗುವುದು.
*ಮನೆಮದ್ದು
2*
2 ಚಮಚ ನಿಂಬೆ ರಸ, 2 ಚಮಚ
ಜೇನು ಮತ್ತು 4 ಚಮಚ ಸಕ್ಕರೆ
ಹಾಕಿ ಬಿಸಿ, ಸಕ್ಕರೆ ಕರಗುವವರೆಗೆ
ಬಿಸಿ ಮಾಡಿ, ನಂತರ ಉರಿಯಿಂದ
ಇಳಿಸಿ ತಣ್ಣಗಾಗಲು ಇಡಿ. ನಂತರ ಬೇಡದ
ಕೂದಲಿನ ಮೇಲೆ ಹಚ್ಚಿ ಒಣಗಲು
ಬಿಡಿ, ಒಣಗಿದ ನಂತರ ಹತ್ತಿ
ಬಟ್ಟೆಯನ್ನು ಒದ್ದೆ ಮಾಡಿ ಉಜ್ಜಿ
ತೆಗೆಯಿರಿ. ಈ ರೀತಿ ಮಾಡಿ
ಬೇಡದ ಕೂದಲನ್ನು ಹೋಗಲಾಡಿಸಬಹುದು.
*ಮನೆಮದ್ದು3*
ಹಳದಿ, ಮೊಸರು ಮತ್ತು ಕಡಲೆ
ಹಿಟ್ಟು ಈ ಮೂರು ವಸ್ತುಗಳನ್ನು
ಒಂದೊಂದು ಸ್ಪೂನ್ ತೆಗೆದುಕೊಂಡು ಮಿಕ್ಸ್
ಮಾಡಿ ಮುಖಕ್ಕೆ ಹಚ್ಚಿ ಅರ್ಧ
ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ
ತೊಳೆಯಿರಿ. ಈ ರೀತಿ ಪ್ರತೀದಿನ
ಮಾಡುತ್ತಿದ್ದರೆ ಬೇಡದ ಕೂದಲು ಇಲ್ಲವಾಗುವುದು.
No comments:
Post a Comment