Popular Posts

Saturday, 20 March 2021

ಕವಡೆ ಶಾಸ್ತ್ರ ಸ್ವತಃ ನೋಡಬಹುದೇ !?

 

ಕವಡೆ ಶಾಸ್ತ್ರ ಸ್ವತಃ ನೋಡಬಹುದೇ!?

 ಸಾಮಾನ್ಯವಾಗಿ ನಮ್ಮಲ್ಲಿ ಕೆಲವು ಮಂದಿ

 ಈ ಶಾಸ್ತ್ರ

ಜ್ಯೋತಿಷ

ಗಿಳಿಶಾಸ್ತ್ರ

ಅದರಲ್ಲೂ ಕವಡೇಶಾಸ್ತ್ರ ಒಂದು ರೀತಿ ಗೇಲಿ ಮಾಡುವಂತೆ ನೋಡುತ್ತಾರೆ....

ಹೋಗೋ ಕೆಲ್ಸ ಆಗುತ್ತೋ ಇಲ್ಲವೋ

ಇವತ್ತು ಅದೇನು ಹೇಳ್ತಾನೋ ಏನೋ

ಹಣ ಕೊಡ್ತಾ ಇಲ್ವಾ ಎಂದು ಹತ್ತಾರು ಬಾರಿ ಯೋಚಿಸಿಯೇ ಮನೆ ಬಿಡುತ್ತಾರೆ

ತೀರಾ ತಾವು ತಲುಪಬೇಕಾದ ಸ್ಥಳವನ್ನು ತಲುಪಿ ಅಲ್ಲಿ ಕೂತು

ಕಾದು ಕೊನೆಗೆ ಫಲಿತಾಂಶ ಹೊರಬೀಳುವವರೆಗೆ

ಇವರ ಮನಸ್ಸು ರಣರಂಗವಾಗಿರುತ್ತದೆ....

ಮಾನಸಿಕ ಒತ್ತಡ ತಡೆಯಲಾರದೆ ಕೆಲವೊಮ್ಮೆ ಅವರನ್ನು ಮನಸ್ಸಿನಲ್ಲೇ ಅವ್ಯಾಚವಾಗಿ ಬೈದು ಕೊಳ್ಳುತ್ತಾರಲ್ಲದೆ...

ತಮ್ಮನ್ನುಾ ನಿಂದಿಸಿಕೊಳ್ಳತ್ತಾರೆ...

 

ಇವೆಲ್ಲ ಏಕೆ ಬೇಕು

 ಒಂದ್ಹತ್ತು ನಿಮಿಷ ಮನೆಯಲ್ಲೇ ಪ್ರಶಾಂತವಾಗಿ ಕೂತು

ಈ ದಿನ ತಾವೆಂದುಕೊಂಡಿರುವ ಕೆಲಸ ಆಗುತ್ತದೋ ಇಲ್ಲವೋ ಎಂಬುದನ್ನು  ತಿಳಿದುಕೊಂಡುಬಿಟ್ಟರೆ... ಸಮಯ ಹಣವೂ ಸೇರಿದಂತೆ ಮಾನಸಿಕವಾಗಿಯುಾ ತಾವು ಪ್ರಶಾಂತವಾಗಿರಬಹುದಲ್ಲ...

ಈ ಕವಡೆ ಮುತ್ತಿನ ಶಾಸ್ತ್ರವನ್ನು ಸಂಪೂರ್ಣವಾಗಿ ನಂಬಿ.. ಇಂದಿನಿಂದಲೇ  ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಇದಕ್ಕಾಗಿ ನೀವು ಮಾಡಬೇಕಾದ್ದೇನೆಂದರೆ.....

 ನಿಮ್ಮ ಮನೆಯ ಪೂಜಾಗೃಹದಲ್ಲಿ ದೇವರ ಫೋಟೋಗಳ ಮುಂದೆ

 ದೀಪಗಳ ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ಹನ್ನೆರಡು ಕವಡೆಗಳನ್ನು ಹಾಕಿಡಬೇಕು

 ಇಂದು.... ಈಗ ....

ನಾವು  ಮಾಡಲು ಹೊರಟಿರುವ ಕಾರ್ಯ ಕೈಗೂಡುತ್ತದೆಯೋ

ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳಬೇಕೆಂದರೆ....

ಬೆಳಗಿನ ವೇಳೆಯ

ಕಾಲಕೃತ್ಯಗಳನ್ನೆಲ್ಲ ಮುಗಿಸಿ

 ಸ್ನಾನ ಮಾಡಿ

 ವಿಭೂತಿ ಕುಂಕುಮವನ್ನು ಹಣೆಗೆ ಧರಿಸಿ

ದೇವರಿಗೆ ದೀಪ ಹಚ್ಚಿ

 ಊದುಬತ್ತಿ ಹಚ್ಚಿ

 ಕರ್ಪೂರದಿಂದ ಮಹಾಮಂಗಳಾರತಿ ಮಾಡಿದ ನಂತರ

ದೇವರ ಮುಂದೆ ಕುಳಿತುಕೊಂಡು

ತಮ್ಮ ಕುಲ ದೇವರು ಅಥವಾ ಇಷ್ಟ ದೇವರನ್ನು ಮನದಲ್ಲೇ ನೆನೆದು ಪ್ರಾರ್ಥಿಸಿ ಭಕ್ತಿಭಾವದಿಂದ ಕವಡೆಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ಕಣ್ಣುಗಳನ್ನು ಮುಚ್ಚಿಕೊಂಡು ಚೆನ್ನಾಗಿ ಕುಲುಕಿ ನೆಲದ ಮೇಲೆ ಹಾಕಬೇಕು ....

 

ಹಾಕಿದ ನಂತರ ಎಷ್ಟು ಕವಡೆಗಳು ಬೋರಲಾಗಿ ಬಿದ್ದಿರುತ್ತದೆಯೋ

 ಅಷ್ಟು ಸೇರಿಸಿ ಅವುಗಳ ಫಲಗಳನ್ನು ಈ ಕೆಳಗೆ ತೋರಿಸಿರುವ ಹಾಗೆ ತಿಳಿದುಕೊಳ್ಳಬೇಕು ...

ದೇವರ ಸಂಪೂರ್ಣ ಆಶೀರ್ವಾದದಿಂದ ಈ ಫಲಗಳ ಬಹಳ ನಿಖರವಾಗಿರುವುದನ್ನು

ನೀವು ಗ್ರಹಿಸಬಹುದು

ಒಂದು ಕೆಲಸಕ್ಕೆ ಒಂದೇ ಸಾರಿ ಮಾತ್ರ ಕವಡೆ ಹಾಕಬೇಕು

 ಎರಡನೇ ಬಾರಿ ಹಾಕುವಂತಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕು...

 

ಉದಾಹರಣೆಗೆ ...

ಇಂದು ನಾವು ಕೇಳಲು ಹೋಗುತ್ತಿರುವ ಹಣ ನಮಗೆ ಸಿಗುತ್ತದೆಯೋ ?

ಎಂಬುದು ನಿಮ್ಮ ಪ್ರಶ್ನೆ ಎಂದಿಟ್ಟುಕೊಳ್ಳಿ...

 ಕವಡೆಗಳನ್ನು ಕುಲುಕಿ ಹಾಕಿದ ತಕ್ಷಣ ಎರಡು ಕವಡೆಗಳು ಮುಗುಚಿಕೊಂಡಂತೆ ಬೋರಲಾಗಿ ಬಿದ್ದರೆ "ಹಣ ನಿಮ್ಮ ಕೈ ಸೇರುತ್ತದೆ ಎಂದು...

 

 ಇದರ ಹೊರತಾಗಿ  5   9 11 ಬಿದ್ದರೆ ಯಾವುದೇ ಆತಂಕವಿಲ್ಲದೆ ಹಣ ನಿಮ್ಮ ಕೈ ತಲುಪುತ್ತದೆ ಎಂಬುದು ಈ ಶಾಸ್ತ್ರದ ಫಲ ....

 

ಇದರ ಹೊರತಾಗಿ ಆರು ಬಿದ್ದರೆ ಹಣ ಕೇಳಲು ಹೋದ ಸ್ಥಳ

ವ್ಯಕ್ತಿಯ ಬಳಿ ಹಣ ಸಿಗುವುದಿಲ್ಲ ಸಾಲದ್ದಕ್ಕೆ ಮನಸ್ತಾಪಗಳು ಸಣ್ಣಪುಟ್ಟ ಜಗಳಗಳುಾ ನಡೆಯುವ ಸಾಧ್ಯತೆಗಳು ಇರುತ್ತದೆ ಎಂಬುದು ಇದರ ಫಲ...

 

 ಒಂದು ವೇಳೆ ಎಂಟು

ಬಿದ್ದರೆ

ಹಣ ಕೀಳಲು ಹೋದ ಸ್ಥಳದಲ್ಲಿ ಅನಗತ್ಯ ಜಗಳ

ವಾದ ವಿವಾದಗಳುಂಟಾಗಿ ದೊಡ್ಡ ಸಮಸ್ಯೆಯಾಗಲಿದೆ ಎಂಬುದು ಇದರ ಫಲ

 

ಹನ್ನೆರಡು

 ಬಿದ್ದರೆ ಹಣ ಕೇಳಲು ಹೋಗಿರುವ ಜಾಗದಲ್ಲಿ ಹಣ ಸಿಗುವುದಿಲ್ಲ

 ನಮ್ಮ ಕೈಯಿಂದಲೇ ಅನಗತ್ಯ ಖರ್ಚುಗಳನ್ನು ಮಾಡಿ

ಇರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದೇ ಇದರ ಫಲ

 

ಈ ರೀತಿಯಲ್ಲಿ ಇಂದು ನಾವು ಮಾಡಲು ಹೋರಟಿರುವ ಪ್ರತಿಯೊಂದು ಕಾರ್ಯಕ್ಕೂ ಹೋಗುವ ಮುಂಚೆಯೇ ಫಲಗಳನ್ನು ತಿಳಿದುಕೊಳ್ಳಬಹುದು ...

 

2  ,4 , 5,  9,  10,  11 ಎಂಬ ಆರು ಸಂಖ್ಯೆಗಳು ಬಿದ್ದರೆ ಉತ್ತಮವಾದ ಫಲಗಳೇ ನಡೆಯುತ್ತವೆ ....

 

ಇದರ ಹೊರತಾಗಿ     1,  3,  6,  7,  8,  12 ರಂತೆ ಆರು ಸಂಖ್ಯೆಗಳು ಬಿದ್ದರೆ ಕೆಟ್ಟ ಫಲಗಳು ಮಾತ್ರ ನಡೆಯುತ್ತವೆ...

 

 ಮನೆಯಲ್ಲಿರುವ ಐದು ವಷ೯ಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳ ಕೈಗೆ ಕವಡೆಗಳನ್ನು ಕೊಟ್ಟು ಹಾಕಿ ಫಲಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು

Friday, 5 March 2021

ಬಿ.ಕೆ.ಎಸ್. ಐಯಂಗಾರ್

ಯೋಗಲೋಕದ ಯೋಗಿರಾಜ
ಅನಾರೋಗ್ಯಪೀಡಿತ ಬಾಲಕನೊಬ್ಬ ಆರೋಗ್ಯ ಸುಧಾರಣೆಗಾಗಿ ಯೋಗ ಕಲಿತು ಉತ್ತಮ ಆರೋಗ್ಯ ಸಂಪಾದಿಸಿದ್ದಲ್ಲದೆ, ಆ ವಿದ್ಯೆಯನ್ನು ಜಗತ್ತಿಗೆ ಹಂಚಬೇಕೆಂದು ಸಂಕಲ್ಪಿಸಿದ. ಆ ಬಾಲಕ ಮುಂದೆ ಬಿ.ಕೆ.ಎಸ್. ಐಯಂಗಾರ್ ಎಂದು ಪ್ರಸಿದ್ಧರಾದರು. ಯೋಗ ಎಂದಕೂಡಲೇ ತಕ್ಷಣ ನೆನಪಾಗುವ ಹೆಸರು ಅವರದೇ. ನಾಳೆಯಿಂದ ಪ್ರಾರಂಭವಾಗಲಿರುವ ಅವರ ಜನ್ಮಶತಮಾನೋತ್ಸವದ ನಿಮಿತ್ತ ಈ ಬರಹ.

ಒಬ್ಬ ವ್ಯಕ್ತಿ ತನ್ನಲ್ಲಿರುವ ಅಸಾಧಾರಣ ಶಕ್ತಿಯನ್ನು ಸದುಪಯೋಗಪಡಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅವರೇ ಸಾಕ್ಷಿ. ಮಹಾಭಾರತದ ಏಕಚಕ್ರಾಧಿಪುರವು ಮುಂದೆ ಊರಿನ ಕೊಳವೊಂದರಲ್ಲಿ ಬೆಳ್ಳಿ ಬಟ್ಟಲೊಂದು ದೊರೆತ ಕಾರಣ ಬೆಳ್ಳೂರು ಎಂದು ಹೆಸರಾಯಿತೆಂಬ ಪ್ರತೀತಿ ಇದೆ. ಇದು ಕೋಲಾರ ಜಿಲ್ಲೆಯ ನರಸಾಪುರ ತಾಲ್ಲೂಕಿನಲ್ಲಿದೆ. ಇಲ್ಲಿಯೇ ಬಿ.ಕೆ.ಎಸ್.ಐಯಂಗಾರರು ಜನ್ಮ ತಳೆದದ್ದು. ಶಾಲಾ ಉಪಾಧ್ಯಾಯರಾದ ತಂದೆ ಕೃಷ್ಣಮಾಚಾರ್ಯ ಮತ್ತು ತಾಯಿ ಶೇಷಮ್ಮನವರದು 13 ಮಕ್ಕಳ ಬಡ ಕುಟುಂಬ. 11ನೆಯ ಮಗುವಾಗಿ 1918ರ ಡಿಸೆಂಬರ್ 14ರ ರಾತ್ರಿ ಹುಟ್ಟಿದ ಐಯಂಗಾರರ ಬಾಲ್ಯದ ಸಮಯದಲ್ಲಿ ಇಡೀ ಊರೇ ವಿಷಮ ಶೀತಜ್ವರದಿಂದ ನರಳುತ್ತಿತ್ತು. ಒಂದಿಲ್ಲೊಂದು ರೋಗಬಾಧೆ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಾಲಕ ಐಯಂಗಾರ್ ಸದಾ ನರಳುತ್ತಿದ್ದ. ಇಂತಹ ವಿಷಮ ಪರಿಸ್ಥಿತಿಯ ಮಧ್ಯೆ ಒಂಬತ್ತನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡದ್ದು ಕುಟುಂಬವನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿತು. ಈ ಸಂಕಷ್ಟವನ್ನು ಅನುಭವಿಸುತ್ತಲೇ ಐದಾರು ವರ್ಷ ಕಳೆದ ಅವರು, ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ಪಡೆದರು. ತದನಂತರ ಯೋಗಗುರು ಪ್ರೊ. ತಿರುಮಲೆ ಕೃಷ್ಣಮಾಚಾರ್ಯರಿಂದ ಮೈಸೂರಿಗೆ ಬರುವಂತೆ ಐಯಂಗಾರ್ಗೆ ಸೂಚನೆ ಬಂತು.

ಕೃಷ್ಣಮಾಚಾರ್ಯರು ಬಿ.ಕೆ.ಎಸ್. ಐಯಂಗಾರ್ ಅವರ ಅಕ್ಕನ ಗಂಡ ಅರ್ಥಾತ್ ಬಾವ. ಅವರು ವೇದ-ಉಪನಿಷತ್, ಯೋಗ, ಆಯುರ್ವೆದ ವಿದ್ಯೆಗಳಲ್ಲಿ ನಿಷ್ಣಾತ ಪಂಡಿತ. ಮದ್ರಾಸಿನಲ್ಲಿ ನೆಲೆಸಿದ್ದ ಅವರನ್ನು ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ರಾಜಕುಟುಂಬಕ್ಕೆ ಯೋಗ ಕಲಿಸಲು ಆಹ್ವಾನಿಸಿದ್ದರು. ಕೃಷ್ಣಮಾಚಾರ್ಯರು ಆನಂದತುಂದಿಲರಾಗಿ ಮೈಸೂರಿಗೆ ಬಂದು ನೆಲೆಸಿದ್ದರು. ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಅಕ್ಕ-ಬಾವನ ಬಳಿ ಪಡೆದ ಆಶ್ರಯ ಐಯಂಗಾರರ ಬದುಕಿಗೆ ಮಹತ್ವದ ತಿರುವು ನೀಡಿತು. ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದ ಯೋಗಸಾಧನೆಯಿಂದ ಐಯಂಗಾರ್ ಅವರ ಆರೋಗ್ಯ ಸುಧಾರಿಸಿತು.

ಯೋಗಾಭ್ಯಾಸ ಕಲಿತ ಎರಡು ವರ್ಷಗಳಲ್ಲಿಯೇ ಅವರು ಕೃಷ್ಣಮಾಚಾರ್ಯರ ನಿರ್ದೇಶನದ ಮೇರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಯೋಗಶಿಕ್ಷಕರಾದರು. ನಂತರ ಗುರುಗಳ ಆಣತಿಯಂತೆ 1937ರಲ್ಲಿ ಖಾಸಗಿಯಾಗಿ ಯೋಗಶಿಕ್ಷಣ ನೀಡಲು ಪುಣೆಗೆ ಬಂದುದು ಅವರ ಜೀವನದ ಮಹತ್ತರ ಬದಲಾವಣೆಗೆ ನಾಂದಿಯಾಯಿತು.

ಯೋಗದೀಪಿಕಾ, ಪ್ರಾಣಾಯಾಮ ದೀಪಿಕಾ: ಮಾನವನ ಪರಿಪೂರ್ಣ ಆರೋಗ್ಯಕ್ಕೆ ಬೇಕಾದ ವಿಷಯಗಳನ್ನು ಕುರಿತು ಐಯಂಗಾರ್ ಬರೆದ 14 ಪುಸ್ತಕಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. 17 ಭಾಷೆಗಳಲ್ಲಿ ದೇಶವಿದೇಶಗಳಲ್ಲಿ ಅನೇಕ ಆವೃತ್ತಿಗಳನ್ನು ಹೊಂದಿವೆ. ಅವರು 1966ರಲ್ಲಿ ಯೋಗದೀಪಿಕಾ (ಲೈಟ್ ಆನ್ ಯೋಗ) ಎನ್ನುವ ಪುಸ್ತಕವನ್ನು ಬರೆದರು. 200ಕ್ಕೂ ಹೆಚ್ಚು ಯೋಗಾಸನಗಳ ಬಗ್ಗೆ ಸಚಿತ್ರ ವಿವರಗಳಿದ್ದ ಈ ಪುಸ್ತಕ ಅತ್ಯಂತ ಕಡಿಮೆ ಸಮಯದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಿತು. ಪ್ರಾಣಾಯಾಮ ದೀಪಿಕಾ ಪುಸ್ತಕದಲ್ಲಿ ಅಷ್ಟಾಂಗಯೋಗದ ಪ್ರಮುಖ ಭಾಗವಾದ ಪ್ರಾಣಾಯಾಮವನ್ನು ಪರಿಚಯಿಸಿ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಐಯಂಗಾರ್ ದಂಪತಿಗೆ ಐವರು ಪುತ್ರಿಯರು, ಒಬ್ಬ ಪುತ್ರ. ಹಿರಿಯ ಪುತ್ರಿ ಗೀತಾ ಮತ್ತು ಮಗ ಪ್ರಶಾಂತ ಅಂತಾರಾಷ್ಟ್ರೀಯ ಯೋಗಶಿಕ್ಷಕರು. ಪತ್ನಿಯ ನಿಧನಾನಂತರ ಅವರ ಹೆಸರಿನಲ್ಲಿ 1975ರಲ್ಲಿ ಐಯಂಗಾರ್ ಪುಣೆಯಲ್ಲಿ ಪ್ರಾರಂಭಿಸಿದ ‘ರಮಾಮಣಿ ಮೆಮೋರಿಯಲ್ ಯೋಗ ಸೆಂಟರ್’ನಲ್ಲಿ ಅನಾಟಮಿ, ಫಿಸಿಯಾಲಜಿಯ ಜೊತೆಜೊತೆಗೆ ಯೋಗಾಸನ, ಪ್ರಾಣಾಯಾಮಗಳನ್ನು ಕಲಿಸಲಾಗುತ್ತಿದೆ. 70 ದೇಶಗಳಲ್ಲಿ ಸರಿಸುಮಾರು 140 ಯೋಗಶಾಲೆಗಳನ್ನು ತೆರೆದು ಯೋಗ ಕಲಿಸಿದ ಕೀರ್ತಿ ಅವರದು. ಅನೇಕ ಕ್ರೀಡಾಸಕ್ತರು, ರಾಜಕಾರಣಿಗಳು, ಸಮಾಜ ಸುಧಾರಕರು, ಕಲಾವಿದರು ಐಯಂಗಾರ್ಯರಿಂದ ಕಲಿತ ಯೋಗದಿಂದ ಜೀವನದ ದಿಕ್ಕನ್ನೇ ಬದಲಿಸಿಕೊಂಡಿದ್ದಾರೆ.

ನಿಗರ್ವಿಯಾದ ಐಯಂಗಾರರು ಸ್ವಂತ ಊರಿಗೆ ಬಂದಾಗ ಅಲ್ಲಿ ಶಾಲೆ ಇಲ್ಲದ್ದು ತಿಳಿದು ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಕಾಲೇಜುಗಳ ಕಟ್ಟಡಗಳನ್ನು ನಿರ್ವಿುಸಿದರು. ಮತ್ತೊಂದು ಬಾರಿ ಬಂದಾಗ ಊರಿನಲ್ಲಿ ಒಳ್ಳೆಯ ಗುಡಿ ಇಲ್ಲದ್ದನ್ನು ಗಮನಿಸಿ ಆಂಜನೇಯ, ಪತಂಜಲಿ ದೇವಸ್ಥಾನಗಳನ್ನು ನಿರ್ವಿುಸಿದರು. ಆಸ್ಪತ್ರೆ ಇಲ್ಲದ್ದನ್ನು ಗಮನಿಸಿ ಪ್ರಾಥಮಿಕ ಆರೋಗ್ಯ ಘಟಕವನ್ನು ತೆರೆಯಲು ಕಟ್ಟಡ ನಿರ್ಮಾಣ ಮಾಡಿಸಿದರು. ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಪ್ರಕಟಿಸುವ ಪಟ್ಟಿಯಲ್ಲಿ ಐಯಂಗಾರ್ ಅವರ ಹೆಸರು ಸಹ ಇತ್ತು.ಚೀನಾ ಸರ್ಕಾರ 2011ರಲ್ಲಿ ಅವರ ಭಾವಚಿತ್ರವಿರುವ ಏಳು ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿತ್ತು. ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ. 2014ರ ಆಗಸ್ಟ್ 20ರಂದು ಅವರು ಪುಣೆಯಲ್ಲಿ ನಿಧನರಾದರು. ನಾಳೆಯಿಂದ ಜಗತ್ತಿನ ನಾನಾ ಕಡೆಗಳಲ್ಲಿ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ.

ಯೋಗಾನಂದರ ಮೆಚ್ಚುಗೆ

1935ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದ ಪರಮಹಂಸ ಯೋಗಾನಂದರ ಎದುರು ಐಯಂಗಾರ್ ನೀಡಿದ ಯೋಗಾಸನಗಳ ಪ್ರದರ್ಶನವು ಯೋಗಾನಂದರ ಮೆಚ್ಚುಗೆಗೆ ಪಾತ್ರವಾಗಿತ್ತು.

ಐಯಂಗಾರ್ ಯೋಗ

ಹಠಯೋಗದ ಒಂದು ಪರಿಷ್ಕೃತ ರೂಪವೇ ‘ಐಯಂಗಾರ್ ಯೋಗ’. ಸವಿಸ್ತಾರವಾದ ವಿವರಣೆಯ ಜೊತೆಗೆ ಆಸನಗಳನ್ನೂ, ಪ್ರಾಣಾಯಾಮವನ್ನೂ ಮಾಡುವಾಗ ಪರಿಪೂರ್ಣ ಸ್ಥಿತಿಯನ್ನು ತಲುಪುವಂತೆ ದೇಹವನ್ನು ಸಜ್ಜುಗೊಳಿಸುವುದಕ್ಕೆ ಒತ್ತು ನೀಡುವುದು ‘ಐಯಂಗಾರ್ ಯೋಗ’ದ ವಿಶೇಷ. ಯೋಗಾಸನಗಳನ್ನು ಮಾಡಲು ನೆಲಕ್ಕೆ ಹಾಸುವ ಬಟ್ಟೆಯೊಂದನ್ನು ಬಿಟ್ಟರೆ ಬೇರೇನನ್ನೂ ಬಳಸದ ಅಂದಿನ ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟು ಹಗ್ಗದ ಕುಣಿಕೆ, ಕೋಲು, ಕುರ್ಚಿ, ಇಟ್ಟಿಗೆ ಇವೇ ಮುಂತಾದ ಪರಿಕರಗಳನ್ನು ಬಳಸಿ ಕಲಿಸತೊಡಗಿದ ಪ್ರಥಮ ಗುರು ಐಯಂಗಾರ್.

ಬಹಳ ವರ್ಷಗಳ ಹಿಂದೆ ಬಿ.ಕೆ.ಎಸ್. ಐಯಂಗಾರ್ ಆಸನಗಳನ್ನು ಅಭ್ಯಸಿಸುತ್ತಿದ್ದ ಸಂದರ್ಭದಲ್ಲಿ ಯೋಗದ ಜ್ಞಾನ ಇಲ್ಲದವರು ಆ ಭಂಗಿಗಳನ್ನು ದೊಂಬರಾಟಕ್ಕೆ ಹೋಲಿಸಿದ್ದರಂತೆ. ಆ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇ ಅವರು ಯೋಗಕ್ಷೇತ್ರದಲ್ಲಿ ಉತ್ತುಂಗದ ಶಿಖರವೇರಲು ಸಹಕಾರಿಯಾಯಿತು. ಯೋಗ ಕೇವಲ ನೋಡುವ ರೀತಿಯನ್ನಷ್ಟೇ ಬದಲಿಸುವುದಿಲ್ಲ. ಅದು ನೋಡುಗನನ್ನೇ ಪರಿವರ್ತಿಸುತ್ತದೆ.

(ಬಿ.ಕೆ.ಎಸ್. ಐಯಂಗಾರ್ ಅವರ ಜೀವನವನ್ನು ಕುರಿತು ಮೈಸೂರಿನ ಹಿಮಾಲಯ ಫೌಂಡೇಷನ್ ಪ್ರಕಟಿಸಿರುವ ‘ಯೋಗ ಭೀಷ್ಮ’ ಕೃತಿಯಿಂದ ಆಯ್ದ ಭಾಗ)

Wednesday, 17 February 2021

ರಥಸಪ್ತಮಿ

 ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.

ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ-ಭಾನು ಬಿದಿಗೆ, ತದಿಗೆ-ಅಕ್ಷ ತದಿಗೆ, ಚೌತಿ-ವಿನಾಯಕನ ಚೌತಿ. . . . ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು.

ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ.

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

 “ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ.

ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ.

ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ.

ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ.

ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ.

ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ನಾಳೆ (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಗುರುವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.

ಆರೋಗ್ಯಂ ಭಾಸ್ಕರಾದಿಚ್ಛೇತ್...

ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ.

ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ.

ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ.

ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ.

ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ.

ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.

ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

ಪೌರಾಣಿಕ ಹಿನ್ನೆಲೆಯೇನು? 

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ.

ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ.

ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು.

ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.

ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

 

ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ.

ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

 ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

 

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ.

ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.

ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ.

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.

ಇನ್ನು, ‘ಭೂರ್ಭುವಸ್ವಃ'. . . ಎಂಬಮಂತ್ರದಲ್ಲಿ  ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ಎಕ್ಕದೆಲೆಯ ಸ್ನಾನ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು.

ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವ?

ಸಪ್ತ ಸಪ್ತ ಮಹಾಸಪ್ತ

ಸಪ್ತ ದ್ವೀಪ ವಸುಂಧರ

ಸಪ್ತಾರ್ಕ ಪ್ರಣಮಾಧ್ಯಾಯ

ಸಪ್ತಮಿ ರಥ ಸಪ್ತಮಿ

ಎಂದು ಈ ಶ್ಲೋಕವನ್ನು ಹೇಳಿಕೊಂಡು  ತಲೆಗೆ ಸ್ನಾನ ಮಾಡಿದರೆ ಓಳ್ಳಯದು

ಈ ಮೇಲಿನ ಎಲ್ಲಾ ಸಂಗತಿಗಳನ್ನು ಓದಿ, ನಿಮ್ಮ  ಕುಟುಂಬ, ಬಂದು, ಬಳಗ, ಮತ್ತು ವಿಶೇಷ ವಾಗಿ ಇಂದಿನ ಮಕ್ಕಳಿಗೆ ಮನವರಿಕೆ ಮಾಡಿ.

ನಮ್ಮ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ.

Thursday, 4 February 2021

ವಯೋಜನ್ಯ ಸಮಸ್ಯೆಗಳು

 ವಯೋಜನ್ಯ ಸಮಸ್ಯೆಗಳು 

ಇಲ್ಲಿಯವರೆಗೆ ಮಾನವನ ಜೀವನ ವಿಧಾನ, ಅದರಿಂದಾಗತಕ್ಕ ಅನಾರೋಗ್ಯ, ಅದಕ್ಕೆ ಕಾರಣ ಹೇಳುತ್ತಾ ಬಂದು ಈಗ ಮರಣಪ್ರಶ್ನವೆಂಬ ಕೊನೆಯ ಅನಾರೋಗ್ಯ ಕಾರಣ ವಿವರಿಸಲಾಗುತ್ತದೆ. 

ಅಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಾಧಿಸಬೇಕಾದ ಸುಖಮರಣವೆಂಬ ಸೂತ್ರ ಮಂಡಿಸಲಾಗಿದೆ. ಆ ಸುಖಮರಣ ಹೇಗೆ ಎಂಬುದನ್ನು ತಿಳಿಸುತ್ತೇನೆ.


🕉️ಮೊದಲನೆಯದಾಗಿ, ಮಾನವ ಹುಟ್ಟುವಾಗಲೇ ತನಗೆ ಸಾವಿದೆ ಎನ್ನುವ ಸತ್ಯ ತಿಳಿದಿದೆ ತಾನೆ? ಹಾಗಿದ್ದಾಗ ಸಾವು ನಿಶ್ಚಿತವೆಂದ ಮೇಲೆ ಸಾಯುವಲ್ಲಿಯವರೆಗೆ ಮಾತ್ರ ನಮ್ಮ ಸಾಧನೆ, ಯಶಸ್ಸಿಗೆ ಪೂರಕವೆಂಬ ಸತ್ಯ ಅರಿತಿರಬೇಕು.


🕉️ ಎರಡನೆಯದಾಗಿ, ಸಾವು ಭಯಾನಕವೆಂಬ ಕಲ್ಪನೆ ಹುಟ್ಟುವುದು ಬಾಂಧವ್ಯದ ಪ್ರಬಲ ಬೆಸುಗೆಯಿಂದ ಮಾತ್ರ. 

ಸಂಬಂಧ ಬೆಸುಗೆಯು ಕರ್ತವ್ಯಪ್ರಜ್ಞೆಯೊಂದಿಗೆ ಹೊಂದಿಸಿಕೊಂಡಲ್ಲಿ ನಿಮ್ಮ ಮಾನವ ಸಂಬಂಧೀ ಬಾಂಧವ್ಯ ಮತ್ತು ವಸ್ತು ಸಂಬಂಧೀ ಬಾಂಧವ್ಯ ಸುಧಾರಿಸಿಕೊಳ್ಳಲು ಸಾಧ್ಯ. ಆಗ ಸಾವು ಭಯಾನಕವೆನಿಸುವುದಿಲ್ಲ.


🕉️ಮೂರನೆಯದಾಗಿ, ಸಾವು ತ್ರಾಸದಾಯಕವೆಂಬ ಕಲ್ಪನೆ, ನೋವು, ದುಃಖ, ರೋಗಬಾಧೆ, ಕರ್ತವ್ಯ ಲೋಪದ ಪ್ರಜ್ಞೆ, ಪಾಪಪ್ರಜ್ಞೆ ಇವೆಲ್ಲಾ ಕಾಡುವುದು ಅಲ್ಲಿ ನ್ಯೂನತೆ ಇದ್ದಾಗ ಮಾತ್ರ. 

ಆದ್ದರಿಂದ ಪರಿಶುದ್ಧ ಜೀವನ ನಡೆಸಿ. ಆಗ ಈ ಪಾಪಪ್ರಜ್ಞೆ ನಿಮ್ಮನ್ನು ಕಾಡಲಾರವು, ತ್ರಾಸದಾಯಕ ಮರಣ ಪ್ರಾಪ್ತವಾಗಲಾರದು.

🕉️ನಾಲ್ಕನೆಯದಾಗಿ, ಹಂಚಿ ತಿನ್ನುವ ಪ್ರವೃತ್ತಿ ನಿಮ್ಮದಾಗಿದ್ದರೆ, ನಿಮ್ಮ ಎಲ್ಲಾ ಸಂದರ್ಭಗಳಲ್ಲೂ ಈ ಹಂಚುವಿಕೆಯ ಕಾರ್ಯ ನಿರ್ವಹಿಸುತ್ತದೆ.

 ಹಾಗಾಗಿ ನಮ್ಮ ನಂತರ ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ ಸರ್ವಜ್ಞ ವಚನದ "ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ನಾ ಕೆಟ್ಟನೆಂದೆನ ಬೇಡ ಸರ್ವಜ್ಞ" ಎಂಬಂತೆ ಎಲ್ಲವನ್ನೂ ಹಂಚಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ಆಗ ಅನಾಥ ಪ್ರಜ್ಞೆ ಹುಟ್ಟುವುದಿಲ್ಲ.


🕉️ಈ ನಾಲ್ಕು ವಿಧಾನಗಳನ್ನು ತುಲನೆ ಮಾಡಿದಾಗ ನಮಗೆ ಮರಣವೆಂದರೇನು ಎಂದು ಅರ್ಥವಾಗುತ್ತದೆ. 


🕉️ದೇಹ ಆತ್ಮಗಳ ಸಂಬಂಧ ಕಡಿದುಕೊಳ್ಳುವುದು ಮರಣವಲ್ಲ. ದೇಹ ನಾಶವಾದರೂ ಈ ಭುವಿಯ ಬಂಧದಿಂದ ಬಿಡಿಸಿಕೊಂಡು ಸ್ವತಂತ್ರತೆಯನ್ನು ಪಡೆಯುವುದು. ಅಲ್ಲಿ ಕಲಂಕವಿರದೇ ಇರುವಂತೆ ಬದುಕಿರುವುದು. 


🕉️ಕಲಂಕಿತನಾಗಿದ್ದು ದೇಹದೊಂದಿಗೇ ಇದ್ದರೂ ಕೂಡ ಅದು ಮರಣವೆಂದು ಕರೆಯಲ್ಪಡುತ್ತದೆ. ಹಾಗಾಗಿ ತನ್ನ ಜೀವನದಲ್ಲಿ 


🌸ಶುದ್ಧತೆ, 

🌸ಬದ್ಧತೆ, 

🌸ತ್ಯಾಗ, 

🌸ಸಹನೆ, 

🌸ಧರ್ಮನಿಷ್ಠೆ, 

🌸ದೇಶಭಕ್ತಿ, 

🌸ಮಾತೃಭಕ್ತಿ, 

🌸ಪಿತೃಭಕ್ತಿ, 

🌸ಗುರುಭಕ್ತಿ, 

🌸ಸಮಾಜಪ್ರೇಮ, 

🌸ಪ್ರಕೃತಿಪ್ರೇಮ, 

🌸ಕರ್ತವ್ಯ, 

🌸ಸತ್ಯ, 

🌸ನ್ಯಾಯ 


ಇವನ್ನು ರೂಢಿಸಿಕೊಂಡಲ್ಲಿ "ಮಾನವನಿಗೆ ಮರಣವೇ ಬಾರದು". ದೇಹ ಬಿಡುವುದು ಅನಿವಾರ್ಯ. ಆದರೆ ಆತನಿಗೆ ಸಾವಿಲ್ಲ ಅರ್ಥಾತ್ "ಮರಣವಿಲ್ಲ".


🕉️ಆದ್ದರಿಂದ ಮನುಷ್ಯ ಮಿತಾಹಾರಿಯಾಗಿ ಸಮಾಜಕ್ಕೆ ತನ್ನ ಋಣವನ್ನು ತೀರಿಸುತ್ತಾ ನಿಷ್ಕಳಂಕನಾಗಿ ಬದುಕುವುದೇ ಗುರಿ. 


🕉️ಹಾಗೆ ಬದುಕಿದಲ್ಲಿ ಮರಣಕ್ಕೆ ಹೆದರಬೇಕಾದ್ದಿಲ್ಲ. ಅಂದರೆ ಸಾವಿನ ಭಯವಿಲ್ಲ. ಜ್ಯೋತಿರಾಯುರ್ವೇದ ಎಂದರೆ ಮನುಷ್ಯ ಜೀವನದ ಮೇಲೆ ಬೆಳಕು ಚೆಲ್ಲಿ ಸನ್ಮಾರ್ಗದರ್ಶನ ಮಾಡುವ ಒಂದು ಸಿದ್ಧಾಂತ. ಅಲ್ಲಿ ಬದುಕುವ ಬಗೆಯನ್ನು ವಿವರವಾಗಿ ವಿವರಿಸಿದೆ. ಅದನ್ನು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

                                                                                                            ಕೃಪೆ - ಅಂತರ್ಜಾಲ

Tuesday, 2 February 2021

ಹೊಸ್ತಿಲ ನಮಸ್ಕಾರಕ್ಕೆ ಹೇಳುವ ಶ್ಲೋಕ


🕉️  ಹೊಸ್ತಿಲ ನಮಸ್ಕಾರಕ್ಕೆ ಹೇಳುವ ಶ್ಲೋಕ 🕉️

ಹ್ರೀಂಕಾರರೂಪಿಣೀ ದೇವಿ ವೀಣಾ ಪುಸ್ತಕಧಾರಿಣೀ |
ವೇದಮಾತರ್ನಮಸ್ತುಭ್ಯಂ ಮಾಂಗಲ್ಯಂ ದೇಹಿ ಮೇ ಸದಾ ||

ಮಾಂಗಲ್ಯಾಭರಣೈರ್ಯುಕ್ತೇ ಮಂಗಳೇ ಸರ್ವಮಂಗಳೇ |
ಗೃಹಲಕ್ಷ್ಮಿರ್ಧಾನ್ಯಲಕ್ಷ್ಮಿರ್ದ್ವಾರಲಕ್ಷ್ಮಿರ್ನಮೋಽಸ್ತುತೇ ||

🕉️🌟ಸ್ತ್ರೀಯರಿಗೆ ಲಕ್ಷ್ಮಿದೇವಿಯ ಆರಾಧನೆಗೆ ಹಲವು ಪ್ರತೀಕಗಳಿವೆ. ಅವುಗಳಲ್ಲಿ, ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆ ಪ್ರಮುಖವಾದವು.

🕉️🌟ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀಭಾರತಿಯರನ್ನು ಪೂಜಿಸಬೇಕು. 

🕉️🌟ಹೊಸ್ತಿಲು ಮತ್ತು ತುಳಸೀವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು. ಸ್ನಾನಕ್ಕೆ ಮೊದಲೇ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಸ್ನಾನಾನಂತರ ಪೂಜಿಸಬಹುದು. 

🕉️🌟ಕೆಲವೆಡೆ ಸ್ನಾನಾನಂತರ ಹೊಸ್ತಿಲು ಬರೆಯುವ ಸಂಪ್ರದಾಯವಿದೆ. ಶಾಸ್ತ್ರರೀತ್ಯಾ ಸ್ನಾನಾನಂತರದ ಹೊಸ್ತಿಲಪೂಜೆ ಉತ್ತಮ. 

🕉️🌟ಶುದ್ಧಜಲಪೂರ್ಣವಾದ ತಂಬಿಗೆಯನ್ನು ಹೊಸ್ತಿಲ ಮಧ್ಯದಲ್ಲಿಟ್ಟು ಮಂಗಳದ್ರವ್ಯಗಳಿಂದ ಪೂಜಿಸಿ, “ಹ್ರೀಂಕಾರರೂಪಿಣೀ...” ಎಂಬ ಶ್ಲೋಕಗಳಿಂದ ನಮಸ್ಕರಿಸಿ, ಹೊಸ್ತಿಲಿಗೆ ಅರ್ಪಿಸಿದ್ದ ಒಂದು ಹೂವನ್ನು ಮುಡಿದುಕೊಂಡು, ಕೈತೊಳೆದು, ತಂಬಿಗೆಯನ್ನು ಕೆಳಗಿಳಿಸಬೇಕು (ಹೊಸ್ತಿಲುಪೂಜೆ ಮುಗಿಯುವ ತನಕ ಯಾರೂ ಹೊಸ್ತಿಲು ದಾಟಬಾರದು,).

🕉️🌟ಗೃಹದ ಪ್ರಧಾನದ್ವಾರವನ್ನು ಹೊಸ್ತಿಲುಪೂಜೆಗಾಗಿ ಆರಿಸಿಕೊಳ್ಳಬೇಕು. ಅನುಕೂಲತೆ ಹಾಗೂ ಶುದ್ಧಿಯ ಕಾರಣಗಳಿಂದ ದೇವರ ಕೋಣೆಯ ದ್ವಾರವನ್ನು ಪೂಜಿಸಿದರೂ, ಪ್ರಧಾನದ್ವಾರದಲ್ಲೂ ರಂಗೊಲಿ ಇರಬೇಕು.

🕉️🌟 ”ಅಶೂನ್ಯಾ ದೇಹಲೀ ಕಾರ್ಯಾ...” ಎಂಬಂತೆ ಹೊಸ್ತಿಲು ಬೋಳಾಗಿರಕೂಡದು. ಕಸಕಡ್ಡಿಗಳಿಂದ ತುಂಬಿರಕೂಡದು. ಗೃಹವಸ್ತುಗಳನ್ನು ಹೊಸ್ತಿಲಲ್ಲಿಡಕೂಡದು. ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡಬೇಕು. 

🕉️🌟ಹೊರಗಿನಿಂದ ಒಳಮುಖವಾಗಿ ಮಾಡಬಾರದು. ಆದರೂ ಲಕ್ಶ್ಮೀದೇವಿಯನ್ನು ಬರಮಾಡಿಕೊಳ್ಳುವಾಗ, ಹೊಸ್ತಿಲ ಹೊರಗೆ ನಿಂತು ಆಕೆಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ. 

🕉️🌟ಯಾವುದೇ ಪೂಜೆಯಲ್ಲೂ ಶ್ರದ್ಧೆ, ಭಕ್ತಿ ಮತ್ತು ಅನುಸಂಧಾನಗಳು ಪ್ರಮುಖವಾಗುತ್ತವೆ. ಕ್ರಮಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯಗಳಿದ್ದರೂ ಯಾವುದೇ ಲೋಪವಿರುವುದಿಲ್ಲ.

🕉️🌟ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು.

Courtesy : Whatsapp 

https://chat.whatsapp.com/Eaxg9T2n66JIZJAeHxs1fe

Facebook page
http://www.facebook.com/bramhanapriya

Thursday, 14 January 2021

ಸಂಕ್ರಮಣ ಎಂದರೇನು, Shankranthi

ವಾಟ್ಸಪ್ ಸಂಗ್ರಹಣೆ
*ಸಂಕ್ರಮಣ ಎಂದರೇನು ?* ☀️

🌞ಸೂರ್ಯನ ಪಥ ಬದಲಾವಣೆಯೇ ಸಂಕ್ರಮಣ ..ಸೂರ್ಯನ ಮಕರ ರಾಶಿಗೆ ಪ್ರವೇಶವೇ ಮಕರ ಸಂಕ್ರಮಣ ..

🌞ಸೂರ್ಯನ ಗತಿಗೆ ಅನುಗುಣವಾಗಿ, ಅಂದರೆ ಸಂಕ್ರಮಣ ಕಾಲದಲ್ಲಿ, ಚಳಿಗಾಲ ಹೋಗುವ ಸಮಯ ಮತ್ತು ಬೇಸಿಗೆ ಕಾಲ ಸಮೀಪೀಸುವ ಸಮಯ ..

*ಮುದ್ಗಾನ್ನ, ಎಳ್ಳು ಸೇಜ್ಜೇ ಬೆಣ್ಣೆಯ ಉಪಯೋಗ ಏಕೆ ?*

🌞ಧನುರ್ಮಾಸದ ಕೊನೆಯ ದಿನಗಳು ..ಧನುರ್ಮಾಸದಲ್ಲಿ ಚಳಿ ಜಾಸ್ತಿ .ನಮ್ಮ ದೇಹ ಬೆಚ್ಚಗಿರಲು ಶಾಖ ಉತ್ಪತ್ತಿ ಮಾಡುವ ಆಹಾರ ಪದಾರ್ಥ ಗಳು ಬೇಕು ..ಅದಕ್ಕಾಗಿಯೇ ಎಳ್ಳು ಮತ್ತು ಸೇಜ್ಜೇ ಬೆಣ್ಣೆಯಲ್ಲಿ ಶಾಖ ಉಂಟುಮಾಡುವ ಗುಣವಿರುವುದರಿಂದ ಅವುಗಳನ್ನು ಉಪಯೋಗಿಸಿ ಆಹಾರ ತಯಾರಿಸುತ್ತಾರೆ .

🌞ಚಳಿಗಾಲದಲ್ಲಿ ದೇಹದ ಬೆಳವಣಿಗೆ ಚೆನ್ನಾಗಿರುತ್ತೆ ..ಅದಕ್ಕೆ ಪೌಷ್ಟಿಕತೆ ಒದಗಿಸುವ ಮತ್ತು ಶಾಖ ಒದಗಿಸುವ ಮುದ್ಗಾನ್ನ ಉಪಯೋಗಿಸುತ್ತಾರೆ .

🌞ಚಳಿಗೆ ದೇಹದ ಕಾಂತಿಯೂ ಕುಂದುತ್ತೇ ..ಅದನ್ನು ತಡೇಯಲು ಎಳ್ಳೆಣ್ಣೆ,, ಎಳ್ಳಿನ ಪಡಾರ್ಥ ತಿಂದಾಗ ನಮ್ಮ ದೇಹಕ್ಕೆ ಲಭೀಸುತ್ತದೇ . ಮತ್ತು ಬೆಣ್ಣೆಯಿಂದಲೂ ಎಣ್ಣೆ ಒದಗುತ್ತದೆ ,

🌞ನಮ್ಮ ಹಿರಿಯರು ಸುಲಭವಾಗಿ ದೊರೆಯುವ ವಸ್ತುಗಳಿಂದ ದೇಹಾರೋಗ್ಯ ಕಾಪಾಡಿಕೊಳ್ಳುವ ಮಾರ್ಗ ಅನುಸರೀಸುತ್ತಿದ್ದರು ..ದೈವ ಪೂಜೆಯ ಜೊತೆ ಜೊತೆಗೆ ಆರೋಗ್ಯ ಕಾಪಾಡುವ ಸುಲಭ ಉಪಾಯ ಕಂಡುಹಿಡಿದಿದ್ದರು ...


🌞ನಮ್ಮ ಸಂಪ್ರದಾಯಗಳನ್ನು ತಪ್ಪದೇ ಆಚರಿಸೋಣ . ಹಿರಿಯರು ತೋರಿದ ಮಾರ್ಗದಲ್ಲಿ ನಡೆದು ನಮ್ಮತನ ಉಳಿಸೋಣ ..


🌞ಸಂಕ್ರಾಂತಿ ಎಂದರೆ ಚಲನೆ,ಜೀವಂತಿಕೆ, ಚೈತನ್ಯ ಎಂಬುದಾಗಿದೆ. ಚಲನೆಯಿದ್ದಾಗ ಮಾತ್ರ ಜೀವಂತಿಕೆ,ಚೈತನ್ಯ ಎಲ್ಲವೂ ಸಾದ್ಯ.

🌞 *"ಸಂಕ್ರಾತಿ"* ಎಂಬ ಪದ "ಸತ್ ಬದಲಾವಣೆ" ಯ ಸೂಚಕವಾಗಿದೆ. ಈ ಸಮಯದಲ್ಲಿ ಸೂರ್ಯನು ಸಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಿತ್ಯಂತರಗೊಂಡು ತನ್ನ ಪಥವನ್ನೇ ಬದಲಾಯಿಸುತ್ತಾನೆ. ಇದರಿಂದಾಗಿ ಪ್ರಕೃತಿಯಲ್ಲಿ ಹಸಿರು ಆವರಿಸಿ ಸಮೃದ್ಧಿ ಪಸರಿಸುತ್ತದೆ.ಈ ಹಿನ್ನೆಲೆಯಲ್ಲಿ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಎಲ್ಲವೂ ಕ್ಷಣಿಕ ಎಂಬುದೇ ಸತ್ಯ.
ಅದ್ದರಿಂದ ಮನುಷ್ಯರಾದ ನಾವುಗಳು ಅಪ್ರೀತಿ,ಅಸಹಿಷ್ಣತೆ,ಅಸಹಕಾರ,ಅಸಹನೆ, ಅಹಂಕಾರ, ಅಜ್ಞಾನ ಹಾಗೂ ಅಂಧಕಾರ ಗಳನ್ನು ತೊರೆದು ಬದುಕಿರುವಷ್ಟು ದಿನಗಳಲ್ಲಿ ಎಲ್ಲರೊಂದಿಗೆ ಬೆರೆತು ಒಂದಾಗಿ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ.

🌞ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ, ಅಂದರೆ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಎಂದರ್ಥ. ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು.

💠ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು.

💠ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.

💠ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುತ್ತದೆ.

💠ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಲಾಗುವುದು.

💠ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯವಿದೆ.

💠ಈ ಹಬ್ಬದ ಒಂದು ವಿಶೇಷವೆಂದರೆ ದನಕರುಗಳಿಗೆ ಮೈ ತೊಳೆದು ಭೂತ ಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.

 🔯🕉ಉತ್ತರಾಯಣ ಪುಣ್ಯ ಕಾಲ🕉🔯

💠ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 14ಅಥವಾ 15ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ.

💠ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು.

💠ಉತ್ತರಾಯಣ, ದೇವತೆಗಳ ಕಾಲವಾದರೆ ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

 💠ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡುವುದಲ್ಲದೆ ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಸೂರ್ಯನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.
*****

ವಾಟ್ಸಪ್ ಸಂಗ್ರಹಣೆ